ನವದೆಹಲಿ(ಜ.02): ಸರ್ಕಾರ ಹೇಳಿದರೆ ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ದಾಳಿ ಮಾಡಲು ಸಿದ್ಧ ಎಂದು ನೂತನ ಸೇನಾ ಮುಖ್ಯಸ್ಥ ಜನರಲ್ ಮುಕುಂದ್ ನಾರವಾನೆ ಹೇಳಿದ್ದಾರೆ.

ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಮುಕುಂದ್ ನಾರವಾನೆ, ಸರ್ಕಾರ ನೀಡುವ ಎಲ್ಲ ನಿರ್ದೇಶನಗಳನ್ನು ಪಾಲಿಸಲು ಸೇನೆ ಸರ್ವ ಸನ್ನದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು.

ಭೂಸೇನಾ ಮುಖ್ಯಸ್ಥರಾಗಿ ಜನರಲ್ ಮುಕುಂದ್ ನಾರವಾನೆ ಅಧಿಕಾರ ಸ್ವೀಕಾರ!

ಸರ್ಕಾರ ಬಯಸಿದರೆ ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ದಾಳಿ ಮಾಡಲು ಸೇನೆ ಸಿದ್ಧವಾಗಿದ್ದು, ಈ ಕುರಿತು ಸರ್ಕಾರವೇ ಅಂತಿಮ ನಿರ್ಣಯ ಕೈಗೊಳ್ಳಬೇಕು ಎಂದು ಜನರಲ್ ನಾರವಾನೆ ಹೇಳಿದರು.

ಸೇನೆಯ ಕೆಲಸ ಸರ್ಕಾರದ ಆದೇಶಗಳನ್ನು ಪಾಲಿಸುವುದಷ್ಟೇ ಎಂದಿರುವ ನಾರವಾನೆ, ಸೇನೆ ಎಲ್ಲ ಕಾರ್ಯಾಚರಣೆಗಳಿಗೆ ಸರ್ವ ಸನ್ನದ್ಧವಾಗಿದೆ ಎಂದು ಭರವಸೆ ನೀಡಿದರು.

ಚೀನಾ ಮೇಲೆ ನಿಗಾ ಎಂದ ಸೇನಾ ಮುಖ್ಯಸ್ಥ: ನಾರವಾನೆ ಮಾತಿಗೆ ಡ್ರ್ಯಾಗನ್ ಅಸ್ವಸ್ಥ!

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದತಿ ಬಳಿಕ, ಪಾಕ್ ಆಕ್ರಮಿತ ಕಾಶ್ಮೀರವನ್ನೂ ಮರುವಶಪಡಿಸಿಕೊಳ್ಳಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ. ಆದರೆ ಸರ್ಕಾರ ಈ ನಿಟ್ಟಿನಲ್ಲಿ ಏನು ಯೋಜನೆ ಹೊಂದಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.