Asianet Suvarna News Asianet Suvarna News

ಯುವತಿಯರಿಗೆ ಯಾಮಾರಿಸಿದ ಮನೆ ಮಾಲೀಕ: ಬೆಡ್‌ರೂಮ್‌, ಬಾತ್ರೂಮ್‌ನಲ್ಲಿ ಸ್ಪೈ ಕ್ಯಾಮೆರಾ ಇಟ್ಟ ವಂಚಕ

ಉದಯಪುರದಲ್ಲಿ ಯುವತಿಯರು ವಾಸವಿದ್ದ ಬಾಡಿಗೆ ಫ್ಲ್ಯಾಟ್‌ನಲ್ಲಿ ಸ್ಪೈ ಕ್ಯಾಮೆರಾಗಳು ಪತ್ತೆಯಾಗಿವೆ. ಮನೆ ಮಾಲೀಕರೇ ಇಂತಹ ಕೃತ್ಯ ಮಾಡಿರುವುದು ಬೆಳಕಿಗೆ ಬಂದಿದೆ. 

flat owner install spy camera on bathroom and bedroom of girls to see live activities in udaipur rajasthan ash
Author
First Published May 2, 2023, 4:11 PM IST | Last Updated May 2, 2023, 4:30 PM IST

ಉದಯ್‌ಪುರ (ಮೇ 2, 2023): ನೀವು ಒಂದು ಕಡೆ ಮನೆ ಬಾಡಿಗೆಗೆ ನೋಡುತ್ತಿದ್ರೆ ಆ ಮನೆ ಚೆನ್ನಾಗಿದ್ಯೋ ಇಲ್ಲವೋ, ಉತ್ತಮ ಗಾಳಿ ಬೆಳಕು, ನೀರಿನ ಸೌಲಭ್ಯ ಇದನ್ನು ನೋಡುತ್ತೀರಿ. ಆದರೆ, ಇನ್ಮುಂದೆ ನೀವು ಬಾಡಿಗೆಗೆ ಕೊಠಡಿ ಅಥವಾ ಫ್ಲ್ಯಾಟ್‌ ತೆಗೆದುಕೊಳ್ಳುತ್ತಿದ್ದರೆ, ಅಲ್ಲಿ ಯಾವುದೇ ಸ್ಪೈ ಕ್ಯಾಮೆರಾ ಅಳವಡಿಸಲಾಗಿಲ್ಲ ಎಂಬುದನ್ನು ಒಮ್ಮೆ ಪರಿಶೀಲಿಸಿ. ಯಾಕೆ ಅಂತೀರಾ.. ಮುಂದೆ ಓದಿ..

ಇಂತಹದೊಂದು ಆಘಾತಕಾರಿ ಪ್ರಕರಣ ರಾಜಸ್ಥಾನದ ಉದಯಪುರದಲ್ಲಿ ಬೆಳಕಿಗೆ ಬಂದಿದೆ. ಈ ನಗರದಲ್ಲಿ ಯುವತಿಯರು ವಾಸವಿದ್ದ ಬಾಡಿಗೆ ಫ್ಲ್ಯಾಟ್‌ನಲ್ಲಿ ಸ್ಪೈ ಕ್ಯಾಮೆರಾಗಳು ಪತ್ತೆಯಾಗಿವೆ. ಈ ಕ್ಯಾಮೆರಾಗಳನ್ನು ಸ್ನಾನಗೃಹ, ಮಲಗುವ ಕೋಣೆಗಳು ಮತ್ತು ಇತರ ಸ್ಥಳಗಳಲ್ಲಿ ಅಳವಡಿಸಲಾಗಿದೆ ಎಂದು ತಿಳಿದುಬಂದಿದೆ. ಇನ್ನು, ಈ ಕ್ಯಾಮೆರಾಗಳನ್ನು ಬೇರೆ ಯಾರೋ ಅಳವಡಿಸಿಲ್ಲ. ಮನೆ ಬಾಡಿಗೆಗೆ ನೀಡಿದ ಮಾಲೀಕರೇ ಇಂತಹ ಕೆಲಸ ಮಾಡಿದ್ದಾರೆ ನೋಡಿ..

ಇದನ್ನು ಓದಿ: ರೇವಾ ವಿವಿ ವಿದ್ಯಾರ್ಥಿ ಕೊಲೆ ಕೇಸ್‌: ಓರ್ವ ವಿದ್ಯಾರ್ಥಿ ಅರೆಸ್ಟ್; ಇನ್ನೂ ಕೆಲ ಆರೋಪಿಗಳಿಗಾಗಿ ಶೋಧ ಕಾರ್ಯ

ರಾಜಸ್ಥಾನದ ಉದಯಪುರ ನಗರದ ಪ್ರತಾಪನಗರ ಪೊಲೀಸ್ ಠಾಣೆಯಲ್ಲಿ ಈ ಕೇಸ್‌ ದಾಖಲಾಗಿದ್ದು, ಉದಯಪುರ ವಿಭಾಗದ ಅತಿದೊಡ್ಡ ಮೋಹನ್‌ಲಾಲ್ ಸುಖದಿಯಾ ವಿಶ್ವವಿದ್ಯಾಲಯವು ಈ ಪೊಲೀಸ್ ಠಾಣೆ ವೃತ್ತದಲ್ಲಿದೆ ಎಂಬುದು ಸಹ ಗಮನಿಸಬೇಕಾದ ಅಂಶ. ಬೋಹ್ರಾ ಗಣೇಶ್ ಪ್ರದೇಶವು ಈ ವಿಶ್ವವಿದ್ಯಾಲಯದ ಸಮೀಪದಲ್ಲಿದೆ. ಈ ಪ್ರದೇಶದಲ್ಲಿ ನೂರಾರು ಯುವಕ-ಯುವತಿಯರು ಬಾಡಿಗೆಗೆ ಕೊಠಡಿ ಅಥವಾ ಫ್ಲ್ಯಾಟ್‌ಗಳನ್ನು ತೆಗೆದುಕೊಂಡು ವಾಸಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆ ಈ ಪ್ರಕರಣ ಸಂಬಂಧ ರಾಜ್‌ಸಮಂದ್‌ನ ನಾಥದ್ವಾರ ನಿವಾಸಿ ರಾಜೇಂದ್ರ ಸೋನಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.  

ಸ್ಪೈ ಕ್ಯಾಮೆರಾಗಳು ಪತ್ತೆಯಾಗಿದ್ದು ಹೀಗೆ..
ಈ ಘಟನೆ ಬಗ್ಗೆ ಮಾಹಿತಿ ನೀಡಿದ ಪೊಲೀಸ್‌ ಅಧಿಕಾರಿಗಳು ವಿದ್ಯಾರ್ಥಿನಿಯರು ಪ್ರತಾಪನಗರದಲ್ಲಿ ದೂರು ನೀಡಿದ್ದಾರೆ ಎಂದು ಪ್ರಕರಣದ ತನಿಖಾಧಿಕಾರಿ ಡಿಎಸ್ಪಿ ಶಿಪ್ರಾ ರಾಜವತ್ ತಿಳಿಸಿದ್ದಾರೆ. ಬೋಹ್ರಾ ಗಣೇಶ್‌ ಜೀ ಮಂದಿರ ರಸ್ತೆಯಲ್ಲಿರುವ ಪಾರ್ಥ್ ಕಾಂಪ್ಲೆಕ್ಸ್‌ನಲ್ಲಿರುವ ಫ್ಲ್ಯಾಟ್‌ ಸಂಖ್ಯೆ 401 ಅನ್ನು ರಾಜೇಂದ್ರ ಅಲಿಯಾಸ್ ರಾಜ್ ಸೋನಿ ಅವರಿಂದ ಬಾಡಿಗೆಗೆ ಪಡೆದಿದ್ದೇವೆ ಎಂದು ದೂರಿನಲ್ಲಿ ತಿಳಿಸಲಾಗಿದೆ. 

ಇದನ್ನೂ ಓದಿ: ಬೀದರ್‌ನಲ್ಲಿ ಭಾರಿ ಮಳೆ: ಹಳ್ಳ ದಾಟಲು ಹೋಗಿ ಮಕ್ಕಳು ಸೇರಿ ಕುಟುಂಬದ ಮೂವರು ನೀರುಪಾಲು

ಕೆಲ ದಿನಗಳ ಹಿಂದೆ ಆಕೆ ಮನೆಗೆ ಹೋಗಿದ್ದ ವೇಳೆ ಫ್ಲ್ಯಾಟ್‌ ಮಾಲೀಕರು ರಿಪೇರಿ ನೆಪದಲ್ಲಿ ಫ್ಲಾಟ್ ತೆರೆದಿದ್ದರು. ಫ್ಲಾಟ್‌ನ ಕೀ ಕೂಡ ಅವರ ಬಳಿ ಇತ್ತು. ಆ ವೇಳೆ ಫ್ಲ್ಯಾಟ್‌ನಲ್ಲಿ ಯುವತಿಯರು ಇಲ್ಲದ ಲಾಭ ಪಡೆದು ಬಾತ್ ರೂಂ, ಬೆಡ್ ರೂಂನಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಸ್ಪೈ ಕ್ಯಾಮೆರಾಗಳನ್ನು (ಚಿಕ್ಕ ಗಾತ್ರದ ಕ್ಯಾಮೆರಾ) ಅಳವಡಿಸಿದ್ದರು. ಇನ್ನು, ಪ್ಲ್ಯಾಟ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿದ್ದು, ರಿಪೇರಿ ಮಾಡುವಾಗ, ಸ್ಪೈ ಕ್ಯಾಮೆರಾಗಳನ್ನು ಅಳವಡಿಸಲಾಗಿರುವ ಬಗ್ಗೆ ವಿದ್ಯಾರ್ಥಿನಿಯರ ಅರಿವಿಗೆ ಬಂದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಹುಡುಗಿಯರ ಚಟುವಟಿಕೆಯನ್ನು ಲೈವ್ ಆಗಿ ವೀಕ್ಷಿಸಲು ಬಳಸಲಾಗುತ್ತಿತ್ತು
ಈ ಪ್ರಕರಣದ ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದೇವೆ ಎಂದು ಡಿಎಸ್ಪಿ ಶಿಪ್ರಾ ರಾಜವತ್ ತಿಳಿಸಿದ್ದಾರೆ. ಅಲ್ಲದೆ, ಉದಯಪುರದ ಹೊರಗೆ ವಾಸಿಸುವ ಹುಡುಗಿಯರಿಗೆ ಬಾಡಿಗೆಗೆ ಫ್ಲ್ಯಾಟ್‌ ನೀಡಿರುವುದು ಬೆಳಕಿಗೆ ಬಂದಿದೆ. ಆರೋಪಿಯೇ ಕಂಪ್ಯೂಟರ್ ಮತ್ತು ಸಿಸಿಟಿವಿ ಕ್ಯಾಮೆರಾ ವ್ಯವಹಾರ ನಡೆಸುತ್ತಾನೆ. ನಾನು ಸ್ಪೈ ಕ್ಯಾಮೆರಾಗಳನ್ನು ಅಳವಡಿಸಿದ್ದೇನೆ. ಇದಾದ ಬಳಿಕ ಫ್ಲ್ಯಾಟ್‌ನಲ್ಲಿ ಅಳವಡಿಸಲಾಗಿರುವ ಇಂಟರ್‌ನೆಟ್ ರೂಟರ್ ಮೂಲಕ ಬಾಡಿಗೆದಾರರ ಬಾತ್‌ರೂಮ್ ಮತ್ತು ಬೆಡ್‌ರೂಮ್‌ನ ವಿಡಿಯೋಗಳನ್ನು ಮೊಬೈಲ್‌ನಲ್ಲಿ ವೀಕ್ಷಿಸುತ್ತಿದ್ದ. ಹಾಗೆ, ಆ ಯುವತಿಯರ ವಿಡಿಯೋಗಳನ್ನೂ ಮಾಡಿದ್ದ ಎಂದು ಬೆಳಕಿಗೆ ಬಂದಿದೆ. ಈ ಸಂಬಂಧ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಆತನ ಮೊಬೈಲ್ ಪರಿಶೀಲಿಸುತ್ತಿದ್ದಾರೆ. ಇನ್ನು, ಆರೋಪಿ ವಿಡಿಯೋ ದುರ್ಬಳಕೆ ಮಾಡಿಕೊಂಡಿದ್ದಾನೆಯೇ ಎಂಬುದನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದೇವೆ ಎಂದೂ ಪೊಲೀಸರು ಹೇಳಿದ್ದಾರೆ. 

ಇದನ್ನೂ ಓದಿ: ಸೈಬರ್‌ ಕ್ರಿಮಿನಲ್ಸ್‌ ವಿರುದ್ಧ 5000 ಪೊಲೀಸರ ದಾಳಿ: ನೋಯ್ಡಾ ಬಳಿಯ 300 ಪ್ರದೇಶದಲ್ಲಿ ಕಾರ್ಯಾಚರಣೆ; 125 ವಂಚಕರ ವಶಕ್ಕೆ

Latest Videos
Follow Us:
Download App:
  • android
  • ios