Asianet Suvarna News Asianet Suvarna News

ಮೇಜರ್ ಗೊಗೊಯ್ ಕೋರ್ಟ್ ಮಾರ್ಷಲ್ ಪೂರ್ಣ: ಸೇವಾ ಹಿರಿತನ ಕಡಿತದ ಶಿಕ್ಷೆ?

ಮೇಜರ್ ಲೀಟುಲ್ ಗೊಗೊಯ್ ವಿರುದ್ಧದ ಕೋರ್ಟ್ ಮಾರ್ಷಲ್ ಪ್ರಕ್ರಿಯೆ ಪೂರ್ಣ| ಯುವತಿಯೋರ್ವಳನ್ನು ಹೋಟೆಲ್‌ಗೆ ಕರೆದುಕೊಂಡು ಹೋಗಿದ್ದ ಪ್ರಕರಣ| ಸೇವಾ ಹಿರಿತನ ಖಡಿತಗೊಳಿಸುವ ಶಿಕ್ಷೆ ಪ್ರಕಟ ಸಾಧ್ಯತೆ| ಗೊಗೊಯ್ ವಾಹನ ಚಾಲಕ ಸಮೀರ್ ಮಲ್ಲಾಗೆ ತೀವ್ರ ವಾಗ್ದಂಡನೆ ಸಾಧ್ಯತೆ|

Major Leetul Gogoi  Court Martial Completed May Face Reduction of Seniority
Author
Bengaluru, First Published Apr 1, 2019, 1:09 PM IST

ಶ್ರೀನಗರ(ಏ.01): ಯುವತಿಯೊಬ್ಬಳನ್ನು ಹೊಟೇಲ್ ಗೆ ಕರೆದುಕೊಂಡು ಹೋಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೇಜರ್ ಲೀಟುಲ್ ಗೊಗೊಯ್ ವಿರುದ್ಧದ ಕೋರ್ಟ್ ಮಾರ್ಷಲ್ ಪ್ರಕ್ರಿಯೆ ಪೂರ್ಣಗೊಂಡಿದೆ. 

ಮೇಜರ್ ಲೀಟುಲ್ ಗೊಗೊಯ್ ವಿರುದ್ಧದ ಕೋರ್ಟ್ ಮಾರ್ಷಲ್ ಪ್ರಕ್ರಿಯೆ ಪೂರ್ಣಗೊಳಿಸಿರುವ ಸೇನಾ ನ್ಯಾಯಾಲಯ, ಸೇವಾ ಹಿರಿತನವನ್ನು ಕಡಿತಗೊಳಿಸುವ ಶಿಕ್ಷೆಯನ್ನು ಪ್ರಕಟಿಸುವ ಸಾಧ್ಯತೆ ಇದೆ. 

ಲೀಟುಲ್ ಗೊಗೊಯ್ ಯುವತಿಯೊಂದಿಗೆ ಹೋಟೆಲ್ ಹೋಗಿದ್ದು ಸಾಬೀತಾಗಿದ್ದು, ಇಂತಹ ವರ್ತನೆಯನ್ನು ಸೇನೆ ಸಹಿಸುವುದಿಲ್ಲ ಎಂಬ ಖಡಕ್ ಸಂದೇಶ ರವಾನಿಸಿದೆ.

ಇದೇ ವೇಳೇ ಕರ್ತವ್ಯದ ವೇಳೆ ಯುನಿಟ್‌ನಲ್ಲಿ ಗೈರಾಗಿದ್ದ ಮೇಜರ್ ಗೊಗೋಯ್ ಅವರ ವಾಹನ ಚಾಲಕ ಸಮೀರ್ ಮಲ್ಲಾ ವಿರುದ್ಧದ ಕೋರ್ಟ್ ಮಾರ್ಷಲ್ ಪ್ರಕ್ರಿಯೆ ಕೂಡ ಪೂರ್ಣಗೊಂಡಿದೆ. ಸಮೀರ್ ಮಲ್ಲಾಗೆ ತೀವ್ರವಾದ ವಾಗ್ದಂಡನೆ ವಿಧಿಸುವ ಸಾಧ್ಯತೆ ಇದೆ.

ಕಾಶ್ಮಿರದಲ್ಲಿ ಸೇನಾ ವಾಹನ ಮೇಲೆ ಕಲ್ಲು ತೂರಾಟದ ಸಂದರ್ಭದಲ್ಲಿ ಯುವಕನನ್ನು ತಮ್ಮ ಜೀಪ್ ಮುಂದೆ ಕಟ್ಟಿ ಹಾಕಿ ವಾಹನ ಓಡಿಸಿದ್ದ ಮೇಜರ್ ಗೊಗೊಯ್ ವರ್ತನೆ ಬಗ್ಗೆ ಕೂಡ ಅಪಸ್ವರ ಕೇಳಿ ಬಂದಿದ್ದವು. ಆದರೆ ತನಿಖೆ ಬಳಿಕ ಗೊಗೊಯ್ ನಿರ್ದೋಷಿ ಎಂದು ಸಾಬೀತಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

Follow Us:
Download App:
  • android
  • ios