Asianet Suvarna News Asianet Suvarna News

ಕೇರಳದಲ್ಲಿ ಆಡಳಿತ ನಡೆಸಿದ ಪಕ್ಷಗಳ ಅಸಲಿ ಕತೆ ಬಿಚ್ಚಿಟ್ಟ ಮೋದಿ, ವಿಶೇಷ ಸಂದರ್ಶನ!

ಕೇರಳದಲ್ಲಿ ಹೆಜ್ಜೆಗುರುತು ಮೂಡಿಸಲು ಬಿಜೆಪಿ ಅವಿರತ ಪ್ರಯತ್ನಿಸುತ್ತಿದೆ. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ಸು ಸಿಕ್ಕಿಲ್ಲ. ಕೇರಳದ ಎಲ್‌ಡಿಎಪ್, ಯೂಡಿಎಫ್ ನಡೆಸಿದ ಆಡಳಿತ, ಕೋವಿಡ್ ನಿರ್ವಹಣೆ, ಪ್ರವಾದದ ವೇಳೆ ಬಿಜೆಪಿ ಕಾರ್ಯಕರ್ತರ ಸೇವೆ ಸೇರಿದಂತೆ ದಕ್ಷಿಣ ಭಾರತದಲ್ಲಿ ಬದಲಾವಣೆ ಗಾಳಿ ಕುರಿತು ಮೋದಿ ಏಷ್ಯಾನೆಟ್ ಸುವರ್ಣನ್ಯೂಸ್ ಜೊತೆಗಿನ ವಿಶೇಷ ಸಂದರ್ಶನದಲ್ಲಿ ಮಾತನಾಡಿದ್ದಾರೆ.
 

Assembly and Lok sabha Election vote share proves BJP Emerging Kerala says PM Modi on Exclusive Interview ckm
Author
First Published Apr 20, 2024, 10:36 PM IST

ನವದೆಹಲಿ(ಏ.20) ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೇರಲು ಅವಿರತ ಪ್ರಯತ್ನ ಮಾಡುತ್ತಿದೆ. ಈ ಪೈಕಿ ಕರ್ನಾಟಕ ಆಶಾದಾಯಕವಾಗಿದ್ದರೆ, ಇನ್ನುಳಿದ ರಾಜ್ಯಗಳಲ್ಲಿ ಬಿಜೆಪಿಗೆ ನಿರೀಕ್ಷಿಯ ಯಶಸ್ಸು ಸಿಕ್ಕಿಲ್ಲ. ಆದರೆ ಬಿಜೆಪಿ ತನ್ನ ಪ್ರಯತ್ನದಲ್ಲಿ ಹಿಂದೆ ಬಿದ್ದಿಲ್ಲ. ಸತತ ಪ್ರಯತ್ನ, ಬಿಜೆಪಿಯ ಆಡಳಿತ, ಕೇರಳದಲ್ಲಿ ಆಡಳಿತದ ನಡೆಸಿದ ಸರ್ಕಾರದ ಹಗರಣಗಳು ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯನ್ನು ಮತದಾರರು ಕೈಹಿಡಿಯಲಿದ್ದಾರೆ ಎಂದು ಮೋದಿ ಹೇಳಿದ್ದಾರೆ. ಈ ಕುರಿತು ಏಷ್ಯಾನೆಟ್ ಸುವರ್ಣನ್ಯೂಸ್‌ ನಡೆಸಿದ ವಿಶೇಷ ಸಂದರ್ಶನದಲ್ಲಿ ಕೇರಳದ ರಾಜಕೀಯ, ಬಿಜೆಪಿ ಅಭಿವೃದ್ಧಿ ಕುರಿತು ಹಲವು ಮಾಹಿತಿ ನೀಡಿದ್ದಾರೆ. 

ಚುನಾವಣೆಯಲ್ಲಿ ಏನಾಗುತ್ತೆ ಅನ್ನುವ ಆಧಾರದ ಮೇಲೆ ನಾವು ಸೇವೆ ಮಾಡ್ತೀವಿ ಅನ್ನೋದಲ್ಲ. ನೀವು ಹಿಂದಿನ ದಿನಗಳಲ್ಲಿ ನೋಡಿ. ಕೇರಳದಲ್ಲಿ ವಿಪತ್ತು ಬಂದಾಗ, ಯಾರಾದ್ರೂ ಆಗ ಹೆಚ್ಚು ಕೆಲಸ ಮಾಡಿದ್ರು ಅಂದ್ರೆ ಅದು ನಮ್ಮ ಜನರೇ, ಇದೇ ಕಾರಣಕ್ಕೆ ಎಡಪಂಥೀಯರ ನೆಲೆ ಅಲ್ಲಾಡುತ್ತಿದೆ. ಅಲ್ಲಿನ ಜನರಿಗೂ ಅರ್ಥವಾಗ್ತಿದೆ. ಮತದಾರರ ಮನಸ್ಸು ಕೂಡ ಬದಲಾಗ್ತಿದೆ. ಇದೇ ಕಾರಣಕ್ಕೆ ತಮಿಳುನಾಡಲ್ಲಿ ಎಲ್ಡಿಎಫ್ ಹಾಗೂ ಯುಡಿಎಫ್ ಒಟ್ಟಿಗೆ ಇದ್ದಾರೆ. ಅದೇ ಕೇರಳದಲ್ಲಿ ಪರಸ್ಪರ ಹೋರಾಡ್ತಾರೆ. ಏಷ್ಯಾನೆಟ್ ತಮಿಳುನಾಡಿನಲ್ಲಿ ಸುದ್ದಿ ನೀಡುತ್ತೆ, ಜೊತೆಯಲ್ಲಿದ್ದಾರೆ ಅಂತ.. ಅದೇ ಏಷ್ಯಾನೆಟ್ ಕೇರಳದಲ್ಲಿ ಸುದ್ದಿ ನೀಡುತ್ತೆ, ಬಡಿದಾಡ್ತಿದ್ದಾರೆ ಅಂತ. ಜನರ ವಿಶ್ವಾಸವನ್ನ ಅವರು ಕಳೆದುಕೊಳ್ತಿದ್ದಾರೆ ಎಂದು ಮೋದಿ ಹೇಳಿದ್ದಾರೆ.

2011ರ ವಿಧಾನಸಭೆ ಚುನಾವಣೆಯಲ್ಲಿ ಎನ್ಡಿಎಗೆ ಶೇಕಡ 6ರಷ್ಟು ಮತ ಬಂದಿತ್ತು. 2014ರ ನಂತರ ನಡೆದ ಎಲ್ಲಾ ಚುನಾವಣೆಯಲ್ಲಿ ಬಿಜೆಪಿಗೆ ಕಡಿಮೆ ಅಂದರೂ ಶೇಕಡ 15ರಷ್ಟು ಮತ ಬಂದಿದೆ. ಇದರ ಅರ್ಥ ನಾವು ಪ್ರಗತಿ ಸಾಧಿಸುತ್ತಿದ್ದೇವೆ ಅಂತ. ಇದು ಒಂದು ಕಾರಣ ಅಲ್ಲ. ನಾವು ಮೊದಲು ಹೇಗೆ ಜನರಿಗೆ ಸೇವೆ ಮಾಡುತ್ತಿದ್ದೇವೋ.. ಮುಂದೆಯೂ ಹಾಗೇ ಸೇವೆ ಮಾಡ್ತೀವಿ. ಉತ್ತಮ ಆಡಳಿತ ಮತ್ತು ದುರಾಢಳಿತ-ಸುಳ್ಳು ಮಾಹಿತಿ ಮಧ್ಯದ ಹೋರಾಟ ಇದು ಎಂದಿದ್ದಾರೆ.

ಅವರು ಕೋವಿಡ್ ಸಮಯದಲ್ಲಿ ಹವಾ ಸೃಷ್ಟಿಸಿಬಿಟ್ರು.. ಭಾರೀ ಕೆಲಸ ಮಾಡಿಬಿಟ್ರು ಅಂತ. ಆದ್ರೆ ಅತಿಹೆಚ್ಚು ಜನ ಸತ್ತಿದ್ದು ಕೇರಳದಲ್ಲಿ. ಅಂದ್ರೆ ಅವರು ವಿಫಲರಾದ್ರು. ಅವರು ಮೀಡಿಯಾ ನಿಯಂತ್ರಣದಲ್ಲಿಟ್ಟುಕೊಂಡು ಹವಾ ಸೃಷ್ಟಿಸಿದರೆ ಪರಿಸ್ಥಿತಿ ಸುಧಾರಣೆಯಾಗೋದಿಲ್ಲ ಎಂದು ಮೋದಿ ಹೇಳಿದ್ದಾರೆ.   

ಭಾರತೀಯ ಜನತಾ ಪಾರ್ಟಿ ಎಲ್ಲಾ ವರ್ಗಗಳ ಜನರನ್ನ ಒಟ್ಟಾಗಿ ತೆಗೆದುಕೊಂಡು ಹೋಗುವ ಪಕ್ಷ. ಎಲ್ಲಾ ವರ್ಗಗಳನ್ನ ಒಟ್ಟಾಗಿ ಕರೆದೊಯ್ಯಬೇಕು ಅನ್ನೋದು ನಮ್ಮ ಮೂಲಭೂತ ಸಿದ್ಧಾಂತ. ಗೋವಾದಲ್ಲಿ ನಮ್ಮ ಸರ್ಕಾರ ನೋಡಿ. ದಶಕಗಳ ಕಾಲ ನಮ್ಮ ಸರ್ಕಾರ ನಡೀತಿದೆ.  ಬಹಳ ಚೆನ್ನಾಗಿ ಸರ್ಕಾರ ನಡೆಯುತ್ತಿದೆ. ಕ್ರಿಶ್ಚಿಯನ್ನ ಸಮುದಾಯದ ಸಹಕಾರದೊಂದಿಗೆ ನಡೀತಿದೆ ಎಂದರು.

ಈಶಾನ್ಯ ರಾಜ್ಯಗಳಲ್ಲಿ ನೋಡಿ.. ಈಶಾನ್ಯದಲ್ಲಿ ನಮ್ಮದೆಷ್ಟು ಸರ್ಕಾರಗಳಿದ್ಯೋ ಅದರಲ್ಲಿ ಮುಖ್ಯಮಂತ್ರಿ ಕ್ರಿಶ್ಚಿಯನ್ ಇದ್ದಾರೆ. ಮಂತ್ರಿ ಮಂಡಲದ ಸದಸ್ಯರಿದ್ದಾರೆ. ಅತಿ ಹೆಚ್ಚಾಗಿ ಅಲ್ಲಿನ ಮತದಾರರು ಕ್ರಿಶ್ಚಿಯನ್ನರು. ಅವರ ಮತಗಳಿಂದಲೇ ಅಲ್ವಾ ನಮ್ಮ ಸರ್ಕಾರ ಅಲ್ಲಿ ನಡೀತಿರೋದು. ಕ್ರಿಶ್ಚಿಯನ್ ಸಮುದಾಯ ನಮ್ಮ ಜತೆ ಇಲ್ಲ ಎಂಬ ಆರೋಪ ಮಾಡಬಾರದು. ನಮ್ಮ ಪ್ರಯತ್ನಗಳನ್ನ ನಾವು ಮಾಡುತ್ತಿದ್ದೇವೆ. ಕೇರಳದಲ್ಲಿ ಬೂತ್ನಿಂದ ರಾಷ್ಟ್ರೀಯ ಮಟ್ಟದವರೆಗೂ ನಾಯಕರಿದ್ದಾರೆ. ಕ್ರಿಶ್ಚಿಯನ್ ನಾಯಕರು, ಬಿಷಪ್ಸ್ ಅವರನ್ನ ನಾನು ವರ್ಷದಲ್ಲಿ ಐದು-ಆರು ಬಾರಿ ಭೇಟಿಯಾಗ್ತೀನಿ. ಕ್ರಿಸ್ಮಸ್ ಕೂಡ ನಾವು ತುಂಬಾ ಚೆನ್ನಾಗಿ ಆಚರಣೆ ಮಾಡ್ತೀವಿ. ಎಲ್ಡಿಆಫ್ ಹಾಗೂ ಯುಡಿಎಫ್ ಸುಳ್ಳಿನಿಂದ ಕ್ರಿಶ್ಚಿಯನ್ ಸಮುದಾಯ ಸಿಟ್ಟಾಗಿದೆ. ಅವರು ನನ್ನ ಬಳಿ ದೂರು ನೀಡಲು ಬಂದಿದ್ರು. ನಮ್ಮ ಚರ್ಚ್ಗಳ ಮಧ್ಯೆ ಗಲಾಟೆ ತಂದಿಟ್ಟಿದ್ದಾರೆ. ನಮ್ಮ ಚರ್ಚ್ನ ಆಸ್ತಿಗಾಗಿ ನಮಗೆ ಸಂಕಷ್ಟ ತಂದಿದ್ದಾರೆ. ನನ್ನ ಸಹಾಯ ಕೇಳಿದ್ರು. ಅವರು ಕೇಂದ್ರ ಸರ್ಕಾರದ ಸಹಾಯದ ನಿರೀಕ್ಷೆಯಲ್ಲಿದ್ದಾರೆ. ಅವರು ತೊಂದರೆಯಿಂದ ಚಿಂತೆಗೀಡಾಗಿದ್ದಾರೆ ಎಂದರು.

ಮೀನುಗಾರರಿಗಾಗಿ ಮೀನುಗಾರಿಕೆ ಇಲಾಖೆ ತಂದಿದ್ದೇವೆ. ನಮ್ಮ ಕರಾವಳಿ ಭಾಗದ ಜನರ ಸಹಾಯಕ್ಕಾಗಿ ತಂದಿದ್ದೇವೆ. ಜನ ಇದನ್ನ ಸ್ವಾಗತ ಮಾಡಿದ್ದಾರೆ. ಅವರ ಆರ್ಥಿಕ ಸ್ಥಿತಿ ಉತ್ತಮವಾಗಬೇಕು ಹಾಗೂ ಅವರಿಗೆ ಆಧುನಿಕ ತಂತ್ರಜ್ಞಾನದ ಲಾಭ ದೊರೆಯಬೇಕು. ನೀಲಿ ಆರ್ಥಿಕತೆ ಹೆಚ್ಚಾಗಿಸೋದ್ರಿಂದ ಆ ಸಮುದಾಯದ ಬಹಳ ಜನರಿಗೆ ಅನುಕೂಲವಾಗೋ ಸಾಧ್ಯತೆಯಿದೆ. ಕ್ರಿಶ್ಚಿಯನ್ ಸಮುದಾಯ ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚು ಕೈ ಜೋಡಿಸಿದ್ದಾರೆ. ನಾನು ವ್ಯಾಟಿಕನ್ಗೆ ಹೋದಾಗ ಅಲ್ಲಿ ಪೋಪ್ರನ್ನ ಭೇಟಿ ಮಾಡಿದ್ದೆ. ತುಂಬಾ ದೊಡ್ಡ ಚರ್ಚೆ ಮಾಡಿದ್ವಿ. ಅವರಿಗೆ ನಮ್ಮ ಸರ್ಕಾರದ ಕೆಲಸಗಳ ಬಗ್ಗೆ ಮಾಹಿತಿ ಇತ್ತು. ತುಂಬಾ ವಿಚಾರಗಳ ಬಗ್ಗೆ ನಾವು ಚರ್ಚೆ ಮಾಡಿದ್ವಿ. ನಾನು ಅವರಿಗೆ ಭಾರತಕ್ಕೆ ಬರುವಂತೆ ಆಹ್ವಾನ ನೀಡಿದೆ. ಮುಂದಿನ ವರ್ಷ ಅವರು ಬರಬಹುದು ಎಂದಿದ್ದಾರೆ.

ಚಿನ್ನ ಕಳ್ಳ ಸಾಗಣೆ ಕೇಸ್ ನಲ್ಲಿ ಕೇರಳ ಸಿಎಂ ಪಿಣಾರಾಯಿ ವಿಜಯನ್ ಹಾಗೂ ಅವರ ಕುಟುಂಬದ ಮೇಲೆ ನೀವು ಮೃಧು ಧೋರಣೆ ತಾಳ್ತಿದ್ದೀರಿ ಅನ್ನೋ ಕಾಂಗ್ರೆಸ್ ಹಾಗೂ ಯುಡಿಎಫ್ ಆರೋಪಕ್ಕೂ ಮೋದಿ ಉತ್ತರಿಸಿದ್ದಾರೆ.  ಮೋದಿ ಮೃಧು ಅಥವಾ ಕಠಿಣ ಅನ್ನೋದರಲ್ಲಿ ಅರ್ಥವಿಲ್ಲ. ಈ ಕೆಲಸಗಳನ್ನ ತನಿಖಾ ಸಂಸ್ಥೆಗಳು ಮಾಡುತ್ತವೆ, ಸ್ವತಂತ್ರವಾಗಿ ಕೆಲಸ ಮಾಡುತ್ತವೆ. ಸರ್ಕಾರವಾಗಲಿ, ಪ್ರಧಾನಮಂತ್ರಿಯಾಗಿ ನಾನಾಗಲಿ ಮಧ್ಯ ಪ್ರವೇಶ ಮಾಡೋದಿಲ್ಲ ಇದು ನನ್ನ ಸಿದ್ದಾಂತ ಎಂದು ಮೋದಿ ಹೇಳಿದ್ದಾರೆ. 


 
ಕಾಂಗ್ರೆಸ್ ಹಾಗೂ ಕಮ್ಯುನಿಸ್ಟರಿಗೆ ಪ್ರಶ್ನೆ ಏನೆಂದ್ರೆ, ಅವರು ಒಂದೇ ನಾಣ್ಯದ ಎರಡು ಮುಖಗಳಯ. ಅವರು ಬೇರೆ ಬೇರೆ ಅಲ್ಲ. ಭ್ರಷ್ಟಾಚಾರದಲ್ಲಿ ಮುಳುಗಿರುವ ಪಿಣಾರಾಯಿ ಸರ್ಕಾರದ ಜತೆ ನಾವು ಯಾವಾಗಲೂ ಕೆಲಸ ಮಾಡಿದ್ದೇವೆ. ಅವರಿಗೆ ಎಚ್ಚರಿಕೆ ಕೊಡಲಾಗಿದೆ. ನಾನು ಕೂಡ ಕೊಟ್ಟಿದ್ದೇನೆ. ನೀವು 15ನೇ ಏಪ್ರಿಲ್ ಭಾಷಣ ನೋಡಿ, ಸಿಎಂಆರ್ಎಲ್ ಜತೆ ಸೌದಿಯ ವಿಚಾರ ಕೈಗೆತ್ತಿಕೊಂಡೆವು. ನಾವು ಈ ಕೇಸ್ ವಿಚಾರವಾಗಿ ದೀರ್ಘವಾಗಿ ಹೋದ್ವಿ. ಚಿನ್ನ ಕಳ್ಳ ಸಾಗಣೆ ಕೇಸ್ನಲ್ಲಿ ಸಿಎಂ ಆಫೀಸಿನ ಬಗ್ಗೆ ಸುಳಿವು ಸಿಗ್ತು. ಎಲ್ಲಾ ಬಿಚ್ಚಿಟ್ರು. ಕಮ್ಯುನಿಸ್ಟ್ ಪಕ್ಷ ಯಾವಾಗಲು 2 ವಿಚಾರಗಳಿಂದ ಸುದ್ದಿಯಾಗ್ತಿದ್ರು. ಒಂದು ಕುಟುಂಬ ರಾಜಕಾರಣ. ಎರಡನೇದು ಭ್ರಷ್ಟಾಚಾರದ ಆರೋಪ. ಇಂದು ಈ ಎರಡು ವಿಚಾರದಲ್ಲಿ ಎಲ್ಲರನ್ನೂ ಅವರು ಹಿಂದೆ ಹಾಕಿದ್ದಾರೆ. ಕುಟುಂಬ ರಾಜಕಾರಣ ಬಿಹಾರಕ್ಕಿಂತ ಕೇರಳದ ಕಮ್ಯುನಿಸ್ಟ್ ಪಾರ್ಟಿಯಲ್ಲೇ ಹೆಚ್ಚು ನೋಡಬಹುದು. ಈಗ ಸಿಪಿಎಂ ಸಹಕಾರಿ ಬ್ಯಾಂಕ್ಗಳನ್ನ ಲೂಟಿ ಮಾಡಿದ್ದಾರೆ. ಅದನ್ನ ಸರಿಪಡಿಸುವ ಕೆಲಸ ನಾವು ಮಾಡ್ತಿದ್ದೇವೆ. ಬರುವ ದಿನಗಳಲ್ಲಿ ಜನರಿಗೆ ನ್ಯಾಯ ಕೊಡುವ ಕೆಲಸ ಮಾಡ್ತೀವಿ. ಕಾಂಗ್ರೆಸ್ ಕೇರಳದಲ್ಲಿ ಇವರನ್ನ ಜೈಲಿಗೆ ಹಾಕಿ ಅನ್ನುತ್ತೆ. ನಾವು ಜೈಲಿಗೆ ಹಾಕಿದ್ರೆ, ದೆಹಲಿಗೆ ಬಂದು ಇದು ರಾಜಕೀಯ ಪ್ರತೀಕಾರ ಅಂತಾರೆ. ಇಂತಹ ಎರಡು ಮಾತುಗಳನ್ನ ರಾಜಕೀಯ ನಾಯಕರನ್ನ ದೇಶ ಎಂದು ಸಹ ಸ್ವೀಕರಿಸೋದಿಲ್ಲ ಎಂದಿದ್ದಾರೆ. 

ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ಮೋದಿ ಫೋಟೋ ಹಾಕುವ ಬಗ್ಗೆ ರಾಜಕೀಯ ಪಕ್ಷಗಳು ಹಾಗೂ ಜನರು ಆಕ್ಷೇಪ ಕುರಿತು ಮೋದಿ ಮಾತನಾಡಿದ್ದಾರೆ.  ಇದು ಫೋಟೋ ಪ್ರಶ್ನೆಯಲ್ಲ. ಇಲ್ಲಿ ಪ್ರಶ್ನೆ ಏನೆಂದರೆ ಯೋಜನೆಯ ಹೆಸರು. ಪಿಎಂ ಆವಾಸ್ ಯೋಜನಾ. ಅದರ ಒಂದು ಲೋಗೋ ಇದೆ. ಅದರ ಗುರುತಿಗಾಗಿ. ಇದರ ಬಜೆಟ್ ಕೇಂದ್ರ ಸರ್ಕಾರ ಮಾಡುತ್ತೆ. ಅದು ಸಂಸತ್ ಮುಖಾಂತರ ಹೋಗುತ್ತೆ. ಯೋಜನೆ ಹಾಗೂ ವೆಚ್ಚ ಅದರ ಹೆಸರಲ್ಲೇ ಮಾಡಲಾಗುತ್ತೆ. ನಾವು ಏನಾದ್ರೂ ಬೇರೆ ಹೆಸರು ಇಟ್ಟರೆ, ಆಗ ಆಡಿಟ್ ರಿಪೋರ್ಟ್ ಬರುತ್ತೆ. ಪಿಎಂ ಆವಾಸ್ ಯೋಜನೆಯೇ ಇಲ್ಲ, ನೀವು ದುಡ್ಡು ಹೇಗೆ ಕೊಟ್ರಿ ಅಂತ ಕೇಳ್ತಾರೆ. ನಾನು ಸಿಎಜಿಗೆ ಏನಂತಾ ರಿಪೋರ್ಟ್ ಕೊಡಲಿ. ಅದು ನನ್ನ ಜವಾಬ್ದಾರಿ ಇದೆ. ನನಗೆ ಸಂಸತ್ ಖರ್ಚು ಮಾಡೋಕೆ ಅವಕಾಶ ಕೊಟ್ಟಿದೆ. ನಾನು ಏನೇ ಖರ್ಚು ಮಾಡಿದ್ರು ಸಿಎಜಿ ಲೆಕ್ಕ ಹಾಕುತ್ತೆ. ಯೋಜನೆಗಳನ್ನ ನನ್ನ ಹೆಸರಲ್ಲಿ ಕರೆಯೋದಿಲ್ಲ. ಅದೇನು ವ್ಯಕ್ತಿಯ ಹೆಸರಲ್ಲ. ಪಿಎಂ ಯಾರು ಬೇಕಾದ್ರೂ ಆಗಬಹುದು ಎಂದರು.

ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯನ್ನೇ ತೆಗೆದುಕೊಳ್ಳಿ. ಅಟಲ್ ಜೀ ಸರ್ಕಾರ ಇದ್ದಾಗ ಮಾಡಿದ್ದು. ಬಳಿಕ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ರು. ಅವರಿದ್ದಾಗಲು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ. ಬದಲಾವಣೆ ಮಾಡುವ ಅವಶ್ಯಕತೆ ಬರಲಿಲ್ಲ. ಪಿಎಂ ಅನ್ನೋದು ಓರ್ವ ವ್ಯಕ್ತಿಯಲ್ಲ. ಇದನ್ನ ವಿರೋಧ ಮಾಡ್ತಾರೆ ಅಂದ್ರೆ, ಅವರಲ್ಲಿ ನಿರಾಸೆ ಹಾಗೂ ದ್ವೇಷ ಎಷ್ಟಿದೆ ಅನ್ನೋದು ತಿಳಿಯುತ್ತೆ. ಸ್ಟಿಕ್ಕರ್ ಹಾಕೋದ್ರಿಂದ ಏನು ಲಾಭವಾಗುತ್ತೆ? ಎಂದು ಮೋದಿ ಪ್ರಶ್ನಿಸಿದ್ದಾರೆ. 

ಕೇರಳ ಕೂಡ ಯೋಜನೆಗಳನ್ನ ಮಾಡಲಿ.. ಯಾರು ತಡೆಯಲು ಬರುತ್ತಾರೆ. ನಮ್ಮ ಒಕ್ಕೂಟ ವ್ಯವಸ್ಥೆಯಲ್ಲಿ ಇಬ್ಬರಿಗೂ ಜವಾಬ್ದಾರಿ ಇರುತ್ತೆ. ಕೇರಳ ನಮ್ಮ ಜವಾಬ್ದಾರಿಯನ್ನ ನಾವು ನಿಭಾಯಿಸಲ್ಲ ಅಂದ್ರೆ. ನೀವು ಹೇಳಿ ನಾವು ಆಯುಷ್ಮಾನ್ ಆರೋಗ್ಯ ಮಂದಿರ ಯೋಜನೆ ಮಾಡಿದ್ದೇವೆ. ನಮಗೆ ಬಜೆಟ್ನಲ್ಲಿ ಆ ಯೋಜನೆಗೆ ಹಣ ಬಿಡುಗಡೆ ಮಾಡಿದ್ದಾರೆ. ಈಗ ಕೇರಳ ಹೇಳುತ್ತೆ ಮಂದಿರ ಅಂತಾ ಬರೆಯಬಾರದು ಅಂದ್ರೆ. ಮಂದಿರ ಅಂದ್ರೆ ಪೂಜೆ ಮಾಡೋ ದೇವಸ್ಥಾನ ಅಲ್ಲ. ವಡೋದರದಲ್ಲಿ ಕೋರ್ಟ್ಗೆ ನ್ಯಾಯಮಂದಿರ ಅಂತಾರೆ. ಮಕ್ಕಳು ಶಾಲೆಗೆ ಪ್ರಿ ಪ್ರೈಮರಿಗೆ ಹೋಗ್ತಾರಲ್ಲ ಅದಕ್ಕೆ ಬಾಲ ಮಂದಿರ ಅಂತಾರೆ. ಅದೇನು ಪೂಜಾ ಸ್ಥಳವಲ್ಲ. ಆರೋಗ್ಯ ಮಂದಿರ ಅಂತಾ ಸಾಮಾನ್ಯವಾಗಿ ಇಟ್ಟಿದ್ದೇವೆ. ಇದನ್ನ ನಾವು ಮಾಡೋದಿಲ್ಲ ಅಂದ್ರೆ ಏನರ್ಥ. ಇದು ದ್ವೇಷದ ವಾತಾವರಣ ನಿರ್ಮಾಣವಾಗುತ್ತೆ.. ಇದು ಸರಿಯಲ್ಲ ಎಂದಿದ್ದಾರೆ. 


 

Follow Us:
Download App:
  • android
  • ios