ಮೋದಿ ಟೀಕಿಸಿದವರ ಬಂಧನ ಅರೆಸ್ಟ್ ಮೀ ಟೂ ಎಂದ ರಾಹುಲ್ ಗಾಂಧಿ

ನವದೆಹಲಿ(ಮೇ.16): ಕೊರೋನಾ ಪರಿಸ್ಥಿತಿಯನ್ನು ಸರ್ಕಾರ ನಿಭಾಯಿಸುತ್ತಿರುವುದನ್ನು ಟೀಕಿಸುವ ಪೋಸ್ಟರ್‌ಗಳನ್ನು ಹಾಕಿದ್ದಕ್ಕಾಗಿ ದೆಹಲಿಯಲ್ಲಿ ಹಲವಾರು ಜನರನ್ನು ಬಂಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅರೆಸ್ಟ್ ಮೀ ಟೂ ಎಂದಿದ್ದಾರೆ.

"ನನ್ನನ್ನು ಬಂಧಿಸಿ" ಎಂದು ರಾಹುಲ್‌ಗಾಂಧಿ ಇಂದು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ಜೊತೆಗೆ ಕಪ್ಪು ಬ್ಯಾಗ್ರೌಂಡ್‌ನಲ್ಲಿ ಬಿಳಿ ಬಣ್ಣದಲ್ಲಿ ಪದಗಳಿದ್ದ ಪೋಸ್ಟರ್ ಹಿನ್ನೆಲೆ ಹಲವರನ್ನು ಬಂಧಿಸಲಾಗಿತ್ತು. "ಮೋದಿ ಜಿ, ನಮ್ಮ ಮಕ್ಕಳ ಲಸಿಕೆ ವಿದೇಶಗಳಿಗೆ ಏಕೆ ಕಳುಹಿಸಿದ್ದೀರಿ?" ಎಂದು ಬರೆಯಲಾಗಿತ್ತು.

ಕಳೆದ ಕೆಲವು ದಿನಗಳಿಂದ ದೆಹಲಿಯಲ್ಲಿ ಈ ಪೋಸ್ಟರ್‌ಗಳ ಸಂಬಂಧ ದೆಹಲಿ ಪೊಲೀಸರು ಕನಿಷ್ಠ 17 ಜನರನ್ನು ಬಂಧಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಕೊರೋನವೈರಸ್ ನಿಭಾಯಿಸಲು ವಿಫಲರಾಗಿದ್ದಾರೆ ಎಂದು ಟೀಕಿಸಲಾಗಿತ್ತು.

Scroll to load tweet…

ಪೋಸ್ಟರ್‌ಗಳಿಗೆ ಸಂಬಂಧಿಸಿದ ವಿಷಯದಲ್ಲಿ ಸೆಕ್ಷನ್ 188 ರ ಅಡಿಯಲ್ಲಿ ಸುಮಾರು 21 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಕಳೆದ ಮೂರು ವಾರಗಳಲ್ಲಿ ಭಾರತದಲ್ಲಿ ದಿನಕ್ಕೆ 3 ಲಕ್ಷಕ್ಕೂ ಹೆಚ್ಚು ಸೋಂಕುಗಳು ದಾಖಲಾಗಿದೆ.