ಭಯೋತ್ಪಾದಕರನ್ನು ತಟಸ್ಥಗೊಳಿಸುವ ಕಾರ್ಯಾಚರಣೆಯ ವೇಳೆ ಎರಡು ಗುಂಡು ತಿಂದು ಗಂಭೀರವಾಗಿ ಗಾಯಗೊಂಡಿದ್ದ ಸೇನಾ ಶ್ವಾನ ಜೂಮ್, ಗುರುವಾರ ಮಧ್ಯಾಹ್ನ 12 ಗಂಟೆಯ ವೇಳೆಗೆ ನಿಧನವಾಗಿದೆ ಎಂದು ಭಾರತೀಯ ಸೇನೆಯ ಚಿನಾರ್ಸ್ ಕಾರ್ಪ್ಸ್ ತಿಳಿಸಿದೆ.
ನವದೆಹಲಿ (ಅ. 13): ಅನಂತ್‌ನಾಗ್ ಜಿಲ್ಲೆಯಲ್ಲಿ ಭಯೋತ್ಪಾದಕರನ್ನು ತಟಸ್ಥಗೊಳಿಸುವ ಕಾರ್ಯಾಚರಣೆಯ ವೇಳೆ ದಿಟ್ಟ ಹೋರಾಟ ತೋರಿದ್ದ ಸೇನಾ ಶ್ವಾನ ಜೂಮ್ ಗುರುವಾರ ಮಧ್ಯಾಹ್ನ ನಿಧನವಾಗಿದೆ ಎಂದು ಭಾರತೀಯ ಸೇನೆ ತಿಳಿಸಿದೆ. ಕಾರ್ಯಾಚರಣೆಯ ವೇಳೆ ಭಯೋತ್ಪಾದಕರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದ ಜೂಮ್, ಈ ವೇಳೆ ಎರು ಗುಂಡೇಟು ತಿಂದಿತ್ತು. ಹಾಗಿದ್ದರೂ ಭಾರತೀಯ ಸೇನೆಯ ಶ್ವಾನದ ಸಹಾಯದಿಂದಲೇ ಭಯೋತ್ಪಾದಕರನ್ನು ಸಾಯಿಸಲು ಯಶಸ್ವುಯಾಗಿತ್ತು. ತೀವ್ರವಾಗಿ ಗಾಯಗೊಂಡಿದ್ದ ಶ್ವಾನವನ್ನು 54 ಅಡ್ವಾನ್ಸ್ ಫೀಲ್ಡ್ ವೆಟರ್ನರಿ ಹಾಸ್ಪಿಟಲ್‌ನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಗುರುವಾರ ಮಧ್ಯಾಹ್ನ 12 ಗಂಟೆಯ ವೇಳೆಗೆ ಜೂಮ್ ಕೊನೆಯುಸಿರೆಳೆದಿದೆ. 11.45ರ ವೇಳೆಗೆ ಶ್ವಾನ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದನೆ ಮಾಡುತ್ತಿತ್ತು. ಆದರೆ, ಇದ್ದಕ್ಕಿದ್ದಂತೆ ಉಸಿರುಗಟ್ಟಿದಂತಾಗಿ ಸಾವು ಕಂಡಿದೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.ಅನಂತನಾಗ್‌ನ ಕೋಕರ್‌ನಾಗ್‌ನಲ್ಲಿ ನಡೆದ ಸೇನಾ ಕಾರ್ಯಾಚರಣೆಯಲ್ಲಿ, 'ಜೂಮ್' ಭಯೋತ್ಪಾದಕರ ಮೇಲೆ ದಾಳಿ ಮಾಡಿತು ಮತ್ತು ಈ ವೇಳೆ ಎರಡು ಗಂಭೀರ ಪ್ರಮಾಣದ ಗುಂಡಿನೇಟು ಪಡೆದಿತ್ತು ಎಂದು ಚಿನಾರ್ ಕಾರ್ಪ್ಸ್ ಕೆಲ ದಿನಗಳ ಹಿಂದೆ ಟ್ವಿಟರ್‌ನಲ್ಲಿ ತಿಳಿಸಿತ್ತು.
ಗುಂಡೇಟು ಬಿದ್ದ ನಡುವೆಯೂ ಜೂಮ್ ತನ್ನ ಕಾರ್ಯವನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ಭಯೋತ್ಪಾದಕರನ್ನು ತಟಸ್ಥಗೊಳಿಸಿತ್ತು ಎಂದು ಭಾರತೀಯ ಸೇನೆ ಬರೆದುಕೊಂಡಿತ್ತು. ಸೇನಾ ನಾಯಿಯು ಆಪರೇಷನ್ ಟ್ಯಾಂಗ್‌ಪಾವಾಸ್‌ನ (Operation Tangpawas) ವಾರ್ ಟೀಮ್‌ನ ಭಾಗವಾಗಿತ್ತು. ಅನಂತ್‌ನಾಗ್‌ನಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಇಬ್ಬರು ಲಷ್ಕರ್-ಎ-ತೊಯ್ಬಾ ಭಯೋತ್ಪಾದಕರು ಹತರಾಗಿದ್ದರು. ಎನ್‌ಕೌಂಟರ್‌ನಲ್ಲಿ 'ಜೂಮ್' ಜೊತೆಗೆ ಇಬ್ಬರು ಸೈನಿಕರೂ ಗಾಯಗೊಂಡಿದ್ದರು.
ತೀವ್ರವಾಗಿ ಗಾಯಗೊಂಡಿದ್ದ ಜೂಮ್‌ಗೆ ಬುಧವಾರ ಎಎಫ್‌ವಿಎಚ್ ಆಸ್ಪತ್ರೆಯಲ್ಲಿ ಜೂಮ್‌ಗೆ ದೊಡ್ಡ ಮಟ್ಟದ ಶಸ್ತ್ರಚಿಕಿತ್ಸೆಯನ್ನೂ ಮಾಡಲಾಗಿತ್ತು. ಅದಾದ ಬಳಿಕ ಕೆಲ ಹೊತ್ತು ಚೇತರಿಕೆ ಕಂಡಿದ್ದ ಶ್ವಾನದ ಆರೋಗ್ಯ, ಸಮಯ ಕಳೆದಂತೆ ಗಂಭೀರವಾಗುತ್ತಿತ್ತು.ತೀವ್ರವಾಗಿ ಗಾಯಗೊಂಡಿದ್ದ ಜೂಮ್‌ಗೆ ಬುಧವಾರ ಎಎಫ್‌ವಿಎಚ್ ಆಸ್ಪತ್ರೆಯಲ್ಲಿ ಜೂಮ್‌ಗೆ ದೊಡ್ಡ ಮಟ್ಟದ ಶಸ್ತ್ರಚಿಕಿತ್ಸೆಯನ್ನೂ ಮಾಡಲಾಗಿತ್ತು. ಅದಾದ ಬಳಿಕ ಕೆಲ ಹೊತ್ತು ಚೇತರಿಕೆ ಕಂಡಿದ್ದ ಶ್ವಾನದ ಆರೋಗ್ಯ, ಸಮಯ ಕಳೆದಂತೆ ಗಂಭೀರವಾಗುತ್ತಿತ್ತು. ಭಯೋತ್ಪಾದಕರನ್ನು ಗುರುತಿಸುವಲ್ಲಿ ಮತ್ತು ತಟಸ್ಥಗೊಳಿಸುವಲ್ಲಿ ಶ್ವಾನ ಪ್ರದರ್ಶಿಸಿದ ಶೌರ್ಯ ಮತ್ತು ಅಪ್ರತಿಮ ಧೈರ್ಯವನ್ನು ಸಂಭ್ರಮಿಸಲು ಚಿನಾರ್ ಕಾರ್ಪ್ಸ್ ವೀಡಿಯೊವನ್ನು ಕೂಡ ಬಿಡುಗಡೆ ಮಾಡಿತ್ತು, ಈ ಪ್ರದೇಶದಲ್ಲಿ ಭಯೋತ್ಪಾದಕರ ಉಪಸ್ಥಿತಿಯ ಬಗ್ಗೆ ನಿರ್ದಿಷ್ಟ ಮಾಹಿತಿ ಪಡೆದ ನಂತರ ಭದ್ರತಾ ಪಡೆಗಳು ಭಾನುವಾರ ತಡರಾತ್ರಿ ದಕ್ಷಿಣ ಕಾಶ್ಮೀರದ ತಂಗ್ಪಾವಾ ಪ್ರದೇಶದಲ್ಲಿ ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದವು.
ಎರಡು ಗುಂಡು ಬಿದ್ದರೂ, ಟೆರರಿಸ್ಟ್ ವಿರುದ್ಧ ಹೋರಾಡಿದ ಸೇನಾ ನಾಯಿ 'ಜೂಮ್'!
ತೀವ್ರವಾಗಿ ಗಾಯಗೊಂಡಿದ್ದ ಜೂಮ್‌ಗೆ ಬುಧವಾರ ಎಎಫ್‌ವಿಎಚ್ (AFVH) ಆಸ್ಪತ್ರೆಯಲ್ಲಿ ಜೂಮ್‌ಗೆ (Zoom Dog) ದೊಡ್ಡ ಮಟ್ಟದ ಶಸ್ತ್ರಚಿಕಿತ್ಸೆಯನ್ನೂ ಮಾಡಲಾಗಿತ್ತು. ಅದಾದ ಬಳಿಕ ಕೆಲ ಹೊತ್ತು ಚೇತರಿಕೆ ಕಂಡಿದ್ದ ಶ್ವಾನದ ಆರೋಗ್ಯ, ಸಮಯ ಕಳೆದಂತೆ ಗಂಭೀರವಾಗುತ್ತಿತ್ತು. ಭಯೋತ್ಪಾದಕರನ್ನು ಗುರುತಿಸುವಲ್ಲಿ ಮತ್ತು ತಟಸ್ಥಗೊಳಿಸುವಲ್ಲಿ ಶ್ವಾನ ಪ್ರದರ್ಶಿಸಿದ ಶೌರ್ಯ ಮತ್ತು ಅಪ್ರತಿಮ ಧೈರ್ಯವನ್ನು ಸಂಭ್ರಮಿಸಲು ಚಿನಾರ್ ಕಾರ್ಪ್ಸ್ ವೀಡಿಯೊವನ್ನು ಕೂಡ ಬಿಡುಗಡೆ ಮಾಡಿತ್ತು.
ಜನರ ಸಂತಾಪ: ಭಾರತೀಯ ಸೇನೆ ಜೂಮ್ ಸಾವು ಕಂಡ ವಿಚಾರವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡುತ್ತಿದ್ದಂತೆ ಧೀರ ಶ್ವಾನಕ್ಕೆ ಜನರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. 'ದೇಶದ ಗಡಿಯನ್ನು ರಕ್ಷಿಸುವ ಸಲುವಾಗಿ ನಿನ್ನ ಸೇವೆ ಅನನ್ಯ, ರಿಯಲ್ ಹೀರೋ' ಎಂದೆಲ್ಲಾ ಜೂಮ್‌ಅನ್ನು ಬಣ್ಣಿಸಿದ್ದಾರೆ. ಜೂಮ್ ನಿಲ್ಲ ಅನನ್ಯ ತ್ಯಾಗಕ್ಕೆ ನಾವೆಲ್ಲರೂ ಸೆಲ್ಯೂಟ್ ಮಾಡುತ್ತೇವೆ ಎಂದು ಕೆಲವರು ಬರೆದಿದ್ದಾರೆ. ಆರ್ಮಿ ಅಸಾಲ್ಟ್ ಶ್ವಾನ (Army Assault Cannie) 'ಜೂಮ್' ಕರ್ತವ್ಯದ ವೇಳೆ ತನ್ನ ಪ್ರಾಣವನ್ನು ಅರ್ಪಣೆ ಮಾಡಿದೆ. ಆತ, 09 ಅಕ್ಟೋಬರ್ 22 ರಂದು ಆಪ್ ಟಾಂಗ್ಪಾವಾ ಕಾರ್ಯಾಚರಣೆ ವೇಳೆ ಗುಂಡಿನ ಗಾಯ ಎದುರಿಸಿತ್ತು. ಅಲ್ಲಿ ಜೂಮ್ ಭಯೋತ್ಪಾದಕರೊಂದಿಗೆ ವೀರಾವೇಶದಿಂದ ಹೋರಾಡಿ, ಸೈನಿಕರ ಪ್ರಾಣ ಉಳಿಸಿತ್ತು. ಅವರ ನಿಸ್ವಾರ್ಥ ಬದ್ಧತೆ ಮತ್ತು ರಾಷ್ಟ್ರದ ಸೇವೆ ಎಂದೆಂದಿಗೂ ಸ್ಮರಣೀಯ ಎಂದು ಚಿನಾರ್ ಕಾರ್ಪ್ಸ್ (Chinar Corps) ಬರೆದುಕೊಂಡಿದೆ.
