ಇನ್ನೊಂದು ತಿಂಗಳಲ್ಲಿ ಬಿಜೆಪಿ ಸೇರದಿದ್ದಲ್ಲಿ ನಿಮ್ಮನ್ನೂ ಸೇರಿದಂತೆ ಆಮ್ ಆದ್ಮಿ ಪಕ್ಷದ ನಾಲ್ವರು ನಾಯಕರು ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೆ ಒಳಗಾಗಲು ಸಿದ ರಾಗಬೇಕು ಎಂದು ಸ್ವತಃ ನನ್ನ ಆಪ್ತರ ಮೂಲಕ ಬಿಜೆಪಿ ಎಚ್ಚರಿಕೆ ಸಂದೇಶ ರವಾನಿಸಿದೆ ಎಂದು ದೆಹಲಿ ಸಚಿವೆ ಆತಿಷಿ ಗಂಭೀರ ಆರೋಪ ಮಾಡಿದ್ದಾರೆ.  

ನವದೆಹಲಿ (ಏ.03): ಇನ್ನೊಂದು ತಿಂಗಳಲ್ಲಿ ಬಿಜೆಪಿ ಸೇರದಿದ್ದಲ್ಲಿ ನಿಮ್ಮನ್ನೂ ಸೇರಿದಂತೆ ಆಮ್ ಆದ್ಮಿ ಪಕ್ಷದ ನಾಲ್ವರು ನಾಯಕರು ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೆ ಒಳಗಾಗಲು ಸಿದ ರಾಗಬೇಕು ಎಂದು ಸ್ವತಃ ನನ್ನ ಆಪ್ತರ ಮೂಲಕ ಬಿಜೆಪಿ ಎಚ್ಚರಿಕೆ ಸಂದೇಶ ರವಾನಿಸಿದೆ ಎಂದು ದೆಹಲಿ ಸಚಿವೆ ಆತಿಷಿ ಗಂಭೀರ ಆರೋಪ ಮಾಡಿದ್ದಾರೆ. ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಿಮ್ಮ ರಾಜಕೀಯ ಜೀವನ ಉಳಿಸಿಕೊಳ್ಳಬೇಕಿದ್ದರೆ ನೀವು ಬಿಜೆಪಿ ಸೇರಬೇಕು. 

ಇಲ್ಲದೇ ಹೋದಲ್ಲಿ ಮುಂದಿನ ಒಂದು ತಿಂಗಳ ಒಳಗಾಗಿ ಸಚಿವ ಸೌರವ್ ಭಾರಧ್ವಾಜ್, ಸಂಸದ ರಾಘವ್ ಛಡ್ಡಾ, ಶಾಸಕ ದುರ್ಗೇಶ್ ಪಾಠಕ್ ಮತ್ತು ಸ್ವತಃ ನೀವು ಕೂಡಾ ಬಂಧನಕಕ್ಕೊಳಗಾಗಲಿದ್ದೀರಿ ಎಂದು ಬಿಜೆಪಿಗರು ಸಂದೇಶ ರವಾನಿಸಿದ್ದಾರೆ ಎಂದು ಹೇಳಿದರು. ಈ ನಡುವೆ ಆತಿಷಿ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ದೆಹಲಿ ಬಿಜೆಪಿ ಅಧ್ಯಕ್ಷ ವಿರೇಂದ್ರ ಸಚ್ಯದೇವ್, ಇಂಥ ಆರೋಪದ ಕುರಿತು ಆತಿಷಿ ಸಾಕ್ಷ್ಯ ನೀಡಬೇಕು ಇಲ್ಲದೇ ಕಾನೂನು ಕ್ರಮ ಎದುರಿಸಲು ಸಿದ್ಧರಾಗಿರಬೇಕು ಎಂದು ಎಚ್ಚರಿಸಿದ್ದಾರೆ.

ಕೇಜ್ರಿವಾಲ್‌ ತಿಹಾರ್‌ ಜೈಲಿಗೆ: ಮದ್ಯ ಲೈಸೆನ್ಸ್‌ ಹಗರಣದಲ್ಲಿ ಬಂಧಿತರಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಏ.15ರವರೆಗೂ ನ್ಯಾಯಾಂಗ ವಶಕ್ಕೆ ಒಪ್ಪಿಸಿ ದೆಹಲಿ ನ್ಯಾಯಾಲಯ ಸೋಮವಾರ ಆದೇಶಿಸಿದೆ. ಅದರ ಬೆನ್ನಲ್ಲೇ ಕೇಜ್ರಿವಾಲ್‌ ಅವರನ್ನು ತಿಹಾರ್‌ ಜೈಲಿಗೆ ರವಾನಿಸಲಾಗಿದೆ. ಅವರನ್ನು 2ನೇ ನಂಬರ್‌ ಜೈಲಿನಲ್ಲಿಡಲಾಗಿದ್ದು, ಮುಂದಿನ 24 ಗಂಟೆಗಳ ಕಾಲ ಅವರ ಆರೋಗ್ಯದ ಮೇಲೆ ನಿಗಾ ಇಡಲಾಗುವುದು ಎಂದು ಜೈಲಧಿಕಾರಿಗಳು ತಿಳಿಸಿದ್ದಾರೆ.

ಆರ್ಥಿಕ ಅಶಿಸ್ತೇ ಈ ಪರಿಸ್ಥಿತಿಗೆ ಕಾರಣ: ಕೇರಳಕ್ಕೆ ಸುಪ್ರೀಂಕೋರ್ಟ್‌ ತಪರಾಕಿ

ತನ್ನ ವಶದ ಅವಧಿ ಮುಗಿದ ಹಿನ್ನೆಲೆಯಲ್ಲಿ ಕೇಜ್ರಿವಾಲ್‌ ಅವರನ್ನು ಇ.ಡಿ ಅಧಿಕಾರಿಗಳು ಸೋಮವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಈ ವೇಳೆ ವಿಚಾರಣೆಗೆ ಕೇಜ್ರಿವಾಲ್‌ ಸಹಕರಿಸುತ್ತಿಲ್ಲ. ಹೀಗಾಗಿ ಅವರನ್ನು ಮತ್ತೆ 15 ದಿನಗಳ ಕಾಲಕ್ಕೆ ವಶಕ್ಕೆ ಒಪ್ಪಿಸಬೇಕು ಎಂದು ಮನವಿ ಮಾಡಿದರು. ಅದನ್ನು ನ್ಯಾಯಾಲಯ ಪುರಸ್ಕರಿಸಿತು. ಇದೇ ವೇಳೆ ನ್ಯಾಯಾಲಯಕ್ಕೆ ಹಾಜರುಪಡಿಸುವ ವೇಳೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಕೇಜ್ರಿವಾಲ್‌, ಮೋದಿ ಏನು ಮಾಡುತ್ತಿದ್ದಾರೋ ಅದು ದೇಶಕ್ಕೆ ಒಳ್ಳೆಯದಲ್ಲ ಎಂದರು.