ಕಾಶ್ಮೀರದ ಪಹಲ್ಗಾಮ್‌ನಲ್ಲಿ ಇಸ್ಲಾಮಿಕ್ ಉಗ್ರರು ಧರ್ಮ ಕೇಳಿಯೇ ಹಿಂದೂಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಮುಸ್ಲಿಮರಲ್ಲದವರನ್ನು ಗುರಿಯಾಗಿಸಿ, ಕೆಲವರನ್ನು ಕಲ್ಮಾ ಹೇಳಲು ಒತ್ತಾಯಿಸಿ ಹತ್ಯೆ ಮಾಡಿದ್ದಾರೆ. ಈ ಘಟನೆಯ ಹೊರತಾಗಿಯೂ, ಕೆಲವರು 'ಭಯೋತ್ಪಾದನೆಗೆ ಧರ್ಮವಿಲ್ಲ' ಎಂಬ ವಾದ ಮಂಡಿಸುತ್ತಿದ್ದಾರೆ. ಇದು ಕಟ್ಟರ್ ಇಸ್ಲಾಮಿಕ್ ಸಿದ್ಧಾಂತವಾದ ಘಜ್ವಾ-ಎ-ಹಿಂದ್‌ನ ಭಾಗವಾಗಿದ್ದು, ದ್ವಂದ್ವನೀತಿಯಾಗಿದೆ.

ದೇಶದಲ್ಲಿ ಎಲ್ಲೇ ಉಗ್ರರ ದಾಳಿಗಳಾದಾಗ ಭಯೋತ್ಪಾದನೆಗೆ ಧರ್ಮ ಇಲ್ಲ ಅನ್ನೋ ಮಾತು ಬಂದುಬಿಡುತ್ತೆ. ಇಸ್ಲಾಂಗೂ ಭಯೋತ್ಪಾದನೆಗೂ ಸಂಬಂಧ ಇಲ್ಲ, ಉಗ್ರರೆಂದರೆ ಬರೀ ಮುಸ್ಲಿಮರಲ್ಲ, ಮುಸ್ಲಿಮರೆಂದರೆ ಉಗ್ರರಲ್ಲ ಅನ್ನುವ ವಾದಗಳು ಶುರುವಾಗಿಬಿಡುತ್ತವೆ. ಮಂಗಳವಾರ (ಏಪ್ರಿಲ್ 22) ಕಾಶ್ಮೀರದ ಪಹಲ್ಗಾಮ್​ ನಲ್ಲಿ ಧರ್ಮ ಕೇಳಿಯೇ ಇಸ್ಲಾಮಿಕ್ ಉಗ್ರರು ಗುಂಡು ಹೊಡೆದಿದ್ದು. ಅಲ್ಲಿದ್ದ ಪ್ರವಾಸಿಗರನ್ನ ನಿಮ್ಮ ಧರ್ಮ ಯಾವುದು ಅಂತ ಕೇಳಿ ಖಚಿತಪಡಿಸಿಕೊಳ್ಳಲಾಗಿತ್ತು. ಅನುಮಾನ ಬಂದವರ ಬಟ್ಟೆ ಬಿಚ್ಚಿಸಿ ಮುಸ್ಲಿಮರಲ್ಲ ಅಂತ ಖಚಿತಪಡಿಸಿಕೊಂಡ ನಂತರ ಗುಂಡೇಟು ಬಿದ್ದಿತ್ತು. ಗಂಡಸರ ಜತೆಗಿದ್ದ ಹಣೆಯಲ್ಲಿನ ಬೊಟ್ಟು ನೋಡಿ ಗಂಡನ ಹಣೆಗೆ ಗುಂಡಿಕ್ಕಿದ್ದರು. 

ಬಂದೂಕು ಹಿಡಿದ ಉಗ್ರರು ಯಾರೊಬ್ಬರನ್ನೂ ಜಾತಿ ಯಾವುದು ಅಂತ ಕೇಳಲಿಲ್ಲ. ನೀನು ಮೇಲ್ಜಾತಿಯವನಾ? ಕೆಳ ಜಾತಿಯವನಾ? ನೀನು ಒಬಿಸಿನಾ ಅಂತ ಕೇಳಲಿಲ್ಲ. ಉತ್ತರ ಭಾರತೀಯನಾ? ದಕ್ಷಿಣ ಭಾರತೀಯನಾ ಅಂತಲೂ ಉಗ್ರರು ಕೇಳಲಿಲ್ಲ? ಕೇವಲ ಧರ್ಮ ಕೇಳಿ, ಹಿಂದೂಗಳು ಅಂತ ಖಚಿತಪಡಿಸಿಕೊಂಡು ದಾಳಿ ಮಾಡಿದ್ದರು. ಅನುಮಾನ ಬಂದವರಿಗೆ ಇಸ್ಲಾಮಿಕ್ ಕಲ್ಮಾ ಹೇಳುವಂತೆ ಒತ್ತಾಯ ಮಾಡಿದ್ರು. ಕಲ್ಮಾ ಹೇಳದ ವ್ಯಕ್ತಿಗಳನ್ನ ಮುಲಾಜಿಲ್ಲದೇ ಮುಗಿಸಿಬಿಟ್ಟರ ಉಗ್ರರು. 

ಪ್ಯಾಲಿಸ್ತೇನ್​ನಲ್ಲಿ ಹಮಾಸ್ ಉಗ್ರರ ಮೇಲೆ ಇಸ್ರೇಲ್ ದಾಳಿ ಮಾಡಿದಾಗ ಆಲ್ ಐಸ್ ಆನ್ ರಫಾ, ಆಲ್ ಐಸ್ ಆನ್ ಗಾಜಾ ಅಂತೆಲ್ಲಾ ಭಾರತದಲ್ಲಿ ಟ್ರೆಂಡಿಗ್ ಮಾಡಿದರು. ಮುಸ್ಲಿಮರ ಮೇಲೆ ಯಹೂದಿಗಳ ದಬ್ಬಾಳಿಕೆ ಅಂತ ಗೋಳಾಡಿದ್ರು. ಭಾರತಕ್ಕೂ ಮಧ್ಯಪ್ರಾಚ್ಯದ ಮುಸ್ಲಿಮರಿಗೆ ಏನೇನೂ ಸಂಬಂಧ ಇಲ್ಲದಿದ್ದರೂ ಮಾನವ ಹಕ್ಕುಗಳ ಹೆಸರಲ್ಲಿ ಉಯಿಲೆಬ್ಬಿಸಿದರು. 

ಇದನ್ನೂ ಓದಿ: ನೀನು ಮುಸ್ಲಿಮಾ ಅಂತ ಕೇಳಿದರು, ಇಲ್ಲ ಎನ್ನುತ್ತಿದ್ದಂತೆ ಗುಂಡಿಕ್ಕಿದರು: ಬೆಂಗಳೂರಿನ ಭರತ್‌ ಅತ್ತೆ ಕಣ್ಣೀರು

ಈಗ ಹಿಂದೂಗಳನ್ನ ಟಾರ್ಗೆಟ್ ಮಾಡಿ ಇಸ್ಲಾಮಿಕ್ ಉಗ್ರರು ದಾಳಿ ಮಾಡಿದ್ರೆ ಭಯೋತ್ಪಾದನೆಗೆ ಯಾವುದೇ ಧರ್ಮ ಇಲ್ಲ ಅಂತ ತಿಪ್ಪೇ ಸಾರಿಸ್ತಿದಾರೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದಾಳಿಯಾದಾಗ, ಪಶ್ಚಿಮ ಬಂಗಾಳದಲ್ಲಿ ಹಿಂದೂಗಳನ್ನ ಬಡಿದು ಕೊಂದಾಗಲೂ ಇದೇ ಮಾತು. ಹೀಗೆ ತಿಪ್ಪೇ ಸಾರಿಸುತ್ತಿರುವವರು ಯಾರು? ಸೋ ಕಾಲಡ್ ಜಾತ್ಯಾತೀತರು, ಯೂನಿವರ್ಸಿಟಿಗಳಲ್ಲಿ ಬುದ್ಧಜೀವಿಗಳು ಅನ್ನಿಸಿಕೊಂಡವರು. ಇಸ್ಲಾಮಿಕ್ ಉಗ್ರರು ಮಾಡಿದ ದಾಳಿಯನ್ನ ಡೌನ್ ಪ್ಲೇ ಮಾಡುವುದಕ್ಕೆ ಭಯೋತ್ಪಾದನೆಗೆ ಯಾವುದೇ ಧರ್ಮ ಇಲ್ಲ ಅನ್ನುವ ವಾದ ಬಂದು ಬಿಡುತ್ತದೆ.

ಕಾಶ್ಮೀರದಲ್ಲಿ ದಾಳಿಯಾಗಿದ್ದೇಕೆ? 
ದಾಳಿಗೆ ಕಾರಣ ಕಟ್ಟರ್ ಇಸ್ಲಾಮಿಕ್ ಸಿದ್ಧಾಂತ. ದಾರೂಲ್ ಇಸ್ಲಾಂ ಅನ್ನುವ ಕಟ್ಟರ್ ಸಿದ್ಧಾಂತವನ್ನ ಕಾಶ್ಮೀರದ ಮೇಲೆ ಹೇರುವ ಪ್ರಯತ್ನ ಇದು. ಘಜ್ವಾ-ಎ-ಹಿಂದ್ ಎನ್ನುವ ಭಾರತದ ಮೇಲೆ ಇಸ್ಲಾಮಿಕ್ ಧ್ವಜ ಹಾರಿಸುವ ಸಿದ್ಧಾಂತ ಇದು. ಇಷ್ಟೆಲ್ಲ ಗೊತ್ತಿದ್ದೂ, ಇಸ್ಲಾಮಿಕ್ ಮೂಲಭೂತವಾದದ ಆಳ ಅಗಲ ಗೊತ್ತಿದ್ದೂ ಭಯೋತ್ಪಾದನೆಗೆ ಯಾವುದೇ ಧರ್ಮ ಇಲ್ಲ ಅಂದ್ರೆ ಅದು ಬೂಟಾಟಿಕೆಯಷ್ಟೇ. ಡಬಲ್ ಸ್ಟಾಂಡರ್ಡ್ ಅಷ್ಟೇ.

ಇದನ್ನೂ ಓದಿ: