Anand Mahindra portrait 741 ಅಕ್ಷರಗಳಲ್ಲಿ ಅರಳಿದ ಆನಂದ್ ಮಹೀಂದ್ರ ಭಾವಚಿತ್ರ, ತಲೆಬಾಗಿದ ಉದ್ಯಮಿ!
- 741 ಪ್ರಾಚೀನ ತಮಿಳು ಅಕ್ಷರಗಳಲ್ಲಿ ಭಾವಚಿತ್ರ
- ವಿಶೇಷ ಕಲೆ ಪ್ರದರ್ಶಿಸಿದ ಕಾಂಚಿಪುರ ಚಿತ್ರಕಲಾಕಾರ
- ಕಲೆಗೆ ತಲೆಬಾಗಿ ನಮಿಸಿದ ಆನಂದ್ ಮಹೀಂದ್ರ
ನವದೆಹಲಿ(ಮೇ.23) ಉದ್ಯಮಿ ಆನಂದ್ ಮಹೀಂದ್ರ ಮತ್ತೊಂದು ಟ್ವೀಟ್ ಮೂಲಕ ದೇಶದ ಗಮನಸೆಳೆದಿದ್ದಾರೆ. ಈ ಬಾರಿ ಸ್ವತಃ ಆನಂದ್ ಮಹೀಂದ್ರ ಅವರ ಭಾವಚಿತ್ರದ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ಭಾವಚಿತ್ರವನ್ನು ತಮಿಳುನಾಡಿನ ಕಾಂಚಿಪರಂ ಚಿತ್ರಕಲಾಕಾರ ಗಣೇಶ್ ಬಿಡಿಸಿದ್ದಾರೆ. ವಿಶೇಷ ಅಂದರೆ 741 ಪ್ರಾಚೀನ ತಮಿಳು ಅಕ್ಷರಗಳಿಂದ ಆನಂದ್ ಮಹೀಂದ್ರ ಭಾವಚಿತ್ರ ರಚಿಸಲಾಗಿದೆ. ಈ ಕಲೆಗೆ ಆನಂದ್ ಮಹೀಂದ್ರ ತಲೆಬಾಗಿದ್ದಾರೆ.
ಗಣೇಶ್ ತನ್ನ ಚಿತ್ರಕಲೆ ಹಾಗೂ ಆನಂದ್ ಮಹೀಂದ್ರ ಅವರ ಭಾವಚಿತ್ರದ ವಿಡಿಯೋವನ್ನು ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ. ಬಳಿಕ ಈ ಭಾವಚಿತ್ರದ ಕುರಿತು ನಿಮ್ಮ ಅಭಿಪ್ರಾಯವೇನು ಎಂದು ಕೇಳಿದ್ದಾರೆ. ಈ ವಿಚಾರ ಆನಂದ್ ಮಹೀಂದ್ರ ಗಮನಕ್ಕೆ ಬಂದ ತಕ್ಷಣ ಗಣೇಶ್ ಚಿತ್ರಕಲೆಯನ್ನು ಶೇರ್ ಮಾಡಿಕೊಂಡಿದ್ದಾರೆ. ಇಷ್ಟೇ ಅಲ್ಲ ವಿಶೇಷ ಮನವಿಯನ್ನೂ ಮಾಡಿದ್ದಾರೆ.
ಒಂದು ರೂಪಾಯಿಗೆ ಇಡ್ಲಿ ವಿತರಿಸುತ್ತಿದ್ದ ಇಡ್ಲಿ ಅಮ್ಮನಿಗೆ ಹೊಸ ಮನೆ ಹಸ್ತಾಂತರಿಸಿದ ಆನಂದ್ ಮಹೀಂದ್ರಾ
ಈ ಭಾವಚಿತ್ರದ ಫ್ರೇಮ್ ಹಾಕಿಸಿದ ಫೋಟೋ ಬೇಕಿತ್ತು. ಇದನ್ನು ನನ್ನ ಮನೆಯಲ್ಲಿ ಇಡುತ್ತೇನೆ. ಕೋಣೆಯಲ್ಲಿ ಈ ಭಾವಚಿತ್ರವಿಡುತ್ತೇನೆ. ತಮಿಳು ಭಾಷೆಯ ಹಿರಿಮೆಯನ್ನು ಭಾವಚಿತ್ರದ ಮೂಲಕ ಬಿಡಿಸಿದ ಚಿತ್ರಕಲಾಕಾರ ಗಣೇಶ್ ಸಾಧನೆಗೆ ಸಲಾಂ ಹೇಳಿದ್ದಾರೆ.
ಆನಂದ್ ಮಹೀಂದ್ರ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿದ್ದಾರೆ. ಆನಂದ್ ಮಹೀಂದ್ರ ಅವರ ಬಹುತೇಕ ಎಲ್ಲಾ ಟ್ವೀಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಲ ಮಹತ್ವದ ವಿಚಾರಗಳನ್ನು, ತಮಾಷೆ ಸೇರಿದಂತೆ ಹಲವು ವಿಚಾರಗಳ ಕುರಿತು ಸಾಮಾಜಿಕ ಜಾಲತಾಣದಲ್ಲಿ ಆನಂದ್ ಮಹೀಂದ್ರ ಬೆಳಕು ಚೆಲ್ಲಿದ್ದಾರೆ. ಇನ್ನು ಹಲವರ ವೈರಲ್ ವಿಡಿಯೋ ನೋಡಿ ಆನಂದ್ ಮಹೀಂದ್ರ ನೆರವು ನೀಡಿದ್ದಾರೆ. ಹಲವರಿಗೆ ವಾಹನ ಗಿಫ್ಟ್ ನೀಡಿದ್ದಾರೆ. ಕೆಲವರಿಗೆ ಸೂರು ಕಟ್ಟಿಸಿಕೊಟ್ಟಿದ್ದಾರೆ. ಬದುಕಿಗೆ ಆಶ್ರಯ ನೀಡಿದ್ದಾರೆ. ಭಾರತದ ಶ್ರೇಷ್ಠ ಉದ್ಯಮಿಯಾಗಿರುವ ಆನಂದ್ ಮಹೀಂದ್ರ, ಹಲವು ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದಾರೆ.
ಎಂಥಾ ಬ್ಯಾಲೆನ್ಸ್: ತಲೆ ಮೇಲೆ ದೊಡ್ಡ ಗಂಟು: ಸೈಕಲ್‌ನಲ್ಲಿ ಪಯಣ ಕೈ ಬಿಟ್ಟು
ಧರ್ಮಸ್ಥಳ ಎತ್ತಿನ ಗಾಡಿ ಕಾರು ವೈರಲ್
ಹಳೆಯ ಅಂಬಾಸಿಡರ್ ಕಾರಿನ ಹಿಂಭಾಗವನ್ನು ಬಳಸಿ ವಿಶೇಷವಾಗಿ ವಿನ್ಯಾಸಗೊಳಿಸಿದ ಧರ್ಮಸ್ಥಳದ ಎತ್ತಿನ ಗಾಡಿ ಕಾರಿನ ವಿಡಿಯೋವೊಂದು ಭಾರೀ ವೈರಲ್ ಆಗಿದೆ. ಸದಾ ಒಂದಿಲ್ಲೊಂದು ಕುತೂಹಲಕರ ಸಂಗತಿಗಳನ್ನು ಟ್ವೀಟ್ ಮಾಡುವ ಮಹೀಂದ್ರಾ ಗ್ರೂಪ್ ಮುಖ್ಯಸ್ಥ ಆನಂದ್ ಮಹೀಂದ್ರಾ ಅವರು ಇದೀಗ ಧರ್ಮಸ್ಥಳದ ಎತ್ತಿನ ಬಂಡಿ ಕಾರಿನ ವಿಡಿಯೋವನ್ನು ಟ್ವೀಟ್ ಮಾಡಿ ಕುತೂಹಲ ಕೆರಳಿಸಿದ್ದಾರೆ.
ಎತ್ತಿನ ಗಾಡಿ ಕಾರಿನ ವಿಡಿಯೋವೊಂದನ್ನು ಟ್ವೀಟ್ ಮಾಡಿರುವ ಆನಂದ್ ಮಹೀಂದ್ರಾ, ವಿಶ್ವದ ಅತಿ ದೊಡ್ಡ ಎಲೆಕ್ಟ್ರಿಕ್ ಕಾರು ತಯಾರಿಕಾ ಸಂಸ್ಥೆ ಟೆಸ್ಲಾ ಹಾಗೂ ಎಲೋನ್ ಮಾಸ್ಕ್‌ಗೆ ಕೂಡ ಇದಕ್ಕಿಂತ ಕಡಿಮೆ ವೆಚ್ಚದಲ್ಲಿ ನವೀಕರಿಸಬಹುದಾದ ಇಂಧನದ ಕಾರನ್ನು ತಯಾರಿಸಲು ಸಾಧ್ಯವಿದೆ ಎಂದು ನನಗೆ ಅನಿಸುವುದಿಲ್ಲ ಎಂದು ಸವಾಲು ಹಾಕಿದ್ದರು. ಈ ವಿಡಿಯೋಗೆ 31 ಸಾವಿರಕ್ಕೂ ಹೆಚ್ಚು ಲೈಕ್ ಬಂದಿದ್ದು, 4800ಕ್ಕೂ ಅಧಿಕ ರೀಟ್ವೀಟ್ ಮಾಡಲಾಗಿದೆ.
ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಪರಿಕಲ್ಪನೆಯಲ್ಲಿ ಮೂಡಿದ ಬಂದ ಎತ್ತಿನ ಗಾಡಿ ಕಾರು ಇದಾಗಿದೆ. ಉಜಿರೆ ಎಸ್‌ಡಿಎಂ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಹಳೆಯ ಅಂಬಾಸಿಡರ್ ಕಾರಿನ ಹಿಂಭಾಗವನ್ನು ಬಳಸಿಕೊಂಡು ಎರಡು ಎತ್ತುಗಳ ಮೂಲಕ ಎಳೆಯಬಹುದಾದ ಎತ್ತಿನ ಗಾಡಿ ಕಾರನ್ನು ತಯಾರಿಸಿದ್ದಾರೆ.