Asianet Suvarna News Asianet Suvarna News

ಮೋದಿ, ಯೋಗಿ ಸೇರಿ AI ಕಣ್ಣಲ್ಲಿ ಮಹಿಳೆಯಾಗಿ ಕಂಡ ನಾಯಕರು, ನಕ್ಕು ನಗಿಸುವ ವಿಡಿಯೋ!

ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಕಣ್ಣಲ್ಲಿ ಮೋದಿ, ಯೋಗಿ, ರಾಹುಲ್ ಸೇರಿದಂತೆ ವಿಶ್ವದ ನಾಯಕರು ಮಹಿಳೆಯರಾಗಿದ್ದರೆ ಹೇಗೆ ಕಾಣುತ್ತಿದ್ದರು ಅನ್ನೋದನ್ನು ಚಿತ್ರಿಸಲಾಗಿದೆ.  ಹೆಣ್ಣಾಗಿ ಕಾಣುವ ಈ ನಾಯಕರಲ್ಲಿ ಯಾರು ಕ್ಯೂಟ್? 
 

Artificial Intelligence developed Female version fo World leaders photo Goes viral ckm
Author
First Published May 20, 2024, 4:19 PM IST

ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಲಗ್ಗೆ ಇಟ್ಟ ಬಳಿಕ ಫೋಟೋ ಹಾಗೂ ವಿಡಿಯೋಗಳನ್ನೂ ಊಹಿಸಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ನಾಯಕರ ಬಾಲ್ಯದ ಫೋಟೋ, ಯುವ ಕ್ರೀಡಾಪಟುಗಳು ಮುದುಕರಾಗಿ ಕಾಣುವ ಫೋಟೋಗಳು ವೈರಲ್ ಆಗಿದೆ. ಇದೀಗ ಮೋದಿ, ಯೋಗಿ, ರಾಹುಲ್ ಸೇರಿದಂತೆ ಜನಪ್ರಿಯ ನಾಯಕರು ಮಹಿಳೆಯರಾಗಿ ಹೇಗೆ ಕಾಣುತ್ತಾರೆ ಅನ್ನೋ ಎಐ ಫೋಟೋ ಹರಿದಾಡುತ್ತಿದೆ. ನಾಯಕರ ವೈರಲ್ ಫೋಟೋಗಳನ್ನೇ ಆಧಾರವಾಗಿಟ್ಟುಕೊಂಡು ಹೆಣ್ಣಾಗಿ ಚಿತ್ರಿಸಲಾಗಿದೆ.

ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಫೋಟೋದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಪ್ರಧಾನಿ ಮೋದಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಅಮೆರಿಕ ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಫ್, ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್, ಆಪ್ ಸಂಸದ ರಾಘವ್ ಚಡ್ಡಾ, ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್, ಬಾಲಿವುಡ್ ಸೆಲೆಬ್ರೆಟಿಗಳ ಜೊತೆ ಸದಾ ಕಾಣಿಸಿಕೊಳ್ಳುವ ಒರಿ, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಬ್ರಿಟನ್ ಪ್ರಧಾನಿ ರಿಷಿ ಸುನಕ್, ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ, ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮಾರ್ಕೋನ್ ಫೋಟೋಗಳನ್ನು ಎಐ ಮೂಲಕ ಚಿತ್ರಿಸಲಾಗಿದೆ.

ಪ್ರಧಾನಿ ಮೋದಿ, ಪುಟಿನ್ ಸೇರಿ ವಿಶ್ವ ನಾಯಕರ AI ಅಭಿವೃದ್ಧಿಪಡಿಸಿದ ಬಾಲ್ಯದ ಫೋಟೋ ವೈರಲ್!

ಈ ಫೋಟೋಗಳ ವಿಡಿಯೋಗೆ ಭರ್ಜರಿ ಕಮೆಂಟ್ ವ್ಯಕ್ತವಾಗಿದೆ. ಹಲವರು ರಾಹುಲ್ ಗಾಂಧಿ ಫೋಟೋ ಕ್ಯೂಟ್ ಆಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಇನ್ನು ಯೋಗಿ ಯೋಗಿನಿ ಸುಂದರವಾಗಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ. ವಿದೇಶಿ ನಾಯಕರ ಪೈಕಿ, ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಕೂಡ ಸುಂದರವಾಗಿ ಕಾಣಿಸುತ್ತಿದ್ದಾರೆ ಎಂದು ಕಮೆಂಟ್ ವ್ಯಕ್ತವಾಗಿದೆ.

ಜನಪ್ರಿಯ ನಾಯಕರು, ಸೆಲೆಬ್ರೆಟಿಗಳ ಫೋಟೋಗಳನ್ನು ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಮೂಲಕ ಇದೇ ರೀತ ಹಲವು ಬಗೆಯ ಫೋಟೋಗಳನ್ನು ಜನರೇಟ್ ಮಾಡಲಾಗಿದೆ. ಇತ್ತೀಚೆಗೆ ಜನಪ್ರಿಯ ನಾಯಕರ ಬಾಲ್ಯದ ಫೋಟೋಗಳನ್ನು ಅಭಿವೃದ್ಧಿ ಮಾಡಲಾಗಿತ್ತು. ಪ್ರಧಾನಿ ಮೋದಿ, ರಾಹುಲ್ ಗಾಂಧಿ ಸೇರಿದಂತೆ ವಿಶ್ವ ನಾಯಕರು ಬಾಲ್ಯದ ಫೋಟೋ ಹೇಗಿತ್ತು ಅನ್ನೋ ಪರಿಕಲ್ಪನೆ ಇದಾಗಿತ್ತು. ಈ ಫೋಟೋ ಕೂಡ ಭಾರಿ ವೈರಲ್ ಆಗಿತ್ತು.

 

 

ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಫೋಟೋ, ವಿಡಿಯೋಗಳ ಉಪಯೋಗಕ್ಕಿಂತ ಅಪಾಯವೇ ಹೆಚ್ಚಾಗುತ್ತಿದೆ. ಇತ್ತೀಚೆಗೆ ಡೀಫ್ ಫೇಕ್ ವಿಡಿಯೋ ಮೂಲಕ ಭಾರಿ ಕೋಲಾಹಲವೇ ಸೃಷ್ಟಿಯಾಗಿದೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ಕೆಲವರನ್ನು ಬಂಧಿಸಲಾಗಿದೆ.
28 ವರ್ಷಗಳ ಹಿಂದೆ ಇದೆ ದಿನ ನಡೆದಿತ್ತು ಅಚ್ಚರಿ, AI ಕಂಪ್ಯೂಟರ್ ಜೊತೆ ಚೆಸ್ ಚಾಂಪಿಯನ್ ಕಾದಾಟ!

Latest Videos
Follow Us:
Download App:
  • android
  • ios