ಭವ್ಯಾ ನರಸಿಂಹಮೂರ್ತಿ, ಕಾಂಗ್ರೆಸ್ ನಾಯಕಿ ಹಾಗೂ ಸೇನಾಧಿಕಾರಿ, ಜಾತಿ ವ್ಯವಸ್ಥೆಯ ಕುರಿತು ವಿಡಿಯೋದಲ್ಲಿ ಪ್ರಶ್ನಿಸಿದ್ದಾರೆ. ಜಾತಿಯ ಆಧಾರದ ಮೇಲೆ ಬ್ರಾಹ್ಮಣ ಎಂದು ಭಾವಿಸಿದಾಗ ಅನುಭವಿಸಿದ ಸಂತೋಷ, ದಲಿತ ಅಲ್ಲ ಎಂದು ತಿಳಿದಾಗ ಕ್ಷಮೆ ಯಾಚಿಸಿದ ಘಟನೆಗಳನ್ನು ವಿವರಿಸಿ, ಜಾತಿ ತಾರತಮ್ಯದ ಮನಸ್ಥಿತಿಯನ್ನು ಪ್ರಶ್ನಿಸಿದ್ದಾರೆ. ಸಂವಿಧಾನದ ಬಗ್ಗೆಯೂ ಮಾತನಾಡಿದ್ದಾರೆ.
ದೇಶದ ಹೆಮ್ಮೆಯ ಪುತ್ರಿ ಎನ್ನಿಸಿಕೊಂಡವರು ಭವ್ಯಾ ನರಸಿಂಹಮೂರ್ತಿ. ಅಖಿಲ ಭಾರತ ಕಾಂಗ್ರೆಸ್ ಸಮಿತಿ ರಾಷ್ಟ್ರೀಯ ಸಹ ಸಂಚಾಲಕಿ ಆಗಿ ಕೆಲಸ ನಿರ್ವಹಿಸುತ್ತಿದ್ದ ಭವ್ಯಾ ಅವರು ಕಳೆದ ವರ್ಷದ ಜೂನ್ನಲ್ಲಿ ಸೇನಾ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ. ದೇಶಸೇವೆ ಮಾಡಲು ಅವಕಾಶ ಭಾರತೀಯ ನಾಗರಿಕರು ನಾಗರಿಕ ವೃತ್ತಿಯ ಜೊತೆ ಭಾರತೀಯ ಸೇನೆಯಲ್ಲಿ ಕೆಲಸ ಮಾಡಲು ಪ್ರಾದೇಶಿಕ ಸೇನೆ ಅವಕಾಶ ಮಾಡಿಕೊಡುತ್ತದೆ. ಅಂಥವರಲ್ಲಿ ಒಬ್ಬರು ಭವ್ಯಾ. 2022ನೇ ಸಾಲಿನಲ್ಲಿ ನಡೆದ ಪರೀಕ್ಷೆಯಲ್ಲಿ ದಕ್ಷಿಣ ಭಾರತದಿಂದ ಆಯ್ಕೆಯಾದ ಏಕೈಕ ಮಹಿಳಾ ಪ್ರಾದೇಶಿಕ ಸೇನಾ ಅಧಿಕಾರಿ ಎನ್ನುವ ಹೆಗ್ಗಳಿಕೆ ಇವರದ್ದು. ಪ್ರಾದೇಶಿಕ ಸೇನೆಯಲ್ಲಿ ಕಮಿಷನ್ಡ್ ಆಫೀಸರ್ ಆಗಿ ಇವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆರಂಭದಲ್ಲಿಯೇ ಭವ್ಯಾ ನರಸಿಂಹಮೂರ್ತಿ ಅವರನ್ನು ಭಾರತ ಪಾಕಿಸ್ತಾನ ಗಡಿ (LOC) ಪ್ರದೇಶದಲ್ಲಿರುವ ಭಾರತೀಯ ಸೇನೆಯ ಘಟಕದಲ್ಲಿ ತರಬೇತಿ ಪಡೆದು ಲೆಫ್ಟಿನೆಂಟ್ ಆಗಿ ನಿಯೋಜನೆ ಮಾಡಲಾಗಿದೆ ಕೂಡ.
ಇವರೀಗ ದೇಶದಲ್ಲಿ ತಾಂಡವಾಡುತ್ತಿರುವ ಜಾತಿಯ ಬಗ್ಗೆ ಅದ್ಭುತವಾಗಿ ಮಾತನಾಡಿರುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬ್ರಾಹ್ಮಣ, ಕ್ಷತ್ರೀಯ, ವೈಶ್ಯ, ಶೂದ್ರ ಎಂದೆಲ್ಲಾ ಜಾತಿ ಜಾತಿಯ ನಡುವೆಯೇ ಬಡಿದಾಟ ನಡೆಯುತ್ತಿರುವುದು ಹೊಸ ವಿಷಯವೇನಲ್ಲ. ತಲೆತಲಾಂತರಗಳಿಂದ ನಡೆದುಕೊಂಡು ಬಂದಿರುವ ಈ ಜಾತಿ ಪದ್ಧತಿಯನ್ನು ಹುಟ್ಟುಹಾಕಿದವರು ಯಾರು ಎಂಬ ವಿಷಯ ಬಂದಾಗಲೆಲ್ಲ ಒಬ್ಬರ ಮೇಲೆ ಒಬ್ಬರು ಗೂಬೆ ಕೂಡ್ರಿಸುವುದು, ಇದನ್ನೇ ರಾಜಕಾರಣಿಗಳು ತಮ್ಮ ವೋಟ್ಬ್ಯಾಂಕ್ ಆಗಿಸಿಕೊಂಡು, ಜಾತಿ-ಧರ್ಮದ ನಡುವಿನ ವೈಷಮ್ಯವನ್ನು ತಣ್ಣಗಾಗಲು ಬಿಡದೇ ಇರುವುದು ಕೂಡ ಎಲ್ಲರಿಗೂ ಗೊತ್ತಿರುವಂಥದ್ದೇ ವಿಷಯವಾಗಿದೆ.
'ಗ್ಯಾರೆಂಟಿ'ಯಿಂದ ಸಂಕಷ್ಟಕ್ಕೆ ಸಿಲುಕಿರೋ KSRTCಗೆ ಸುಪ್ರೀಂನಿಂದ ಬಿಗ್ ಶಾಕ್! ಖಾಸಗಿ ಬಸ್ಗಳು ಫುಲ್ ಖುಷ್
ಆದರೆ, ಆ ಜಾತಿ ಶ್ರೇಷ್ಠ, ಈ ಜಾತಿ ಕನಿಷ್ಠ ಎಂದು ತಮ್ಮನ್ನು ತಾವೇ ಹೇಳಿಕೊಂಡು ತಿರುಗುವು, ಆ ಮೂಲಕ ಆಯಾ ಜಾತಿಗಳ ಬಗ್ಗೆ ತಾವೇ ಭ್ರಮೆಯನ್ನು ಸೃಷ್ಟಿಸಿಕೊಳ್ಳುತ್ತಾ, ತಮ್ಮ ಜಾತಿಗಳ ಬಗ್ಗೆ ತಾವೇ ಹಳಿದುಕೊಳ್ಳುತ್ತಿರುವ ಮನಸ್ಥಿತಿಯ ಬಗ್ಗೆ ಚಿಂತನೆಗೆ ಹಚ್ಚುವಂತೆ ಮಾಡಿದೆ. ಅಷ್ಟಕ್ಕೂ ಭವ್ಯಾ ಅವರ ಮಾತಲ್ಲೇ ಹೇಳುವುದಾದರೆ, 'ಹಲವಾರು ಕಡೆಗಳಲ್ಲಿ ನನ್ನನ್ನು ನೋಡಿದ ತಕ್ಷಣ ನೀವು ಬ್ರಾಹ್ಮಿನ್ಸ್ ಹೌದಾ ಎಂದು ಕೇಳುತ್ತಾರೆ. ಅಲ್ಲ ಎಂದಾಗ ನೀವು ನೋಡಲು ಬ್ರಾಹ್ಮಿನ್ಸ್ ಥರ ಇದ್ದೀರಿ ಅಂತಾರೆ, ಇಲ್ಲವೇ ನಿಮ್ಮ ಹೆಸರಿನ ಮುಂದೆ ನರಸಿಂಹಮೂರ್ತಿ ಎಂದು ಇದ್ಯಲ್ಲಾ ಅದಕ್ಕೇ ಹಾಗೆಂದುಕೊಂಡ್ವಿ ಅಂತಾರೆ, ಇಲ್ಲವೇ ನೀವು ಓದಿದ್ದೀರಲ್ಲ, ಅದಕ್ಕೇ ಹಾಗೆ ತಿಳಿದುಕೊಂಡ್ವಿ ಅಂತಾರೆ. ನಾನು ಅಲ್ಲ ಎಂದಾಗ, ಅಷ್ಟೇ ಖುಷಿಯ ಮುಖದಲ್ಲಿಯೇ ಒಹ್ ಹೌದಾ? ನೀವು ಬ್ರಾಹ್ಮಿನ್ಸ್ ಅಂದುಕೊಂಡಿದ್ವಿ ಎನ್ನುತ್ತಾರೆ. ಅವರ ಮೊಗದಲ್ಲಿ ಆಗ ಖುಷಿ ಕಾಣುತ್ತದೆ' ಎನ್ನುವುದು ಭವ್ಯಾ ಮಾತು.
ನಂತರ ದಲಿತರ ವಿಷಯಕ್ಕೆ ಬಂದ ಭವ್ಯಾ ಅವರು, 'ಹತ್ರಾಸ್ನಲ್ಲಿ ದಲಿತ ಹೆಣ್ಣುಮಗಳ ಮೇಲೆ ನಡೆದ ಅತ್ಯಾಚಾರ ಪ್ರಕರಣದ ಸಂದರ್ಭದಲ್ಲಿ ನಾನು ಭಾಷಣ ಮಾಡಿದ್ದೆ. ಹೆಚ್ಚಿನ ರೇಪ್ಗಳು ದಲಿತರ ಮೇಲೆ ಏಕೆ ಆಗುತ್ತಿದೆ ಎಂಬ ಬಗ್ಗೆ ಹೇಳಿದ್ದೆ. ಏಕೆಂದರೆ ಆ ವಿಷಯ ನನ್ನನ್ನು ತುಂಬಾ ದುಃಖಿತಳನ್ನಾಗಿಸಿತ್ತು. ಭಾಷಣ ಮುಗಿದ ಬಳಿಕ ಒಬ್ಬಾತ ನನಗೆ ನೀವು ದಲಿತರಾ ಎಂದು ಕೇಳಿದ. ನಾನು ಅಲ್ಲ ಎಂದೆ. ಆಗ ಆತ ಸಾರಿ ಸಾರಿ ಕ್ಷಮಿಸಿಬಿಡಿ. ನಾನು ಹಾಗೆ ಅಂದುಕೊಂಡೆ ಎಂದ' ಎಂದಿರುವ ಭವ್ಯಾ ಅವರು ಆಗ ಬ್ರಾಹ್ಮಿನ್ಸ್ ಎಂದುಕೊಂಡೆ ಎಂದಾಗ ಇದ್ದ ಸಂತೋಷ, ಈಗ ದಲಿತಳು ಅಲ್ಲ ಎಂದ ತಕ್ಷಣ ಸಾರಿ ಸಾರಿ ಕೇಳುವಂಥದ್ದು ಏನಾಯ್ತು' ಎಂದು ಪ್ರಶ್ನಿಸಿದ್ದಾರೆ. ಈ ಮೂಲಕ ನಮ್ಮ ನಮ್ಮ ಜಾತಿಯನ್ನು ನಾವೇ ಇದು ಹೀಗೆ, ಅದು ಹಾಗೆ ಎಂದು ಚೌಕಟ್ಟನ್ನು ಹಾಕಿಕೊಂಡತ್ತಲ್ಲವೆ, ನಮ್ಮ ಜಾತಿಯ ಬಗ್ಗೆ ಹೆಮ್ಮೆಯಿಂದ ಇರುವ ಬದಲು ನಾವೇ ಯಾಕೆ ಆ ರೀತಿ ಮಾಡಬೇಕು ಎಂಬುದಾಗಿ ಪರೋಕ್ಷವಾಗಿ ಹೇಳಿದ್ದಾರೆ. ಅಂಬೇಡ್ಕರ್ ಸೇನೆ ಉಡುಪಿ ಜಿಲ್ಲೆ ಎನ್ನುವ ಎಫ್ಬಿಯಲ್ಲಿ ಇದು ಶೇರ್ ಆಗಿದೆ. ಇದೇ ವಿಡಿಯೋದಲ್ಲಿ ಭವ್ಯಾ ಅವರು ಸಂವಿಧಾನದ ಕುರಿತೂ ಮಾತನಾಡಿದ್ದಾರೆ.
ಹೆಂಡ್ತಿ ಮುಖ ಎಷ್ಟು ಅಂತ ನೋಡ್ತೀರಾ ಎಂದ L&T ಮ್ಯಾನೇಜರ್ಗೆ ಬಿಗ್ ಶಾಕ್! 70 ಸಾವಿರ ಕೋಟಿ ರೂ. ಲಾಸ್
