ಜೋಧಪುರ್(ಜ.03): ಎಷ್ಟೇ ವಿರೋಧ ಇದ್ದರೂ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೊಳಿಸುವ ನಿರ್ಧಾರದಿಂದ ಸರ್ಕಾರ ಒಂದಿಂಚೂ ಹಿಂದೆ ಸರಿಯುವುದಿಲ್ಲ ಎಂದು ಕೇಂದ್ರ ಗೃಹ ಸಚಿವ, ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಸ್ಪಷ್ಟಪಡಿಸಿದ್ದಾರೆ.

ರಾಜಸ್ಥಾನದ ಜೋಧಪುರ್’ದಲ್ಲಿ ಪೌರತ್ವ ಕಾಯ್ದೆ ಕುರಿತು ಜಾಗೃತಿ ಮೂಡಿಸುವ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅಮಿತ್ ಶಾ, ಕಾಂಗ್ರೆಸ್‌ ಸೇರಿದಂತೆ ಎಲ್ಲಾ ವಿಪಕ್ಷಗಳೂ ಕಾಯ್ದೆ ಬಗ್ಗೆ ಅಪಪ್ರಚಾರ ಮಾಡುತ್ತಿವೆ ಎಂದು ಆರೋಪಿಸಿದರು.

ಪೌರತ್ವ ಕಾಯ್ದೆ ದೇಶದ ಯಾವೊಬ್ಬ ನಾಗರಿಕರ ಪೌರತ್ವವನ್ನೂ ಕಸಿಯುವುದಿಲ್ಲ. ಬದಲಾಗಿ ಪೌರತ್ವ ನೀಡುತ್ತದೆ ಎಂದು ಅಮಿತ್ ಶಾ ಭರವಸೆ ನೀಡಿದರು.

ನೀವು ಪಾಕಿಸ್ತಾನದ ಪ್ರಧಾನಿ ಏನ್ರೀ?: ಮೋದಿಗೆ ದೀದಿ ಪ್ರಶ್ನೆ!

ಇದೇ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದ ಗೃಹ ಸಚಿವ, ರಾಹುಲ್ ಅವರಿಗೆ ಕಾಯ್ದೆ ಅರ್ಥವಾಗಿರದಿದ್ದರೆ ಅವರಿಗೆ ಇಟಲಿ ಭಾಷೆಯಲ್ಲಿ ತರ್ಜುಮೆ ಮಾಡಿ ತಿಳಿಸುವೆ ಎಂದು ಲೇವಡಿ ಮಾಡಿದರು.

ಸಿಎಎ ಕುರಿತು ಕಾಂಗ್ರೆಸ್ ಜನರಲ್ಲಿ ಅನಗತ್ಯ ಭಯ ಸೃಷ್ಟಿಸುತ್ತಿದೆ. ಆದರೆ ಜನತೆ ಕಾಂಗ್ರೆಸ್’ನ ಎಲ್ಲಾ ಹುನ್ನಾರಗಳನ್ನು ತಿರಸ್ಕರಿಸಲಿದ್ದಾರೆ ಎಂಭ ಭರವಸೆ ಇದೆ ಎಂದು ಅಮಿತ್ ಶಾ ಭರವಸೆ ವ್ಯಕ್ತಪಡಿಸಿದರು.

ಪೌರತ್ವ ಕಾಯ್ದೆ ಬೆಂಬಲಿಸುತ್ತೀರಾ?: ಈ ನಂಬರ್‌ಗೆ ಮಿಸ್ಡ್ ಕಾಲ್ ಕೊಡಿ ಎಂದ ಬಿಜೆಪಿ!