Asianet Suvarna News Asianet Suvarna News

ಉಗ್ರರ ಬೆಂಬಲದೊಂದಿಗೆ ಕಾಂಗ್ರೆಸ್‌ ಸ್ಪರ್ಧೆ: ಬಿಜೆಪಿ ಆರೋಪ

ಮುಂಬರುವ ಲೋಕಸಭಾ ಚುನಾವಣೆಯನ್ನು ಕಾಂಗ್ರೆಸ್‌ ಭಯೋತ್ಪಾದಕರ ಬೆಂಬಲದೊಂದಿಗೆ ಎದುರಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಕೇರಳದಲ್ಲಿ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಮೈತ್ರಿಕೂಟಕ್ಕೆ ನಿಷೇಧಿತ ಪಿಎಫ್‌ಐ ಸಂಘಟನೆಯ ರಾಜಕೀಯ ಮುಖವಾಣಿಯಾದ ಎಸ್‌ಡಿಐಪಿ ಬೆಂಬಲ ಘೋಷಣೆ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಈ ಆರೋಪ ಮಾಡಿದ್ದಾರೆ.
 

Congress contest with the support of terrorists BJP accused gvd
Author
First Published Apr 4, 2024, 5:23 AM IST

ನವದೆಹಲಿ (ಏ.04): ಮುಂಬರುವ ಲೋಕಸಭಾ ಚುನಾವಣೆಯನ್ನು ಕಾಂಗ್ರೆಸ್‌ ಭಯೋತ್ಪಾದಕರ ಬೆಂಬಲದೊಂದಿಗೆ ಎದುರಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಕೇರಳದಲ್ಲಿ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಮೈತ್ರಿಕೂಟಕ್ಕೆ ನಿಷೇಧಿತ ಪಿಎಫ್‌ಐ ಸಂಘಟನೆಯ ರಾಜಕೀಯ ಮುಖವಾಣಿಯಾದ ಎಸ್‌ಡಿಐಪಿ ಬೆಂಬಲ ಘೋಷಣೆ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಈ ಆರೋಪ ಮಾಡಿದ್ದಾರೆ.

ಬುಧವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ವಕ್ತಾರ ಪ್ರೇಮ್‌ ಶುಕ್ಲಾ, ‘ಒಂದೆಡೆ ರಾಹುಲ್‌ ಗಾಂಧಿ ಮೊಹಬ್ಬತ್‌ ಕೀ ದುಕಾನ್‌ (ಪ್ರೀತಿಯ ಅಂಗಡಿ) ಆರಂಭಿಸುವ ಮಾತುಗಳನ್ನು ಆಡುತ್ತಾರೆ. ಮತ್ತೊಂದೆಡೆ ಮೊಹಬ್ಬತ್‌ ಕಾ ಪೈಗಾಮ್‌ (ಪ್ರೀತಿಯ ಸಂದೇಶ) ಅನ್ನು ಉಗ್ರರು ಮತ್ತು ಪ್ರತ್ಯೇಕತಾವಾದಿಗಳಿಗೆ ರವಾನಿಸುವ ಕೆಲಸ ಮಾಡುತ್ತಾರೆ. ಒಂದೆಡೆ ರಾಹುಲ್‌ ಗಾಂಧಿ ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ನಿಂತು ದೇಶಕ್ಕೆ ಬೆಂಕಿ ಹಚ್ಚುವ ಮಾತುಗಳನ್ನು ಆಡುತ್ತಾರೆ, ಮತ್ತೊಂದೆಡೆ ಎಸ್‌ಡಿಪಿಐನಿಂದ ರಾಜಕೀಯ ಬೆಂಬಲ ಪಡೆಯುತ್ತಾರೆ. ಆ ಸಂಘಟನೆ ಪಿಎಫ್‌ಐ ಮತ್ತು ಭಯೋತ್ಪಾದನಾ ಕೃತ್ಯಗಳನ್ನು ಬೆಂಬಲಿಸುವಂಥದ್ದು’ ಎಂದು ಟೀಕಿಸಿದ್ದಾರೆ.

Lok Sabha Election 2024: ರಾಹುಲ್ ಗಾಂಧಿ ವಿರುದ್ಧ ಮೋದಿ ‘ಬೆಂಕಿ’ ದಾಳಿ!

ಕರ್ನಾಟಕಕ್ಕೆ ಮುರಳಿ ವಿಶೇಷ ವೀಕ್ಷಕ ನೇಮಕ: ಲೋಕಸಭಾ ಚುನಾವಣೆ ಹಿನ್ನೆಲೆ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಿಗೆ ವಿಶೇಷ ವೀಕ್ಷಕರನ್ನು ಚುನಾವಣೆ ಆಯೋಗ ಮಂಗಳವಾರ ನೇಮಿಸಿದೆ. ಚುನಾವಣೆ ಪ್ರಕ್ರಿಯೆಯಲ್ಲಿ ನ್ಯಾಯಸಮ್ಮತದ ಚುನಾವಣೆ ನಡೆಸಲು ಕಟ್ಟುನಿಟ್ಟಿನ ಕ್ರಮ ಮತ್ತು ಮೇಲ್ವಿಚಾರಣೆಯನ್ನು ನೋಡಿಕೊಳ್ಳಲು ನಿವೃತ್ತ ಆಡಳಿತಾಧಿಕಾರಿಗಳನ್ನು ರಾಜ್ಯಗಳ ಚುನಾವಣಾ ವೀಕ್ಷಕರನ್ನಾಗಿ ಆಯೋಗ ನೇಮಿಸಿದೆ. ಇದರಲ್ಲಿ ಕರ್ನಾಟಕ ರಾಜ್ಯಕ್ಕೆ ಬಿ. ಮುರಳಿ ಕುಮಾರ್‌ ಅವರನ್ನು ಸೇರಿದಂತೆ ಉತ್ತರ ಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ, ಬಿಹಾರ, ಮಹಾರಾಷ್ಟ್ರ ರಾಜ್ಯಗಳಿಗೆ ವಿಶೇಷ ವೀಕ್ಷಕರನ್ನು ಚು. ಆಯೋಗ ನೇಮಿಸಲಾಗಿದೆ.

Follow Us:
Download App:
  • android
  • ios