Asianet Suvarna News Asianet Suvarna News

APJ Abdul Kalam Death Anniversary: ‘ಮಿಸೈಲ್‌ ಮ್ಯಾನ್‌’ ರವರ 10 ಸ್ಫೂರ್ತಿದಾಯಕ ಉಲ್ಲೇಖಗಳು ಇಲ್ಲಿವೆ..

ಎಪಿಜೆ ಅಬ್ದುಲ್‌ ಕಲಾಂ ಅವರನ್ನು ಭಾರತದ ಮಿಸೈಲ್‌ ಮ್ಯಾನ್‌ ಹಾಗೂ ಜನರ ರಾಷ್ಟ್ರಪತಿ ಎಂದು ಕರೆಯಲಾಗುತ್ತದೆ. ಇಂದು ಅವರ 7ನೇ ಪುಣ್ಯಸ್ಮರಣೆಯ ದಿನ. ಈ ಹಿನ್ನೆಲೆ ಅವರು ನೀಡಿದ ಸ್ಪೂರ್ತಿದಾಯಕ ಉಲ್ಲೇಖಗಳು ಇಲ್ಲಿವೆ ನೋಡಿ.

apj abdul kalam 7th death anniversary most inspirational quotes by missile man ash
Author
Bangalore, First Published Jul 27, 2022, 11:34 AM IST

ಎಪಿಜೆ ಅಬ್ದುಲ್‌ ಕಲಾಂ ಹೆಸರು ಕೇಳಿದ್ರೆ ಸಾಕು, ಹಲವರಲ್ಲಿ ಈಗಲೂ ಉತ್ಸಾಹ ಮೂಡುತ್ತದೆ. ಇದಕ್ಕೆ ಕಾರಣ ಅವರು ದೇಶದ ಉತ್ಸಾಹದ ಚಿಲುಮೆಯಾಗಿದ್ದರು. ಅದರಲ್ಲೂ ವಿದ್ಯಾರ್ಥಿಗಳನ್ನು ಕಂಡರೆ ಅಬ್ದುಲ್‌ ಕಲಾಂ ಸ್ವತ: ತಾವು ಮಗುವಾಗಿಬಿಡುತ್ತಿದ್ದರು .ಇವರು ಏರೋಸ್ಪೇಸ್‌ ವಿಜ್ಘಾನಿ ಮಾತ್ರವಲ್ಲ, ದೇಶದ ಮಾಜಿ ರಾಷ್ಟ್ರಪತಿಯೂ ಆಗಿದ್ದರು. ಅವರನ್ನು ‘ಭಾರತದ ಮಿಸೈಲ್‌ ಮ್ಯಾನ್‌’ ಎಂದು ಕರೆಯಲಾಗುತ್ತದೆ ಹಾಗೂ ಅತ್ಯುತ್ತಮ ಶಿಕ್ಷಕರೆಂದೂ ನೆನಪಿಸಿಕೊಳ್ಳಲಾಗುತ್ತದೆ. ಜತೆಗೆ ಅವರನ್ನು ಜನರ ರಾಷ್ಟ್ರಪತಿ ಎಂದೂ ಕರೆಯಲಾಗುತ್ತಿತ್ತು. ಏಕೆಂದರೆ ರಾಷ್ಟ್ರಪತಿಯಾದ ಬಳಿಕ ಇವರು ಸಾರ್ವಜನಿಕರಿಗೆ ಹತ್ತಿರವಾದಷ್ಟು ದೇಶದ ಮೊದಲ ಪ್ರಜೆಗಳು ಇವರಷ್ಟು ಹತ್ತಿರವಾಗಿದ್ದರು ಎಂದೂ ಹೇಳಲಾಗುತ್ತಿತ್ತು.

ಭಾರತದ ರಕ್ಷಣಾ ಹಾಗೂ ಬಾಹ್ಯಾಕಾಶ ಕ್ಷೇತ್ರ ಅಭಿವೃದ್ಧಿಯಲ್ಲಿ ಅಬ್ದುಲ್‌ ಕಲಾಂ ಪ್ರಮುಖ ಪಾತ್ರ ವಹಿಸಿದ್ದಾರೆ. ಜುಲೈ 27, 2015 ರಂದು ದೇಶ ಈ ಅದ್ಭುತ ವಿಜ್ಘಾನಿ, ಶಿಕ್ಷಕ ಹಾಗೂ ನಾಯಕರನ್ನು ಕಳೆದುಕೊಂಡಿತು. ಅವರು ಮೃತಪಟ್ಟಾಗ ಇಡೀ ದೇಶದ ಜನರೇ ಕಣ್ಣೀರನ್ನು ಹಾಕಿದರು. ಅಬ್ದುಲ್‌ ಕಲಾಂಗೆ ಮಕ್ಕಳು ಎಂದರೆ ತುಂಬಾ ಇಷ್ಟ. ಅದೇ ರೀತಿ, ಮಕ್ಕಳಿಗೂ ಸಹ ಅಬ್ದುಲ್‌ ಕಲಾಂ ಅಂದ್ರೆ ತುಂಬಾ ಪ್ರೀತಿ. ಕಲಾಂ ರಾಷ್ಟ್ರಪತಿಯಾದ ಬಳಿಕವಂತೂ ಮಕ್ಕಳು ಅವರನ್ನು ಕಲಾಂ ತಾತ ಎಂದೇ ಕರೆಯುತ್ತಿದ್ದರು. ಇನ್ನೊಂದೆಡೆ, ಮಕ್ಕಳಿಗೆ ಕಲಾಂ ಆಗಾಗ್ಗೆ ಪಾಠ ಮಾಡುತ್ತಿದ್ದರು ಹಾಗೂ, ಉತ್ಸಾಹವನ್ನು ಚಿಮ್ಮಿಸುತ್ತಿದ್ದರು. 

ಇದನ್ನೂ ಓದಿ: ಅಬ್ದುಲ್ ಕಲಾಂ ಬಳಿಕ ರೈಲು ಹತ್ತಿದ ಭಾರತದ ಮೊದಲ ರಾಷ್ಟ್ರಪತಿ; ಹುಟ್ಟೂರಿನತ್ತ ಕೋವಿಂದ್ ಪ್ರಯಾಣ!

ಆದರೂ, ಇಂದಿಗೂ ಇವರನ್ನು ದೇಶ ಸ್ಮರಿಸುತ್ತದೆ. ಇಂದು ಅವರ 7ನೇ ಪುಣ್ಯಸ್ಮರಣೆ. ಈ ಹಿನ್ನೆಲೆ ಅವರು ನೀಡಿದ 10 ಸ್ಪೂರ್ತಿದಾಯಕ ಉಲ್ಲೇಖಗಳು ಇಲ್ಲಿದೆ ನೋಡಿ..

1) ‘’ನಿರ್ಣಯವು (determination) ನಮ್ಮ ಎಲ್ಲಾ ಹತಾಶೆ ಮತ್ತು ಅಡೆತಡೆಗಳ ಮೂಲಕ ನಮ್ಮನ್ನು ನೋಡುವ ಶಕ್ತಿಯಾಗಿದೆ. ಇದು ನಮಗೆ ಇಚ್ಛಾಶಕ್ತಿಯನ್ನು (willpower) ನಿರ್ಮಿಸಿಕೊಳ್ಳಲು ಸಹಾಯ ಮಾಡುತ್ತದೆ. ಇಚ್ಛಾಶಕ್ತಿ ನಮ್ಮ ಯಶಸ್ಸಿನ ಆಧಾರವಾಗಿದೆ’’.

2) "ಯುವಕರು (youth) ಯಾವುದೇ ರಾಜಿಗೆ ಒಪ್ಪಿಕೊಳ್ಳಬಾರದು ಅಥವಾ ಅವರು ಭವಿಷ್ಯದತ್ತ ದೃಷ್ಟಿ ಇಡುವುದನ್ನು ಕಡಿಮೆ ಮಾಡಬಾರದು. ತನ್ನ ಯುವಕರನ್ನು ಅನುಸರಣೆಯಲ್ಲಿ ತೆವಳುವಂತೆ ಮಾಡುವ ಮತ್ತು ಅವರ ಆಕಾಂಕ್ಷೆಗಳ ಮೇಲೆ ಸಿದ್ಧಾಂತಗಳನ್ನು ಜಾರಿಗೊಳಿಸುವ ಸಮಾಜವು ಎಂದಿಗೂ ಪ್ರವರ್ಧಮಾನಕ್ಕೆ ಬರಲು ಸಾಧ್ಯವಿಲ್ಲ’’.

3) ನಿಮ್ಮ ಮೊದಲ ಗೆಲುವಿನ ನಂತರ ವಿಶ್ರಾಂತಿ ತೆಗೆದುಕೊಳ್ಳಬೇಡಿ. ಏಕೆಂದರೆ ನೀವು ಎರಡನೆಯ ಗೆಲುವಲ್ಲಿ ವಿಫಲವಾದರೆ, ನಿಮ್ಮ ಮೊದಲ ಗೆಲುವು ಕೇವಲ ಅದೃಷ್ಟ ಎಂದು ಹೇಳಲು ಹೆಚ್ಚಿನ ತುಟಿಗಳು (ಜನರು) ಕಾಯುತ್ತಿವೆ."

4) "ನಮ್ಮ ಮಕ್ಕಳು ಉತ್ತಮ ನಾಳೆಯನ್ನು ಹೊಂದಲು ನಾವು ನಮ್ಮ ಇಂದಿನ ತ್ಯಾಗ ಮಾಡೋಣ."

5) "ಕನಸು, ಕನಸು, ಕನಸು. ಕನಸುಗಳು ಆಲೋಚನೆಗಳಾಗಿ ರೂಪಾಂತರಗೊಳ್ಳುತ್ತವೆ ಮತ್ತು ಆಲೋಚನೆಗಳು ಕ್ರಿಯೆಗೆ ಕಾರಣವಾಗುತ್ತವೆ."

ಅಬ್ದುಲ್ ಕಲಾಂ ಜನ್ಮದಿನ: 'ಕ್ಷಿಪಣಿ ಮಾನವ'ನ ನೆನೆದ ಗಣ್ಯರು!

 6) "ಯಶಸ್ಸು (success) ಸಾಧಿಸುವ ನನ್ನ ಸಂಕಲ್ಪವು ಸಾಕಷ್ಟು ಬಲವಾಗಿದ್ದರೆ ವೈಫಲ್ಯವು ಎಂದಿಗೂ ನನ್ನನ್ನು ಹಿಂದಿಕ್ಕುವುದಿಲ್ಲ."

7) "ನಿಮ್ಮ ಮಿಷನ್‌ನಲ್ಲಿ (ಯೋಜನೆ) ಯಶಸ್ವಿಯಾಗಲು, ನಿಮ್ಮ ಗುರಿಯತ್ತ ನೀವು ಏಕ ಮನಸ್ಸಿನ ಭಕ್ತಿಯನ್ನು ಹೊಂದಿರಬೇಕು."

8) "ನೀವು ವಿಫಲವಾದರೆ, ಎಂದಿಗೂ ಬಿಟ್ಟುಕೊಡಬೇಡಿ. ಏಕೆಂದರೆ ಫೇಲ್‌ (FAIL) ಎಂದರೆ "ಕಲಿಕೆಯಲ್ಲಿ ಮೊದಲ ಪ್ರಯತ್ನ" ( “First Attempt In Learning") ಎನ್ನಲಾಗುತ್ತದೆ.

9) ರಾಷ್ಟ್ರದ ಅತ್ಯುತ್ತಮ ಮೆದುಳುಗಳು ತರಗತಿಯ ಕೊನೆಯ ಬೆಂಚುಗಳಲ್ಲಿ ಕಂಡುಬರಬಹುದು.

10) “ಸಕ್ರಿಯರಾಗಿರಿ! ಜವಾಬ್ದಾರಿಯನ್ನು (responsibility) ತೆಗೆದುಕೊಳ್ಳಿ! ನೀವು ನಂಬುವ ವಿಷಯಗಳಿಗಾಗಿ ಕೆಲಸ ಮಾಡಿ. ನೀವು ಇದನ್ನು ಮಾಡದಿದ್ದರೆ, ನಿಮ್ಮ ಭವಿಷ್ಯವನ್ನು ನೀವು ಇತರರಿಗೆ ಒಪ್ಪಿಸುತ್ತೀರಿ ಎಂದರ್ಥ. 

Follow Us:
Download App:
  • android
  • ios