ಗುವಾಹಟಿ(ಅ. 12)  ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಲವ್ ಜಿಹಾದ್ ವಿರುದ್ಧ ಅತ್ಯುಗ್ರ ಹೋರಾಟ ಆರಂಭಿಸಲಿದೆ ಎಂದು ಭಾರತೀಯ ಜನತಾ ಪಕ್ಷದ (ಬಿಜೆಪಿ) ಮುಖಂಡ, ಅಸ್ಸಾಂ ಆರೋಗ್ಯ ಸಚಿವ ಹಿಮಂತ್  ಬಿಸ್ವಾ ಘೋಷಣೆ ಮಾಡಿದ್ದಾರೆ. 126 ಸದಸ್ಯರ ಅಸ್ಸಾಂ ಅಸೆಂಬ್ಲಿಗೆ ಮಾರ್ಚ್-ಏಪ್ರಿಲ್ 2021 ರಲ್ಲಿ ಚುನಾವಣೆ ನಡೆಯಲಿದೆ.

ಅಸ್ಸಾಂನ ನೆಲದಲ್ಲಿ ಲವ್ ಜಿಹಾದ್ ವಿರುದ್ಧ ಹೊಸ ಮತ್ತು ಕಟ್ಟುನಿಟ್ಟಿನ ಹೋರಾಟವನ್ನು ಪ್ರಾರಂಭಿಸಬೇಕಾಗಿದೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ, ಯಾವುದೇ ಹುಡುಗ ತನ್ನ ಧಾರ್ಮಿಕ ಗುರುತನ್ನು ಮರೆಮಾಚ  ಅಸ್ಸಾಮ್ ಹೆಣ್ಣುಮಕ್ಕಳ ಮತ್ತು ಮಹಿಳೆಯರ ಮೇಲೆ ಪ್ರಭಾವ ಬೀರುವ ಕೆಲಸ ಮಾಡಿದರೆ ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ನಾರ್ತ್ ಈಸ್ಟ್ ಡೆಮಾಕ್ರಟಿಕ್ ಅಲೈಯನ್ಸ್ (ನೆಡಾ) ಕನ್ವೀನಿಯರ್ ಸಹ ಆಗಿರುವ ಬಿಸ್ವಾ ಹೇಳಿದ್ದಾರೆ. 

'ಮುಸ್ಲಿಂ ಯುವತಿ ಪ್ರೀತಿಸಿದ್ದ ಯುವಕನ ಹತ್ಯೆ; ಜಾತ್ಯತೀತವಾದಿಗಳು ಎಲ್ಲಿದ್ದಾರೆ?'

ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಡ್(ಎಐಯುಡಿಎಫ್) ಮುಖ್ಯಸ್ಥ ಬದರುದ್ದೀನ್ ಅಜ್ಮಲ್ ಅವರ ಮೇಲೆ ವಾಗ್ದಾಳಿ ಮಾಡಿದ ಹಿಮಂತ್ ' ಅಜ್ಮಲ್ ಆರ್ಮಿ ತಮ್ಮ ಜಾಯಿಯನ್ನು ಮರೆಮಾಚಿ ಸೋಶಿಯಲ್ ಮೀಡಿಯಾದಲ್ಲಿ ಹೆಣ್ಣು ಮಕ್ಕಳೊಂದಿಗೆ ಸ್ನೇಹ ಬೆಳೆಸಿ ಅವರನ್ನು ಮದುವೆಯಾಗುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ಇತರ ಧರ್ಮಗಳ ಹುಡುಗಿಯರು ಫೇಸ್‌ಬುಕ್‌ನಲ್ಲಿ "ಅಜ್ಮಲ್‌ ಸೇನೆಗೆ ಬಲಿಯಾಗುತ್ತಿದ್ದಾರೆ.  ಅಜ್ಮಲ್ ಸೇನೆ ಹಿಂದೂ ಹುಡುಗಿಯರನ್ನು ಟಚ್ ಮಾಡಿದರೆ ಅವರಿಗೆ ಮರಣದಂಡನೆಯೇ ಸರಿ ಎಂಬ ಪ್ರತಿಜ್ಞೆ ನಾವು ತೆಗೆದುಕೊಂಡಿದ್ದೇವೆ ಎಂದರು.