ಕೇಜ್ರಿಯಿಂದ 10 ಭರವಸೆಯ ಗ್ಯಾರಂಟಿ ಕಾರ್ಡ್‌ ಬಿಡುಗಡೆ

ಶೀಘ್ರವೇ ದಿಲ್ಲಿಯಲ್ಲಿ ಚುನಾವಣೆ ನಡೆಯಲಿದ್ದು, ಈ ನಿಟ್ಟಿನಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ‘ಗ್ಯಾರಂಟಿ ಕಾರ್ಡ್‌’ ಬಿಡುಗಡೆ ಮಾಡಿ ಗಮನಸೆಳೆದಿದ್ದಾರೆ.

Arvind Kejriwals 10 guarantees before Delhi polls

ನವದೆಹಲಿ [ಜ.20]: ಸಾಮಾನ್ಯವಾಗಿ ರಾಜಕೀಯ ಪಕ್ಷಗಳು ಚುನಾವಣೆಯ ವೇಳೆ ಪ್ರಣಾಳಿಕೆ ಬಿಡುಗಡೆ ಮಾಡಿ ಅದನ್ನು ಈಡೇರಿಸುವ ಭರವಸೆ ನೀಡುತ್ತವೆ. ಆದರೆ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ‘ಗ್ಯಾರಂಟಿ ಕಾರ್ಡ್‌’ ಬಿಡುಗಡೆ ಮಾಡಿ ಗಮನಸೆಳೆದಿದ್ದಾರೆ.

ಒಂದು ವೇಳೆ ಅಧಿಕಾರಕ್ಕೆ ಬಂದರೆ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಸೇವೆ, ಮಹಿಳೆಯರ ಸುರಕ್ಷತೆಗೆ ಮೊಹಲ್ಲಾ ಮಾರ್ಷಲ್‌ಗಳ ನೇಮಕ, ಪ್ರತಿ ವರ್ಷ ದೆಹಲಿಯನ್ನು ಕಾಡುವ ಮಾಲಿನ್ಯವನ್ನು ಶೇ.300ರಷ್ಟುತಗ್ಗಿಸುವುದು, 24 ತಾಸು ಕುಡಿಯುವ ನೀರು ಸರಬರಾಜು ಸೇರಿದಂತೆ ಖಂಡಿತವಾಗಿಯೂ ಈಡೇರಿಸುವ 10 ಭರವಸೆಗಳನ್ನು ಒಳಗೊಂಡ ಕಾರ್ಡ್‌ವೊಂದನ್ನು ಕೇಜ್ರಿವಾಲ್‌ ಬಿಡುಗಡೆ ಮಾಡಿದ್ದಾರೆ.

ದೆಹಲಿ ಚುನಾವಣಾ ಪೂರ್ವ ಸಮೀಕ್ಷೆ: ಕೈ, ಕಮಲಕ್ಕೆ ನಿರಾಸೆ, ಮತ್ತೆ ಆಪ್ ಕಮಾಲ್!...

ಇದಲ್ಲದೇ ಸಮಗ್ರ ಪ್ರಣಾಳಿಕೆಯನ್ನು ಆಪ್‌ 7ರಿಂದ 10 ದಿನಗಳಲ್ಲಿ ಬಿಡುಗಡೆ ಮಾಡಲಿದ್ದು, ಅದರಲ್ಲಿ ಇನ್ನಷ್ಟುಸಂಗತಿಗಳು ಇರಲಿವೆ ಎಂದು ಹೇಳಿದ್ದಾರೆ.

ಕೇಜ್ರಿವಾಲ್‌ ವಿರುದ್ಧ ಸ್ಪರ್ಧೆ ಇಲ್ಲ: ನಿರ್ಭಯಾ ತಾಯಿ...

10 ಗ್ಯಾರಂಟಿಗಳು:

1. ದಿನದ 24 ಗಂಟೆ ನಿರಂತರ ವಿದ್ಯುತ್‌ ಪೂರೈಕೆ ಹಾಗೂ ಪ್ರತಿಯೊಬ್ಬರಿಗೂ 200 ಯುನಿಟ್‌ ವಿದ್ಯುತ್‌ ಸಂಪೂರ್ಣ ಉಚಿತ.

2. ವಿದ್ಯುತ್‌ ಕಂಬಗಳು ಮತ್ತು ತಂತಿಯ ಬದಲು ನೆಲದ ಅಡಿಯಲ್ಲಿ ಕೇಬಲ್‌ ಅಳವಡಿಸಿ ಪ್ರತಿ ಮನೆಗೂ ವಿದ್ಯುತ್‌ ಸಂಪರ್ಕ

3. ಮುಂದಿನ 5 ವರ್ಷಗಳಲ್ಲಿ ಪ್ರತಿ ಮನೆಗೂ ದಿನದ 24 ಗಂಟೆ ಶುದ್ಧ ಕುಡಿಯುವ ನೀರು ಹಾಗೂ ಪ್ರತಿ ಮನೆಗೆ 20 ಸಾವಿರ ಲೀಟರ್‌ ಲೀಟರ್‌ ನೀರು ಉಚಿತ.

4. ದೆಹಲಿಯ ಪ್ರತಿಯೊಬ್ಬ ಮಗುವಿಗೂ ವಿಶ್ವ ದರ್ಜೆಯ ಶಿಕ್ಷಣ ಹಾಗೂ ಉತ್ತಮ ಆರೋಗ್ಯ ಸೌಲಭ್ಯ.

5. ದೆಹಲಿಯಲ್ಲಿ 11 ಸಾವಿರಕ್ಕೂ ಹೆಚ್ಚು ಬಸ್‌ ಸೌಲಭ್ಯ. ಮೆಟ್ರೋ ಸಂಪರ್ಕ 500 ಕಿ.ಮೀ. ವರೆಗೆ ವಿಸ್ತರಣೆ. ಮಹಿಳೆಯರು ಮತ್ತು ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಸೇವೆ.

6. ದೆಹಲಿಯಲ್ಲಿ ವಾಯು ಮಾಲಿನ್ಯ 300% ಇಳಿಸಲು ಕ್ರಮ ಮತ್ತು ಯಮುನಾ ನದಿ ಸ್ವಚ್ಛತೆ.

7. ಮುಂದಿನ 5 ವರ್ಷಗಳಲ್ಲಿ ದೆಹಲಿಯನ್ನು ಕಸ ಮುಕ್ತಗೊಳಿಸುವುದು.

8. ಮಹಿಳೆಯರಿಗೆ ನಗರವನ್ನು ಸುರಕ್ಷಿತಗೊಳಿಸುವ ಸಲುವಾಗಿ ಮೊಹಲ್ಲಾ ಮಾರ್ಷಲ್‌ಗಳ ನೇಮಕ.

9. ಅನಧಿಕೃತ ಕಾಲೋನಿಗಳಲ್ಲೂ ರಸ್ತೆ, ನೀರು ಪೂರೈಕೆ ಒಳಚರಂಡಿ ಸಿಸಿಟೀವಿ ಅಳವಡಿಕೆ.

10 ಸ್ಲಮ್‌ಗಳಲ್ಲಿ ವಾಸಿಸುತ್ತಿರುವವರಿಗೆ ಪಕ್ಕಾ ಮನೆಗಳ ನಿರ್ಮಾಣ.

Latest Videos
Follow Us:
Download App:
  • android
  • ios