Asianet Suvarna News Asianet Suvarna News

ಧ್ವಂಸಗೊಂಡ, ದಿಕ್ಕಿಲ್ಲದ ಟೈಟಾನಿಕ್‌ ಮುಳುಗಲಾರಂಭಿಸಿದೆ: ಕೈಗೆ ಬಿಜೆಪಿ ನಾಯಕನ ಪೆಟ್ಟು!

* ಉತ್ತರ ಪ್ರದೇಶ ಚುನಾವಣಾ ಹೊಸ್ತಿಲಲ್ಲಿ ಜಿತಿನ್ ಪ್ರಸಾದ್ ಬಿಜೆಪಿಗೆ

* ಬಿಜೆಪಿ ಸೇರಿದ ಜಿತಿನ್‌ಗೆ ವಿಭಿನ್ನವಾಗಿ ಸ್ವಾಗತ ಕೋರಿದ ಅಸ್ಸಾಂ ಸಿಎಂ

* ಧ್ವಂಸಗೊಂಡ, ದಿಕ್ಕಿಲ್ಲದ ಟೈಟಾನಿಕ್‌ ಮುಳುಗಲಾರಂಭಿಸಿದೆ: ಕೈಗೆ ಬಿಜೆಪಿ ನಾಯಕನ ಪೆಟ್ಟು

 

Assam CM Himanta Biswa Sarma Welcomes Jitin Prasada To BJP pod
Author
Bangalore, First Published Jun 9, 2021, 4:05 PM IST

ನವದೆಹಲಿ(ಜೂ.09): ಬಿಜೆಪಿಯು ದೇಶದ ಅತ್ಯಂತ ಹಳೇ ರಾಜಕೀಯ ಪಕ್ಷ ಕಾಂಗ್ರೆಸ್‌ಗೆ ಬಹುದೊಡ್ಡ ಏಟು ಕೊಟ್ಟಿದೆ. ಜ್ಯೋತಿರಾದಿತ್ಯ ಸಿಂಧಿಯಾ ಬಳಿಕ ಕಾಂಗ್ರೆಸ್‌ ನಾಯಕ ಜಿತಿನ್ ಪ್ರಸಾದ್ ಇಂದು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರಿಗೆ ಪಕ್ಷದ ಸದಸ್ಯತ್ವ ನೀಡಿದ್ದಾರೆ. ಇದಕ್ಕೂ ಮುನ್ನ ಜಿತಿನ್ ಪ್ರಸಾದ್ ಗೃಹ ಸಚಿವ ಅಮಿತ್ ಶಾ ನಿವಾಸಕ್ಕೆ ತೆರಳಿ ಅವರನ್ನು ಭೇಟಿಯಾಗಿದ್ದರು. 

ಬಿಜೆಪಿ ಹೊಗಳಿದ ಜಿತಿನ್

ಬಿಜೆಪಿಗೆ ಸೇರ್ಪಡೆಗೊಂಡ ಬಳಿಕ ಮಾತನಾಡಿದ ಜಿತಿನ್ ಪ್ರಸಾದ್, ಪ್ರಧಾನ ಮಂತ್ರಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ, ಗೃಹ ಸಚಿವ ಅಮಿತ್ ಶಾಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ದೇಶದ ಹಿತದೃಷ್ಟಿ ಕಾಪಾಡುವ ಪಕ್ಷವಿದೆ ಎಂದರೆ ಅದು ಬಿಜೆಪಿ ಮಾತ್ರ. ಈ ಪಕ್ಷ ವಿಚಾರಧಾರೆಯಿಂದ ಮುಂದುವರೆದರೆ, ಉಳಿದ ಪಕ್ಷಗಳು ವ್ಯಕ್ತಿ ಹಾಗೂ ಕುಟುಂಬ ರಾಜಕಾರಣ ನಡೆಸುತ್ತವೆ ಎಂದಿದ್ದಾರೆ.

ಕಾಂಗ್ರೆಸ್‌ಗೆ ಬಿಗ್ ಶಾಕ್: ರಾಹುಲ್ ಗಾಂಧಿ ಆಪ್ತ ಜಿತಿನ್ ಪ್ರಸಾದ್ ಬಿಜೆಪಿಗೆ!

ಕಾಂಗ್ರೆಸ್‌ಗೆ ಮಾತಿನೇಟು ಕೊಟ್ಟ ಅಸ್ಸಾಂ ಸಿಎಂ

ಜಿತಿನ್ ಪ್ರಸಾದ್ ಬಿಜೆಪಿಗೆ ಸೇರ್ಪಡೆಗೊಂಡ ಬೆನ್ನಲ್ಲೇ ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ ಟ್ವೀಟ್ ಒಂದನ್ನು ಮಾಡಿ ಕಾಂಗ್ರೆಸ್‌ಗೆ ಮಾತಿನೇಟು ಕೊಟ್ಟಿದ್ದಾರೆ. 'ಧ್ವಂಸಗೊಂಡ, ದಿಕ್ಕಿಲ್ಲದ ಟೈಟಾನಿಕ್‌ ಮುಳುಗುವುದರಲ್ಲಿ ಅನುಮಾನವಿಲ್ಲ. ಜಿತಿನ್ ಬಿಜೆಪಿ ಕುಟುಂಬಕ್ಕೆ ನಿಮಗೆ ಸ್ವಾಗತ' ಎಂದಿದ್ದಾರೆ.

ಬಿಜೆಪಿ ತಪ್ಪಿಲ್ಲ ಎಂದ ಸಂಜಯ್ ಝಾ

ಮಾಜಿ ಕಾಂಗ್ರೆಸ್‌ ನಾಯಕ ಸಂಜಯ್ ಝಾ ಕೂಡಾ ಈ ವಿಚಾರವಾಗಿ ಕಾಂಗ್ರೆಸ್‌ ವಿರುದ್ಧವಾಗಿ ಕಿಡಿ ಕಾರಿದ್ದಾರೆ. ಜಿತಿನ್ ಪ್ರಸಾದ್ ಬಿಜೆಪಿಗೆ ಲಾಭ ಹಾಗೂ ಕಾಂಗ್ರೆಸ್‌ಗೆ ಸಿಕ್ಕ ನಷ್ಟವಾಗಿದೆ. ನಾನು ಇತ್ತೀಚೆಗಷ್ಟೇ ಅವರೊಂದಿಗೆ ಮಾತನಾಡಿದ್ದೆ. ಜಿತಿನ್ ಓರ್ವ ಸಜ್ಜನ, ಸ್ನೇಹಮಯ ಹಾಗೂ ಉದಾರ ಮನಸ್ಸಿನ ವ್ಯಕ್ತಿ. ನೀವು ಕಾಂಗ್ರೆಸ್‌ನಿಂದ ಅಸಮಾಧಾನಗೊಂಡ ನಾಯಕರನ್ನು ಆಯ್ಕೆ ಮಾಡಿರುವುದಕ್ಕೆ ಬಿಜೆಪಿಯನ್ನು ದೂಷಿಸಬೇಕಿಲ್ಲ. ನಾಣು ಅಮಿತ್ ಶಾ ಆಗಿದ್ದರೆ, ನಾನೂ ಹೀಗೇ ಮಾಡುತ್ತಿದ್ದೆ. ಇದೇ ರಾಜಕೀಯ ಎಂದು ಬರೆದಿದ್ದಾರೆ.

ಯಾರು ಜಿತಿನ್ ಪ್ರಸಾದ್?

ಇನ್ನು ಜಿತಿನ್ ಪ್ರಸಾದ್ ಭಾರತದ ಮಾಜಿ ಪ್ರಧಾನ ಮಂತ್ರಿಗಳಾಗಿದ್ದ ರಾಜೀವ್ ಗಾಂಧಿ ಹಾಗೂ ಪಿ. ವಿ. ನರಸಿಂಹರಾವ್‌ರವರ ರಾಜಕೀಯ ಸಲಹೆಗಾರ, ಕಾಂಗ್ರೆಸ್‌ ನಾಯಕ ಜಿತೇಂದ್ರ ಪ್ರಸಾದ್‌ರವರ ಪುತ್ರ ಎಂಬುವುದು ಉಲ್ಲೇಖನೀಯ. ಇನ್ನು ಜಿತಿನ್ ಪ್ರಸಾದ್ ಮಾಜಿ ಸಚಿವರಾಗಿ ಸೇವೆ ಸಲ್ಲಿಸಿದ್ದು, ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ.

ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಜಿತಿನ್ ಪ್ರಸಾದ್ ಬಿಜೆಪಿಗೆ ಸೇರ್ಪಗೊಂಡಿರುವುದು ಕಾಂಗ್ರೆಸ್‌ ಪಕ್ಷಕ್ಕೆ ಬಹುದೊಡ್ಡ ಹೊಡೆತ ನೀಡಲಿದೆ. ಜಿತಿನ್ ಪ್ರಸಾದ್ ಉತ್ತರ ಪ್ರದೇಶದ ಬ್ರಾಹ್ಮಣ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಉತ್ತರ ಪ್ರದೇಶ ಚುನಾವಣೆ ಹೊಸ್ತಿಲಲ್ಲಿ ಜಿತಿನ್ ಪ್ರಸಾದ್ ಬಿಜೆಪಿಗೆ ಸೇರ್ಪಡೆಗೊಂಡಿರುವುದು ಕಮಲ ಪಾಳಯಕ್ಕೆ ಲಾಭ ತಂದು ಕೊಡಲಿದೆ.

ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಿದ್ದರು

ಕಳೆದ ವರ್ಷ ಕಾಂಗ್ರೆಸ್‌ನ 23 ನಾಯಕರು ಸೋನಿಯಾ ಗಾಂಧಿಗೆ ಪತ್ರ ಬರೆದು ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯಾಗಬೇಕೆಂದು ಒತ್ತಾಯಿಸಿದ್ದರು. ಈ ನಾಯಕರಲ್ಲಿ ಗುಲಾಂ ನಬಿ ಆಜಾದ್, ಕಪಿಲ್ ಸಿಬ್ಬಲ್, ಮನೀಷ್ ತಿವಾರಿ, ಜಿತಿನ್ ಪ್ರಸಾದ್‌ರಂತಹ ನಾಯಕರೂ ಇದ್ದರು.

Follow Us:
Download App:
  • android
  • ios