ದೇಶದ ಪ್ರಧಾನಿಯ ಭದ್ರತೆ ನೋಡಿಕೊಳ್ಳುವ ಎಸ್‌ಪಿಜಿ ಮುಖ್ಯಸ್ಥ ಅರುಣ್ ಕುಮಾರ್ ನಿಧನ
ವಿಶೇಷ ರಕ್ಷಣಾ ಗುಂಪಿನ (ಎಸ್‌ಪಿಜಿ) ಮುಖ್ಯಸ್ಥ ಅರುಣ್ ಕುಮಾರ್ ಸಿನ್ಹಾ ಅವರು ಬುಧವಾರ ಗುರುಗ್ರಾಮ್‌ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ನವದೆಹಲಿ (ಸೆ.6): ವಿಶೇಷ ರಕ್ಷಣಾ ಗುಂಪಿನ (ಎಸ್‌ಪಿಜಿ) ನಿರ್ದೇಶಕ ಅರುಣ್ ಕುಮಾರ್ ಸಿನ್ಹಾ ಅವರು ಹರಿಯಾಣದ ಗುರುಗ್ರಾಮ್‌ನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ನಿಧನರಾದರು. ಅವರು 2016 ರಿಂದ ಎಸ್‌ಪಿಜಿ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದರು ಮತ್ತು ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ಪ್ರಧಾನಿಗಳ ಭದ್ರತೆಯ ಉಸ್ತುವಾರಿ ವಹಿಸಿದ್ದರು. ಇತ್ತೀಚೆಗಷ್ಟೇ ಅವರಿಗೆ ಸೇವಾ ವಿಸ್ತರಣೆಯನ್ನೂ ನೀಡಲಾಗಿತ್ತು. 61 ವರ್ಷದ ಅಧಿಕಾರಿ ಕಳೆದ ಕೆಲವು ತಿಂಗಳುಗಳಲ್ಲಿ ಯಕೃತ್ತು ಸಂಬಂಧಿತ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದರು. ಈ ವರ್ಷದ ಮೇ 30 ರಂದು ಎಸ್‌ಪಿಜಿ ಮುಖ್ಯಸ್ಥರಾಗಿ ಸಿನ್ಹಾ ನಿವೃತ್ತರಾಗುವ ಒಂದು ದಿನದ ಮೊದಲು, ಪಿಎಂ ಮೋದಿ ನೇತೃತ್ವದ ಕ್ಯಾಬಿನೆಟ್ ನೇಮಕಾತಿ ಸಮಿತಿ (ಎಸಿಸಿ) ಅವರನ್ನು ಇನ್ನೂ ಒಂದು ವರ್ಷಕ್ಕೆ ಮರು ನೇಮಕ ಮಾಡುವ ಪ್ರಸ್ತಾವನೆಯನ್ನು ಅನುಮೋದಿಸಿತ್ತು. ಜಾರ್ಖಂಡ್ ಮೂಲದ ಅವರು 1987 ರ ಕೇರಳ ಕೇಡರ್ ಐಪಿಎಸ್ ಅಧಿಕಾರಿಯಾಗಿದ್ದರು ಮತ್ತು ಹೆಚ್ಚುವರಿ ಮಹಾನಿರ್ದೇಶಕರಾಗಿಯೂ (ವಿಶೇಷ ಸೇವೆಗಳು ಮತ್ತು ಸಂಚಾರ) ಸೇವೆ ಸಲ್ಲಿಸಿದ್ದರು. ಸಿನ್ಹಾ ಅವರು ತಿರುವನಂತಪುರಂ ನಗರ ಪೊಲೀಸ್ ಕಮಿಷನರ್, ದಕ್ಷಿಣ ವಲಯ ಐಜಿ, ಕೊಚ್ಚಿ ಕಮಿಷನರ್, ವಯನಾಡ್ ಮತ್ತು ಮಲಪ್ಪುರಂ ಎಸ್ಪಿ, ಗುಪ್ತಚರ ಡಿಐಜಿ, ತಿರುವನಂತಪುರಂ ರೇಂಜ್ ಡಿಐಜಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.
ಈ ವರ್ಷದ ಆರಂಭದಲ್ಲಿ, ಸಿನ್ಹಾ ಅವರ ನಿವೃತ್ತಿಗೆ ಕೆಲವೇ ದಿನಗಳ ಮೊದಲು ಗುತ್ತಿಗೆ ಆಧಾರದ ಮೇಲೆ ಸಿನ್ಹಾ ಅವರನ್ನು ಎಸ್‌ಪಿಜಿ ಮುಖ್ಯಸ್ಥರಾಗಿ ಮರು ನೇಮಕ ಮಾಡಿಕೊಳ್ಳಲು ಕೇಂದ್ರ ಸರ್ಕಾರ ಅನುಮೋದನೆ ನೀಡಿತ್ತು. ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ, ಅವರು ರಾಜ್ಯದಲ್ಲಿ ಗಡಿ ಭದ್ರತಾ ಪಡೆ (ಬಿಎಸ್ಎಫ್) ನಲ್ಲಿ ಸೇವೆ ಸಲ್ಲಿಸಿದರು.
ಸಿನ್ಹಾ ಅವರು ಮಾರ್ಚ್ 2016 ರಿಂದ ಎಸ್‌ಪಿಜಿ ಮುಖ್ಯಸ್ಥರಾಗಿದ್ದಾರೆ. ಎಸ್‌ಪಿಜಿಯನ್ನು 1988 ರಲ್ಲಿ ಭಾರತದ ಪ್ರಧಾನ ಮಂತ್ರಿ ಮತ್ತು ಕೆಲವು ಸಂದರ್ಭಗಳಲ್ಲಿ ಅವರ ಕುಟುಂಬವನ್ನು ರಕ್ಷಿಸುವ ಉದ್ದೇಶದಿಂದ ಸ್ಥಾಪಿಸಲಾಯಿತು.
ಸಿನ್ಹಾ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ರಾಜ್ಯ ಪೊಲೀಸ್ ಇಲಾಖೆಯಲ್ಲಿ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದ ದಕ್ಷ ಅಧಿಕಾರಿ ಎಂದು ಹೇಳಿದ್ದಾರೆ.
ರೋಡ್‌ಶೋ ವೇಳೆ ಮೋದಿಯತ್ತ ಎಸೆದ ಮೊಬೈಲ್ ತಡೆದ ಭದ್ರತಾ ಸಿಬ್ಬಂದಿಗೆ ವ್ಯಾಪಕ ಮೆಚ್ಚುಗೆ!
ಜಾರ್ಖಂಡ್‌ನ ಹಜಾರಿಬಾಗ್‌ನಿಂದ ಬಂದ ಸಿನ್ಹಾ ಅವರು 1989 ರಲ್ಲಿ ಕೇರಳದ ವಯನಾಡಿನ ಮಾನಂತವಾಡಿಯಲ್ಲಿ ಸಹಾಯಕ ಪೊಲೀಸ್ ಸೂಪರಿಂಟೆಂಡೆಂಟ್ ಆಗಿ ತಮ್ಮ ಪೊಲೀಸ್ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ ಅವರು ವಿವಿಧ ಜಿಲ್ಲೆಗಳಲ್ಲಿ ಪೊಲೀಸ್ ಅಧೀಕ್ಷಕರಾಗಿ ಕೆಲಸ ಮಾಡಿದರು. ಅವರು 1997 ರಿಂದ ಸುಮಾರು ನಾಲ್ಕು ವರ್ಷಗಳ ಕಾಲ ತಿರುವನಂತಪುರಂ ನಗರದ ಕಮಿಷನರ್ ಆಗಿ ಸೇವೆ ಸಲ್ಲಿಸಿದರು, ಈ ಅವಧಿಯಲ್ಲಿ ಸಿನ್ಹಾ ಕಾನೂನು ಮತ್ತು ಸುವ್ಯವಸ್ಥೆಯಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು. ಸಿನ್ಹಾ ಅವರು ಐಜಿ ಇಂಟೆಲಿಜೆನ್ಸ್ ಆಗಿ ಕೆಲಸ ಮಾಡುವುದರ ಹೊರತಾಗಿ ರಾಜ್ಯದ ದಕ್ಷಿಣ ಮತ್ತು ಮಧ್ಯ ವಲಯಗಳಲ್ಲಿ ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ ಮತ್ತು ಇನ್ಸ್‌ಪೆಕ್ಟರ್ ಜನರಲ್ (IG) ಆಗಿ ಸೇವೆ ಸಲ್ಲಿಸಿದರು.
ದೇಶದ ಚೌಕಿದಾರನ ರಕ್ಷಣೆಗೆ ರಾಜ್ಯದ ರಣಬೇಟೆಗಾರ!