ಅಸ್ಸಾಂ ಗೋಲಾಘಾಟ್‌ನಲ್ಲಿ ನಡೆದ ತ್ರಿವಳಿ ಕೊಲೆ ಪ್ರಕರಣ ಕುರಿತ ಹೇಳಿಕೆ ವೇಳೆ ಕಾಂಗ್ರೆಸ್ ನಾಯಕ ಲವ್ ಜಿಹಾದ್ ಜೊತೆ ಶ್ರೀಕೃಷ್ಣ ಹಾಗೂ ರುಕ್ಮಿಣಿ ನಡುವಿನ ಸಂಬಂಧ ಹೋಲಿಕೆ ಮಾಡಿದ್ದರು. ಆದರೆ ತೀವ್ರ ಪ್ರತಿಭಟನೆ ಹಾಗೂ ಟೀಕೆ ಬೆನ್ನಲ್ಲೇ ಕ್ಷಮೆ ಯಾಚಿಸಿದ್ದಾರೆ.
ಗುವ್ಹಾಟಿ(ಜು.28) ಅಸ್ಸಾಂ ಗೋಲಾಘಾಟ್‌ನಲ್ಲಿ ನಡೆದ ತ್ರಿವಳಿ ಕೊಲೆ ಪ್ರಕರಣದ ಹಿಂದೆ ಲವ್ ಜಿಹಾದ್ ವಾಸನೆ ಬಡಿಯುತ್ತಿದೆ. ಪತ್ನಿ ಮೇಲೆ ಹಲ್ಲೆ ಕಾರಣದಿಂದ ಜೈಲು ಸೇರಿದ್ದ ಮುಸ್ಲಿಂ ಪತಿ ಮರಳಿ ಬಂದು ಹಿಂದೂ ಪತ್ನಿ ಹಾಗೂ ಆಕೆಯ ಪೋಷಕರನ್ನು ಹತ್ಯೆ ಮಾಡಿದ ಘಟನೆ ಅಸ್ಸಾಂನಲ್ಲಿ ಭಾರಿ ಕೋಲಾಹಲ ಸೃಷ್ಟಿಸಿದೆ. ಈ ಪ್ರಕರಣದ ತನಿಖೆ ವೇಳೆ ಲವ್ ಜಿಹಾದ್ ಅನುಮಾನಗಳು ವ್ಯಕ್ತವಾಗಿದೆ. ಹೀಗಾಗಿ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ, ಕೊಲೆಯ ಹಿಂದೆ ಲವ್ ಜಿಹಾದ್ ಅನುಮಾನವಿದೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಖಂಡಿಸುವ ವೇಳೆ ಅಸ್ಸಾಂ ಕಾಂಗ್ರೆಸ್ ಮುಖಂಡ ಬುಪೇನ್ ಬೋರಾ ಲವ್ ಜಿಹಾದ್ ಹಾಗೂ ಶ್ರಿಕೃಷ್ಣ -ರುಕ್ಮಿಣಿ ನಡುವಿನ ಸಂಬಂಧವನ್ನು ಹೋಲಿಕೆ ಮಾಡಿದ್ದರು. ಇದು ಹಿಂದೂಗಳ ಭಾವನೆಯನ್ನು ಕೆರಳಿಸಿತ್ತು. ಈ ಹೇಳಿಕೆ ವಿರುದ್ಧ ಅಸ್ಸಾಂನಲ್ಲಿ ಬಾರಿ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಬುಪೇನ್ ಬೋರಾ ಕ್ಷಮೆ ಯಾಚಿಸಿದ್ದಾರೆ.
ಹಿಂದೂ ಪತ್ನಿಗೆ ಹಲ್ಲೆ ಮಾಡಿದ ಆರೋಪದಡಿ ಮುಸ್ಲಿಂ ಪತಿ ಜೈಲು ಸೇರಿದ್ದ. ಜೈಲಿನಿಂದ ಮರಳಿದ ಬೆನ್ನಲ್ಲೇ ಪತ್ನಿ ಹಾಗೂ ಆಕೆಯ ಪೋಷಕರನ್ನು ಹತ್ಯೆಗೈಯಲಾಗಿದೆ. ಈ ಪ್ರಕರಣದ ಕುರಿತು ಸಿಎಂ ಹಿಮಂತ ಬಿಸ್ವಾ ಶರ್ಮಾ ಇದೊಂದು ಲವ್ ಜಿಹಾದ್ ಪ್ರಕರಣದ ರೀತಿ ಕಾಣಿಸುತ್ತಿದೆ. ಪೊಲೀಸರು ಈ ನಿಟ್ಟಿನಲ್ಲೂ ತನಿಖೆ ನಡೆಸಲಿದ್ದಾರೆ ಎಂದಿದ್ದರು. ಆದರೆ ಹಿಮಂತ ಹೇಳಿಕೆಯನ್ನು ವಿರೋಧಿಸಿದ ಬುಪೇನ್ ಬೋರಾ ಸಂಕಷ್ಟಕ್ಕೆ ಸಿಲುಕಿದ್ದರು. ಪ್ರೀತಿ ಮತ್ತು ಯುದ್ಧದದಲ್ಲಿ ಎಲ್ಲವೂ ನ್ಯಾಯೋಚಿತವಾಗಿದೆ. ಅನ್ಯಧರ್ಮದ ವಿವಾಹವನ್ನು ಲವ್ ಜಿಹಾದ್ ಎಂದು ಮುಖ್ಯಮಂತ್ರಿ ಕಿಡಿಕಾರುವುದು ಸರಿಯಲ್ಲ. ಪುರಾತನ ಗ್ರಂಥದಲ್ಲಿ ಶ್ರೀಕೃಷ್ಣ ರುಕ್ಮಿಣಿ ಜೊತೆ ಓಡಿ ಹೋದ ಕತೆಯೂ ಸೇರಿದಂತೆ ಹಲವು ಕತೆಗಳಿವೆ ಎಂದು ಬುಪೇನ್ ಬೋರಾ ಹೇಳಿದ್ದಾರೆ.
Love Jihad: ಹಿಂದೂ ಮಹಿಳೆಯೊಂದಿಗೆ ಫೇಸ್‌ಬುಕ್ ಲವ್: ರೇಪ್ ಮಾಡಿ ಗರ್ಭಪಾತ ಮಾಡಿಸಿ ಇಸ್ಲಾಂಗೆ ಮತಾಂತರ!
ಲವ್ ಜಿಹಾದ್ ಜೊತೆ ಹಿಂದೂಗಳ ಆರಾಧ್ಯ ದೇವರು ಶ್ರಿಕೃಷ್ಣ ಹಾಗೂ ರುಕ್ಮಿಣಿ ಎಳೆದು ತಂದ ಬುಪೇನ್ ಬೋರಾ ವಿರುದ್ಧ ಅಸ್ಸಾಂನಲ್ಲಿ ಭಾರಿ ಪ್ರತಿಭಟನೆ, ಆಕ್ರೋಶ ವ್ಯಕ್ತವಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳ ಸುರಿಮಳೆ ಎದುರಿಸಿದ್ದರು. ಇತ್ತ ಬಿಜೆಪಿ ನಾಯಕರು ಈ ಹೇಳಿಕೆ ವಾಪಸ್ ಪಡೆಯಲು ಪಟ್ಟು ಹಿಡಿಯಿತು. ಇಷ್ಟೇಅಲ್ಲ ಹಿಂದೂಗಳ ಭಾವನೆಗೆ ಧಕ್ಕೆ ತಂದ ಬುಪೇನ್ ಬೋರಾ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಬಿಜೆಪಿ ನಾಯಕರು ಆಗ್ರಹಿಸಿತ್ತು. ಇತ್ತ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಕೂಡ ಈ ಹೇಳಿಕೆ ವಿರುದ್ದ ಪ್ರತಿಕ್ರಿಯೆ ನೀಡಿದ್ದರು. ಹಿಂದೂಗಳ ಭಾವನೆಗೆ ಧಕ್ಕೆ ತಂದಿರುವ ಕಾಂಗ್ರೆಸ್ ನಾಯಕನ ವಿರುದ್ದ ದೂರು ದಾಖಲಿಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ. ಈ ಹೇಳಿಕೆಗೆ ಕಾನೂನು ಕೂಡ ಮಾನ್ಯತೆ ನೀಡುವುದಿಲ್ಲ ಎಂದು ಎಚ್ಚರಿಸಿದ್ದರು.
ಆಕ್ರೋಶದ ಜ್ವಾಲೆ ಹೆಚ್ಚಾಗುತ್ತಿದ್ದಂತೆ ಬುಪೇನ್ ಬೋರಾ ವಿಡಿಯೋ ಮೂಲಕ ಕ್ಷಮೆ ಯಾಚಿಸಿದ್ದಾರೆ. ಕ್ಷಮೆ ಯಾಚನೆ ವೇಳೆ ನೀಡಿದ ಹೇಳಿಕೆ ಇದೀಗ ವೈರಲ್ ಆಗಿದೆ. ಕಳೆದ ರಾತ್ರಿ ಕನಸಿನಲ್ಲಿ ನನ್ನ ಅಜ್ಜ ಬಂದಿದ್ದರು. ನಾನು ನೀಡಿದ ಹೇಳಿಕೆ ತಪ್ಪು ಎಂದು ನನಗೆ ಮನವರಿಕೆ ಮಾಡಿದ್ದಾರೆ. ಇದು ಜನರ ಭಾವನೆಗೆ ಧಕ್ಕೆ ತಂದಿದೆ ಎಂದು ಅಜ್ಜ ಕನಸಿನಲ್ಲಿ ಹೇಳಿದ್ದಾರೆ. ಹೀಗಾಗಿ ನನ್ನ ಹೇಳಿಕೆಗೆ ಕ್ಷಮೆ ಯಾಚಿಸುತ್ತೇನೆ. ನಾನು ಅಸ್ಸಾಂ ಮುಖ್ಯಮಂತ್ರಿಗೆ ಬೆದರಿಕೆ ಕ್ಷಮೆ ಯಾಚಿಸುತ್ತಿಲ್ಲ ಎಂದಿದ್ದಾರೆ.
ಆನ್‌ಲೈನ್ ಮೂಲಕ ಲವ್ ಜಿಹಾದ್, ಹಿಂದೂ ವಿವಾಹಿತ ಮಹಿಳೆ ಇಸ್ಲಾಂಗೆ ಮತಾಂತರ!
ಬುಪೇನ್ ಬೋರಾ ಕ್ಷಮೆ ಯಾಚನೆಗೂ ಮುನ್ನವೇ ಬಿಜೆಪಿ ಯುವಮೋರ್ಚಾ ಹಲವು ಜಿಲ್ಲೆಗಳಲ್ಲಿ ದೂರು ದಾಖಲಿಸಿದೆ. ಹಿಂದೂಗಳ ಭಾವನೆಗೆ ಧಕ್ಕೆ ತಂದಿರುವ ಆರೋಪ ಮಾಡಿದ್ದಾರೆ. ಸಂಪೂರ್ಣ ಘಟನೆ ಕುರಿತು ಹೇಳಿಕೆ ನೀಡಿರುವ ಹಿಮಂತ ಬಿಸ್ವಾ ಶರ್ಮಾ, ಈ ರೀತಿ ಹೇಳಿಕೆ ನೀಡುತ್ತಿರುವವರನ್ನು ಬಂಧಿಸುವ ಕೆಲಸ ಕಾನೂನು ಮಾಡಲಿದೆ. ಸರ್ಕಾರ ಈ ಪ್ರಕರಣದಲ್ಲಿ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ. ಶ್ರೀಕೃಷ್ಣನ ವಿರುದ್ಧ ಮಾತನಾಡುವವರ ವಿರುದ್ಧ ಸನಾತನ ಧರ್ಮದ ಹಲವರು ಈ ಕುರಿತು ದೂರು ದಾಖಲಿಸಿದ್ದಾರೆ. ದೂರಿನ ಆಧಾರದಲ್ಲಿ ಪೊಲೀಸರು ನಾಯಕರನ್ನು ಬಂಧಿಸಿದರೆ ಅದಕ್ಕೆ ನಾನು ಅಡ್ಡಿ ಮಾಡುವುದಿಲ್ಲ ಎಂದು ಹಿಮಂತ ಶರ್ಮಾ ಹೇಳಿದ್ದಾರೆ.
ಲವ್ ಜಿಹಾದ್ ಬಲವಂತದ, ಷಡ್ಯಂತ್ರದ ಮತಾಂತರ, ಮದುವೆ ಹಾಗೂ ಮೋಸ. ಹಿಂದೂ ಧರ್ಮದ ಕುರಿತು ಸ್ವಲ್ಪ ತಿಳುವಳಿಕೆ ಇದ್ದರೂ ಈ ರೀತಿ ಹೇಳಿಕೆಗೆ ಬರುತ್ತಿರಲಿಲ್ಲ ಎಂದು ಶರ್ಮಾ ತಿರುಗೇಟು ನೀಡಿದ್ದಾರೆ.
