Asianet Suvarna News Asianet Suvarna News

ಜನಸಾಮಾನ್ಯರಂತೆ ಪ್ರಧಾನಿ ಮೋದಿ ತಾಯಿಗೆ ಹರಿದ್ವಾರದಲ್ಲಿ ಅಸ್ಥಿ ವಿಸರ್ಜನೆ

ಹೀರಾಬೆನ್‌ ಮೋದಿ ಅವರ ಅಸ್ಥಿ ವಿಸರ್ಜನೆ ಬಹಳ ಸರಳವಾಗಿ ನಡೆದಿದ್ದು, ಇದು ಯಾವುದೇ ಆಡಳಿತಾತ್ಮಕ ವ್ಯವಸ್ಥೆಗಳಿಲ್ಲದ ಸರಳ ಸಮಾರಂಭವಾಗಿತ್ತು ಎಂದು ತಿಳಿದುಬಂದಿದೆ.

ashes of pm modis mother heeraben modi immersed in haridwar ash
Author
First Published Jan 8, 2023, 3:49 PM IST

ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರ ತಾಯಿ ಹೀರಾಬೆನ್‌ ಮೋದಿ (Heeraben Modi) ಡಿಸೆಂಬರ್ 30, 2022 ರಂದು ನಿಧನರಾಗಿದ್ದರು. ಈ ವೇಳೆ ಪ್ರಧಾನಿ ಮೋದಿ ತಾಯಿಯ ಅಂತ್ಯಸಂಸ್ಕಾರವನ್ನು (Last Rites) ಸರಳವಾಗಿ ನೆರವೇರಿಸಿದ್ದರು. ಅಂತ್ಯಕ್ರಿಯೆಗೆ ಭಾರಿ ಸಂಖ್ಯೆಯ ಜನ ಸೇರಬಹುದು ಎಂಬುದನ್ನು ಮೊದಲೇ ನಿರೀಕ್ಷಿಸಿದ ಪ್ರಧಾನಿ ಮೋದಿ ಹಾಗೂ ಅವರ ಕುಟುಂಬ ವರ್ಗದವರು ‘ನಿಮ್ಮ ಕೆಲಸಗಳನ್ನು ಎಂದಿನಂತೆ ಮುಂದುವರೆಸಿ, ಅದೇ ನೀವು ನಮ್ಮ ತಾಯಿಗೆ ಸಲ್ಲಿಸುವ ಗೌರವ’ ಎಂದು ಮನವಿ ಮಾಡಿದ್ದರು. ಹೀಗಾಗಿ ಕುಟುಂಬ ಸದಸ್ಯರು (Family Members) ಮತ್ತು ಅತ್ಯಂತ ಆಪ್ತರ ಹೊರತಾಗಿ ಯಾರೂ ಹೀರಾಬೆನ್‌ರ ಅಂತಿಮ ದರ್ಶನಕ್ಕೆ ಆಗಮಿಸಿರಲಿಲ್ಲ. ಸಾಮಾನ್ಯ ಜನರಿಗೆ ತೊಂದರೆ ಕೊಡದಂತೆ ಈ ಅಂತ್ಯಕ್ರಿಯೆ ನಡೆದಿದ್ದು, ಹಲವರ ಮೆಚ್ಚುಗೆಗೆ ಕಾರಣವಾಗಿತ್ತು. ದೇಶದ ಪ್ರಧಾನಿ ತಾಯಿಯ ಅಂತ್ಯಸಂಸ್ಕಾರವನ್ನು ಇಷ್ಟು ಸರಳವಾಗಿ ಮಾಡಿದ್ದಾರೆಂದು ಹಲವರು ನೆಚ್ಚಿಕೊಂಡಿದ್ದರು. ಈಗ ಅದೇ ರೀತಿ ಸರಳವಾಗಿ ಅಸ್ಥಿ ವಿಸರ್ಜನೆ  (Ashes Immersed) ಮಾಡಲಾಗಿದೆ. ಅದೂ, ಹಿಂದೂಗಳ ಪವಿತ್ರ ತಾಣಗಳಲ್ಲೊಂದಾದ ಹರಿದ್ವಾರದಲ್ಲಿ (Haridwar).

ಹೌದು, ಹರಿದ್ವಾರದಲ್ಲಿ (Haridwar) ಪ್ರಧಾನಿ ಮೋದಿ ತಾಯಿಯ ಚಿತಾಭಸ್ಮವನ್ನು ಗಂಗಾ ನದಿಯಲ್ಲಿ (Ganga River) ಶನಿವಾರ ವಿಸರ್ಜನೆ ಮಾಡಲಾಗಿದೆ. ಪ್ರಧಾನಿಯವರ ಕಿರಿಯ ಸಹೋದರ ಪಂಕಜ್ ಮೋದಿ (Pankaj Modi) ಅವರು ಶನಿವಾರ ತಮ್ಮ ತಾಯಿಯ ಚಿತಾಭಸ್ಮವನ್ನು ಹೊತ್ತು ಹರಿದ್ವಾರ ತಲುಪಿದ್ದರು. ಇನ್ನು, ಈ ಚಿತಾಭಸ್ಮವನ್ನು ವಿಐಪಿ ಘಾಟ್‌ನಲ್ಲಿ ವೈದಿಕ ವಿಧಿ ವಿಧಾನಗಳೊಂದಿಗೆ ನದಿಯಲ್ಲಿ ವಿಸರ್ಜಿಸಲಾಗಿದೆ. ಜನಸಾಮಾನ್ಯರಿಗೆ ತೊಂದರೆಯಾಗದಂತೆ ಯಾವ ಆಡಂಬರವೂ ಇಲ್ಲದೆ, ಅಧಿಕಾರಿಗಳು, ಪೊಲೀಸರ ನೆರವು ಪಡೆಯದೆ ಸರಳವಾಗಿ ಅಸ್ಥಿ ವಿಸರ್ಜನೆ ಮಾಡಲಾಗಿದೆ.

ಇದನ್ನು ಓದಿ: ತಾಯಿ ನಿಧನದ ದು:ಖದಲ್ಲೂ ಮೋದಿ ಕರ್ತವ್ಯಕ್ಕೆ ಹಾಜರ್‌: ಅಂತ್ಯಸಂಸ್ಕಾರ ನಡೆದ 1.5 ತಾಸಲ್ಲೇ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗಿ

ಹೀರಾಬೆನ್‌ ಮೋದಿ ಅವರ ಅಸ್ಥಿ ವಿಸರ್ಜನೆ ಬಹಳ ಸರಳವಾಗಿ ನಡೆದಿದ್ದು, ಇದು ಯಾವುದೇ ಆಡಳಿತಾತ್ಮಕ ವ್ಯವಸ್ಥೆಗಳಿಲ್ಲದ ಸರಳ ಸಮಾರಂಭವಾಗಿತ್ತು ಎಂದು ತಿಳಿದುಬಂದಿದೆ. ಇನ್ನು, ಅಸ್ಥಿ ವಿಸರ್ಜನೆ ಬಗ್ಗೆ ಸ್ಥಳೀಯ ಆಡಳಿತ ಅಥವಾ ಸ್ಥಳೀಯ ಬಿಜೆಪಿ ಘಟಕಕ್ಕೆ ಯಾವುದೇ ಮಾಹಿತಿ ಇರಲಿಲ್ಲ ಎಂದು ತಿಳಿದುಬಂದಿದೆ. ಅಸ್ಥಿ ವಿಸರ್ಜನೆ ಮಾಡಿದ ನಂತರ ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ ಪಂಕಜ್ ಮೋದಿ ವಿಧಿವಿಧಾನಗಳನ್ನು ನೆರವೇರಿಸಿ ತವರಿಗೆ ಹಿಂತಿರುಗಿದ್ದಾರೆ. ಒಟ್ಟಾರೆ, ಇಷ್ಟು ಸರಳವಾಗಿ ನಡೆದಿರುವ ಅಸ್ಥಿ ವಿಸರ್ಜನೆ ನಿಜಕ್ಕೂ ಸಮಾಜಕ್ಕೆ ಸಂದೇಶ ನೀಡುವಂತದ್ದಾಗಿದೆ. 

ಪ್ರಧಾನಿ ಮೋದಿಯವರ ತಾಯಿ ಹೀರಾಬೆನ್ ಅವರು ಡಿಸೆಂಬರ್ 30 ರಂದು ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಅವರು ಶತಾಯುಷಿಯಾಗಿದ್ದರು. ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ಅವರನ್ನು ಯುಎನ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. 

ಇದನ್ನೂ ಓದಿ: ನನ್ನ ತಾಯಿಯೇ ನನ್ನ ಜೀವನದ ದೊಡ್ಡ ಶಿಕ್ಷಕಿ: ಪ್ರಧಾನಿ ನರೇಂದ್ರ ಮೋದಿ

ಇದಕ್ಕೂ ಮುನ್ನ, ಕಾರು ಅಪಘಾತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕಿರಿಯ ಸಹೋದರ ಪ್ರಹ್ಲಾದ್ ಮೋದಿ ಗಾಯಗೊಂಡಿದ್ದರು. ವರದಿಗಳ ಪ್ರಕಾರ, ಅವರು ತಮ್ಮ ಮಗ, ಸೊಸೆ ಮತ್ತು ಮೊಮ್ಮಗನೊಂದಿಗೆ ಬಂಡೀಪುರಕ್ಕೆ ಪ್ರಯಾಣಿಸುತ್ತಿದ್ದಾಗ ಕರ್ನಾಟಕದ ಮೈಸೂರು ಬಳಿ ಅವರ ಮರ್ಸಿಡಿಸ್ ಬೆಂಜ್ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದಿತ್ತು. ಪ್ರಹ್ಲಾದ್ ಮೋದಿಯನ್ನು ಅವರ ಕುಟುಂಬದೊಂದಿಗೆ ಚಿಕಿತ್ಸೆಗಾಗಿ ಜೆಎಸ್ಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅವರಿಗೆ ಸಣ್ಣಪುಟ್ಟ ಗಾಯಗಳಾಗಿದೆ ಎಂದು ತಿಳಿದುಬಂದಿತ್ತು.

ಇದನ್ನೂ ಓದಿ: ಪ್ರಧಾನಿ ಮೋದಿ ತಾಯಿ ಹೀರಾಬೆನ್ ನಿಧನ: ಮೋದಿ ನೀಡಿದ ಸಂದೇಶ ಏನು?

Follow Us:
Download App:
  • android
  • ios