Asianet Suvarna News Asianet Suvarna News

ಇಂದು ಸೇನಾಪಡೆಗಳಿಂದ ಆಸ್ಪತ್ರೆಗಳ ಮೇಲೆ ಹೂಮಳೆ

ಕೊರೋನಾ ವಾರಿಯರ್ಸ್‌ಗೆ ಕೃತಜ್ಞತೆ ಸಲ್ಲಿಸಲು ದೇಶದ ಮೂರೂ ಸಶಸ್ತ್ರ ಪಡೆಗಳು ಭಾನುವಾರ ದೇಶದ ಉದ್ದಗಲಕ್ಕೂ ಕೋವಿಡ್‌ ಆಸ್ಪತ್ರೆಗಳ ಮೇಲೆ ವಿಮಾನಗಳ ಮೂಲಕ ಫ್ಲೈ ಪಾಸ್ಟ್‌ ಹಾಗೂ ಹೆಲಿಕಾಪ್ಟರ್‌ಗಳಿಂದ ಹೂಮಳೆ ಸುರಿಸಲು ಸಕಲ ಸಿದ್ಧತೆ ಮಾಡಿಕೊಂಡಿವೆ.

Armed forces make preparations to say thank you to corona warriors on Sunday  may 03
Author
Bengaluru, First Published May 3, 2020, 10:19 AM IST

ನವದೆಹಲಿ (ಮೇ. 03): ಕೊರೋನಾ ವಾರಿಯರ್ಸ್‌ಗೆ ಕೃತಜ್ಞತೆ ಸಲ್ಲಿಸಲು ದೇಶದ ಮೂರೂ ಸಶಸ್ತ್ರ ಪಡೆಗಳು ಭಾನುವಾರ ದೇಶದ ಉದ್ದಗಲಕ್ಕೂ ಕೋವಿಡ್‌ ಆಸ್ಪತ್ರೆಗಳ ಮೇಲೆ ವಿಮಾನಗಳ ಮೂಲಕ ಫ್ಲೈ ಪಾಸ್ಟ್‌ ಹಾಗೂ ಹೆಲಿಕಾಪ್ಟರ್‌ಗಳಿಂದ ಹೂಮಳೆ ಸುರಿಸಲು ಸಕಲ ಸಿದ್ಧತೆ ಮಾಡಿಕೊಂಡಿವೆ.

ವಾಯುಪಡೆಯ ವಿಮಾನ ಹಾಗೂ ಹೆಲಿಕಾಪ್ಟರ್‌ಗಳು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಹಾಗೂ ದಿಬ್ರುಘರ್‌ನಿಂದ ಕಛ್‌ವರೆಗೆ ಹಾರಾಟ ನಡೆಸಿ ಹೂವು ಚೆಲ್ಲಲಿವೆ. ಭೂಸೇನೆಯ ಸಶಸ್ತ್ರ ಪಡೆಗಳು ಮೌಂಟೇನ್‌ ಬ್ಯಾಂಡ್‌ ನುಡಿಸಿ, ವಿಶೇಷ ಕವಾಯತು ನಡೆಸಿ ವೈದ್ಯರು, ನರ್ಸ್‌ಗಳು, ನೈರ್ಮಲ್ಯ ಕಾರ್ಮಿಕರು, ಪೊಲೀಸರು ಹಾಗೂ ಪತ್ರಕರ್ತರಿಗೆ ಕೃತಜ್ಞತೆ ಸಲ್ಲಿಸಲಿವೆ.

2ನೇ ಆರ್ಥಿಕ ಪ್ಯಾಕೇಜ್‌ಗೆ ಮೋದಿ ಸಿದ್ಧತೆ!

ನೌಕಾಪಡೆಯು ತನ್ನ ಯುದ್ಧನೌಕೆಗಳಲ್ಲಿ ವಿದ್ಯುತ್‌ ಬೆಳಗಿ ಕೊರೋನಾ ವಾರಿಯರ್‌ಗಳ ಜೊತೆ ದೇಶದ ಯೋಧರೂ ಇದ್ದಾರೆ ಎಂದು ಸಾಂಕೇತಿಕವಾಗಿ ಹೇಳಲಿದೆ. ಈ ಫ್ಲೈ-ಪಾಸ್ಟ್‌, ವಿಶೇಷ ಕವಾಯತು ಹಾಗೂ ವಿದ್ಯುದ್ದೀಪ ಬೆಳಗುವ ಕಾರ್ಯಾಚರಣೆಗೆ ಮೂರೂ ಸಶಸ್ತ್ರ ಪಡೆಗಳು ಶನಿವಾರ ಸಕಲ ಸಿದ್ಧತೆ ಮಾಡಿಕೊಂಡಿವೆ.

ಭಾನುವಾರ ಬೆಳಗ್ಗೆ ದೇಶದ ವಿವಿಧ ಭಾಗಗಳಲ್ಲಿ ಪೊಲೀಸ್‌ ಸ್ಮಾರಕಗಳಿಗೆ ಪುಷ್ಪಗುಚ್ಚ ಇರಿಸುವ ಮೂಲಕ ಈ ಅಭಿನಂದನಾ ಕಾರ್ಯಕ್ರಮ ಆರಂಭವಾಗಲಿದೆ. ನಂತರ 10ರಿಂದ 11 ಗಂಟೆಯ ನಡುವೆ ಯುದ್ಧವಿಮಾನಗಳು ಹಾಗೂ ಸರಕು ವಿಮಾನಗಳು ಹಾರಾಟ ನಡೆಸಲಿವೆ. ಇನ್ನು ಹೆಲಿಕಾಪ್ಟರ್‌ಗಳು ವಿವಿಧ ನಗರಗಳಲ್ಲಿ ಆಸ್ಪತ್ರೆಗಳ ಮೇಲೆ ಹೂವಿನ ಮಳೆ ಸುರಿಸಲಿವೆ.

ನಂತರ ರಾತ್ರಿ 7.30ರಿಂದ 11.59ರ ವರೆಗೆ ಮುಂಬೈನ ಗೇಟ್‌ ವೇ ಆಫ್‌ ಇಂಡಿಯಾ ಬಳಿ ಐದು ಯುದ್ಧ ನೌಕೆಗಳು ವಿದ್ಯುದ್ದೀಪಗಳನ್ನು ಬೆಳಗಿ ‘ಕೊರೋನಾ ವಾರಿಯರ್‌ಗಳಿಗೆ ಸೆಲ್ಯೂಟ್‌’ ಎಂಬ ಬ್ಯಾನರ್‌ಗಳನ್ನು ಪ್ರದರ್ಶಿಸಲಿವೆ. ಗೋವಾ, ವಿಶಾಖಪಟ್ಟಣ, ಕಾರವಾರ, ಮಂಗಳೂರು ಮುಂತಾದ ನೌಕಾ ನೆಲೆಗಳಲ್ಲೂ ಇದೇ ಮಾದರಿಯ ಕಾರ್ಯಾಚರಣೆ ನಡೆಯಲಿದೆ ಎಂದು ಸೇನೆಯ ಮೂಲಗಳು ತಿಳಿಸಿವೆ.

Follow Us:
Download App:
  • android
  • ios