ಇಂದಿನಿಂದ 3 ದಿನ ಬೆಂಗಳೂರಲ್ಲಿ ಜಿ20 ದೇಶಗಳ ಸಭೆ

20 ದೇಶಗಳ ಹಣಕಾಸು ಸಚಿವರು, ಕೇಂದ್ರೀಯ ಬ್ಯಾಂಕ್‌ ಮುಖ್ಯಸ್ಥರು ಭಾಗಿ, ಹಣಕಾಸು ವಿಚಾರದಲ್ಲಿ ದೇಶಗಳ ನಡುವೆ ಸಹಯೋಗವೇ ಮುಖ್ಯ ಅಜೆಂಡಾ 

G20 Summit Meeting will be held on december 13th in Bengaluru grg

ಬೆಂಗಳೂರು(ಡಿ.13):  ಜಗತ್ತಿನ ಪ್ರಭಾವಿ ದೇಶಗಳ ಒಕ್ಕೂಟ ಎನ್ನಿಸಿಕೊಂಡಿರುವ ಜಿ20 ದೇಶಗಳ ಹಣಕಾಸು ಸಚಿವರು ಹಾಗೂ ಸೆಂಟ್ರಲ್‌ ಬ್ಯಾಂಕ್‌ ಗವರ್ನರುಗಳ ಸಭೆ ಇಂದಿ(ಮಂಗಳವಾರ)ನಿಂದ 3 ದಿನ ಬೆಂಗಳೂರಿನಲ್ಲಿ ನಡೆಯಲಿದೆ. ‘ಹಣಕಾಸು ಹೆಜ್ಜೆಗುರುತು’ ಕಾರ್ಯಸೂಚಿಯೊಂದಿಗೆ ಸಭೆ ನಡೆಯಲಿದೆ. ಹಣಕಾಸು ವಿಚಾರಗಳಲ್ಲಿ ಸಹಯೋಗ ಸಾಧಿಸುವ ಬಗ್ಗೆ ಸಮಾಲೋಚನೆಗಳು ನಡೆಯಲಿವೆ. ಜಿ20 ದೇಶಗಳ ಹಣಕಾಸು ಹಾಗೂ ಕೇಂದ್ರೀಯ ಬ್ಯಾಂಕುಗಳ ಉಪ ಮುಖ್ಯಸ್ಥರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಭಾರತದ ಹಣಕಾಸು ಸಚಿವಾಲಯ ಹಾಗೂ ರಿಸರ್ವ್‌ ಬ್ಯಾಂಕ್‌ಗಳು ಈ ಸಭೆಯ ಆತಿಥ್ಯ ವಹಿಸಿಕೊಂಡಿವೆ. ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಅಜಯ್‌ ಸೇಠ್‌ ಹಾಗೂ ಆರ್‌ಬಿಐ ಉಪ ಗವರ್ನರ್‌ ಮೈಕೆಲ್‌ ಡಿ. ಪಾತ್ರಾ ಅವರು ಈ ಸಭೆಯ ಜಂಟಿ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.

G20 Summit: ಜಿ20 ಅಧ್ಯಕ್ಷತೆ ಅವಧಿ ಭಾರತಕ್ಕೆ ನಿರ್ಣಾಯಕ

ಜಿ20 ಸದಸ್ಯ ರಾಷ್ಟ್ರಗಳ ವಿತ್ತ ಹಾಗೂ ಕೇಂದ್ರೀಯ ಬ್ಯಾಂಕುಗಳ ಉಪಮುಖ್ಯಸ್ಥರು ಮಾತ್ರವಲ್ಲದೇ, ಭಾರತ ಆಹ್ವಾನಿಸಿರುವ ವಿವಿಧ ದೇಶಗಳ ಹಾಗೂ ಅಂತಾರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಸಭೆಯ ಬಳಿಕವೂ ಹಣಕಾಸಿಗೆ ಸಂಬಂಧಿಸಿದಂತೆ ಒಂದು ವರ್ಷದ ಅವಧಿಯಲ್ಲಿ ದೇಶಾದ್ಯಂತ 40 ಸಭೆಗಳು ನಡೆಯಲಿವೆ.

ಸಭೆಯ ಅಜೆಂಡಾ ಏನು?:

ಸಭೆಯಲ್ಲಿ ಮೂಲಸೌಕರ್ಯ ಅಭಿವೃದ್ಧಿ, ಸುಸ್ಥಿರ ಹಣಕಾಸು, ಜಾಗತಿಕ ಆರೋಗ್ಯ, ಅಂತಾರಾಷ್ಟ್ರೀಯ ತೆರಿಗೆ ಪದ್ಧತಿ ಹಾಗೂ ಹಣಕಾಸು ವಲಯದ ವಿಷಯಗಳು ಸೇರಿದಂತೆ ಜಾಗತಿಕ ಪ್ರಸ್ತುತತೆ ಕುರಿತು ಗಹನವಾದ ಚರ್ಚೆ ನಡೆಯಲಿದೆ.
ಇದೇ ವೇಳೆ, 21ನೇ ಶತಮಾನದ ಜಾಗತಿಕ ಸವಾಲುಗಳನ್ನು ಎದುರಿಸಲು ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕುಗಳನ್ನು ಬಲಯುತಗೊಳಿಸುವ ಕುರಿತು ಸಂವಾದ ನಡೆಯಲಿದೆ. ಮತ್ತೊಂದೆಡೆ, ಹಸಿರು ಆರ್ಥಿಕತೆಯಲ್ಲಿ ಕೇಂದ್ರೀಯ ಬ್ಯಾಂಕುಗಳ ಪಾತ್ರ ಕುರಿತು ವಿಚಾರ ಸಂಕಿರಣವೂ ಆಯೋಜನೆಗೊಂಡಿದೆ.
 

Latest Videos
Follow Us:
Download App:
  • android
  • ios