90ರ ದಶಕದಲ್ಲಿ ಡ್ರಗ್ಸ್ ವಿರುದ್ಧ ಬಾಲಿವುಡ್ ಫೈಟ್, ಫೋಟೋ ಶೇರ್ ಮಾಡಿದ ನಟ
- 90ರ ದಶಕದಲ್ಲಿ ಡ್ರಗ್ಸ್ ವಿರುದ್ಧ ಹೋರಾಡಿದ್ದ ಬಾಲಿವುಡ್
- ನಮ್ಮ ಮಕ್ಕಳನ್ನು ದೇವರು ಕಾಪಾಡಲಿ ಎಂದ ನಟ
ಬಾಲಿವುಡ್‌ನಲ್ಲಿ ಸದ್ಯ ಡ್ರಗ್ಸ್ ಕೇಸ್ ಸಿಕ್ಕಾಪಟ್ಟೆ ಸುದ್ದಿಯಾಗಿದೆ. ಸುಶಾಂತ್ ಸಿಂಗ್ ಸಾವಿನ ನಂತರ ಆರಂಭಗೊಂಡ ಡ್ರಗ್ಸ್ ಪ್ರಕರಣಗಳ ತನಿಖೆಯಲ್ಲಿ ಎನ್‌ಸಿಬಿ ಬೆಚ್ಚಿಬೀಳಿಸೋ ಸತ್ಯ ಹೊರಗೆ ತರುತ್ತಲೇ ಇದೆ.
ಮುಂಬೈ ಕರಾವಳಿಯಲ್ಲಿ ಐಷರಾಮಿ ಹಡಗಿನಲ್ಲಿ ನಡೆದ ಎನ್‌ಸಿಬಿ ರೈಡ್ ಲೇಟೆಸ್ಟ್ ಪ್ರಕರಣ. ಇಷ್ಟೆಲ್ಲ ನಡೆದು ಬಾಲಿವುಡ್ ಮತ್ತು ಡ್ರಗ್ಸ್ ವಿಚಾರ ಚರ್ಚೆ ಜೋರಾಗಿದೆ. ನಿಮಗೆ ಗೊತ್ತೇ ? 1990ರಲ್ಲಿ ಇದೇ ಬಾಲಿವುಡ್ ಗಣ್ಯರು ಡ್ರಗ್ಸ್ ವಿರುದ್ಧ ಒಗ್ಗಟ್ಟಾಗಿ(anti drugs campaign) ಪ್ರತಿಭಟಿಸಿದ್ದರು.
ಸಿನಿಮಾ ನಿರ್ದೇಶಕ ಸುಭಾಶ್ ಘಾಯ್ ಅವರು ಹಳೆಯ ಫೋಟೋ ಒಂದನ್ನು ಪೋಸ್ಟ್ ಮಾಡಿ ಬಾಲಿವುಡ್ ಸ್ಟಾರ್‌ಗಳ ಅಂದಿನ ಪ್ರತಿಭಟನೆಯ ಫೋಟೋವನ್ನು ಶೇರ್ ಮಾಡಿದ್ದಾರೆ.
ಸೇ ನೋ ಟು ಡ್ರಗ್ಸ್, 1990. ಹಲವಾರು ಚಲನಚಿತ್ರ ತಾರೆಯರು ಒಗ್ಗಟ್ಟಿನಿಂದ ಡ್ರಗ್ಸ್ ವಿರುದ್ಧ ಪ್ರತಿಭಟಿಸುವುದಕ್ಕೆ ನಮ್ಮ ಮಾಧ್ಯಮ ಸಾಕ್ಷಿಯಾಯಿತು. ಗುಲ್ಶನ್ ಜಿತೇಂದರ್, ವಿನೋದ್ ಖನ್ನಾ, ಅಮೀರ್ ಖಾನ್, ಅಮಿತಾಬ್ ಬಚ್ಚನ್, ಮಿಥುನ್ ಡಾ ಜಾಕಿ ಡಿಂಪಲ್ ಶಬನಾ ಟೀನಾ ಖನ್ನಾ ಪದ್ಮಿನಿ ಕೊಲ್ಹಾಪುರಿ ಎನ್ ವಿಐಪಿಗಳೊಂದಿಗೆ ಸುಭಾಷ್ ಘಾಯ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು. ನಾವೆಲ್ಲರೂ ಈಗಲೂ 'ಡ್ರಗ್ಸ್ -ಇವಿಲ್' ವಿರುದ್ಧ ಪ್ರತಿಭಟಿಸುತ್ತೇವೆ. ದೇವರು ನಮ್ಮ ಮಕ್ಕಳನ್ನು ಈ ದುಷ್ಟತನದಿಂದ ರಕ್ಷಿಸಲಿ ಎಂದು ಬರೆದಿದ್ದಾರೆ
ಎನ್‌ಸಿಬಿ ದಾಳಿಯಲ್ಲಿ ಶಾರೂಖ್ ಖಾನ್ ಮಗ ಆರ್ಯನ್ ಖಾನ್(Aryan Khan) ಅರೆಸ್ಟ್ ಆಗಿರುವುದು ಎಲ್ಲರಿಗೂ ಗೊತ್ತು. ಸುಮಾರು 10ಕ್ಕೂ ಹೆಚ್ಚು ಜನರನ್ನು ಎನ್‌ಸಿಬಿ ವಶಕ್ಕೆ ಪಡೆದಿದೆ.
ರೈಡ್ ವೇಳೆ ಬಿಜೆಪಿ ಉಪಾಧ್ಯಕ್ಷರ ಉಪಸ್ಥಿತಿ ಈಗ ಕೇಸ್‌ಗೆ ಹೊಸ ಟ್ವಿಸ್ಟ್ ಕೊಟ್ಟಿದ್ದು ಬೆಂಗಳೂರಿನೊಂದಿಗೂ ಮುಂಬೈ ಡ್ರಗ್ಸ್ ದಾಳಿಗೆ ಲಿಂಕ್ ಇದೆ ಎಂದು ಹೇಳಲಾಗುತ್ತಿದೆ.