ಬೇರ್ಪಟ್ಟ ಮರಿ ಆನೆಯನ್ನು ರಕ್ಷಿಸಿದ ಅರಣ್ಯಾಧಿಕಾರಿಗಳು, ಮತ್ತೆ ತಾಯಿ ಆನೆ ಜೊತೆ ಸೇರಿಸಲು ಅರಣ್ಯಾಧಿಕಾರಿಗಳು ಪ್ರಯತ್ನಿಸಿದ್ದಾರೆ. ಆದರೆ ಕೆಲ ದಿನಗಳಿಂದ ದೂರವಾಗಿದ್ದ ಮರಿ ಆನೆಯನ್ನು ಸ್ವೀಕರಿಸಲು ತಾಯಿ ಆನೆ ನಿರಾಕರಿಸಿದೆ. ಆದರೆ ಅರಣ್ಯಾಧಿಕಾರಿ ಪ್ರಯತ್ನಕ್ಕೆ ಕೊನೆಗ ಫಲ ಸಿಕ್ಕಿದ್ದು ಹೇಗೆ?
ಗುವ್ಹಾಟಿ (ಜು.07) ಕಾಡಿನ ಆನೆ ಮರಿಗಳು ಅಪರೂಪದಲ್ಲಿ ತಾಯಿ ಆನೆಯಿಂದ ಬೇರ್ಪಟ್ಟು ದಿಕ್ಕುಪಾಲಾದ ಘಟನೆಗಳಿವೆ. ಹಲವು ಬಾರಿ ಅರಣ್ಯಾಧಿಕಾರಿಗಳು ಮರಿ ಆನೆಯನ್ನು ತಾಯಿ ಆನೆ ಜೊತೆ ಸೇರಿಸುವಲ್ಲಿ ಯಶಸ್ವಿಯಾಗುತ್ತಾರೆ. ಹೀಗಾಗಿ ಅಸ್ಸಾಂ ಸಂರಕ್ಷಿತ ಕಾಜಿರಂಗ ರಾಷ್ಟ್ರೀಯ ಉದ್ಯಾನವನದ 2 ತಿಂಗಳ ಮರಿ ಆನೆಯೊಂದು ತಾಯಿಯಿಂದ ಬೇರ್ಪಟ್ಟಿದೆ. ತಾಯಿ ಆನೆ ಹುಡುಕುತ್ತಾ ಬಂದ ಮರಿ ಆನೆ ನೇರವಾಗಿ ಅರಣ್ಯದಂಚಿನ ಗ್ರಾಮಕ್ಕೆ ನುಗ್ಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಮರಿ ಆನೆಯನ್ನು ರಕ್ಷಿಸಿದ ಅರಣ್ಯಾಧಿಕಾರಿಗಳು ತಾಯಿ ಆನೆಯ ಹುಡುಕಾಟ ನಡೆಸಿದ್ದಾರೆ. ಒಂದೆರೆಡು ದಿನದಲ್ಲಿ ತಾಯಿ ಆನೆ ಹುಡುಕಿ ಮತ್ತೆ ಸೇರಿಸುವ ಪ್ರಯತ್ನಕ್ಕ ಆರಂಭದಲ್ಲೇ ಹಿನ್ನಡೆಯಾಗಿದೆ. ತಾಯಿ ಆನೆ, ಮರಿ ಆನೆಯನ್ನು ಸ್ವೀಕರಿಸಲು ನಿರಾಕರಿಸಿದೆ. ಆದರೆ ಅರಣ್ಯಾಧಿಕಾರಿಗಳ ನಿರಂತರ ಪ್ರಯತ್ನದಿಂದ ಕೊನೆಗೂ ಮರಿ ಆನೆ ತಾಯಿ ಮಡಿಲು ಸೇರಿಕೊಂಡಿದೆ.
ಮರಿ ಆನೆ ರಕ್ಷಿಸಿದ ಅರಣ್ಯಾಧಿಕಾರಿಗಳು
ಕಾಜಿರಂಗ ಅರಣ್ಯದಂಚಿನಲ್ಲಿರುವ ಬೊರ್ಜುರಿ ಗ್ರಾಮದಲ್ಲಿ ತಾಯಿ ಆನೆಯಿಂದ ಬೇರ್ಪಟ್ಟ ಮರಿ ಆನೆ ಗಾಬರಿಗೊಂಡು ಓಡಾಡುತ್ತಿರುವ ಮಾಹಿತಿ ಪಡೆದ ಅರಣ್ಯಾಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಆಗಮಿಸಿದ್ದಾರೆ. ಡಾ. ಭಾಸ್ಕರ್ ಚೌಧರಿ ಸೇರಿದಂತೆ ಅರಣ್ಯಾಧಿಕಾರಿಗಳ ತಂಡ ಸ್ಥಳಕ್ಕೆ ಧಾವಿಸಿತ್ತು. ನಾಯಿ ಸೇರಿದಂತೆ ಇತರ ಪ್ರಾಣಿಗಳು, ಮನುಷ್ಯರಿಂದ ಆನೆ ಮರಿಯನ್ನು ತಕ್ಷಣವೇ ಅರಣ್ಯಾಧಿಕಾರಿಗಳು ರಕ್ಷಿಸಿದ್ದಾರೆ.
ತಾಯಿ ಆನೆಯ ಹುಡುಕಾಟ
ಮರಿ ಆನೆ ರಕ್ಷಿಸಿದ ಅಧಿಕಾರಿಗಳು ಬಳಿಕ ತಾಯಿ ಆನೆಯ ಹುಡುಕಾಟ ಆರಂಭಿಸಿದ್ದಾರೆ. ಒಂದೇ ದಿನದಲ್ಲಿ ತಾಯಿ ಆನೆಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ತಾಯಿ ಆನೆ ಹಾಗೂ ಆನೆಗಳ ಹಿಂಡಿದ್ದ ಪ್ರದೇಶಕ್ಕೆ ಈ ಮರಿ ಆನೆಯನ್ನು ವಾಹನದ ಮೂಲಕ ಕರೆದೊಯ್ದ ಅರಣ್ಯಾಧಿಕಾರಿಗಳು ಅರಣ್ಯದಲ್ಲಿ ಬಿಟ್ಟಿದ್ದಾರೆ.
ತಾಯಿ ಆನೆ ಲದ್ದಿಯನ್ನು ಮರಿ ಆನೆಗೆ ಹಚ್ಚಿದ ಅಧಿಕಾರಿಗಳು
ತಾಯಿ ಆನೆಯ ಲದ್ದಿಯನ್ನು ಸಂಗ್ರಹಿಸಿ ತಂದ ಅರಣ್ಯಾಧಿಕಾರಿಗಳು ಮರಿ ಆನೆಯನ್ನು ಅರಣ್ಯಕ್ಕೆ ಬಿಡುವಾಗ ಸೊಂಡಿಲು, ಕಾಲು ಹಾಗೂ ದೇಹಕ್ಕೆ ತಾಯಿ ಆನೆಯ ಲದ್ದಿಯನ್ನು ಹಚ್ಚಿದ್ದಾರೆ. ಪ್ರಮುಖವಾಗಿ ಅರಣ್ಯಾಧಿಕಾರಿಗಳು ಗ್ರಾಮಸ್ಥರು ಮರಿ ಆನೆಯನ್ನು ಹಿಡಿದಿದ್ದರು. ಬಲಿಕ ಆರೈಕೆ ಮಾಡಿದ್ದರು. ಮನುಷ್ಯನ ಸ್ಪರ್ಶದ ವಾಸನೆ ಇದ್ದರೆ ತಾಯಿ ಆನೆ, ಮರಿ ಆನೆಯನ್ನು ಸ್ವೀಕರಿಸುವುದಿಲ್ಲ. ಇಷ್ಟೇ ಅಲ್ಲ ದಾಳಿ ಮಾಡುವ ಸಾಧ್ಯತೆಯೂ ಇದೆ. ಹೀಗಾಗಿ ಮನುಷ್ಯದ ಸ್ಪರ್ಶದ ವಾಸನೆ ತೆಗೆಯಲು ಮರಿ ಆನೆಗೆ ಲದ್ದಿ ಹಚ್ಚಿದ್ದಾರೆ.
ಮರಿಯನ್ನು ಸ್ವೀಕರಿಸಲು ನಿರಾಕರಿಸಿದ ತಾಯಿ ಆನೆ
ಬಳಿಕ ಮರಿ ಆನೆಯನ್ನು ತಾಯಿ ಆನೆಯ ದಿಕ್ಕಿನತ್ತ ಬಿಟ್ಟಿದ್ದಾರೆ. ದೂರದಲ್ಲಿ ತಾಯಿ ಆನೆ ನೋಡುತ್ತಿದ್ದತೆ ಮರಿ ಆನೆ ಓಡೋಡಿ ತೆರಳಿದೆ. ಆದರೆ ಮರಿ ಆನೆಯನ್ನು ಸ್ವೀಕಕರಿಸಲು ತಾಯಿ ಆನೆ ನಿರಾಕರಿಸಿದೆ. ಮರಿ ಆನೆ ಹತ್ತಿರ ಬರುತ್ತಿದ್ದಂತೆ ತಾಯಿ ಆನೆ ವಿರುದ್ಧ ದಿಕ್ಕಿನಲ್ಲಿ ಚಲಿಸಲು ಆರಂಭಿಸಿದೆ. ಮರಿ ಆನೆ ವೇಗ ಹೆಚ್ಚಿಸುತ್ತಿದ್ದಂತೆ ತಾಯಿ ಆನೆಯ ವೇಗವು ಹೆಚ್ಚಾಗಿದೆ. ಇದೇ ವೇಳೆ ಅರಣ್ಯಾಧಿಕಾರಿಗಳು ಜಾ, ಜಾ, ಜಾ ಎಂದು ಕೂಗಿದ್ದಾರೆ. ಇತ್ತ ಮರಿ ಆನೆ ವೇಗವಾಗಿ ತಾಯಿ ಆನೆ ಸೇರಿಕೊಂಡಿದೆ. ಈ ವಿಡಿಯೋವನ್ನು ನಿವೃತ್ತ ಅರಣ್ಯಾಧಿಕಾರಿ ಸುಶಾಂತ್ ನಂದಾ ಹಂಚಿಕೊಂಡಿದ್ದಾರೆ.
ತಾಯಿ ಆನೆಯ ಜೊತೆ ಸೇರಿಸಿದ ಅರಣ್ಯಾಧಿಕಾರಿಗಳು ಮತ್ತೆ ಹಿಂಬಾಲಿಸಿದ್ದಾರೆ. ಮರಿ ಆನೆ ಮಡಿಲು ಸೇರಿದೆಯಾ ? ಅಥವಾ ಸಮಸ್ಯೆ ಎದುರಾಗಿದೆಯಾ ಅನ್ನೋ ಪರಿಶೀಲಿಸಿದ್ದಾರೆ. ಈ ವೇಳೆ ತಾಯಿ ಹಾಗೂ ಮರಿ ಆನೆ ಜೊತೆಯಾಗಿ ಇತರ ಆನೆಯಗಳ ಹಿಂಡು ಸೇರಿರುವುದು ಪತ್ತೆಯಾಗಿದೆ.
