ಮುಸ್ಲಿಂ ಮೌಲ್ವಿಗಳ ವಿರುದ್ಧ ಹರಿಹಾಯ್ದ ಒವೈಸಿ: ಕಾರಣ?
ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ಹಿನ್ನೆಲೆ| CAA ಬೆಂಬಲಿಸಿದ ಮೌಲ್ವಿಗಳ ವಿರುದ್ಧ ಹರಿಹಾಯ್ದ ಅಸದುದ್ದೀನ್ ಒವೈಸಿ| ಕೆಲವು ಮುಸ್ಲಿಂ ಮೌಲ್ವಿಗಳು ತಮ್ಮದೇ ಭ್ರಮೆಯಲ್ಲಿದ್ದರೆ ಎಂದ ಎಐಎಂಐಎಂ ಮುಖ್ಯಸ್ಥ|'ಇಡೀ ದೇಶ ಒಂದು ದಿಕ್ಕಿನಲ್ಲಿ ಚಲಿಸುತ್ತಿದ್ದರೆ ಕೆಲವು ಮೌಲ್ವಿಗಳಿಕೆ ಇದು ಲೆಕ್ಕವಿಲ್ಲ'| ಶಾಂತಿಯುತ ಪ್ರತಿಭಟನೆಗೆ ಮನವಿ ಮಾಡಿದ ಅಸದುದ್ದೀನ್ ಒವೈಸಿ|
ಹೈದರಾಬಾದ್(ಡಿ.21): ಪೌರತ್ವ ಕಾಯ್ದೆ ತಿದ್ದುಪಡಿಗೆ ಬೆಂಬಲ ನೀಡುತ್ತಿರುವ ಮುಸ್ಲಿಂ ಮೌಲ್ವಿಗಳ ವಿರದ್ಧ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕಿಡಿಕಾರಿದ್ದಾರೆ.
ಇಡೀ ದೇಶವೇ ಪೌರತ್ವ ಕಾಯ್ದೆ ತಿದ್ದುಪಡಿ ವಿರುದ್ಧ ಪ್ರತಿಭಟನೆ ನಡೆಸುತ್ತಿದೆ. ಆದರೆ ಕೆಲವು ಮೌಲ್ವಿಗಳು ಕಾಯ್ದೆಯನ್ನು ಬೆಂಬಲಿಸುವ ಮೂಲಕ ತಮ್ಮ ಅಜ್ಞಾನವನ್ನು ಹೊರಗಡೆವಿದ್ದಾರೆ ಎಂದು ಒವೈಸಿ ಹರಿಹಾಯ್ದಿದ್ದಾರೆ.
ನೀವು 1987ಕ್ಕಿಂತ ಮೊದಲು ಜನಿಸಿದ್ದರೆ...ಇವು ಪೌರತ್ವ ನಿಯಮಗಳು!
ಇಡೀ ದೇಶ ಒಂದು ದಿಕ್ಕಿನಲ್ಲಿ ಚಲಿಸುತ್ತಿದೆ. ದೇಶಾದ್ಯಂತ ವಿದ್ಯಾರ್ಥಿಗಳು ಎಲ್ಲೆಡೆ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಕೆಲವು ಮುಸ್ಲಿಂ ಮೌಲ್ವಿಗಳು ತಮ್ಮದೇ ಭ್ರಮೆಯಲ್ಲಿದ್ದು, ಇದ್ಯಾವುದು ಅವರಿಗೆ ಲೆಕ್ಕವಿಲ್ಲ ಎಂದು ಒವೈಸಿ ಗುಡುಗಿದ್ದಾರೆ.
ಇದೇ ವೇಳೆ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಶಾಂತಿಯುತ ಪ್ರತಿಭಟನೆ ನಡೆಸಬೇಕು ಎಂದು ಒವೈಸಿ ಮನವಿ ಮಾಡಿದ್ದಾರೆ. ಸರ್ಕಾರ ಪೊಲೀಸ್ ಬಲದ ಮೂಲಕ ಪ್ರತಿಭಟನೆಯನ್ನು ಹತ್ತಿಕ್ಕಲು ಪ್ರಯತ್ನಿಸಿದರೂ, ಯಾರೂ ಹಿಂಸೆಯ ಮಾರ್ಗದಲ್ಲಿ ಪ್ರತಿಭಟನೆ ಮಾಡಬಾರದು ಎಂದು ಅವರು ಸಲಹೆ ನೀಡಿದ್ದಾರೆ.
ಡಿ.21ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ