ಆನ್‌ಲೈನ್ ಮೂಲಕ ಲವ್ ಜಿಹಾದ್, ಹಿಂದೂ ವಿವಾಹಿತ ಮಹಿಳೆ ಇಸ್ಲಾಂಗೆ ಮತಾಂತರ!
ಲವ್ ಜಿಹಾದ್ ಆರೋಪ ಎಲ್ಲೆಡೆಗಳಿಂದ ಕೇಳಿಬರುತ್ತಿದೆ. ಇದರ ಜೊತೆಗೆ ಸ್ವರೂಪವೂ ಬದಲಾಗುತ್ತಿದೆ. ಇದೀಗ ಆನ್‌ಲೈನ್ ಮೂಲಕ ಮತಾಂತರಗೊಳಿಸಲಾಗುತ್ತಿದೆ ಅನ್ನೋ ಆರೋಪಕ್ಕೆ ಕೆಲ ಘಟನಗಳು ಪುಷ್ಠಿ ನೀಡುತ್ತಿದೆ. ವಿವಾಹಿತ ಹಿಂದೂ ಮಹಿಳೆ ಇದೇ ಆನ್‌ಲೈನ್ ಷಡ್ಯಂತ್ರಕ್ಕೆ ಸಿಲುಕಿ ಇಸ್ಲಾಂಗೆ ಮತಾಂತರಗೊಂಡಿದ್ದಾಳೆ.
ಜೈಪುರ(ಜೂ.24) ಲವ್ ಜಿಹಾದ್ ಭಾರತದಲ್ಲಿ ಗಟ್ಟಿಯಾಗಿ ಬೇರೂರುತ್ತಿದೆ ಅನ್ನೋ ಆರೋಪ ಹೊಸದಲ್ಲ. ಇದೀಗ ಲವ್ ಜಿಹಾದ್ ಮೂಲಕ ಮತಾಂತರಗೊಳಿಸುವ ಹೊಸ ವಿಧಾನ ದೇಶದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಇದರ ಬೆನ್ನಲ್ಲೇ ರಾಜಸ್ಥಾನದಲ್ಲಿ ಹಿಂದೂ ವಿವಾಹಿತ ಮಹಿಳೆಯನ್ನು ಆನ್‌ಲೈನ್ ಗೇಮಿಂಗ್ ಆ್ಯಪ್ ಮೂಲಕ ಮತಾಂತರಗೊಳಿಸಿದ ಆರೋಪ ಕೇಳಿಬಂದಿದೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ರಾಜಸ್ಥಾನ ಸೀಕಾರ್ ನಿವಾಸಿಯಾಗಿರುವ ಈಕೆಯ ಪತಿ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಪತಿ ಮನೆಯಲ್ಲಿರುವ ಈಕೆ ಸಮಯ ಕಳೆಯಲು ಆನ್‌ಲೈನ್ ಗೇಮಿಂಗ್ ಆ್ಯಪ್‌ನಲ್ಲಿ ತೊಡಗಿಸಿಕೊಂಡಿದ್ದಾಳೆ. ಇದು ಲವ್ ಜಿಹಾದ್‌ಗಾಗಿ ಮಾಡಿರುವ ಷಡ್ಯಂತ್ರ ಆ್ಯಪ್ ಅನ್ನೋ ಆರೋಪ ಗಂಭೀರವಾಗುತ್ತಿದೆ. ಈ ಆನ್‌ಲೈನ್ ಗೇಮಿಂಗ್ ಮೂಲಕ ಈಕೆಗೆ ತಯೀಬ್ ಖಾನ್ ಅನ್ನೋ ಯುವಕನ ಪರಿಚಯವಾಗಿದೆ.
ಮತಾಂತರ, ಗೋಹತ್ಯೆ ನಿಷೇಧ ಕಾಯ್ದೆ ರದ್ದು ದುಸ್ಸಾಹಸ ಬೇಡ: ಪೇಜಾವರ ಶ್ರೀ
ಗೇಮಿಂಗ್ ಆ್ಯಪ್ ಮೂಲಕ ಪರಿಚಯವಾದ ತಯೀಬ್ ಖಾನ್, ಪ್ರೀತಿಯ ನಾಟಕವಾಡಿದ್ದಾನೆ. ಬಳಿಕ ಸಾಮಾಜಿಕ ಜಾಲತಾಣದಲ್ಲಿ ಇವರ ಪ್ರೀತಿ ಗಾಢವಾಗಿದೆ. ಇತ್ತ ಪತಿ ಮನೆಯಿಂದ ಸದ್ದಿಲ್ಲದೆ ತವರು ಮನೆಗೆ ತೆರಳಿದ ಈಕೆ, ಸದಾ ಕಾಲ ತಯೀಬ್ ಖಾನ್ ಜೊತೆ ಫೋನ್‌ನಲ್ಲಿ ಸಂಪರ್ಕದಲ್ಲಿದ್ದಳು. ಪ್ರತಿ ದಿನ ಭೇಟಿ, ಸುತ್ತಾಟ ಆರಂಭಗೊಂಡಿತು. ಸದ್ದಿಲ್ಲದೆ ಹಿಂದೂ ಧರ್ಮ ತೊರೆದು ಇಸ್ಲಾಂಗೆ ಮತಾಂತರವಾಗಿದ್ದಾಳೆ.
ತವರು ಮನೆಯಲ್ಲಿ ದೇವಸ್ಥಾನಕ್ಕೆ ತೆರಳಲು ಹೋದಾಗ ಈಕೆ ಮಾತ್ರ ಗೈರಾಗುತ್ತಿದ್ದಳು. ಕುಂಕುಮ ಇಡಲು ನಿರಾಕರಿಸುತ್ತಿದ್ದಳು. ಈಕೆಯ ವರ್ತನೆ ಬದಲಾಗಿತ್ತು. ಆಚಾರ ವಿಚಾರ ಬದಲಾಗಿತ್ತು. ಇದರಿಂದ ಅನುಮಾನಗೊಂಡ ಈಕೆಯ ಸಹೋದರ ಪರಿಶೀಲನೆ ನಡೆಸಿದ್ದಾನೆ. ಈ ವೇಳೆ ತಯೀಬ್ ಖಾನ್ ಆನ್‌ಲೈನ್ ಗೇಮ್ ಪತ್ತೆಯಾಗಿದೆ. ತನ್ನ ಸಹೋದರಿಂದ ಇಸ್ಲಾಂಗೆ ಮತಾಂತರವಾಗಿರುವುದು ಪತ್ತೆಯಾಗಿದೆ. ಈ ಕುರಿತು ಪ್ರಕರಣ ದಾಖಲಿಸಲಾಗಿದೆ. ಆನ್‌ಲೈನ್ ಗೇಮಿಂಗ್ ಸೇರಿದಂತೆ ಇತರ ಆನ್‌ಲೈನ್ ಆ್ಯಪ್ ಮೂಲಕ ಮತಾಂತರಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ. ಕಳೆದ ಕೆಲ ದಿನಗಳಲ್ಲಿ ಹಲವು ಘಟನೆಗಳು ವರದಿಯಾಗಿದೆ. ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದೆ.
ಚಿತ್ರದುರ್ಗದಲ್ಲಿ 1 ಬಿರಿಯಾನಿ ಕೊಟ್ಟು ಮತಾಂತರ, ಶಾಂಕಿಂಗ್ ಹೇಳಿಕೆ ನೀಡಿದ ಕೇಂದ್ರ ಸಚಿವ
ಇತ್ತೀಚೆಗೆ ಬಲವಂತದ ಮತಾಂತರಕ್ಕೆ ಒತ್ತಡಕ್ಕೆ ತುತ್ತಾಗಿ ಗರ್ಭಿಣಿಯೊಬ್ಬಳು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಶಹಜಾನ್‌ಪುರದಲ್ಲಿ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ಪ್ರಿಯಕರ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಸೀಮಾ ಗೌತಮ್ (24) ತನ್ನ ಪ್ರಿಯಕರ ನವೀದ್‌ನ ಜೊತೆ ಲಿವ್‌ಇನ್ ಸಂಬಂಧದಲ್ಲಿದ್ದು ಲಖೀಂಪುರ ಖೇರಿಯಲ್ಲಿ ವಾಸಿಸುತ್ತಿದ್ದರು. ಕಳೆದ ಕೆಲವು ದಿನಗಳಿಂದ ಈಕೆಯನ್ನು ಇಸ್ಲಾಂಗೆ ಮತಾಂತರವಾಗುವಂತೆ ನವೀದ್ ಬಲವಂತ ಪಡಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅನಾರೋಗ್ಯಕ್ಕೆ ತುತ್ತಾಗಿದ್ದಾಳೆ ಎಂಬ ಕಾರಣ ನೀಡಿ ಸೀಮಾಳನ್ನು ಶನಿವಾರ ಮಧ್ಯರಾತ್ರಿ ನವೀದ್ ಹಾಗೂ ಫರ್ಹಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆ ವೇಳೆಗಾಗಲೇ ಸೀಮಾ ಮೃತಪಟ್ಟಿದ್ದಳು. ಸೀಮಾಳಿಗೆ ವಿಷ ಉಣಿಸಿರಬಹುದು ಎಂದು ಆಕೆಯ ಸೋದರ ಆರೋಪಿಸಿದ್ದರು, ನವೀದ್ ಹಾಗೂ ಫರ್ಹಾನ್‌ನನ್ನು ಪೊಲೀಸರು ಬಂಧಿಸಿದ್ದಾರೆ.