ಗುಜರಾತ್‌ನಲ್ಲಿ ರೋಡ್‌ ಶೋ ವೇಳೆ ಅಭಿಮಾನಿಯೊಬ್ಬರು ತಂದಿದ್ದ ಪೇಂಟಿಂಗ್‌ಗೆ ಪ್ರಧಾನಿ ಮೋದಿ ಸಹಿ ಹಾಕಿದ್ದಾರೆ. ತಾಯಿ ಹೀರಾಬೆನ್‌ ಮೋದಿ ಇರುವ ಚಿತ್ರಕ್ಕೆ ಸಹಿ ಹಾಕಿದ್ದನ್ನು ಕಂಡು ಅಭಿಮಾನಿ ಭಾವುಕರಾದರು.

ನವದೆಹಲಿ (ಮಾ.8): ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ತಮ್ಮ ತವರು ರಾಜ್ಯ ಗುಜರಾತ್‌ಗೆ ತೆರಳಿದ್ದರು. ಈ ವೇಳೆ ಅವರಿಗೆ ಸೂರತ್‌ನಲ್ಲಿ ಅದ್ಭುತ ರೋಡ್‌ ಶೋ ಕೂಡ ಏರ್ಪಡಿಸಲಾಗಿತ್ತು. ಸೂರತ್‌ನ ಬೀದಿಗಳಲ್ಲಿ ಸಾವಿರಾರು ಮಂದಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಕಾದಿದ್ದರು. ಬಿಜೆಪಿ ಧ್ವಜವನ್ನು ಹಾರಿಸಿ, ಘೋಷಣೆಗಳನ್ನು ಕೂಗಿ, ಹೂವುಗಳನ್ನು ತೂರಿ, ಪ್ರಧಾನಿ ನರೇಂದ್ರ ಮೋದಿ ಮೆರವಣಿಗೆಯನ್ನು ಸ್ವಾಗತಿಸಿದರು. ಈ ಕಾರ್ಯಕ್ರಮದ ಸಂದರ್ಭದಲ್ಲಿ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಪ್ರಧಾನಮಂತ್ರಿಯವರ ಜೊತೆಗಿದ್ದರು.

ಇನ್ನು ಈ ಕಾರ್ಯಕ್ರಮದ ಭಾವುಕ ಕ್ಷಣವೊಂದು ಕ್ಯಾಮೆರಾದಲ್ಲಿ ದಾಖಲಾಗಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಪ್ರಧಾನಿ ವೇದಿಕೆಗೆ ತೆರೆದ ಜೀಪ್‌ನಲ್ಲಿ ಆಗಮಿಸುತ್ತಿದ್ದ ವೇಳೆ ವ್ಯಕ್ತಿಯೊಬ್ಬನ ಭಾವುಕ ಪ್ರತಿಕ್ರಿಯೆಯನ್ನು ಗುರುತಿಸಿದ ಪ್ರಧಾನಿ ನರೇಂದ್ರ ಮೋದಿ, ಅವರ ಬಳಿಯಲ್ಲಿ ಕಾರ್‌ಅನ್ನು ನಿಲ್ಲಿಸಿ ಅವರು ಹಿಡಿದುಕೊಂಡಿದ್ದ ಪೇಂಟಿಂಗ್‌ಗೆ ಸಹಿ ಹಾಕಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ದಿವಂಗತ ತಾಯಿ ಹೀರಾಬೆನ್‌ ಮೋದಿ ಇರುವ ಚಿತ್ರವನ್ನು ಪೇಟಿಂಗ್‌ ಮಾಡಲಾಗಿತ್ತು. ಪ್ರಧಾನ ಮಂತ್ರಿ ತಮ್ಮನ್ನು ಗುರುತಿಸಿ, ತಾವು ತಂದಿದ್ದ ಪೇಟಿಂಗ್‌ಗೆ ಸಹಿ ಹಾಕಿದ ಬಳಿಕ, ಆ ವ್ಯಕ್ತಿಯ ಕಣ್ಣುಗಳು ಭಾವುಕವಾಗಿ ಅರಳಿದ್ದ ಕ್ಷಣವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ.

ಬಿಜೆಪಿ ಎಕ್ಸ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದೆ. "ಪ್ರಧಾನಿ ಮೋದಿ ಕೇವಲ ನಾಯಕರಲ್ಲ, ಬದಲಾಗಿ ಹಲವರಿಗೆ ಒಂದು ಭಾವನೆ. ಈ ವೀಡಿಯೊದಲ್ಲಿರುವ ಒಬ್ಬ ವ್ಯಕ್ತಿ ಪ್ರಧಾನಿಯಿಂದಲೇ ಸಹಿ ಪಡೆಯುತ್ತಿರುವಾಗ ಅವರ ಹೃದಯಸ್ಪರ್ಶಿ ಕ್ಷಣವನ್ನು ನೋಡಿ " ಎಂದು ಬರೆದುಕೊಂಡಿದೆ.

ಸೂರತ್ ಆಹಾರ ಭದ್ರತಾ ಸ್ಯಾಚುರೇಶನ್ ಅಭಿಯಾನದ ಉದ್ಘಾಟನೆಯ ಸಂದರ್ಭದಲ್ಲಿ ಈ ಭಾವನಾತ್ಮಕ ಕ್ಷಣ ದಾಖಲಾಗಿದೆ. ಅಲ್ಲಿ ಪ್ರಧಾನ ಮಂತ್ರಿಯವರು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ 2.3 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಪ್ರಯೋಜನಗಳನ್ನು ವಿತರಿಸಿದರು. ಈ ವಿಶೇಷ ಕ್ಷಣವನ್ನು ಸೆರೆಹಿಡಿದ ವೀಡಿಯೊ ಆನ್‌ಲೈನ್‌ನಲ್ಲಿ ತ್ವರಿತವಾಗಿ ವೈರಲ್‌ ಆಗಿದ್ದು, 11,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿತು.

'ಮೋದಿಯವ್ರೇ ನಿಮ್ಮ 'ಮಂಗಳಸೂತ್ರ' ಹೇಳಿಕೆ ನಿಜವಾಗಿದೆ, ಮಹಿಳೆಯರು ಆಭರಣ ಅಡಮಾನ ಇಡುತ್ತಿದ್ದಾರೆ, ಪ್ರಧಾನಿ ವಿರುದ್ಧ ಖರ್ಗೆ ಕಿಡಿ!

ಸೋಶಿಯಲ್‌ ಮೀಡಿಯಾ ಬಳಕೆದಾರರು ಕಾಮೆಂಟ್‌ ಸೆಕ್ಷನ್‌ನಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. 'ಇದೊಂದು ನಿಜಕ್ಕೂ ಸುಂದರವಾದ ಕ್ಷಣ' ಎಂದು ಒಬ್ಬ ವ್ಯಕ್ತಿ ಬರೆದಿದ್ದರೆ, ಆ ವ್ಯಕ್ತಿಯ ಭಾವನೆ ಎಷ್ಟು ಶುದ್ದವಾಗಿದೆ ಎಂದು ಮತ್ತೊಬ್ಬರು ಬರೆದಿದ್ದಾರೆ. ನಿಜಕ್ಕೂ ಈ ವಿಡಿಯೋ ಹೃದಯಸ್ಪರ್ಶಿಯಾಗಿದೆ, ಪ್ರಧಾನಿ ಮೋದಿಯಿಂದ ಅದ್ಭುತವಾದ ಗೆಸ್ಚರ್‌ ಎಂದು ಯೂಸರ್‌ಗಳು ಬರೆದಿದ್ದಾರೆ.

ಎರಡೂ ಯುನಿವರ್ಸಿಟಿಯಲ್ಲಿ ಫೇಲ್‌ ಆಗಿದ್ದ ರಾಜೀವ್ ಗಾಂಧಿ ಪ್ರಧಾನಿಯಾಗಿದ್ದರು, ಮಣಿಶಂಕರ್ ಅಯ್ಯರ್ ಹೇಳಿಕೆ ಅಚ್ಚರಿ!

Scroll to load tweet…