ನೀವು 1987ಕ್ಕಿಂತ ಮೊದಲು ಜನಿಸಿದ್ದರೆ...ಇವು ಪೌರತ್ವ ನಿಯಮಗಳು!

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಜನಾಕ್ರೋಶ|ಪೌರತ್ವ ಪಡೆಯಲು ಬೇಕಾದ ಷರತ್ತುಗಳನ್ನು ಬಿಡುಗಡೆ ಮಾಡಿದ ಕೇಂದ್ರ| 'ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿಗಳನ್ನು ನಂಬಬೇಡಿ'| ಪೌರತ್ವ ಪಡೆಯಲು ಬೇಕಾದ ನಿಯಮಗಳನ್ನು ಬಿಡುಗಡೆ ಮಾಡಿದ ಕೇಂದ್ರ ಗೃಹ ಸಚಿವಾಲಯ| 

Centre Government Releases Clauses To Acquire Indian Citizenship

ನವದೆಹಲಿ(ಡಿ.21): ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶದ ಹಲವು ರಾಜ್ಯಗಳಲ್ಲಿ ಪ್ರತಿಭಟನೆ, ಹಿಂಸಾಚಾರ ತೀವ್ರವಾಗಿದ್ದು, ಕೇಂದ್ರ ಗೃಹ ಸಚಿವಾಲಯ ಭಾರತೀಯ ಪೌರತ್ವ ಪಡೆಯಲು ಪೌರತ್ವ ತಿದ್ದುಪಡಿ ಕಾಯ್ದೆಯಡಿ ಇರುವ ಷರತ್ತುಗಳನ್ನು ಬಿಡುಗಡೆ ಮಾಡಿದೆ.

ಭಾರತೀಯ ಪೌರತ್ವ ಪಡೆಯಲು ಕೇಂದ್ರ ಸರ್ಕಾರ ಒಟ್ಟು 5 ಷರತ್ತುಗಳನ್ನು ವಿಧಿಸಿದ್ದು, ಇವುಗಳ ಹೊರತಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಯಾವುದೇ ಸುಳ್ಳು ಸುದ್ದಿಗಳನ್ನು ನಂಬದಂತೆ ಕೇಂದ್ರ ಸರ್ಕಾರ ಮನವಿ ಮಾಡಿದೆ. 

ಪೌರತ್ವ ಕಾಯ್ದೆ ವಿರೋಧ: ಭೀಮ್‌ ಆರ್ಮಿ 'ರಾವಣ' ಆಜಾದ್ ಅರೆಸ್ಟ್!

1987ರ ಮೊದಲು ಭಾರತದಲ್ಲಿ ಜನಿಸಿದವರು ಅಥವಾ ಅವರ ಪೋಷಕರಿಗೆ ಸಹಜವಾಗಿ ಭಾರತದ ಪೌರತ್ವ ಸಿಗುತ್ತದೆ. ಇಂತವರು ಪೌರತ್ವ ತಿದ್ದುಪಡಿ ಕಾಯ್ದೆ 2019 ಅಥವಾ ರಾಷ್ಟ್ರೀಯ ಪೌರತ್ವ ದಾಖಲಾತಿ(ಎನ್‌ಆರ್‌ಸಿ) ಬಗ್ಗೆ ಆತಂಕಪಡುವ ಅಗತ್ಯವಿಲ್ಲ. 

2004ರಲ್ಲಿ ಪೌರತ್ವ ಕಾಯ್ದೆಗೆ ಆದ ತಿದ್ದುಪಡಿಯಂತೆ ಅಸ್ಸಾಂ ನಾಗರಿಕರನ್ನು ಹೊರತುಪಡಿಸಿ ದೇಶದ ಉಳಿದ ನಾಗರಿಕರ ಪೋಷಕರಲ್ಲಿ ಯಾರಾದರೊಬ್ಬರು ಭಾರತೀಯನಾಗಿದ್ದರೆ ಮತ್ತು ಇಬ್ಬರೂ ಅಕ್ರಮ ವಲಸಿಗರಾಗಿರದಿದ್ದರೆ ಅಂತವರನ್ನು ಭಾರತೀಯ ನಾಗರಿಕರು ಎಂದು ಪರಿಗಣಿಸಲಾಗುತ್ತದೆ 

ಅಸ್ಸಾಂ ರಾಜ್ಯದ ವಿಚಾರದಲ್ಲಿ 1971ರ ಮೊದಲು ರಾಜ್ಯದಲ್ಲಿ ನೆಲೆಸಿದ್ದವರಿಗೆ ಭಾರತದ ನಾಗರಿಕತ್ವ ಸಹಜವಾಗಿ ದೊರೆಯಲಿದೆ. 

1955ರ ಪೌರತ್ವ ಕಾಯ್ದೆ ಪ್ರಕಾರ, 1950, ಜನವರಿ 26ಕ್ಕೆ ಭಾರತದಲ್ಲಿ ನಿವಾಸ ಹೊಂದಿದ್ದವರು ಅಥವಾ ಭಾರತದ ಪ್ರಾಂತ್ಯದೊಳಗೆ ಜನಿಸಿದವರಿಗೆ ಸಂವಿಧಾನ ವಿಧಿ 5ರ ಅಡಿ ಭಾರತದ ನಾಗರಿಕತೆ ಸಿಗಲಿದೆ ಎಂದು ಅಧಿಸೂಚನೆ ಹೇಳುತ್ತದೆ.

ಪೌರತ್ವ ಕಾಯ್ದೆ: ರಾಜೀವ್ ಚಂದ್ರಶೇಖರ್ ಕಣ್ತೆರೆಸುವ ವಿಶ್ಲೇಷಣೆ

ಮಗುವಿನ ಪೋಷಕರು ಭಾರತದಲ್ಲಿ ಜನಿಸಿದ್ದರೆ ಅಥವಾ 1950ರ ಜನವರಿ 26 ಅಥವಾ ಅದಕ್ಕಿಂತ ನಂತರ 1987ರ ಜುಲೈ 1ರೊಳಗೆ ಯಾವುದೇ ವ್ಯಕ್ತಿ ಭಾರತದಲ್ಲಿ ಜನಿಸಿದ್ದರೆ, ಹುಟ್ಟಿನಿಂದಲೇ ಆತ ಅಥವಾ ಅವಳು ಭಾರತದ ಪ್ರಜೆ ಎನಿಸಿಕೊಳ್ಳುತ್ತಾರೆ.

2004ರ ಡಿಸೆಂಬರ್ 3ರ ನಂತರ ಭಾರತದಲ್ಲಿ ಹುಟ್ಟಿದ ವ್ಯಕ್ತಿಯ ಪೋಷಕರು ಭಾರತೀಯರಾಗಿದ್ದರೆ ಅಥವಾ ಮಗುವಿನ ಜನನ ಸಮಯದಲ್ಲಿ ಪೋಷಕರಲ್ಲಿ ಯಾರಾದರೊಬ್ಬರು ಅಕ್ರಮ ವಲಸಿಗರಾಗಿರದಿದ್ದರೆ ಮತ್ತು ಮತ್ತೊಬ್ಬ ಭಾರತೀಯನಾಗಿದ್ದರೆ ಹುಟ್ಟಿನಿಂದಲೇ ಭಾರತದ ಪೌರತ್ವ ಸಿಗುತ್ತದೆ.

ಪೂರ್ವಜರ ಪೌರತ್ವವನ್ನು ತೆಗೆದುಕೊಂಡರೆ, 1950ರ ಜನವರಿ 26ರ ನಂತರ ಆದರೆ 1992ರ ಡಿಸೆಂಬರ್ 10ರೊಳಗೆ ಭಾರತದ ಹೊರಗೆ ಜನಿಸಿದವರು ಇವರ ಜನನ ಸಮಯದಲ್ಲಿ ಮಗುವಿನ ತಂದೆ ಭಾರತೀಯನಾಗಿದ್ದರೆ ಹುಟ್ಟಿದ ಮಗುವಿಗೆ ಸಹ ಭಾರತದ ಪೌರತ್ವ ಸಿಗುತ್ತದೆ.

ಭಾರತದ ಪ್ರಜೆಗಳಾಗಿರುವ ವ್ಯಕ್ತಿಗಳ ಅಪ್ರಾಪ್ತ ಮಕ್ಕಳು ಭಾರತದ ಪ್ರಜೆಯಾಗಿ ನೋಂದಾಯಿಸಲು ಅರ್ಹರಾಗಿದ್ದಾರೆ, ಮತ್ತು ಪೂರ್ಣ ವಯಸ್ಸು ಮತ್ತು ಪೋಷಕರು ಭಾರತದ ಪ್ರಜೆಗಳಾಗಿ ನೋಂದಾಯಿಸಿಕೊಂಡಿದ್ದರೆ ಮಕ್ಕಳಿಗೆ ಕೂಡ ಭಾರತದ ಪೌರತ್ವ ಸಿಗುತ್ತದೆ. 

12 ವರ್ಷಗಳ ಕಾಲ ಭಾರತದಲ್ಲಿ ವಾಸವಿದ್ದರೆ ಅಂತವರಿಗೆ ಇಲ್ಲಿನ ಪೌರತ್ವ ಸಹಜವಾಗಿ ಸಿಗುತ್ತದೆ ಎಂದು ಸಹ ಗೃಹ ಸಚಿವಾಲಯದ ಅಧಿಸೂಚನೆಯಲ್ಲಿ ಹೇಳಲಾಗಿದೆ. 

ಪೌರತ್ವ ಕಾಯ್ದೆ: ಯುಎನ್ ಜನಾಭಿಪ್ರಾಯ ಸಂಗ್ರಹಕ್ಕೆ ಮಮತಾ ಆಗ್ರಹ!

ಇನ್ನು ಯಾವುದಾದರೂ ಹೊಸ ಪ್ರಾಂತ್ಯ ಭಾರತ ದೇಶಕ್ಕೆ ಸೇರಿದರೆ ಆ ಪ್ರಾಂತ್ಯದಲ್ಲಿರುವ ಜನರು ಭಾರತದ ನಾಗರಿಕತ್ವ ಪಡೆಯುತ್ತಾರೆ. ಅಧಿಸೂಚನೆ ಹೊರಡಿಸಿದ ದಿನದಿಂದ ಅಲ್ಲಿನ ಜನರಿಗೆ ಭಾರತದ ಪೌರತ್ವ ಸಿಗುತ್ತದೆ. 

ಗೋವಾ, ದಮನ್ ಮತ್ತು ಡಿಯು, ಸಿಕ್ಕಿಂ ಮತ್ತು ಹಲವು ಬಾಂಗ್ಲಾದೇಶದ ಭಾಗದ ಜನರಿಗೆ 2014ರಲ್ಲಿ ಭಾರತದ ಪೌರತ್ವ ಸಿಕ್ಕಿದ್ದನ್ನು ಇಲ್ಲಿ ಸ್ಮರಿಸಬಹುದು.

Latest Videos
Follow Us:
Download App:
  • android
  • ios