Asianet Suvarna News Asianet Suvarna News

ಪೌರತ್ವ ಕಾಯ್ದೆ ಹಿಂದೂ-ಮುಸ್ಲಿಂ ಇಬ್ಬರ ಮೇಲೂ ಪರಿಣಾಮ: ಕೇಜ್ರಿ!

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್| ‘ಕಾಯ್ದೆ ಮುಸ್ಲಿಂ ಹಾಗೂ ಹಿಂದೂ ಎರಡೂ ಸಮುದಾಯದ ಮೇಲೆ ದುಷ್ಪರಿಣಾಮ ಬೀರಲಿದೆ’| ಅನಗತ್ಯವಾಗಿ ಜಾರಿಗೆ ಬಂದಿರುವ ಕಾಯ್ದೆಯನ್ನು ತಿರಸ್ಕರಿಸುವಂತೆ ಜನತೆಗೆ ಕರೆ| ಪಾಕಿಸ್ತಾನದಿಂದ ಬರುವ ಎರಡು ಕೋಟಿ ಹಿಂದೂಗಳಿಗೆ ಎಲ್ಲಿ ಜಾಗ ನೀಡುತ್ತಾರೆ ಎಂದು ಪ್ರಶ್ನಿಸಿದ ಕೇಜ್ರಿ| ಕೇಂದ್ರ ಸರ್ಕಾರ ಮೊದಲು ನಮ್ಮ ಮಕ್ಕಳಿಗೆ ಉದ್ಯೋಗ ಕೊಡಲಿ ಎಂದ ದೆಹಲಿ ಸಿಎಂ| 

Arvind Kejriwal Says CAA Will Impact Both Hindus and Muslims
Author
Bengaluru, First Published Jan 3, 2020, 8:08 PM IST

ನವದೆಹಲಿ(ಜ.03): ಪೌರತ್ವ ತಿದ್ದುಪಡಿ ಕಾಯ್ದೆ ಮುಸ್ಲಿಂ ಹಾಗೂ ಹಿಂದೂ ಎರಡೂ ಸಮುದಾಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅಭಿಪ್ರಾಯಪಟ್ಟಿದ್ದಾರೆ.

ಅಲ್ಲದೇ ಅನಗತ್ಯವಾಗಿ ಜಾರಿಗೆ ಬಂದಿರುವ ಈ ಕಾಯ್ದೆಯನ್ನು ಜನತೆ ತಿರಸ್ಕರಿಸುವಂತೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕರೆ ನೀಡಿದ್ದಾರೆ.

ರಾಹುಲ್‌ಗೆ ಇಟಲಿ ಭಾಷೆಯಲ್ಲಿ ಸಿಎಎ ತರ್ಜುಮೆ ಮಾಡುವೆ: ಅಮಿತ್ ಶಾ!

ನಗರದ ಟೌನ್ ಹಾಲ್ ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಕೇಜ್ರಿವಾಲ್, ಪಾಕಿಸ್ತಾನದಿಂದ ಬರುವ ಎರಡು ಕೋಟಿ ಹಿಂದೂಗಳಿಗೆ ಎಲ್ಲಿ ಜಾಗ ನೀಡುವುದು ಎಂದು ಪ್ರಶ್ನಿಸಿದರು.

ಕೇಂದ್ರ ಸರ್ಕಾರ ಮೊದಲು ಇಲ್ಲಿನ ನಾಗರಿಕರ ಬಗ್ಗೆ ಕಾಳಜಿ ವಹಿಸಬೇಕು. ಬಳಿಕವಷ್ಟೇ ಇತರ ರಾಷ್ಟ್ರಗಳ ಜನರ ಬಗ್ಗೆ ಗಮನ ಹರಿಸಬೇಕು ಎಂದು ಕೇಜ್ರಿವಾಲ್ ಆಗ್ರಹಿಸಿದರು.

ಪೌರತ್ವ ಕಾಯ್ದೆ ಬೆಂಬಲಿಸುತ್ತೀರಾ?: ಈ ನಂಬರ್‌ಗೆ ಮಿಸ್ಡ್ ಕಾಲ್ ಕೊಡಿ ಎಂದ ಬಿಜೆಪಿ!

ಕೇಂದ್ರ ಸರ್ಕಾರ ಮೊದಲು ನಮ್ಮ ಮಕ್ಕಳಿಗೆ ಉದ್ಯೋಗ ಕೊಡಲಿ, ನಂತರವಷ್ಟೇ ಇತರ ದೇಶಗಳ ಜನರ ಯೋಗಕ್ಷೇಮ ವಿಚಾರಿಸಲಿ ಎಂದು ಕೇಜ್ರಿವಾಲ್ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

Follow Us:
Download App:
  • android
  • ios