ಪತ್ನಿ ಸುನಿತಾಗೆ ಕೇಜ್ರಿವಾಲ್‌ ಉತ್ತರಾಧಿಕಾರಿ ಪಟ್ಟ? ಸಿಎಂ ರೇಸ್‌ನಲ್ಲಿದ್ದಾರೆ ಮೂವರು!

ಕೇಜ್ರಿ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಆದರೆ ದೆಹಲಿ ಸಿಎಂ ರೇಸ್‌ನಲ್ಲಿ ಕೇಜ್ರಿ ಪತ್ನಿ ಸುನಿತಾ, ಅತಿಷಿ, ಸೌರಭ್‌ ಭಾರದ್ವಾಜ್‌  ಇದ್ದರೆ ಪಕ್ಷದ ಸಂಚಾಲಕ ಹುದ್ದೆ ರೇಸಲ್ಲಿ ಆತಿಷಿ, ಸುನಿತಾ, ಪಂಜಾಬ್ ಸಿಎಂ ಮಾನ್ ಇದ್ದಾರೆ.

Arvind Kejriwal  wife Sunita in delhi CM Post race gow

ನವದೆಹಲಿ (ಮಾ.23): ದಿಲ್ಲಿ ಮುಖ್ಯಮಂತ್ರಿ ಹಾಗೂ ಆಪ್‌ ಸಂಚಾಲಕ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಬಂಧಿಸಿರುವ ಕಾರಣ ಅವರ ಉತ್ತರಾಧಿಕಾರಿ ಯಾರು ಆಗಬಲ್ಲರು ಎಂಬ ಪ್ರಶ್ನೆ ಎದ್ದಿದೆ. ಮೂಲಗಳ ಪ್ರಕಾರ ಕೇಜ್ರಿವಾಲ್ ಪತ್ನಿ ಸುನಿತಾ ಕೇಜ್ರಿವಾಲ್‌, ಸಚಿವರಾದ ಆತಿಷಿ ಹಾಗೂ ಸೌರಭ್‌ ಭಾರದ್ವಾಜ್‌ ಹೆಸರುಗಳು ದಿಲ್ಲಿ ಸಿಎಂ ಸ್ಥಾನಕ್ಕೆ ಮುಂಚೂಣಿಗೆ ಬಂದಿವೆ.

ಕೇಜ್ರಿವಾಲ್‌ ಅವರು ಜೈಲಿನಿಂದಲೇ ಆಡಳಿತ ನಡೆಸುತ್ತಾರೆ ಎಂದು ಅವರ ಪಕ್ಷದ ನಾಯಕರು ಹೇಳುತ್ತಿದ್ದಾರೆ. ಆದರೆ ಜೈಲಿನಿಂದ ಆಡಳಿತ ನಡೆಸುವುದು ಕಾನೂನು ಪ್ರಕಾರ ಸರಿಯೇ ಎಂಬ ಪ್ರಶ್ನೆಯೂ ಉದ್ಭವಿಸಿದೆ. ಹೀಗಾಗಿ ಕೇಜ್ರಿವಾಲ್‌ ಅವರ ಉತ್ತರಾಧಿಕಾರಿ ಯಾರು ಎಂಬ ಚರ್ಚೆ ಪಕ್ಷದಲ್ಲಿ ಆರಂಭವಾಗಿದೆ.

ದಿಲ್ಲಿ ಅಬಕಾರಿ ಹಗರಣದಲ್ಲಿ ಅರವಿಂದ ಕೇಜ್ರಿವಾಲ್‌ ಕಿಂಗ್‌ಪಿನ್‌: ಕೋರ್ಟ್‌ಗೆ ಇ.ಡಿ. ವರದಿ

ಆದಾಗ್ಯೂ ಕೇಜ್ರಿವಾಲ್‌ ಅವರಷ್ಟು ಎತ್ತರದ ಹಾಗೂ ವರ್ಚಸ್ವಿ ನಾಯಕ ಪಕ್ಷದಲ್ಲಿ ಇಲ್ಲ ಎಂಬುದು ನಿರ್ವಿವಾದ. ಏಕೆಂದರೆ ಕೇಜ್ರಿವಾಲ್ ಅವರ ಬಲಗೈನಂತಿದ್ದ ಪ್ರಭಾವಿ ನಾಯಕರಾದ ಮಾಜಿ ಡಿಸಿಎಂ ಮನೀಶ್‌ ಸಿಸೋಡಿಯಾ ಹಾಗೂ ಸಂಸದ ಸಂಜಯ್‌ ಸಿಂಗ್‌ ಅವರು ಈಗಾಗಲೇ ಇದೇ ದಿಲ್ಲಿ ಮದ್ಯ ಹಗರಣದಲ್ಲಿ ಜೈಲಲ್ಲಿದ್ದಾರೆ.

ಆದರೆ ಮಾಜಿ ಐಆರ್‌ಎಸ್‌ ಅಧಿಕಾರಿ ಆಗಿರುವ ಕೇಜ್ರಿವಾಲ್‌ ಪತ್ನಿ ಸುನಿತಾ ಕೇಜ್ರಿವಾಲ್‌ ಹೆಸರು ಈಗ ಮುಂಚೂಣಿಗೆ ಬಂದಿದೆ. ಸಾಕಷ್ಟು ಪ್ರಭಾವಿ ಖಾತೆ ಹೊಂದಿರುವ ಸಚಿವೆ ಆತಿಷಿ ಹಾಗೂ ಸೌರಭ್‌ ಭಾರದ್ವಾಜ್‌ ಹೆಸರುಗಳು ಕೂಡ ದಿಲ್ಲಿ ಮುಖ್ಯಮಂತ್ರಿ ಹಾಗೂ ಆಪ್‌ ಸಂಚಾಲಕ ಹುದ್ದೆಗೆ ಕೇಳಿ ಬರುತ್ತಿವೆ.

ಇನ್ನು ಆಪ್‌ ರಾಷ್ಟ್ರೀಯ ಪಕ್ಷ ಆಗಿರುವ ಕಾರಣ ಪಕ್ಷದ ಸಂಚಾಲಕ ಹುದ್ದೆಗೂ ಸುನಿತಾ ಕೇಜ್ರಿವಾಲ್‌ ಹಾಗೂ ಆತಿಷಿ ಹೆಸರು ಮುಂಚೂಣಿಯಲ್ಲಿವೆ. ಪಂಜಾಬ್‌ ಮುಖ್ಯಮಂತ್ರಿ ಭಗವಂತ ಮಾನ್‌ ಅವರ ಹೆಸರೂ ಚಾಲ್ತಿಯಲ್ಲಿದೆ.

ರಷ್ಯಾ ಮ್ಯೂಸಿಕ್ ಕನ್ಸರ್ಟ್ ಹಾಲ್ ಮೇಲೆ ಭಾರೀ ಉಗ್ರರ ದಾಳಿ, 60 ಜನರ ಬ ...

ಮೋದಿಯಿಂದ ದಿಲ್ಲಿ ಜನರಿಗೆ ದ್ರೋಹ

ಮೋದಿ ಜೀ ನಿಮ್ಮ ದರ್ಪದ ಕಾರಣ ಇಂದು 3 ಸಲ ಆಯ್ಕೆಯಾದ ಮುಖ್ಯಮಂತ್ರಿ ಜೈಲು ಸೇರಿದ್ದಾರೆ. ಇದು ದಿಲ್ಲಿ ಜನರಿಗೆ ಮಾಡಿದ ದ್ರೋಹ. ಆದರೆ ನಿಮ್ಮ (ಜನರ) ಮುಖ್ಯಮಂತ್ರಿ ಯಾವಾಗಲೂ ನಿಮ್ಮೊಂದಿಗೆ (ಜನರೊಂದಿಗೆ) ನಿಲ್ಲುತ್ತಾರೆ, ಒಳಗೆ ಇರಲಿ ಅಥವಾ ಹೊರಗೆ ಇರಲಿ ಅವರ ಜೀವನವು ದೇಶಕ್ಕಾಗಿ ಸಮರ್ಪಿಸಲಾಗಿದೆ, ಸಾರ್ವಜನಿಕರಿಗೆ ಎಲ್ಲವೂ ತಿಳಿದಿದೆ. ಇಲ್ಲಿ ಜನರೇ ಸರ್ವೋಚ್ಚ. ಜೈ ಹಿಂದ್‌.

- ಸುನಿತಾ ಕೇಜ್ರಿವಾಲ್‌, ಅರವಿಂದ್‌ ಕೇಜ್ರಿವಾಲ್‌ ಪತ್ನಿ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಅವರ ಹಿಂದೆ ಆಪ್ ಪಕ್ಷವು ಗಟ್ಟಿಯಾಗಿ ನಿಲ್ಲುತ್ತದೆ. ಕೇಜ್ರಿವಾಲ್ ದೇಶಭಕ್ತರಾಗಿದ್ದು, ಅವರು ಈ ಸಂಚಿನಿಂದ ನಾಯಕರಾಗಿ ಹೊರಬರುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಸರ್ವಾಧಿಕಾರ ಅನುಸರಿಸುತ್ತಿದ್ದಾರೆ. ಯಾವುದೇ ವಿರೋಧ ಪಕ್ಷದ ನಾಯಕ ಲೋಕಸಭೆ ಚುನಾವಣೆಗೆ ಪ್ರಚಾರ ಮಾಡಲು ಅವರು ಬಯಸುವುದಿಲ್ಲ.

ಭಗವಂತ್ ಮಾನ್. ಪಂಜಾಬ್ ಮುಖ್ಯಮಂತ್ರಿ


ಕೇಜ್ರಿವಾಲ್‌ ಭದ್ರತೆ ಕಳವಳ
‘ಕೇಜ್ರಿವಾಲ್‌ ದೆಹಲಿ ಮುಖ್ಯಮಂತ್ರಿಯಾಗಿದ್ದು, ಝಡ್‌ ಶ್ರೇಣಿಯ ಭದ್ರತೆ ಹೊಂದಿದ್ದಾರೆ. ಈಗ ಇ.ಡಿ ವಶದಲ್ಲಿದ್ದಾರೆ. ಕೇಜ್ರಿವಾಲ್‌ ಸುರಕ್ಷತೆಗೆ ಯಾರು ಜವಾಬ್ದಾರಿ? ಇ.ಡಿ ಕಚೇರಿಯಲ್ಲಿ ಅವರ ಬಂದೀಖಾನೆಗೆ ಯಾರು ಹೋಗುತ್ತಾರೆ? ಕೇಜ್ರಿವಾಲ್‌ ಭದ್ರತಾ ವ್ಯವಸ್ಥೆಯ ಬಗ್ಗೆ ಕೇಂದ್ರ ಸರ್ಕಾರ ಉತ್ತರಿಸಬೇಕು. ಅವರ ಸುರಕ್ಷತೆ ಬಗ್ಗೆ ಕಳವಳ ಆಗುತ್ತಿದೆ.

- ಆತಿಷಿ, ದಿಲ್ಲಿ ಆಪ್‌ ಸಚಿವೆ.

Latest Videos
Follow Us:
Download App:
  • android
  • ios