ಸೈಬರ್ ಕ್ರಿಮಿನಲ್ಸ್ ವಿರುದ್ಧ 5000 ಪೊಲೀಸರ ದಾಳಿ: ನೋಯ್ಡಾ ಬಳಿಯ 300 ಪ್ರದೇಶದಲ್ಲಿ ಕಾರ್ಯಾಚರಣೆ; 125 ವಂಚಕರ ವಶಕ್ಕೆ
ಸಾಂಕ್ರಾಮಿಕದ ಸಮಯದಲ್ಲಿ ಈ ಚಟುವಟಿಕೆ ಮತ್ತಷ್ಟು ಹೆಚ್ಚಾಗಿದ್ದು, ಬೇರೆ ಬೇರೆ ರಾಜ್ಯಗಳ ಮೊಬೈಲ್ ಟವರ್‌ಗಳು ಸಂಪರ್ಕಕ್ಕೆ ಬರುತ್ತಿದ್ದ ಕಾರಣ ಇವರನ್ನು ಗುರುತಿಸುವುದು ಕಷ್ಟವಾಗಿತ್ತು.
ಗುರುಗ್ರಾಮ (ಏಪ್ರಿಲ್ 30, 2023): ಸೈಬರ್ ಅಪರಾಧ ಎಸಗುತ್ತಿದ್ದ ಬೃಹತ್ ಜಾಲವೊಂದರ ಮೇಲೆ ಶುಕ್ರವಾರ ಮುಗಿಬಿದ್ದಿರುವ ಹರ್ಯಾಣ ಪೊಲೀಸರು 125 ವಂಚಕರನ್ನು ವಶಕ್ಕೆ ಪಡೆದಿದ್ದಾರೆ. ಶುಕ್ರವಾರ 5000 ಪೊಲೀಸರನ್ನು ಒಳಗೊಂಡ 125 ತಂಡ, ಗುರುಗ್ರಾಮ ಸುತ್ತಮುತ್ತಲ 13 ಗ್ರಾಮಗಳ 300ಕ್ಕೂ ಹೆಚ್ಚು ಪ್ರದೇಶಗಳ ಮೇಲೆ ಏಕಕಾಲಕ್ಕೆ ಬೃಹತ್ ದಾಳಿ ನಡೆಸಿ ವಂಚಕರ ಹೆಡೆಮುರಿ ಕಟ್ಟುವ ಕೆಲಸ ಮಾಡಿದ್ದಾರೆ. ಸೈಬರ್ ಅಪರಾಧಕ್ಕೆ ದೇಶದಲ್ಲಿ ಕುಖ್ಯಾತಿ ಹೊಂದಿರುವ ಜಾರ್ಖಂಡ್ ಜಮ್ತಾರಾ ಮಾದರಿಯಲ್ಲೇ ಗುರುಗ್ರಾಮದ ಸುತ್ತಮತ್ತಲ ಗ್ರಾಮಗಳು ಹೊಸ ಜಮ್ತಾರಾ ಎಂಬ ಕುಖ್ಯಾತಿಯೊಂದಿಗೆ ಕಾರ್ಯಾಚರಣೆ ನಡೆಸುತ್ತಿದ್ದವು.
ದಾಳಿ ನಡೆಸಿದ ಪ್ರದೇಶ ರಾಜಸ್ಥಾನ ಮತ್ತು ಉತ್ತರ ಪ್ರದೇಶದ ಗಡಿಯಲ್ಲಿರುವ ಗ್ರಾಮಗಳಾಗಿವೆ. ಹರ್ಯಾಣದ ನುಹ್, ರಾಜಸ್ಥಾನದ ಭರತ್‌ಪುರ ಮತ್ತು ಉತ್ತರ ಪ್ರದೇಶದ ಮಥುರಾದಲ್ಲಿರುವ ಗ್ರಾಮಗಳು ಸೈಬರ್ ಕ್ರೈಂನ ಹಾಟ್‌ಸ್ಪಾಟ್‌ಗಳಾಗಿ ಬದಲಾಗಿದ್ದವು. ಸಾಂಕ್ರಾಮಿಕದ ಸಮಯದಲ್ಲಿ ಈ ಚಟುವಟಿಕೆ ಮತ್ತಷ್ಟು ಹೆಚ್ಚಾಗಿದ್ದು, ಬೇರೆ ಬೇರೆ ರಾಜ್ಯಗಳ ಮೊಬೈಲ್ ಟವರ್‌ಗಳು ಸಂಪರ್ಕಕ್ಕೆ ಬರುತ್ತಿದ್ದ ಕಾರಣ ಇವರನ್ನು ಗುರುತಿಸುವುದು ಕಷ್ಟವಾಗಿತ್ತು.
ಇದನ್ನು ಓದಿ: ಪರೀಕ್ಷೆಯಲ್ಲಿ ಫೇಲಾಗಿದ್ದಕ್ಕೆ ಪ್ರಾಣ ಕಳೆದುಕೊಂಡ 9 ವಿದ್ಯಾರ್ಥಿಗಳು; ಮತ್ತಿಬ್ಬರಿಂದ ಆತ್ಮಹತ್ಯೆಗೆ ಯತ್ನ
ಆದರೆ ಇದನ್ನು ತಡೆಗಟ್ಟಲು ಕಾರ್ಯಾಚರಣೆ ಯೋಜಿಸಿದ ಹರ್ಯಾಣ ಪೊಲೀಸರು, ಸೈಬರ್ ಅಪರಾಧಿಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ‘ಈ ದಾಳಿ ಸೈಬರ್ ಅಪರಾಧಿಗಳ ಚಟುವಟಿಕೆಯನ್ನು ತಗ್ಗಿಸಿದೆ. ಇದು ಹರ್ಯಾಣದಲ್ಲಿ ಅವರ ಚಟುವಟಿಕೆಯನ್ನು ನಿಯಂತ್ರಿಸಿದ್ದಷ್ಟೇ ಅಲ್ಲದೇ ಇತರ ರಾಜ್ಯಗಳಲ್ಲಿ ತನಿಖೆ ನಡೆಸಲು ಅನುಕೂಲವಾಗಲಿದೆ’ ಎಂದು ಹರ್ಯಾಣ ಡಿಐಜಿ ಸಿಮರ್‌ದೀಪ್ ಸಿಂಗ್ ಹೇಳಿದ್ದಾರೆ.
ಹೈಸ್ಕೂಲ್ ಓದಿಲ್ಲದಿದ್ದರೂ, ಯುವಕರು ಕೆವೈಸಿ ವಿಧಾನಗಳನ್ನು ಬಳಸಿಕೊಂಡು, ಸಾಮಾಜಿಕ ವೇದಿಕೆಗಳ ಮೂಲಕ ವಾಹನಗಳನ್ನು ಮಾರಾಟ ಮಾಡಿ, ಸಾಲಗಳನ್ನು ನೀಡಿ ಮತ್ತು ಸುಲಿಗೆ ಮಾಡುವ ಮೂಲಕ ಜನರನ್ನು ವಂಚಿಸುವಲ್ಲಿ ಪರಿಣತರಾಗಿದ್ದರು. ಈ ಹಿನ್ನೆಲೆ ಹರ್ಯಾಣ ಪೊಲೀಸರು 5,000ಕ್ಕೂ ಹೆಚ್ಚು ಪೊಲೀಸರ ಪ್ರತ್ಯೇಕ ತಂಡಗಳನ್ನು ರಚಿಸಿದ್ದು, ಇದರಲ್ಲಿ 1 ಎಸ್‌ಪಿ, 6 ಹೆಚ್ಚುವರಿ ಎಸ್‌ಪಿಗಳು, 14 ಡಿಎಸ್‌ಪಿಗಳು ಮತ್ತು ಇತರ ಪೊಲೀಸರು ಸೈಬರ್ ಅಪರಾಧಿಗಳ ವಿರುದ್ಧ ಬೃಹತ್ ಕಾರ್ಯಾಚರಣೆಗೆ ಇಳಿದಿದ್ದಾರೆ ಎಂದು ವಿಶೇಷ ಕಾರ್ಯಪಡೆಯ ಉಪ ಪೊಲೀಸ್ ಮಹಾನಿರೀಕ್ಷಕ ಸಿಮರ್‌ದೀಪ್ ಸಿಂಗ್ ಶುಕ್ರವಾರ ತಿಳಿಸಿದ್ದಾರೆ.
ಇದನ್ನೂ ಓದಿ: ನಿದ್ರೆ ಹಾಳು ಮಾಡಿದ್ದಕ್ಕೆ ಗೆಳೆಯನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರ ಹತ್ಯೆ ಮಾಡಿದ ಪಾಪಿ!
“ಸೈಬರ್ ಕ್ರಿಮಿನಲ್‌ಗಳ ವಿರುದ್ಧ 102 ಪೊಲೀಸ್ ರೇಡಿಂಗ್ ತಂಡಗಳು ಕಾರ್ಯಾಚರಣೆ ನಡೆಸಿವೆ. ಪುನ್ಹಾನಾ, ಪಿನಾಂಗ್ವಾ, ಫಿರೋಜ್‌ಪುರ ಝಿರ್ಕಾ ಮತ್ತು ಬಿಚೋರ್ ಪ್ರದೇಶಗಳಲ್ಲಿನ 14 ಗುರುತಿಸಲಾದ ಹಳ್ಳಿಗಳ ಮೇಲೆ ಪೊಲೀಸರ ತಂಡಗಳು ಏಕಕಾಲದಲ್ಲಿ ದಾಳಿ ನಡೆಸಿವೆ. ಶುಕ್ರವಾರ ರಾತ್ರಿ 11.30ಕ್ಕೆ ಕಾರ್ಯಾಚರಣೆ ಆರಂಭಗೊಂಡಿದ್ದು, ತಡರಾತ್ರಿವರೆಗೂ ನಡೆದಿದೆ. 24 ಗಂಟೆಗಳ ಕಾಲ ಶೋಧ ಕಾರ್ಯಾಚರಣೆ ನಡೆದಿದೆ ಎಂದೂ ಅವರು ಹೇಳಿದರು.
ಜಿಲ್ಲೆಯಲ್ಲಿ ಸೈಬರ್ ಅಪರಾಧದ ಹಾಟ್‌ಸ್ಪಾಟ್‌ಗಳೆಂದು ಪರಿಗಣಿಸಲಾದ 14 ಗ್ರಾಮಗಳನ್ನು ಮ್ಯಾಪಿಂಗ್ ಮಾಡುವ ಮೂಲಕ ಪೊಲೀಸರು ಮೊದಲು ಗುರಿಯನ್ನು ನಿಗದಿಪಡಿಸಿದ್ದರು. ಖೇಡ್ಲಾ, ಲುಹಿಂಗಾ ಖುರ್ದ್, ಲುಹಿಂಗಾ ಕಲನ್, ಗೋಕಲ್‌ಪುರ್, ಗೋಧೋಲಾ, ಅಮೀನಾಬಾದ್, ಮಹು, ಗುಲಾಲ್ತಾ, ಜೈಮತ್, ಜಖೋಪುರ್, ನಾಯ್, ತಿರ್ವಾರಾ, ಮಮ್ಲಿಕಾ ಮತ್ತು ಪಾಪದಾ ಗ್ರಾಮಗಳನ್ನು ಸೈಬರ್ ಕ್ರೈಮ್ ಹಾಟ್‌ಸ್ಪಾಟ್‌ಗಳೆಂದು ಗುರುತಿಸಿ ದಾಳಿ ನಡೆಸಲಾಗಿದೆ. ಏಪ್ರಿಲ್ 8 ರಿಂದ, ಸೈಬರ್ ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿರುವ 20 ಕ್ರಿಮಿನಲ್‌ಗಳನ್ನು ಈಗಾಗಲೇ ನುಹ್‌ನಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂದೂ ತಿಳಿದುಬಂದಿದೆ.
ಇದನ್ನೂ ಓದಿ: ಗ್ಯಾಂಗ್‌ಸ್ಟರ್‌ನ ಮತ್ತಷ್ಟು ರಹಸ್ಯ ಬಯಲು: ಅತೀಕ್ ಕಚೇರಿಯಲ್ಲಿ ರಕ್ತಸಿಕ್ತ ಚಾಕು, ರಕ್ತದ ಕಲೆಯ ದುಪ್ಪಟ್ಟಾ ಪತ್ತೆ