ವೆಂಕಟ ರಮಣನ ಶಾಕ್‌ಗೆ ಕಾಂಗ್ರೆಸ್-BRS ಕಂಗಾಲು; ಹಾಲಿ ,ಮುಂದಿನ ಸಿಎಂ ಸೋಲಿಸಿದ ಬಿಜೆಪಿ ನಾಯಕ!
ತೆಲಂಗಾಣದ ಕಾಮರೆಡ್ಡಿ ಕ್ಷೇತ್ರದಲ್ಲಿ ಬಿಜೆಪಿ ನಾಯಕ ವೆಂಕಟ ರಮಣ ನೀಡಿದ ಶಾಕ್‌ಗೆ ಗೆಲುವು ದಾಖಲಿಸಿದ ಕಾಂಗ್ರೆಸ್ ಹಾಗೂ ನೆಲಕಚ್ಚಿದ ಬಿಆರ್‌ಎಸ್ ಬೆವತು ಹೋಗಿದೆ. ಹಾಲಿ ಸಿಎಂ ಕೆಸಿಆರ್ ಹಾಗೂ ಮುಂದಿನ ಕಾಂಗ್ರೆಸ್ ಸಿಎಂ ರೇವಂತ್ ರೆಡ್ಡಿ ಇಬ್ಬರನ್ನು ಬಿಜೆಪಿ ನಾಯಕ ಸೋಲಿಸಿದ್ದಾರೆ.
ಹೈದರಾಬಾದ್(ಡಿ.03) ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ದಾಖಲಿಸಿದರೆ, ಬಿಜೆಪಿ ಸ್ಥಾನ ಹಾಗೂ ಮತ ಎರಡೂ ಹೆಚ್ಚಿಸಿಕೊಂಡಿದೆ. ಆದರೆ ಬಿಆರ್‌ಎಸ್ ಸಂಪೂರ್ಣ ನೆಲಕಚ್ಚಿದೆ. ತೆಲಂಗಾಣದಲ್ಲಿ ಅಧಿಕಾರ ಹಿಡಿದಿರುವ ಕಾಂಗ್ರೆಸ್ ಹಾಗೂ ಅಧಿಕಾರ ಕಳೆದುಕೊಂಡ ಬಿಆರ್‌ಎಸ್ ಕಾಮರೆಡ್ಡಿ ಕ್ಷೇತ್ರದಲ್ಲಿ ಬೆಚ್ಚಿ ಬಿದ್ದಿದೆ. ಕಾರಣ ಕಾಮರೆಡ್ಡಿ ಕ್ಷೇತ್ರದಲ್ಲಿ ಜಿದ್ದಾಜಿದ್ದಿನ ಸ್ಪರ್ಧೆಯಲ್ಲಿ ಬಿಜೆಪಿ ನಾಯಕ ಕೆ ವೆಂಕಟ ರಮಣ ಭರ್ಜರಿ ಗೆಲುವು ದಾಖಲಿಸಿದ್ದಾರೆ. ವೆಂಕಟ ರಮಣ ಬಿರುಗಾಳಿ ಮುಂದೆ ಹಾಲಿ ಸಿಎಂ ಕೆ ಚಂದ್ರಶೇಖರ್ ರಾವ್ ಹಾಗೂ ಮುಂದಿನ ಸಿಎಂ ಎಂದೇ ಬಿಂಬಿತವಾಗಿರುವ ರೆವಂತ್ ರೆಡ್ಡಿ ಇಬ್ಬರೂ ಸೋಲು ಕಂಡಿದ್ದಾರೆ.
ಕಾಮರೆಡ್ಡಿ ವಿಧಾನಸಭಾ ಕ್ಷೇತ್ರದ ಮತಎಣಿಕೆ ಕಾರ್ಯ ಬೆಳಗ್ಗೆ 8ಗಂಟೆಗ ಆರಂಭಗೊಂಡಿತ್ತು. ಚುನಾವಣಾ ಆಯೋಗದ ಸದ್ಯದ ವರದಿ ಪ್ರಕಾರ ಬಿಜೆಪಿ ನಾಯಕ ಕೆ ವೆಂಕಟ ರಮಣ 5 ಸಾವಿರಕ್ಕೂ ಹೆಚ್ಚು ಮತಗಳ ಅಂತರ ಕಾಪಾಡಿಕೊಂಡಿದ್ದಾರೆ. ವೆಂಕಟ ರಮಣ 50294 ಮತಗಳನ್ನು ಪಡೆದಿದ್ದರೆ, ಹಾಲಿ ಸಿಎಂ, ಬಿಆರ್‌ಎಸ್ ಪಕ್ಷದ ಮುಖ್ಯಸ್ಥ ಕೆ ಚಂದ್ರಶೇಖರ್ ರಾವ್ 46780 ಮತಗಳನ್ನು ಪಡೆದು ಎರಡನೇ ಸ್ಥಾನದಲ್ಲಿದ್ದರೆ. ಇನ್ನು ಕಾಂಗ್ರೆಸ್ ಸಿಎಂ ಅಭ್ಯರ್ಥಿ ಎಂದೇ ಬಿಂಬಿತವಾಗಿರುವ ರೇವಂತ್ ರೆಡ್ಡಿ 45419 ಮತಗಳನ್ನು ಪಡೆದಿದ್ದಾರೆ.
ಚುನಾವಣಾ ಸೋಲಿನ ಬೆನ್ನಲ್ಲೇ ಇಂಡಿ ಒಕ್ಕೂಟಕ್ಕೆ ಮಲ್ಲಿಕಾರ್ಜುನ ಖರ್ಗೆ ಮಹತ್ವದ ಸಂದೇಶ!
2018ರ ಚುನಾವಣೆಯಲ್ಲಿ ಕಾಮರೆಡ್ಡಿ ಕ್ಷೇತ್ರದಿಂದ ಟಿಆರ್‌ಎಸ್( ಇದೀಗ ಬಿಆರ್‌ಎಸ್) ಪಕ್ಷದ ಗಂಪಾ ಗೋವರ್ಧನ್ ಶಾಸನಾಗಿದ್ದರು. ಈ ಬಾರಿ ಕಾಮರೆಡ್ಡಿ ಕ್ಷೇತ್ರದಿಂದ ಬಿಆರ್‌ಎಸ್ ಪಕ್ಷದ ಮುಖ್ಯಸ್ಥ, ಹಾಲಿ ಸಿಎಂ ಕೆ ಚಂದ್ರಶೇಖರ್ ರಾವ್ ಸ್ಪರ್ಧಿಸಿ ಸೋಲು ಕಂಡಿದ್ದಾರೆ. ಇತ್ತ ಕಾಂಗ್ರೆಸ್ ನಾಯಕ ರೇವಂತ್ ರೆಡ್ಡಿ ಎರಡು ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಇದರಲ್ಲಿ ಕಾಮರೆಡ್ಡಿ ಕ್ಷೇತ್ರದಲ್ಲಿ ಸೋಲು ಕಂಡಿದ್ದಾರೆ.
ಘಾಟನುಘಟಿ ನಾಯರನ್ನೇ ಸೋಲಿಸಿದ ಬಿಜೆಪಿ ನಾಯಕ ಕೆ ವೆಂಕಟ ರಮಣಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ತೆಲಂಗಾಣದಲ್ಲಿ ಬಿಜೆಪಿ ವೋಟ್ ಶೇರ್ ಹಾಗೂ ಸ್ಥಾನಗಳನ್ನು ಹೆಚ್ಚಿಸಿಕೊಂಡಿದೆ. ಕಾಂಗ್ರೆಸ್ ಹಾಗೂ ಬಿಆರ್‌ಎಸ್ ಪಕ್ಷಗಳಿಗೆ ಹೋಲಿಸಿದರೆ ಸ್ಥಾನಗಳ ಸಂಖ್ಯೆ ಕಡಿಮೆ. ಆದರೆ ಕೆ ವಂಕಟ ರಮಣ ಗೆಲುವು ಬಿಜೆಪಿ ಶಕ್ತಿಯನ್ನು ಮತ್ತಷ್ಟು ವೃದ್ಧಿಸಿದೆ.
ಸೋಲಿನಿಂದ ಕಂಗೆಟ್ಟ ಕಾಂಗ್ರೆಸ್, ಇಂದು ಸಂಜೆ ಸಿಎಂ ಸ್ಥಾನಕ್ಕೆ ಗೆಹ್ಲೋಟ್ ರಾಜೀನಾಮೆ!
ತೆಲಂಗಾಣದಲ್ಲಿ ಕಾಂಗ್ರೆಸ್ 64 ಸ್ಥಾನಗಳಲ್ಲಿ ಬಹುತೇಕ ಗೆಲುವು ಸಾಧಿಸಿದೆ. ಇನ್ನು ಬಿಆರ್‌ಎಸ್ 40 ಕ್ಷೇತ್ರದಲ್ಲಿ ಗೆಲುವಿನ ಸನಿಹದಲ್ಲಿದ್ದರೆ, ಬಿಜೆಪಿ 8 ಕ್ಷೇತ್ರದಲ್ಲಿ ಮುನ್ನಡೆ ಪಡೆದುಕೊಂಡಿದೆ. ಇನ್ನು ಅಸಾದುದ್ದೀನ್ ಒವೈಸಿಯ ಎಐಎಂಐಎಂ ಪಕ್ಷ 7 ಸ್ಥಾನದಲ್ಲಿ ಗೆಲುವಿನ ಸನಿಹದಲ್ಲಿದೆ.