Asianet Suvarna News Asianet Suvarna News

ಆರ್ಮಿ ಮೇಜರ್, ಮಹಿಳಾ ಜಡ್ಜ್ ಸರಳ ವಿವಾಹ: 500 ರೂಪಾಯಿಯಲ್ಲಿ ಮದುವೆ!

* ಹಣದುಬ್ಬರದಿಂದ ಬಸವಳಿದ ಜನ ಸಾಮಾನ್ಯರು

* ಮದುವೆ ಕಾರ್ಯಕ್ರಮಕ್ಕೆ ಬೇಕಾಬಿಟ್ಟಿ ಹಣ ವ್ಯಯಿಸುವವರಿಗೆ ಮಾದರಿಯಾದ ಆರ್ಮಿ ಮೇಜರ್ ಮತ್ತು ಜಡ್ಜ್

* ಸರಳ ವಿವಾಹ, ಐನೂರು ರೂಪಾಯಿಯಲ್ಲಿ ಮದುವೆ ನೆರವೇರಿತು

Army Major Marries Judge At Bhopal A Simple Wedding In Rs 500 Example To All pod
Author
Bangalore, First Published Jul 13, 2021, 2:51 PM IST

ಭೋಫಾಲ್(ಜು.13): ಬೆಲೆ ಏರಿಕೆ ಬಿಸಿಯಲ್ಲೂ ಬಹುತೇಕರು ಅದ್ಧೂರಿಯಾಗಿ ಮದುವೆಯಾಗಲು ಬಯಸುತ್ತಾರೆ. ತಮ್ಮ ಮದುವೆ ಬಹಳ ವಿಭಿನ್ನ, ಸ್ಪೆಷಲ್ ಆಗಬೇಕೆಂಬ ಆಸೆಯಲ್ಲಿ ಲಕ್ಷಾಂತರ ರೂಪಾಯಿ ಮೊತ್ತ ವ್ಯಯಿಸುತ್ತಾರೆ. ನೀರಿನಂತೆ ಹಣ ಯಾಕರೆ ವ್ಯಯಿಸುತ್ತಾರೆ ಎಂಬುವುದಕ್ಕೆ ಉತ್ತರವೇ ಇಲ್ಲ. ಹೀಗಿರುವಾಗಲೇ ಮಧ್ಯಪ್ರದೇಶದ ರಾಜಧಾನಿ ಭೋಪಾಲ್ನಲ್ಲಿ ಓರ್ವ ಸೇನಾ ಮೇಜರ್ ಹಾಗೂ ಮಹಿಳಾ ಜಡ್ಜ್ ಅತ್ಯಂತ ಸರಳ ವಿವಾಹವಾಗಿ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. ಕೇವಲ ಐನೂರು ರೂಪಾಯಿಯಲ್ಲಿ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಲ್ಲಿ ಬ್ಯಾಂಡ್‌, ಡಿಜೆ, ದಿಬ್ಬಣ, ಅಲಂಕಾರ ಏನೂ ಇರಲಿಲ್ಲ. ಕೇವಲ ಎರಡು ಹಾರ ಹಾಗೂ ಸ್ವಲ್ಪ ಸಿಹಿ ತಿಂಡಿಗಷ್ಟೇ ಹಣ ವ್ಯಯಿಸಿದ್ದಾರೆ.

ಇಬ್ಬರು ಬಡ ಮಕ್ಕಳ ಮದುವೆ ಮಾಡಿಸಿದ ಸಂಸದೆ ಪ್ರಜ್ಞಾ, ಅತಿಥಿಗಳ ಜೊತೆ ಡಾನ್ಸ್!

ದಿಬ್ಬಣವಿಲ್ಲ, ಯಾವುದೇ ಆಡಂಬರವಿಲ್ಲ

ಭೋಪಾಲ್‌ ನಿವಾಸಿ ಶಿವಾಂಗಿ ಜೋಶಿ ಅದೇ ನಗರದವರಾಗಿದ್ದ ಆರ್ಮಿ ಮೇಜರ್ ಅನಿಕೇತ್ ಚತುರ್ವೇದಿ ಜೊತೆ ಕೋರ್ಟ್‌ ಮ್ಯಾರೇಜ್ ಆಗಿದ್ದಾರೆ. ಇಷ್ಟೊಂದು ಸರಳ ವಿವಾಹವಾಗಿದ್ದಕ್ಕೆ ಪ್ರತಿಯೊಬ್ಬರೂ ಅವರಿಗೆ ಸಲಾಂ ಮಾಡುತ್ತಿದ್ದಾರೆ. ಕುಟುಂಬದವರ ಸಮ್ಮತಿ ಪಡೆದ ಬಳಿಕ ಸಮಾಜಕ್ಕೊಂದು ಸಂದೇಶ ನೀಡಬೇಕೆಂಬ ನಿಟ್ಟಿನಲ್ಲಿ ಇಬ್ಬರೂ ಸೋಮವಾರದಂದು ಕೋರ್ಟ್‌ನಲ್ಲಿ ಅತ್ಯಂತ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದಾದ ಬಳಿಕ ಜಡ್ಜ್ ಎದುರು ಮದುವೆ ನೋಂದಾವಣಿ ಮಾಡಿಸಿಕೊಂಡಿದ್ದಾರೆ. 

ಎರಡು ವರ್ಷದಿಂದ ಮದುವೆ ಮುಂದೂಡಿಕೆ!

ಪ್ರಸ್ತುತ ಅನಿಕೇತ್‌ ಪೋಸ್ಟಿಂಗ್‌ ಲಡಾಖ್‌ನಲ್ಲಿ ನಡೆಯುತ್ತಿದೆ. ಇತ್ತ ಶಿವಾಂಗಿ ಧಾರ್‌ನಲ್ಲಿ ಸಿಟಿ ಮೆಜಿಸ್ಟ್ರೇಟ್‌ ಆಗಿ ತಮ್ಮ ಸೇವೆ ನೀಡುತ್ತಿದ್ದಾರೆ. ವರ್ಷಗಳ ಹಿಂದೆ ಇಬ್ಬರ ಮದುವೆ ನಿಶ್ಚಯವಾಗಿತ್ತು. ಆದರೆ ಕೊರೋನಾದಿಂದಾದಿ ಮ್ಉವೆ ಕಾರ್ಯಕ್ರಮ ನಿರಂತರವಾಗಿ ಮುಂದೂಡಲಾಯ್ತು. ಇನ್ನು ಈ ಬಗ್ಗೆ ಮಾತನಾಡಿರುವ ಶಿವಾಂಗಿ ನಾವು ಕೊರೋನಾ ಕಾಲದಲ್ಲಿ ಮದುವೆಗಿಂತ ಹೆಚ್ಚು ಕೊರೋನಾ ವಾರಿಯರ್‌ ಆಗಿ ಸೇವೆ ಸಲ್ಲಿಸಲು ಪ್ರಾಮುಖ್ಯತೆ ಕೊಟ್ಟೆವು, ಹೀಗಾಗಿ ಮದುವೆ ದಿನಾಂಕ ಮುಂದೂಡಲ್ಪಟ್ಟಿತು. ಈ ಕೊರೋನಾ ಕಾಲದಲ್ಲಿ ಪ್ರತಿಯೊಬ್ಬರೂ ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡಿದ್ದಾರೆ ಎಂದಿದ್ದಾರೆ.

ಅಂಡಾಣು ಸಂರಕ್ಷಿಸಿಟ್ಟ ನಟಿ ಕಾಜೋಲ್‌ ಸಹೋದರಿ! ಹಿಂಗ್ ಮಾಡಿದ್ಯಾಕೆ?

ವಧುವಿನ ಮನವಿ

ಇದೇ ವೇಳೆ ಜನರ ಬಳಿ ಮನವಿ ಮಾಡಿಕೊಂಡಿರುವ ಶಿವಾಂಗಿ 'ಹಣದುಬ್ಬರದ ಈ ದಿನಗಳಲ್ಲಿ ಮದುವೆ ಕಾರ್ಯಕ್ರಮಕ್ಕಾಗಿ ಕೋಟ್ಯಾಂತರ ರೂಪಾಯಿ ವ್ಯಯಿಸಿದರೂ ಕಡಿಮೆಯೇ ಹಾಗೂ ಕೋರ್ಟ್‌, ಮಂದಿರಗಳಲ್ಲಿ ಮದುವೆಯಾದರೂ ಏನೂ ವವ್ಯತ್ಯಾಸವಿಲ್ಲ. ನಿಮ್ಮಲ್ಲಿ ಹೆಚ್ಚು ಹಣವಿದ್ದರೆ ಇಂತಹ ವಿಷಮ ಪರಿಸ್ಥಿತಿಯಲ್ಲಿ ಬಡವರಿಗೆ ಸಹಾಐ ಮಾಡಿ ಎಂದಷ್ಟೇ ನಾನು ವಿನಂತಿಸುತ್ತೇನೆ. ಮದುವೆ ಕಾರ್ಯಕ್ರಮಕ್ಕೆ ಸುಖಾ ಸುಮ್ಮನೆ ಖರ್ಚು ಮಾಡುವುದರಲ್ಲಿ ಅರ್ಥವಿಲ್ಲ. ಇಂತಹ ಖರ್ಚು ಹೆಣ್ಮಕ್ಕಳ ಮನೆಯವರಿಗೆ ಹೊರೆಯಾಗುತ್ತದೆ. ಕುಟುಂಬದವರ ಉಪಸ್ಥಿತಿಯಲ್ಲಿ ಸರಳವಾಗಿ ವಿವಾಹವಾಗಿ. ಇದರಿಂದ ಖರ್ಚೂ ಕಡಿಮೆ, ಮದುವೆಯೂ ಆಗುತ್ತದೆ ಹಾಗೂ ಕೊರೋನಾ ಹರಡುವ ಭಯವೂ ಇರುವುದಿಲ್ಲ' ಎಂದಿದ್ದಾರೆ. 
 

Follow Us:
Download App:
  • android
  • ios