ಏಷ್ಯಾನೆಟ್ ಮಾದಕ ದ್ರವ್ಯ ವಿರೋಧಿ ಅಭಿಯಾನ, ಜೊತೆಯಾಗಿ ನಿಲ್ಲೋಣ ನಾವು ಹಾಡಿನ ಮೂಲಕ ಆಂದೋಲನ!

ಒಟ್ಟಿಗೆ ನಾವು ಎತ್ತರವಾಗಿ ನಿಲ್ಲುತ್ತೇವೆ, ನಾವು ಬೀಳುವುದಿಲ್ಲ, ಜೀವಗಳನ್ನು ಉಳಿಸೋಣ, ಬಾನೆತ್ತರಕ್ಕೆ ಬೆಳೆಯೋಣ ಅನ್ನೋ ಹೊಸ ಗೀತೆಯೊಂದಿಗೆ ಏಷ್ಯಾನೆಟ್ ನ್ಯೂಸ್ ಮಾದಕ ದ್ರವ್ಯ ವಿರೋಧಿ ಅಭಿಯಾನದ ವೇಗ ಹೆಚ್ಚಿಸಿದೆ. ಈ ಅಭಿಯಾನದಲ್ಲಿ 14,000 ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ. ಏಷ್ಯಾನೆಟ್ ನ್ಯೂಸ್ ಅತೀದೊಡ್ಡ ಅಭಿಯಾನದ ಸಂಪೂರ್ಣ ಮಾಹಿತಿ ಇಲ್ಲಿದೆ.

Asianet News joins hands with Kerala anti drugs campaign launched Together we stand tall We wont fall songs ckm

ಕೇರಳ(ನ.14) ಶಾಲಾ ಕಾಲೇಜುಗಳಲ್ಲಿ ಮಾದಕ ದ್ರವ್ಯಗಳ ಬಳಕೆ, ಸರಬರಾಜು ಕುರಿತ ಹಲವು ಆತಂಕ ವರದಿಗಳನ್ನು ಗಮನಿಸಿದ್ದೇವೆ. ವಿದ್ಯಾರ್ಥಿಗಳು ವ್ಯಸನಿಗಳಾಗುತ್ತಿರುವ ಆತಂಕ ಪರಿಸ್ಥಿತಿ ಹಲವು ರಾಜ್ಯಗಳಲ್ಲಿದೆ. ಇದರ ವಿರುದ್ಧ ಕೇರಳ ಸರ್ಕಾರದ ಅತೀ ದೊಡ್ಡ ಅಭಿಯಾನದಲ್ಲಿ ಏಷ್ಯಾನೆಟ್ ನ್ಯೂಸ್ ಕೈಜೋಡಿಸಿದೆ. ಮಾದಕ ದ್ರವ್ಯ ವಿರೋಧಿ ಅಭಿಯಾನದಲ್ಲಿ 14,000 ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ. ವಿಶೇಷ ಹಾಡಿನ ಮೂಲಕ ಏಷ್ಯಾನೆಟ್ ನ್ಯೂಸ್ ಈ ಅಭಿಯಾನ ಆರಂಭಿಸಿದೆ. ಒಟ್ಟಾಗಿ ನಾವು ಎತ್ತರವಾಗಿ ನಿಲ್ಲುತ್ತೇವೆ, ನಾವು ಬೀಳುವುದಿಲ್ಲ ಅನ್ನೋ ಹಾಡನ್ನು ಹಾಡುವ ಮೂಲಕ ಹೊಸ ಸಂಚಲನ ಸೃಷ್ಟಿಸಿದೆ. ಅಭಿಯಾನದ ಮೊದಲ ಹಂತವಾಗಿ ಏಷ್ಯಾನೆಟ್ ಕೇರಳದ 14 ಜಿಲ್ಲೆಗಳ 14,000 ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ ಮಾಡುವಲ್ಲಿ ಯಶಸ್ವಿಯಾಗಿದೆ. ಏಷ್ಯಾನೆಟ್ ನ್ಯೂಸ್ ರಚಿಸಿ ಅಭಿಯಾನದ ಹಾಡಿನ ಭಾಗ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. 

ಇತ್ತೀಚೆಗೆ ಹೆಚ್ಚಿನ ಯುವ ಸಮೂಹ ಮಾದಕ ದ್ರವ್ಯ ಆಮಿಷಕ್ಕೆ ಒಳಗಾಗುತ್ತಿದ್ದಾರೆ. ಈ ಸಂಕಷ್ಟದಿಂದ ಯುವ ಸಮೂಹವನ್ನು ಹೊರತರಲು ಏಷ್ಯಾನೆಟ್ ನ್ಯೂಸ್ ವಿಶೇಷ ಪ್ರಯತ್ನ ಮಾಡಿದೆ. ಇದಕ್ಕೆ ಪೂರಕವಾಗಿ ಏಷ್ಯಾನೆಟ್ ನ್ಯೂಸ್ ಅತೀ ದೊಡ್ಡ ಅಭಿಯಾನದಲ್ಲಿ ಮಹತ್ವದ ಹೆಜ್ಜೆಗುರುತು ಇಟ್ಟಿದೆ. ಮಾದಕ ದ್ರವ್ಯ ವಿರೋಧಿ ಅಭಿಯಾನ ಇದೀಗ ಭಾರಿ ಯಶಸ್ಸು ಪಡೆಯುತ್ತಿದೆ. 14 ಜಿಲ್ಲೆಗಳ ಇದೀಗ ಅಭಿಯಾನದಲ್ಲಿ ಪಾಲ್ಗೊಂಡಿದೆ. ಈ ಅಭಿಯಾನ ಇದೀಗ ಸಂಪೂರ್ಣ ಕೇರಳ ರಾಜ್ಯಕ್ಕೆ ವಿಸ್ತರಣೆಗೊಳ್ಳಲಿದೆ. 

ಕೇರಳ ಸರ್ಕಾರ ಆರಂಭಿಸಿರುವ ಡ್ರಗ್ಸ್ ವಿರೋಧಿ ಅಭಿಯಾನ ಎರಡನೇ ಹಂತಕ್ಕೆ ಕಾಲಿಟ್ಟಿದೆ. ಮಾದಕ ದ್ರವ್ಯ ಹಾಗೂ ಮರಾಣಾಂತಿಕ ವಿರುದ್ಧ ಹೋರಾಡುವ ಅಭಿಯಾನದಲ್ಲಿ ಕೈಜೋಡಿಸಿ ಎಂಬ ಘೋಷಣಾ ವಾಕ್ಯದೊಂದಿಗೆ ಕೇರಳ ಸರ್ಕಾರ ಅಭಿಯಾನ ಆರಂಭಿಸಿದೆ. ನವೆಂಬರ್ 14ರ ಮಕ್ಕಳ ದಿನಾಚರಣೆಯಂದು ಕೇರಳ ಮುಖ್ಯಮಂತ್ರಿಪಿಣರಾಯಿ ವಿಜಯನ್ ಅಭಿಯಾನದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳನ್ನುದ್ದೇಶಿ ಮಾತನಾಡಿದರು. 

 

90ರ ದಶಕದಲ್ಲಿ ಡ್ರಗ್ಸ್ ವಿರುದ್ಧ ಬಾಲಿವುಡ್ ಫೈಟ್, ಫೋಟೋ ಶೇರ್ ಮಾಡಿದ ನಟ

ಇದೇ ವೇಳೆ ಪಿಣರಾಯಿ ವಿಜಯನ್ ತೆಳಿವನಂ ವರಯಕ್ಕುನ್ನವರ್(ಸ್ವಚ್ಛ ಆಕಾಶವನ್ನು ಸೆಳೆಯುವವರು) ಎಂಬು ಕಿರು ಪುಸ್ತಕವನ್ನು ಬಿಡುಗಡೆ ಮಾಡಿದರು. ಅಬಕಾರಿ ಇಲಾಖೆ, ವಿಮುಕ್ತಿ ಮಿಷನ್ ಮತ್ತು ಶಿಕ್ಷಣ ಇಲಾಖೆ ಜಂಟಿಯಾಗಿ 5-12 ನೇ ತರಗತಿಯ ವಿದ್ಯಾರ್ಥಿಗಳಲ್ಲಿ ಮಾದಕ ವಸ್ತುಗಳ ಬಗ್ಗೆ ಅರಿವು ಮೂಡಿಸಲು ಈ ಪುಸ್ಕತ ರಚಿಸಿದೆ. ಮಾದಕ ದವ್ಯ ಸೇವನೆಯಿಂದ ಬದುಕು ಹೇಗೆ ನಾಶವಾಗುತ್ತದೆ ಹಾಗೂ ಕುಟುಂಬಗಳು ಸರ್ವನಾಶವಾಗುತ್ತದೆ ಅನ್ನೋದನ್ನು ಈ ಕಿರು ಪುಸ್ತಕದಲ್ಲಿ ತಿಳಿ ಹೇಳಲಾಗಿದೆ. ಕೇರಳದ ಎಲ್ಲಾ ಶಾಲೆಗಳಲ್ಲಿ ಡ್ರಗ್ಸ್ ವಿರೋಧಿ ಅಭಿಯಾನದ ವೇಗ ಹೆಚ್ಚಿನಸಲು ಇದಕ್ಕಾಗಿ ಸಮಯ ಮೀಸಲಿಡಲಾಗಿದೆ. ಈ ಮೂಲಕ ಮಕ್ಕಳಿಗೆ ತಿಳಿ ಹೇಳುವ ಕಾರ್ಯಗಳು ನಡೆಯುತ್ತಿದೆ. ನವೆಂಬರ್ 1ರ ಕೇರಳ ಸಂಸ್ಥಾಪನಾ ದಿನದಂದು ಶಾಲೆಗಳಲ್ಲಿ ವಿದ್ಯಾರ್ಥಿಗಳ ಮಾನವ ಸರಪಳಿ ನಿರ್ಮಿಸಿ ಸಾಂಕೇತಿಕವಾಗಿ ಮಾದಕ ದ್ರವ್ಯ ಪದಾರ್ಥಗಳನ್ನು ಸುಡಲಾಯಿತು.

ಮಕ್ಕಳದ ದಿನಾಚರಣೆಯಂದು ಏಷ್ಯಾನೆಟ್ ನ್ಯೂಸ್ ರಚಿಸಿ, ನಿರ್ದೇಶಿಸಿದ ಮಾದಕ ದವ್ಯ ವಿರೋಧಿ ಹಾಡನ್ನು ಬಿಡುಗಡೆ ಮಾಡಿತು. ಈ ಹಾಡಿನಲ್ಲಿ 14,000 ವಿದ್ಯಾರ್ಥಿಗಳ ಪಾಲ್ಗೊಂಡಿದ್ದಾರೆ. ಕೇರಳ ಸರ್ಕಾರ ಜನನವರಿ 26 ರಿಂದ ಮಾದಕ ದ್ರವ್ಯ ವಿರೋಧಿ ಕಾರ್ಯಕ್ರಮ ಆರಂಭಿಸಿದೆ. 2023ರ ವರೆಗೆ ಈ ಕಾರ್ಯಕ್ರಮಗಳು ನಡೆಯಲಿದೆ. ಇದೀಗ ಏಷ್ಯಾನೆಟ್ ನ್ಯೂಸ್ ಈ ಅಭಿಯಾನದಲ್ಲಿ ಕೈಜೋಡಿಸುವ ಮೂಲಕ ಅಭಿಯಾನದ ವೇಗ ಮತ್ತಷ್ಟು ಹೆಚ್ಚಾಗಿದೆ.  

ಏಷ್ಯಾನೆಟ್ ನ್ಯೂಸ್ ಕಾರ್ಯನಿರ್ವಾಹಕ ಸಂಪಾದಕ ಪಿಜಿ ಸುರೇಶ್ ಸಾಹಿತ್ಯಕ್ಕೆ ಕೇರಳದ ಮ್ಯೂಸಿಕ್ ಬ್ಯಾಂಜ್ ಊರಲಿ ಸಂಗೀತ ಸಂಯೋಜನೆ ಮಾಡಿದೆ. ಸಂಕಷ್ಟದಿಂದ ವಿದ್ಯಾರ್ಥಿಗಳನ್ನು ಮುಕ್ತಗೊಳಿಸುವ, ಯುವ ಸಮೂಹದಲ್ಲಿ ಹೊಸ ಚೈತನ್ಯ ತುಂಬುವ ಈ ಹಾಡಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.  

Latest Videos
Follow Us:
Download App:
  • android
  • ios