Asianet Suvarna News Asianet Suvarna News

ಜಿ20 ಸಮಾವೇಶ, ತಾಜ್‌ಮಹಲ್‌ನಲ್ಲಿ ಮಂಗಗಳನ್ನು ಹಿಡಿಯೋಕೆ ಪುರಾತತ್ವ ಇಲಾಖೆಯಿಂದ ಟೆಂಡರ್‌!

ಜಿ20 ಸಮ್ಮೇಳನಕ್ಕೆ ಬರುವ ನಿಯೋಗದ ಮುಂದೆ ಮಂಗಗಳು ಬಂದಲ್ಲಿ ಮುಜುಗರ ಸೃಷ್ಟಿಯಾಗಬಹುದು ಎನ್ನುವ ನಿಟ್ಟಿನಲ್ಲಿ, ಭಾರತೀಯ ಪುರಾತತ್ವ ಇಲಾಖೆ, ತಾಜ್‌ಮಹಲ್‌ ಸುತ್ತಮುತ್ತ ಇರುವ ಅಂದಾಜು 250 ಮಂಗಗಳು ಹಾಗೂ ನಾಯಿಗಳನ್ನು ಹಿಡಿಯಲು ಟೆಂಡರ್‌ ನೀಡುವ ಸಾಧ್ಯತೆ ಇದೆ.

Asi Order Catch 250 Monkeys in Tajmahal G20 Summit Host India Delegation Visit san
Author
First Published Dec 13, 2022, 7:46 PM IST

ನವದೆಹಲಿ (ಡಿ.13): ಭಾರತ ಇದೇ ಮೊದಲ ಬಾರಿಗೆ ವಿಶ್ವದ ಅತ್ಯಂತ ಬಲಿಷ್ಠ ಶೃಂಗ ಜಿ20 ಸಮೂಹದ ಅಧ್ಯಕ್ಷ ಸ್ಥಾನ ವಹಿಸಿಕೊಂಡಿದೆ. ಮುಂದಿನ ವರ್ಷದ ನವೆಂಬರ್‌ ಅಂತ್ಯದವರೆಗೂ ಭಾರತ ಈ ಪಟ್ಟದಲ್ಲಿ ಇರಲಿದೆ. ಈ ಒಂದು ವರ್ಷದಲ್ಲಿ ಜಿ20 ರಾಷ್ಟ್ರಗಳ ಸಾಕಷ್ಟು ನಿಯೋಗ ಭಾರತಕ್ಕೆ ಭೇಟಿ ನೀಡಿ, ಸಭೆ, ಸಮಾರಂಭಗಳಲ್ಲಿ ಭಾಗಿಯಾಗಲಿದೆ. ನವದೆಹಲಿಯೊಂದಿಗೆ ಕರ್ನಾಟಕ, ಮುಂಬೈ ಸೇರಿದಂತೆ ಹಲವು ಕಡೆಗಳಲ್ಲಿ ಜಿ20ಯ ಕಾರ್ಯಕ್ರಮಗಳು ನಡೆಯಲಿವೆ. ಇದರ ಅಂತಿಮ ಶೃಂಗಸಭೆ ಮುಂದಿನ ವರ್ಷದ ನವೆಂಬರ್‌ನಲ್ಲಿ ನಡೆಯಿತ್ತಿದೆ. ಇಷ್ಟು ದಿನಗಳ ಅವಧಿಯಲ್ಲಿ ವಿದೇಶದ ಸಾಕಷ್ಟು ಅಧಿಕಾರಿಗಳು, ಜನಪ್ರತಿಧಿನಿಗಳು ಭಾರತಕ್ಕೆ ಆಗಮಿಸುತ್ತಿದ್ದಾರೆ. ಭಾರತಕ್ಕೆ ಬಂದಾಗ ತಾಜ್‌ಮಹಲ್‌ ನೋಡಬೇಕು, ಅದರ ಮುಂದೆ ಚಿತ್ರಗಳನ್ನು ತೆಗೆಸಿಕೊಳ್ಳುವುದು ಅವರ ವಾಡಿಕೆ. ಆದರೆ, ತಾಜ್‌ಮಹಲ್‌ ಪ್ರದೇಶದಲ್ಲಿ ವಿಪರೀತ ಮಂಗಗಳ ಕಾಟ. ವಿದೇಶಿ ನಿಯೋಗ ಬಂದಾಗ ಮಂಗಳಿಂದ ಮುಜುಗರ ಉಂಟಾಗುವುದನ್ನು ತಪ್ಪಿಸಿಕೊಳ್ಳಲು ಕೇಂದ್ರ ಸರ್ಕಾರ ಭಾರತೀಯ ಪುರಾತತ್ವ ಇಲಾಖೆಯ ಮೂಲಕ ಟೆಂಡರ್‌ ನೀಡಲು ನಿರ್ಧಾರ ಮಾಡಿದೆ. ತಾಜ್‌ಮಹಲ್‌ ಆಸುಪಾಸಿನಲ್ಲಿ ಇರುವ 250 ಮಂಗಗಳು ಹಾಗೂ ನಾಯಿಗಳನ್ನು ಹಿಡಿಯಲು ಎಎಸ್‌ಐ ಟೆಂಡರ್‌ ಕರೆಯಲು ತೀರ್ಮಾನಿಸಿದೆ.

ಫೆಬ್ರವರಿಯಲ್ಲಿ ನಡೆಯಲಿರುವ ಜಿ20 ಸಮ್ಮೇಳನಕ್ಕೂ ಮುನ್ನ ಈ ಕೆಲಸ ಪೂರ್ಣಗೊಳ್ಳಲಿದೆ. ಮಂಗಗಳನ್ನು ಹಿಡಿಯಲು ವನ್ಯಜೀವಿ ಇಲಾಖೆಯಿಂದಲೂ ಅನುಮತಿ ಪಡೆಯಲಾಗಿದೆ. ಇದಲ್ಲದೆ, ಅಗ್ನಿ ಸುರಕ್ಷತಾ ಮಾನದಂಡಗಳ ಲೆಕ್ಕಪರಿಶೋಧನೆಯೂ ಇರುತ್ತದೆ. ಫೆಬ್ರವರಿ ತಿಂಗಳಲ್ಲಿ ಜಿ20 ಶೃಂಗಸಭೆಯ ಪ್ರತಿನಿಧಿಗಳು ಆಗ್ರಾಕ್ಕೆ ಭೇಟಿ ನೀಡಲಿದ್ದಾರೆ. ದೇಶದ ಸ್ವಚ್ಛ ಚಿತ್ರಣವನ್ನು ಕಾಪಾಡಲು ಜಿಲ್ಲಾಡಳಿತ ಸೇರಿದಂತೆ ಎಲ್ಲಾ ಜವಾಬ್ದಾರಿಯುತ ಇಲಾಖೆಗಳು ತಮ್ಮ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ನಿರತವಾಗಿವೆ.

ತಾಜ್ ಮಹಲ್‌ನ ಸಂಪೂರ್ಣ ಸಂಕೀರ್ಣವನ್ನು ಸಿಸಿಟಿವಿ ಕ್ಯಾಮೆರಾಗಳೊಂದಿಗೆ ಅಳವಡಿಸಲಾಗುವುದು ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ನವನೀತ್ ಚಾಹಲ್ ಹೇಳುತ್ತಾರೆ. ಇದರೊಂದಿಗೆ ಮಹಾನಗರ ಪಾಲಿಕೆ ಹಾಗೂ ಅರಣ್ಯ ಇಲಾಖೆ ಮಂಗ, ನಾಯಿ ಹಿಡಿಯುವ ಕೆಲಸ ಮಾಡಲಿದೆ. ಅಗ್ನಿ ಸುರಕ್ಷತಾ ಮಾನದಂಡಗಳನ್ನು ಆಡಿಟ್‌ ಮಾಡಲಾಗುತ್ತದೆ. ತಾಜ್ ಮಹಲ್‌ನ ಎಲ್ಲಾ ಗೇಟ್‌ಗಳಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ನಿಯೋಜಿಸಲಾಗುವುದು. ಪ್ರವಾಸಿಗರು ಮತ್ತು ವಿಐಪಿ ಅತಿಥಿಗಳಿಗೆ ಯಾವುದೇ ತೊಂದರೆಯಾಗದಂತೆ ಆನ್‌ಲೈನ್ ಟಿಕೆಟ್ ವ್ಯವಸ್ಥೆ ಉತ್ತಮವಾಗಿರುತ್ತದೆ. ತಾಜ್ ಮಹಲ್ ಅನ್ನು ಡ್ರೋನ್ ಕ್ಯಾಮೆರಾಗಳೊಂದಿಗೆ ಮೇಲ್ವಿಚಾರಣೆ ಮಾಡಲಾಗುತ್ತದೆ. ಸಿಐಎಸ್ಎಫ್ ಐಜಿ ಅಲೋಕ್ ಕುಮಾರ್ ಅವರು ಸೋಮವಾರ ಆಗ್ರಾಕ್ಕೆ ಬಂದಿದ್ದು, ಭದ್ರತಾ ವ್ಯವಸ್ಥೆಗಳ ಪರಿಶೀಲನೆ ನಡೆಸಿದರು. ಉತ್ತಮ ಭದ್ರತಾ ವ್ಯವಸ್ಥೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.

ಇಂದಿನಿಂದ 3 ದಿನ ಬೆಂಗಳೂರಲ್ಲಿ ಜಿ20 ದೇಶಗಳ ಸಭೆ

250 ಮಂಗಗಳನ್ನು ಗುರುತು: ತಾಜ್ ಮಹಲ್ ನಲ್ಲಿ ಮಂಗಗಳ ಕಾರಣಕ್ಕಾಗಿಯೇ ಜನರು ಹೆದರುತ್ತಾರೆ. ಮಂಗಗಳು ಪ್ರತಿದಿನ ಪ್ರವಾಸಿಗರನ್ನು ಬೆದರಿಸುತ್ತವೆ. ಅನೇಕ ಸ್ಥಳೀಯ ವಿದೇಶಿ ಪ್ರವಾಸಿಗರು ಸಹ ತೀವ್ರವಾಗಿ ಗಾಯಗೊಂಡಿದ್ದಾರೆ. ಕೋತಿಗಳನ್ನು ಹಿಡಿಯುವಂತೆ ಹಲವು ಬಾರಿ ಎಎಸ್ ಐ ಹಾಗೂ ಸಿಐಎಸ್ ಎಫ್ ಆಯುಕ್ತರು ಹಾಗೂ ಪಾಲಿಕೆ ಆಯುಕ್ತರಿಗೆ ಪತ್ರ ಬರೆದಿದ್ದರು. ತಾಜ್ ಮಹಲ್‌ನಲ್ಲಿ ಸುಮಾರು 250 ಮಂಗಗಳು ಇದ್ದಿರಬಹುದು ಎಂದು ಎಎಸ್‌ಐ ಅಧಿಕಾರಿಗಳು ಹೇಳಿದ್ದಾರೆ.

G20 Summit: ಜಿ20 ಅಧ್ಯಕ್ಷತೆ ಅವಧಿ ಭಾರತಕ್ಕೆ ನಿರ್ಣಾಯಕ

ಫೆಬ್ರವರಿಯಲ್ಲಿ 20 ದೇಶಗಳಿಗೆ ನಿಯೋಗ: ಜಿ20 ಸಮ್ಮೇಳನದ ಕಾರಣ ಅಮೆರಿಕ, ರಷ್ಯಾ, ಜಪಾನ್ ಸೇರಿದಂತೆ 20 ದೇಶಗಳ ಪ್ರತಿನಿಧಿಗಳು ಭಾರತಕ್ಕೆ ಬರಲಿದ್ದಾರೆ. ಫೆಬ್ರುವರಿಯಲ್ಲಿ ನಿಯೋಗದ ಸಂಚಾರ ಆರಂಭವಾಗಲಿದೆ. ಫೆಬ್ರವರಿಯಿಂದ ಆಗಸ್ಟ್‌ವರೆಗೆ ಆಗ್ರಾದಲ್ಲಿ ಈವೆಂಟ್‌ಗಳು ನಡೆಯುತ್ತಲೇ ಇರುತ್ತವೆ. ಜಿ20 ರಾಷ್ಟ್ರಗಳ ರಾಜತಾಂತ್ರಿಕರು, ನಾಯಕರು, ಕಂಪನಿಗಳ ಪ್ರತಿನಿಧಿಗಳು ಆಗ್ರಾದಲ್ಲಿ ಪತ್ರಿಕಾಗೋಷ್ಠಿ ಕೂಡ ನಡೆಸಬಹುದು ಎಂದು ಹೇಳಲಾಗಿದೆ.

Follow Us:
Download App:
  • android
  • ios