ದೆಹಲಿ ಚುನಾವಣಾ ಪೂರ್ವ ಸಮೀಕ್ಷೆ: ಕೈ, ಕಮಲಕ್ಕೆ ನಿರಾಸೆ, ಮತ್ತೆ ಆಪ್ ಕಮಾಲ್!
ದೆಹಲಿಯಲ್ಲಿ ಮತ್ತೆ ಕೇಜ್ರಿವಾಲ್ ಕಮಾಲ್| ಎಬಿಪಿ- ಸಿವೋಟರ್ ಸಮೀಕ್ಷೆ
ನವದೆಹಲಿ[ಜ.07]: ಫೆ.8ರಂದು ದೆಹಲಿ ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಆಮ್ಆದ್ಮಿ ಪಕ್ಷ ಮತ್ತೊಮ್ಮೆ ಭರ್ಜರಿ ಪ್ರದರ್ಶನ ಮೂಲಕ ಅಧಿಕಾರಕ್ಕೆ ಬರಲಿದೆ ಎಂದು ಚುನಾವಣಾಪೂರ್ವ ಸಮೀಕ್ಷೆಯೊಂದು ಹೇಳಿದೆ. ಸೋಮವಾರ ಚುನಾವಣೆಗೆ ದಿನಾಂಕ ಪ್ರಕಟವಾದ ಬೆನ್ನಲ್ಲೇ ಎಬಿಪಿ- ಸಿ ವೋಟರ್ ನಡೆಸಿದ ಸಮೀಕ್ಷೆ ಅನ್ವಯ ಆಮ್ಆದ್ಮಿ ಪಕ್ಷಕ್ಕೆ 59, ಕಾಂಗ್ರೆಸ್ಗೆ 8 ಮತ್ತು ಕಾಂಗ್ರೆಸ್ಗೆ 3 ಸ್ಥಾನ ಲಭ್ಯವಾಗಲಿದೆ.
ದೆಹಲಿ ವಿಧಾನಸಭೆ ಚುನಾವಣೆಗೆ ಡೇಟ್ ಫಿಕ್ಸ್: ಒಂದೇ ಹಂತದಲ್ಲಿ ಎಲೆಕ್ಷನ್
ಕಳೆದ ಬಾರಿಗಿಂತ ಆಮ್ಆದ್ಮಿ ಸ್ಥಾನ ಬಲ 8 ಕಡಿಮೆ ಆದರೂ, ಅದು ಸುಲಭವಾಗಿ ಅಧಿಕಾರಕ್ಕೆ ಬರಲಿದೆ. ಕಳೆದ ಬಾರಿ 3 ಸ್ಥಾನಗಳಿಸಿದ್ದ ಬಿಜೆಪಿ ತನ್ನ ಬಲವನ್ನು 8ಕ್ಕೆ ಏರಿಸಿಕೊಳ್ಳಲಿದೆ. ಇನ್ನು ಕಳೆದ ಬಾರಿ ಶೂನ್ಯ ಸಾಧನೆ ಮಾಡಿದ್ದ ಕಾಂಗ್ರೆಸ್ ಈ ಬಾರಿ 3 ಸ್ಥಾನ ಗೆಲ್ಲಲಿದೆ. ಆಪ್ ಶೇ.53ರಷ್ಟು, ಬಿಜೆಪಿ ಶೇ.26ರಷ್ಟುಮತ್ತು ಕಾಂಗ್ರೆಸ್ ಶೇ.5ರಷ್ಟುಮತ ಪಡೆದುಕೊಳ್ಳಲಿವೆ ಎಂದು ಸಮೀಕ್ಷೆ ಹೇಳಿದೆ.
ಮುಖ್ಯಮಂತ್ರಿ ರೇಸ್ನಲ್ಲಿ ಈಗಲೂ ಕೇಜ್ರಿವಾಲ್ ಮುಂಚೂಣಿಯಲ್ಲಿದ್ದಾರೆ.
ಒಟ್ಟು ಸ್ಥಾನ ಬಲ | 70 |
ಬಹುಮತಕ್ಕೆ | 36 |
ಆಪ್ | 59 |
ಬಿಜೆಪಿ | 8 |
ಕಾಂಗ್ರೆಸ್ | 3 |
ಹೀಗಿದೆ ದೆಹಲಿ ಚುನಾವಣಾ ಅಖಾಡ:
"