ಕೋವಿಡ್ ಹೊಡೆತಕ್ಕೆ ಆರ್ಥಿಕತೆ ಪಾತಾಳಕ್ಕೆ ಕುಸಿದಿತ್ತು. ವರ್ಷಗಳು ಉರುಳಿದರೂ ಈಗಲೂ ಚೇತರಿಸಿಕೊಳ್ಳುತ್ತಿದೆ. ಕೋವಿಡ್ ಸಂದರ್ಭದಲ್ಲಿ ಒಂದೊಂದು ರೂಪಾಯಿ ಕೂಡ ಮುಖ್ಯವಾಗಿತ್ತು. ಈ ಸಂದರ್ಭದಲ್ಲಿ ದೆಹಲಿಯ ಆಮ್ ಆದ್ಮಿ ಸರ್ಕಾರ ತನ್ನ ಇಮೇಜ್ ವೃದ್ಧಿಸಿಕೊಳ್ಳಲು 490 ಕೋಟಿ ರೂಪಾಯಿ ಜಾಹೀರಾತು ನೀಡಿದ ಆರೋಪ ಕೇಳಿಬಂದಿದೆ. ಇದೀಗ ಕೇಜ್ರಿ ಸರ್ಕಾರಕ್ಕೆ ಮತ್ತೊಂದು ತಲೆನೋವು ಶುರುವಾಗಿದೆ. 

ದೆಹಲಿ(ಅ.27): ಕರೆನ್ಸಿ ನೋಟಿನಲ್ಲಿ ಹಿಂದೂ ದೇವರ ಫೋಟೋ, ದೆಹಲಿ ಗಾರ್ಬೇಜ್ ಸೇರಿದಂತೆ ಹಲವು ವಿವಾದಾತ್ಮಕ ಹೆಜ್ಜೆಗಳ ಮೂಲಕ ಭಾರಿ ಸಂಚಲನ ಸೃಷ್ಟಿಸಿರುವ ದೆಹಲಿಯ ಆಮ್ ಆದ್ಮಿ ಪಾರ್ಟಿ ಇದೀಗ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದೆ. ಕೋವಿಡ್ ಸಂದರ್ಭದಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ಬರೋಬ್ಬರಿ 490 ಕೋಟಿ ರೂಪಾಯಿ ಜಾಹೀರಾತಿಗಾಗಿ ಖರ್ಚು ಮಾಡಿದೆ. ಜನರು ಸಂಕಷ್ಟದಲ್ಲಿರುವಾಗ ಕೇವಲ 17 ತಿಂಗಳಲ್ಲಿ 490 ಕೋಟಿ ರೂಪಾಯಿಯನ್ನು ಜಾಹೀರಾತಿಗೆ ಖರ್ಚು ಮಾಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ಕುರಿತು ಹಲವು ಮಾಹಿತಿಗಳನ್ನು ಕಾಂಗ್ರೆಸ್ ಬಹಿರಂಗಪಡಿಸಿದೆ.

ಕೇಜ್ರಿವಾಲ್ ಸರ್ಕಾಕರ ನೀಡಿರುವ ಎಲ್ಲಾ ಭರವಸೆಗಳು, ಅಭಿವೃದ್ಧಿ ಕಾರ್ಯಗಳು ಕೇವಲ ಜಾಹೀರಾತಿನಲ್ಲಿ ಮಾತ್ರ ಇದೆ. ಆಪ್ ಸರ್ಕಾರದ ಮಾಡೆಲ್ ಜಾಹೀರಾತು ಮಾತ್ರ. ಇದಕ್ಕಾಗಿ ಕೋಟಿ ಕೋಟಿ ಖರ್ಚು ಮಾಡಲಾಗುತ್ತಿದೆ. ಈ ಮೂಲಕ ತನ್ನ ಇಮೇಜ್ ವೃದ್ಧಿಕೊಳ್ಳುವ ಅರವಿಂದ್ ಕೇಜ್ರಿವಾಲ್ ಸರ್ಕಾರವನ್ನು ಕಾಂಗ್ರೆಸ್ ಕಟುವಾಗಿ ಟೀಕಿಸಿದೆ.

ಕರೆನ್ಸಿ ನೋಟುಗಳಲ್ಲಿ ಲಕ್ಷ್ಮೀ, ಗಣೇಶನ ಚಿತ್ರಗಳನ್ನು ಸೇರಿಸಿ: ಪ್ರಧಾನಿಗೆ Arvind Kejriwal ಮನವಿ

ಕೇಜ್ರಿವಾಲ್ ಸುದ್ದಿಗೋಷ್ಠಿಗಳಲ್ಲಿ ಮಾಧ್ಯದ ಪ್ರಶ್ನೆ ಕೇಳುತ್ತಿಲ್ಲ. ಕೇಜ್ರಿವಾಲ್ ಏನು ಹೇಳುತ್ತಾರೋ ಅಷ್ಟು ಪ್ರಸಾರ ಮಾಡುತ್ತವೆ. ಪ್ರಶ್ನೆ ಕೇಳುವುದೇ ಇಲ್ಲ. ಕೇಜ್ರಿವಾಲ್ ಸರ್ಕಾರ ಜಾಹೀರಾತು ನೀಡಿ ಎಲ್ಲರ ಬಾಯಿ ಮುಚ್ಚಿಸುತ್ತಿದೆ. ಇದಕ್ಕಾಗಿ ಖಜಾನೆ ಹಣ ಖರ್ಚು ಮಾಡುತ್ತಿದೆ. ಅಭಿವೃದ್ಧಿ ಕೆಲಸಗಳು ಮರೀಚಿಕೆಯಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

Scroll to load tweet…

ಈ ಕುರಿತು ಅಧಿಕೃತ ಟ್ವಿಟರ್ ಖಾತೆಯಲ್ಲಿ ಅರವಿಂದ್ ಕೇಜ್ರಿವಾಲ್ ಜಾಹೀರಾತು ಸರ್ಕಾರ ಎಂದು ಟೀಕಿಸಿದೆ. ಚುತುರ ಚಾಲಾಕಿ ರಾಜಕಾರಣಿಯ ಚೋಟಾ ರೀಚಾರ್ಜ್ ಎಂದು ಕಾಂಗ್ರೆಸ್ ಆರೋಪಿಸಿದೆ. ಜುಲೈ ತಿಂಗಳಲ್ಲಿ ಮಾಹಿತಿ ಹಕ್ಕು ಕಾಯ್ದೆಯಡಿ ಕೇಜ್ರಿವಾಲ್ ಸರ್ಕಾರದ ಜಾಹೀರಾತು ಖರ್ಚು ವೆಚ್ಚ ಬಹಿರಂಗವಾಗಿದೆ. ವರ್ಷದಿಂದ ವರ್ಷಕ್ಕೆ ಕೇಜ್ರಿವಾಲ್ ಸರ್ಕಾರ ಜಾಹೀರಾತಿಗೆ ಅತೀ ಹೆಚ್ಚು ಖರ್ಚು ಮಾಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. 

ಸತತ 9 ಗಂಟೆ ಮನೀಶ್ ಸಿಸೋಡಿಯಾ ವಿಚಾರಣೆ, ಇದು ಆಪರೇಶನ್ ಕಮಲದ ಪ್ರಯತ್ನ ಎಂದ ಆಪ್ ನಾಯಕ

ನೋಟಿನ ಫೋಟೋ ವಿವಾದ
ಅರವಿಂದ್‌ ಕೇಜ್ರಿವಾಲ್‌ ದೇಶದ ಆರ್ಥಿಕ ಪ್ರಗತಿ ಹಾಗೂ ಸಮೃದ್ಧಿಗಾಗಿ ಹೊಸ ಕರೆನ್ಸಿ ನೋಟುಗಳ ಮೇಲೆ ಲಕ್ಷ್ಮೇ ಹಾಗೂ ಗಣೇಶನ ಚಿತ್ರಗಳನ್ನು ಮುದ್ರಿಸುವಂತೆ ಸಲಹೆ ನೀಡಿದ್ದು ಭಾರೀ ವಿವಾದಕ್ಕೆ ಸೃಷ್ಟಿಸಿದೆ. ಈ ಹೇಳಿಕೆಗೆ ಬಿಜೆಪಿ ಹಾಗೂ ಕಾಂಗ್ರೆಸ್‌ ಇಬ್ಬರಿಂದಲೂ ಕಟು ಟೀಕೆ ವ್ಯಕ್ತವಾಗಿದೆ. ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ, ‘ಭಾರತದ ಆರ್ಥಿಕತೆಯು ಉತ್ತಮ ಹಂತದಲ್ಲಿಲ್ಲ’ ಎಂದ ಕೇಜ್ರಿವಾಲ್‌, ‘ದೇಶದ ಆರ್ಥಿಕತೆಯನ್ನು ಸರಿಯಾದ ಹಾದಿಗೆ ತರಲು ಇನ್ನಿತರ ಪ್ರಯತ್ನಗಳೊಂದಿಗೆ ದೇವಿ, ದೇವರ ಆಶೀರ್ವಾದವೂ ಅಗತ್ಯವಿದೆ. ಹೀಗಾಗಿ ನಾನು ಪ್ರಧಾನಿ ನರೇಂದ್ರ ಮೋದಿಯವರಿಗೆ ಹಾಗೂ ಕೇಂದ್ರ ಸರ್ಕಾರಕ್ಕೆ ಮಹಾತ್ಮಾ ಗಾಂಧಿಯವರ ಚಿತ್ರವಿರುವ ಕರೆನ್ಸಿ ನೋಟುಗಳ ಇನ್ನೊಂದು ಬದಿಯಲ್ಲಿ ಗಣೇಶ ಹಾಗೂ ಲಕ್ಷ್ಮೇ ಚಿತ್ರಗಳನ್ನು ಮುದ್ರಿಸುವಂತೆ ಕೇಳಿಕೊಳ್ಳುತ್ತೇನೆ’ ಎಂದು ಹೇಳಿದ್ದಾರೆ.