28 ವರ್ಷಗಳ ಹಿಂದೆ ಇದೆ ದಿನ ನಡೆದಿತ್ತು ಅಚ್ಚರಿ, AI ಕಂಪ್ಯೂಟರ್ ಜೊತೆ ಚೆಸ್ ಚಾಂಪಿಯನ್ ಕಾದಾಟ!
ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಸದ್ಯ ಎಲ್ಲೆಡೆ ಕೇಳಿಬರುತ್ತಿದೆ. ಈ ಆಧುನಿಕ ತಂತ್ರಜ್ಞಾನ ಎಲ್ಲಾ ಕ್ಷೇತ್ರಗಳಿಗೂ ಕಾಲಿಟ್ಟಿದೆ. ಆದರೆ 28 ವರ್ಷಗಳ ಹಿಂದೆ, ಇದೆ ದಿನ ಅಂದರೆ ಫೆ.17ರಂದು ಎಐ ಕಂಪ್ಯೂಟರ್ ಹಾಗೂ ಚೆಸ್ ಚಾಂಪಿಯನ್ ಮುಖಾಮುಖಿಯಾಗಿತ್ತು. ಈ ಹೋರಾಟ ಜಗತ್ತನ್ನೇ ಚಕಿತಗೊಳಿಸಿದ್ದು ಯಾಕೆ?
ಫಿಲಡೆಲ್ಫಿಯಾ(ಫೆ.17) ಆರ್ಟಿಫೀಶಿಯಲ್ ಇಂಟಲಿಜೆನ್ಸ್, ಜಾಟ್ ಜಿಪಿಟಿ ಸೇರಿದಂತೆ ಅಧುನಿಕ ತಂತ್ರಜ್ಞಾನ ಜಗತ್ತಿನ ಆಲೋಚನೆಯನ್ನೇ ಬದಲಿಸಿದೆ. ಎಲ್ಲಾ ಕ್ಷೇತ್ರದಲ್ಲಿ ಇದೀಗ ಎಐ ಬಳಕೆಯಾಗುತ್ತಿದೆ. ಇದರ ಜೊತೆಗೆ ಅಪಾಯದ ಎಚ್ಚರಿಕೆಯನ್ನೂ ನೀಡುತ್ತಿದೆ. ಇದು ಡಿಜಿಟಲ್ ಜಗತ್ತು. ಆದರೆ 28 ವರ್ಷಗಳ ಹಿಂದೆ ಕಂಪ್ಯೂಟರ್ ಪರಿಷ್ಕರಣೆಗೊಳ್ಳುತ್ತಿದ್ದ ಕಾಲ. ಈ ಕಾಲಘಟ್ಟದಲ್ಲೇ ಎಐ ತಂತ್ರಜ್ಞಾನದ ಕಂಪ್ಯೂಟರ್ ಹಾಗೂ ಅಂದಿನ ವಿಶ್ವಚಾಂಪಿಯನ್ ಚೆಸ್ ಪಟು ಗ್ಯಾರಿ ಕ್ಯಾಸ್‌ಪರೋ ಮುಖಾಮುಖಿಯಾಗಿದ್ದರು. ಎರಡು ಚೆಸ್ ಪಂದ್ಯಗಳ ಈ ಹೋರಾಟ ಜಗತ್ತನ್ನೇ ಚಕಿತಗೊಳಿಸಿತ್ತು.
ಕಂಪ್ಯೂಟರ್ ಆವಿಷ್ಕರಣೆಯಾಗಿ ಹಲವು ಅಪ್‌ಡೇಟ್ ಕಂಡಿತ್ತು. ಮಾಡೆಲ್, ಸಾಫ್ಟ್‌ವೇರ್, ಹಾರ್ಡ್‌ವೇರ್ ಎಲ್ಲೂವ ಅಪ್‌ಡೇಟ್ ಆಗುತ್ತಲೆ ಇತ್ತು. ಹೀಗಿರುವಾಗ ಜಗತ್ತಿನ ಪ್ರತಿಷ್ಠಿತ ಸಾಫ್ಟ್‌ವೇರ್ ಸೊಲ್ಯೂಷನ್ ಐಬಿಎಂ ಸೂಪರ್ ಕಂಪ್ಯೂಟರ್ ತಯಾರಿಸಿತ್ತು. ಹಲವು ಕೋಡಿಂಗ್ ಮೂಲಕ ವಿಶೇಷ ತಾಂತ್ರಿಕ ತಜ್ಞರು, ಸಾಫ್ಟ್‌ವೇರ್ ಡೆವಲಪ್ಪರ್ಸ್ ಈ ಕಂಪ್ಯೂಟರ್ ಅಭಿವೃದ್ಧಿಪಡಿಸಿದ್ದರು. ಈ ಸೂಪರ್ ಕಂಪ್ಯೂಟರ್ಗೆ ದೀಪ್ ಬ್ಲೂ ಅನ್ನೋ ಹೆಸರಿಡಲಾಗಿತ್ತು. ಕಂಪ್ಯೂಟರ್ ಮಾನವನ ಬುದ್ಧಿಮತ್ತೆಗೆ ಸವಾಲೆಸಬಹುದೇ? ಅನ್ನೋ ಪ್ರಶ್ನೆ ಎದುರಾಗಿತ್ತು. ಹೀಗಾಗಿ ಅತೀವ ಬುದ್ದಿಮತ್ತೆ ಬಳಸುವ ಚೆಸ್ ಸ್ಪರ್ಧೆ ಆಯೋಜಿಸಿ ಡೀಪ್ ಬ್ಲೂ ಸಾಮರ್ಥ್ಯ ಪರೀಕ್ಷೆಗೆ ವೇದಿಕೆ ಸಜ್ಜಾಗಿತ್ತು.
ಚಾಟ್‌ಜಿಪಿಟಿ ನೆರವಿನಿಂದ ಡೇಟಿಂಗ್ ಆ್ಯಪ್‌ನಲ್ಲಿ ಹುಡುಗಿ ಪಟಾಯಿಸಿ ಮದುವೆಯಾದ ಟೆಕ್ಕಿ!
ಅದು ಫೆಬ್ರವರಿ 17, 1996. ಅಂದು ವಿಶ್ವ ಚೆಸ್ ಚಾಂಪಿಯನ್, ಸೋಲಿಲ್ಲದ ಸರದಾರ ಎಂದೇ ಗುರಿತಿಸಿಕೊಂಡಿದ್ದ ಗ್ಯಾರಿ ಕ್ಯಾಸ್‌ಪರೋ ವಿರುದ್ಧ ಡೀಪ್ ಬ್ಲೂ ಸೂಪರ್ ಕಂಪ್ಯೂಟರ್ ಮುಖಾಮುಖಿಯಾಗಿತ್ತು. ಅಲ್ಲೀವರೆಗೆ ಕಂಪ್ಯೂಟರ್ ಕೋಡಿಂಗ್ ಸಿಸ್ಟಮ್ಯಾಟಿಕ್ ಆಗಿತ್ತು. ಮೊದಲೇ ದಾಖಲಿಸಿದ ಕೋಡಿಂಗ್ ಪ್ರಕಾರ ಕಂಪ್ಯೂಟರ್ ಕಾರ್ನನಿರ್ವಹಿಸುತ್ತಿತ್ತು. ಆದರ ಪರಿಸ್ಥಿತಿ ತಕ್ಕಂತೆ ಮನುಷ್ಯರಂತೆ ಬುದ್ದಿಯನ್ನು ಬಳಸುವ, ನಿರ್ಧಾರಗಳನ್ನು ಬದಲಿಸುವ ಆವಿಷ್ಕರಣೆ ಇದೇ ಮೊದಲಾಗಿತ್ತು. ಮಾನನವ ಬುದ್ದಿಗೆ ತಕ್ಕಂತೆ, ಆತನ ಆಲೋಚನೆಗೆ ತಕ್ಕಂತೆ ತನ್ನ ನಿರ್ಧಾರಗಳನ್ನು ಬದಲಿಸುವ, ಕೃತಕ ಬುದ್ದಿಮತ್ತೆಯನ್ನು ಈ ಸೂಪರ್ ಕಂಪ್ಯೂಟರ್ ಕೋಡಿಂಗ್‌ನಲ್ಲಿ ಬಳಸಲಾಗಿತ್ತು.
ಫೆಬ್ರವರಿ 17, 1996ರಲ್ಲಿ ಗ್ಯಾರಿ ಕ್ಯಾಸ್‌ಪರೋ ಹಾಗೂ ಐಬಿಎಂ ಸೂಪರ್ ಕಂಪ್ಯೂಟರ್ ಡೀಪ್ ಬ್ಲೂ ನಡುವೆ ಮೊದಲ ಪಂದ್ಯ ನಡೆದಿತ್ತು. ಸುದೀರ್ಘ ಸಮಯ ಈ ಪಂದ್ಯ ನಡೆದಿತ್ತು. ರೋಚಕ ಹಣಾಹಣಿ, ಕುತೂಹಲ ಸೇರಿದಂತೆ ಹಲವು ನಿರೀಕ್ಷೆಗಳು ಈ ಪಂದ್ಯದ ಫಲಿತಾಂಶದ ಮೇಲಿತ್ತು. ಒಟ್ಟು ಎರಡು ಸುತ್ತಿನ ಪಂದ್ಯ ಇದಾಗಿತ್ತು. ರೋಚಕ ಹಣಾಹಣಿಯಲ್ಲಿ ಗ್ಯಾರಿ ಕ್ಯಾಸ್‌ಪರೋ 4-2 ಅಂತರದಲ್ಲಿ ಡೀಪ್ ಬ್ಲೂ ಕಂಪ್ಯೂಟರ್ ಸೋಲಿಸಿ ಇತಿಹಾಸ ರಚಿಸಿದ್ದರು.
ಡೀಪ್ ಬ್ಲೂ ವಿರುದ್ಧ ಗೆದ್ದ ಗ್ಯಾರಿಗೆ $400,000 ಅಮೆರಿಕನ್ ಡಾಲರ್ ನಗದು ಬಹುಮಾನ ನೀಡಲಾಗಿತ್ತು. ಇನ್ನು ಸೋಲು ಕಂಡ ಡೀಪ್ ಬ್ಲೂ ಕಂಪ್ಯೂಟರ್‌ಗೆ $100,000 ನಗದು ಬಹುಮಾನ ನೀಡಲಾಗಿತ್ತು. ಈ ಚೆಸ್ ಸ್ಪರ್ಧೆ ಬಳಿಕ, ಐಬಿಎಂ ಸಾಫ್ಟ್‌ವೇರ್ ಅಭಿವೃದ್ಧಿ ಎಂಜಿನಿಯರ್ಸ್ ಡೀಪ್ ಬ್ಲೂ ಕಂಪ್ಯೂಟರನ್ನು ಮತ್ತಷ್ಟು ಅಭಿವೃ್ದ್ಧಿಪಡಿಸಿ ಎರಡನೇ ಸುತ್ತಿನ ಪಂದ್ಯಕ್ಕೆ ಸಜ್ಜುಗೊಳಿಸಿದ್ದರು.
ಪೊರ್ನ್ ಇಂಡಸ್ಟ್ರಿಗೂ ಆರ್ಟಿಫಿಶಿಯಲ್ ಇಂಟಲಿಜೆನ್ಸ್, ತದ್ರೂಪಿ ಸೃಷ್ಟಿಸಿದ ಅಡಲ್ಟ್ ನಟಿ!
ಮೊದಲ ಪಂದ್ಯ ಫಿಲಡೆಲ್ಫಿಯಾದಲ್ಲಿ ಆಯೋಜಿಸಲಾಗಿದ್ದರೆ, 2ನೇ ಹಾಗೂ ಅಂತಿಮ ಸುತ್ತಿನ ಪಂದ್ಯವನ್ನು ನ್ಯೂಯಾರ್ಕ್ ನಗರದಲ್ಲಿ 1997ರಲ್ಲಿ ಆಯೋಜನೆ ಮಾಡಲಾಗಿತ್ತು. ಈ ಪಂದ್ಯ ಮತ್ತಷ್ಟು ರೋಚಕವಾಗಿತ್ತು. ಗ್ಯಾರಿ ಕ್ಯಾಸ್‌ಪರೋ ಹಾಗೂ ಡೀಪ್ ಬ್ಲೂ ನಡುವೆ ಜಿದ್ದಾ ಜಿದ್ದಿ ಎರ್ಪಟ್ಟಿತ್ತು. ಆದರೆ ಫಲಿತಾಂಶ ಡೀಪ್ ಬ್ಲೂ ಪರವಾಗಿತ್ತು. ಕಾರಣ ಎಐ ಕಂಪ್ಯೂಟರ್ ಕೃತಕ ಬುದ್ಧಿಮತ್ತೆಯಿಂದ ಚೆಸ್ ಚಾಂಪಿಯನ್‌ನ ಸೋಲಿಸಿತ್ತು.
28 ವರ್ಷಗಳ ಹಿಂದೆಯೇ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಪ್ರಯೋಗ ನಡೆದಿತ್ತು. ಆದರೆ ಇದೀಗ ಸದ್ಯದ ಕಾಲಘಟ್ಟಕ್ಕೆ ತಕ್ಕಂತೆ ಮಹತ್ತರ ಬದಲಾವಣೆಯೊಂದಿಗೆ ಎಐ ಬಳಕೆಯಾಗುತ್ತಿದೆ.