Asianet Suvarna News Asianet Suvarna News

Army court martial: ಮಹಿಳಾ ಕ್ಯಾಪ್ಟನ್‌ಗೆ ಲೈಂಗಿಕ ಕಿರುಕುಳ, ಎನ್‌ಸಿಒ ಕೆಲಸದಿಂದ ವಜಾ!

ಮಹಿಳಾ ಕ್ಯಾಪ್ಟನ್‌ಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ನಾನ್‌ ಕಮೀಷನ್ಡ್‌ ಅಧಿಕಾರಿ, ಹವಾಲ್ದಾರ್‌ ಒಬ್ಬರನ್ನು ಕೋರ್ಟ್‌ ಮಾರ್ಷಲ್‌ ಮಾಡಲಾಗಿದೆ. ಅವರನ್ನು ಕೆಲಸದಿಂದ ವಜಾ ಮಾಡಲು ಶಿಫಾರಸು ಮಾಡಲಾಗಿದ್ದು, 1 ವರ್ಷದ ಶಿಕ್ಷೆಯನ್ನು ವಿಧಿಸಲಾಗಿದೆ.
 

Army court martial Dismissed from NCO job for sexually assaulting female captain to be jailed for 1 year san
Author
First Published Oct 5, 2022, 10:42 PM IST

ನವದೆಹಲಿ (ಅ.5): ಮಹಿಳಾ ಅಧಿಕಾರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಸೇನಾ ಕೋರ್ಟ್ ಮಾರ್ಷಲ್ ಆರೋಪಿಯ ವಿರುದ್ಧ ತ್ವರಿತ ಮತ್ತು ಕಠಿಣ ಕ್ರಮ ಕೈಗೊಂಡಿದೆ. ಮಹಿಳಾ ಕ್ಯಾಪ್ಟನ್‌ಗೆ ಲೈಂಗಿಕ ದೌರ್ಜನ್ಯ ಎಸಗಿದ ತಪ್ಪಿತಸ್ಥರನ್ನು ಸೇವೆಯಿಂದ ವಜಾಗೊಳಿಸಲು ಮತ್ತು ಒಂದು ವರ್ಷ ಜೈಲು ಶಿಕ್ಷೆಗೆ ಶಿಫಾರಸು ಮಾಡಲಾಗಿದೆ. ಕಳೆದ ವರ್ಷ ಮಹಿಳಾ ಅಧಿಕಾರಿ 17 ಮೌಂಟೇನ್ ಡಿವಿಷನ್ ಪ್ರದೇಶದಲ್ಲಿ ರಿವರ್ ರಾಫ್ಟಿಂಗ್ ಕೋರ್ಸ್‌ಗಾಗಿ ಸಿಕ್ಕಿಂಗೆ ಬಂದಿದ್ದಾಗ, ಅಲ್ಲಿ ಅವರು ಅಧಿಕೃತ ನಿವಾಸದಲ್ಲಿ ತಂಗಿದ್ದರು. ಸಿಕ್ಕಿಂನಲ್ಲಿ 17 ಮೌಂಟೇನ್ ಡಿವಿಷನ್ ಕರೆದಿದ್ದ ಕೋರ್ಟ್ ಮಾರ್ಷಲ್‌ನಲ್ಲಿ ಸೇನಾ ಶುಶ್ರೂಷಕ ಸೇವೆಗೆ ಸೇರಿದ ಮಹಿಳಾ ಅಧಿಕಾರಿಯ ಮೇಲೆ ಲೈಂಗಿಕ ಕಿರುಕುಳ ಆರೋಪಿಸಿದ್ದ ಕಾರಣಕ್ಕೆ ಹವಾಲ್ದಾರ್‌ ವಿರುದ್ಧ ಕ್ರಿಮಿನಲ್‌ ಆರೋಪ ಹೊರಿಸಲಾಗಿತ್ತು ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ. ಎನ್‌ಸಿಒ ವಿರುದ್ಧದ ಎರಡನೇ ಆರೋಪವೆಂದರೆ ಅಧಿಕಾರಿಯ ಕೋಣೆಗೆ ಬಲವಂತವಾಗಿ ಪ್ರವೇಶಿಸಿದ ನಂತರ ಹವಾಲ್ದಾರ್‌, ಲೈಂಗಿಕವಾಗಿ ಕೆಲ ಟೀಕೆಗಳನ್ನು ಮಾಡಿದ್ದರು. ಈ ಘಟನೆಯ ಬಳಿಕ ಹೇಗೋ ಕೋಣೆಯೊಂದ ತಪ್ಪಿಸಿಕೊಂಡು ಬರಲು ಯಶಸ್ಸಿಯಾದ ಮಹಿಳಾ ಅಧಿಕಾರಿ, ಅಲ್ಲಿಯೇ ಇದ್ದ ಅಧಿಕಾರಿಗಳಿಗೆ ಈ ಕುರಿತಾಗಿ ದೂರು ನೀಡಿದ್ದರು. ಸೇನೆಯ ಅಧಿಕಾರಿಗಳು ಕ್ಷಿಪ್ರವಾಗಿ ಕಾರ್ಯನಿರ್ವಹಿಸಿದ್ದರಿಂದ ಎನ್‌ಸಿಒಅನ್ನು ವಿಚಾರಣೆಯಲ್ಲಿ ಇರಿಸಲಾಯಿತು. ಅಲ್ಲಿ ಅವರು ತಪ್ಪಿತಸ್ಥರೆಂದು ಕಂಡುಬಂದರು.

ಸಿಕ್ಕಿಂನ 617 ಇಎಂಇ ಬೆಟಾಲಿಯನ್‌ನಲ್ಲಿ ಕೋರ್ಟ್ ಮಾರ್ಷಲ್ ನಡೆದಿದ್ದು, ಹವಾಲ್ದಾರ್‌ಅನ್ನು ಕಳೆದ ವಾರ ಸೇವೆಯಿಂದ ವಜಾಗೊಳಿಸುವಂತೆ ಹಾಗೂ ಒಂದು ವರ್ಷದ ಜೈಲು ಶಿಕ್ಷೆಯನ್ನು ಎದುರಿಸುವಂತೆ ಶಿಫಾರಸು ಮಾಡಲಾಗಿದೆ. ಕೋರ್ಟ್‌ ಮಾರ್ಷಲ್‌ ಅಧ್ಯಕ್ಷ ಲೆಫ್ಟಿನೆಂಟ್ ಕರ್ನಲ್ ದೀಪಕ್ ಶಾಹಿ ಈ ಆದೇಶ ನೀಡಿದ್ದಾರೆ. ಪ್ರಾಸಿಕ್ಯೂಷನ್‌ ಪರವಾಗಿ ಅಕ್ಷಿತ್ ಆನಂದ್ ವಾದ ಮಾಡಿದ್ದರು.

2018ರಲ್ಲಿ ಮೇಜರ್‌ ಜನರಲ್‌ ವಜಾ: ಡಿಸೆಂಬರ್ 2018 ರಲ್ಲಿ, ಈಶಾನ್ಯ ಭಾರತದಲ್ಲಿ ಭಾರತೀಯ ಸೇನೆಯ ಹಲವಾರು ಪ್ರಮುಖ ಮಿಲಿಟರಿ ಕಾರ್ಯಾಚರಣೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮೇಜರ್ ಜನರಲ್ ಅವರನ್ನು ವಜಾಗೊಳಿಸಲಾಯಿತು. ಮೇಜರ್ ಜನರಲ್ ವಿರುದ್ಧ (Army court martial) ಕ್ಯಾಪ್ಟನ್ ಶ್ರೇಣಿಯ ಮಹಿಳಾ ಅಧಿಕಾರಿಯ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದರು. 2016ರಲಲ್ಲಿ ಈಶಾನ್ಯ ಭಾರತದಲ್ಲಿ ಪೋಸ್ಟಿಂಗ್‌ನಲ್ಲಿದ್ದಾಗ ನಡೆದ ಘಟನೆ ಇದಾಗಿತ್ತು.  ನಾಗಾಲ್ಯಾಂಡ್‌ನ ಈಸ್ಟರ್ನ್ ಕಮಾಂಡ್‌ನ ಅಡಿಯಲ್ಲಿ ಅಸ್ಸಾಂ ರೈಫಲ್ಸ್‌ನಲ್ಲಿ (Assam Rifles) ಚಂಡಿಮಂದಿರ್‌ಗೆ ನೇಮಕಗೊಂಡ ಸಂದರ್ಭದಲ್ಲಿ, ಕ್ಯಾಪ್ಟನ್ ಶ್ರೇಣಿಯ ಅಧಿಕಾರಿಯೊಬ್ಬರು ಮೇಜರ್‌ ಜನರಲ್‌ ವಿರುದ್ಧ ಸೇನೆಯ ನ್ಯಾಯಾಧೀಶ ಅಡ್ವೊಕೇಟ್ ಜನರಲ್ ಶಾಖೆಗೆ ಲಿಖಿತ ದೂರು ಸಲ್ಲಿಸಿದ್ದರು.

ಮೇಜರ್ ಗೊಗೊಯ್ ಕೋರ್ಟ್ ಮಾರ್ಷಲ್ ಪೂರ್ಣ: ಸೇವಾ ಹಿರಿತನ ಕಡಿತದ ಶಿಕ್ಷೆ?

2007ರಲ್ಲೂ ಆಗಿತ್ತು ಇದೇ ರೀತಿಯ ಘಟನೆ: 2007ರಲ್ಲೂ ಇದೇ ರೀತಿಯ ಘಟನೆ ನಡೆದಿತ್ತು. ಮಹಿಳಾ ಅಧಿಕಾರಿಯ (Women Officer) ಮೇಲೆ ಶೋಷಣೆ ಮಾಡಿದ್ದ ಆರೋಪದಲ್ಲಿ ಮೇಜರ್‌ ಜನರ್ಲ್‌ ಒಬ್ಬರು ಸೇನಾ ಹುದ್ದೆಯನ್ನು ತ್ಯಜಿಸಿದ್ದರು. ಮಹಿಳಾ ಅಧಿಕಾರಿಗೆ ಯೋಗ ಕಲಿಸುವ ಹೆಸರಿನಲ್ಲಿ ಉದ್ದೇಶಪೂರ್ವಕವಾಗಿ ಹಲವಾರು ಬಾರಿ ಖಾಸಗಿ ಭಾಗವನ್ನು ಸ್ಪರ್ಶಿಸಿದ್ದಾರೆ ಎಂದು ಅಧಿಕಾರಿಯು ಆರೋಪಿಸಿದ್ದಾರೆ. ಭಾರತೀಯ ಸೇನೆಯು ನೈತಿಕತೆ ಮತ್ತು ಆರ್ಥಿಕ ದುರುಪಯೋಗದ ವಿಷಯಗಳಲ್ಲಿ ತುಂಬಾ ಕಟ್ಟುನಿಟ್ಟಾಗಿದೆ. ಹಲವು ವರ್ಷಗಳಿಂದ ಈ ಪ್ರಕರಣಗಳಲ್ಲಿ ಹಲವಾರು ಅಧಿಕಾರಿಗಳು ಮತ್ತು ಪುರುಷರನ್ನು ಸೇವೆಯಿಂದ ವಜಾಗೊಳಿಸಲಾಗಿದೆ.

ಚೀನಾ ಮೇಲೆ ಹದ್ದಿನ ಕಣ್ಣು, ಮಿಸಾಮರಿ ವಾಯುನೆಲೆಗೆ ಪ್ರಚಂಡ ಲಘು ಯುದ್ಧ ಹೆಲಿಕಾಪ್ಟರ್ ನಿಯೋಜನೆ!

ಏನಿದು ಕೋರ್ಟ್‌ ಮಾರ್ಷಲ್:  ನಿಯಮಗಳನ್ನು ಉಲ್ಲಂಘಿಸಲು (What is Army court martial) ಅಥವಾ ಶಿಸ್ತು ಉಲ್ಲಂಘಿಸಲು ಸೈನ್ಯದಲ್ಲಿ ಕೋರ್ಟ್ ಮಾರ್ಷಲ್ ನಿಯಮವಿದೆ. ಇದು ಸಶಸ್ತ್ರ ಪಡೆಗಳಲ್ಲಿ ಒಂದು ರೀತಿಯ ಆಂತರಿಕ ನ್ಯಾಯಾಂಗ ಪ್ರಕ್ರಿಯೆಯಾಗಿದೆ. ಇದರಲ್ಲಿ ತಪ್ಪಿಗೆ ಶಿಕ್ಷೆ ಇದೆ. ಸೇನೆ, ನೌಕಾಪಡೆ ಮತ್ತು ವಾಯುಪಡೆಗಳಲ್ಲಿ ಕೋರ್ಟ್ ಮಾರ್ಷಲ್ ಮೂಲಕ ಸೈನಿಕ ಅಥವಾ ಅಧಿಕಾರಿಯ ಅಪರಾಧವನ್ನು ನಿರ್ಧರಿಸಲು ವಿಭಿನ್ನ ನಿಯಮಗಳಿವೆ. ಈ ವಿಚಾರಣೆಯು ಮಿಲಿಟರಿ ಕಾನೂನಿನ ಅಡಿಯಲ್ಲಿ ನಡೆಯುತ್ತದೆ. 70 ಬಗೆಯ ಅಪರಾಧಗಳಿಗೆ ಶಿಕ್ಷೆಯ ನಿಬಂಧನೆ ಇದೆ.

Follow Us:
Download App:
  • android
  • ios