Army helicopter crash in Arunachal Pradesh: ಭಾರತ ಸೇನೆಗೆ ಸೇರಿದ ಹೆಲಿಕಾಪ್ಟರ್‌ ಅರುಣಾಚಲ ಪ್ರದೇಶದ ಸಿಯಾಂಗ್‌ನಲ್ಲಿ ಪತನವಾಗಿದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.

ನವದೆಹಲಿ: ಭಾರತ ಸೇನೆಯ ಹೆಲಿಕಾಪ್ಟರ್‌ ಅರುಣಾಚಲ ಪ್ರದೇಶದ ಸಿಯಾಂಗ್‌ನಲ್ಲಿ ಪತನವಾಗಿದ್ದು ರಕ್ಷಣಾ ಕಾರ್ಯಾಚಾರಣೆ ಆರಂಭವಾಗಿದೆ. ಶುಕ್ರವಾರ ಅಪ್ಪರ್‌ ಸಿಯಾಂಗ್‌ನಲ್ಲಿ ತೆರಳುತ್ತಿದ್ದ ವೇಳೆ ತಾಂತ್ರಿಕ ದೋಷದಿಂದ ಹೆಲಿಕಾಪ್ಟರ್‌ ಅಪಘಾತಕ್ಕೊಳಗಾಗಿರುವ ಸಾಧ್ಯತೆಯಿದೆ. ಎಚ್‌ಎಎಲ್‌ ನಿರ್ಮಿತ ಅತ್ಯಾಧುನಿಕ ಹೆಲಿಕಾಪ್ಟರ್‌ ರುದ್ರ ಅಪಘಾತಕ್ಕೊಳಗಾಗಿದೆ. ಘಟನೆಯಲ್ಲಿ ಪೈಲಟ್‌ ಬದುಕುಳಿದಿರುವ ಬಗ್ಗೆ ಸೇನೆಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ. 

ಇದು ಅರುಣಾಚಲ ಪ್ರದೇಶದಲ್ಲಿ ನಡೆದ ಎರಡನೇ ಹೆಲಿಕಾಪ್ಟರ್‌ ದುರಂತ. ಇದೇ ತಿಂಗಳು ಹೆಲಿಕಾಪ್ಟರ್‌ ಅಪಘಾತದಲ್ಲಿ ಪೈಲಟ್‌ ಮೃತಪಟ್ಟಿದ್ದರು. ಜತೆಗೆ ಹಲವರು ಗಂಭೀರವಾಗಿ ಗಾಯಗೊಂಡಿದ್ದರು. ಸೇನೆಯ ಚೀತಾ ಹೆಲಿಕಾಪ್ಟರ್‌ ತಾಂತ್ರಿಕ ದೋಷದಿಂದ ಅಪಘಾತವಾಗಿತ್ತು.

ಈ ಬಗ್ಗೆ ಪತ್ರಕರ್ತರೊಬ್ಬರು ಟ್ವೀಟ್‌ ಮಾಡಿದ್ದು ಘಟನಾ ಸ್ಥಳದ ವಿಡಿಯೋ ಶೇರ್‌ ಮಾಡಿಕೊಂಡಿದ್ದಾರೆ. ಘಟನಾ ಸ್ಥಳದಿಂದ ಸೇನಾ ತರಬೇತಿ ಕೇಂದ್ರ ಸುಮಾರು 25 ಕಿಲೋಮೀಟರ್‌ ದೂರವಿದೆ. ಹೆಲೆಕಾಪ್ಟರ್‌ ಕಾಡಿನ ನಡುವೆ ಪತನಗಂಡಿದ್ದು ಆ ಸ್ಥಳಕ್ಕೆ ನೇರ ರಸ್ತೆ ಸಂಪರ್ಕವಿಲ್ಲ. ಈ ಕಾರಣಕ್ಕೆ ಘಟನಾ ಸ್ಥಳಕ್ಕೆ ಹೆಲಿಕಾಪ್ಟರ್‌ ಮೂಲಕವೇ ರಕ್ಷಣಾ ಕಾರ್ಯಾಚರಣೆ ನಡೆಸುವ ಸಾಧ್ಯತೆಯಿದೆ ಎನ್ನಲಾಗಿದೆ. 

Scroll to load tweet…

ಕೇಂದ್ರ ಸಚಿವ ಕಿರಣ್‌ ರಿಜಿಜು ಕೂಡ ಪ್ರತಿಕ್ರಿಯಿಸಿದ್ದು, ಮರಣಹೊಂದಿದವರ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ. ಅರುಣಾಚಲ ಪ್ರದೇಶದ ಮೇಲಿನ ಸಿಯಾಂಗ್‌ ಜಿಲ್ಲೆಯಲ್ಲಿ ಸೇನಾ ಹೆಲಿಕಾಪ್ಟರ್‌ ಪತನವಾದ ಬೇಸರದ ಸುದ್ದಿ ತಿಳಿದುಬಂದಿದೆ ಎಂದು ಅವರು ಟ್ವೀಟ್‌ ಮಾಡಿದ್ದಾರೆ. 

Scroll to load tweet…