ನವದೆಹಲಿ(ಜ.30): ದೆಹಲಿ ಚುನಾವಣೆಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿಯನ್ನು ಸೋಲಿಸುವಂತೆ ಕರೆ ನೀಡಿದ್ದ ಪಾಕಿಸ್ತಾನ ಸಚಿವ ಚೌಧರಿ ಫವಾದ್ ಹುಸೇನ್ ಅವರಿಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ತಿರುಗೇಟು ನೀಡಿದ್ದಾರೆ.

ದೆಹಲಿ ಚುನಾವಣೆ ದೇಶದ ಆಂತರಿಕ ರಾಜಕೀಯ ವಿಚಾರವಾಗಿದ್ದು, ಮೋದಿ ನನಗೂ ಸೇರಿದಂತೆ ಇಡೀ ದೇಶಕ್ಕೆ ಪ್ರಧಾನಿ ಎಂದು ಅರವಿಂದ್ ಕೇಜ್ರಿವಾಲ್ ಗುಡುಗಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ದೆಹಲಿ ಸಿಎಂ, ಪಾಕ್ ಸಚಿವ ಚೌಧರಿ ಫವಾದ್ ಹುಸೇನ್ ತಮ್ಮ ದೇಶದ ಬಗ್ಗೆ ತಲೆಕೆಡಿಸಿಕೊಳ್ಳಲಿ, ದೆಹಲಿ ಚುನಾವಣೆ ನಮ್ಮ ಆಂತರಿಕ ರಾಜಕೀಯ  ವಿಚಾರ ಎಂದು ಹೇಳಿದ್ದಾರೆ.

ಮೋದಿ ಭಾರತದ ಪ್ರಧಾನಿಯಾಗಿದ್ದು ಅವರು ನನಗೂ ಪ್ರಧಾನಿ, ನಮ್ಮ  ಪ್ರಧಾನಿ ಕುರಿತು ಹೊರಗಿನವರು ಕೀಳಾಗಿ ಮಾತನಾಡಿದರೆ ಅದನ್ನು ತಾವು ಸಹಿಸುವುದಿಲ್ಲ ಎಂದು ಕೇಜ್ರಿವಾಲ್ ಸ್ಪಷ್ಟಪಡಿಸಿದ್ದಾರೆ.

ದೆಹಲಿ ಚುನಾವಣಾ ಪೂರ್ವ ಸಮೀಕ್ಷೆ: ಕೈ, ಕಮಲಕ್ಕೆ ನಿರಾಸೆ, ಮತ್ತೆ ಆಪ್ ಕಮಾಲ್!

ಚುನಾವಣೆ ಸಂದರ್ಭದಲ್ಲಿ ರಾಜಕೀಯ ಆರೋಪ-ಪ್ರತ್ಯಾರೋಪದ ನಡುವೆಯೂ ಕೇಜ್ರಿವಾಲ್ ಪಾಕ್ ಸಚಿವನಿಗೆ ತಪರಾಕಿ ನೀಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.