ಕರ್ನಾಟಕವನ್ನು ಒಳಗೊಂಡ ದಕ್ಷಿಣದ ಪರ್ಯಾಯ ದ್ವೀಪಕಲ್ಪ ಪ್ರದೇಶಗಳು ಮತ್ತು ವಾಯುವ್ಯ ಭಾರತ ಹೊರತುಪಡಿಸಿ ದೇಶದ ಉಳಿದ ಭಾಗಗಳು ಏಪ್ರಿಲ್‌-ಜೂನ್‌ ಅವಧಿಯಲ್ಲಿ ಭಾರೀ ಉಷ್ಣಾಂಶಕ್ಕೆ ಸಾಕ್ಷಿಯಾಗಲಿವೆ.

ನವದೆಹಲಿ: ಕರ್ನಾಟಕವನ್ನು ಒಳಗೊಂಡ ದಕ್ಷಿಣದ ಪರ್ಯಾಯ ದ್ವೀಪಕಲ್ಪ ಪ್ರದೇಶಗಳು ಮತ್ತು ವಾಯುವ್ಯ ಭಾರತ ಹೊರತುಪಡಿಸಿ ದೇಶದ ಉಳಿದ ಭಾಗಗಳು ಏಪ್ರಿಲ್‌-ಜೂನ್‌ ಅವಧಿಯಲ್ಲಿ ಭಾರೀ ಉಷ್ಣಾಂಶಕ್ಕೆ ಸಾಕ್ಷಿಯಾಗಲಿವೆ. ಬಿಸಿಗಾಳಿಯ ಪ್ರಮಾಣ ಹೆಚ್ಚಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ನೆಚ್ಚರಿಕೆ ನೀಡಿದೆ. ಜೊತೆಗೆ ಈ ಭಾಗಗಳಲ್ಲಿ ಉಷ್ಣಾಂಶ ಸಾಮಾನ್ಯಕ್ಕಿಂತ ಹೆಚ್ಚಿರಲಿದೆ ಎಂದಿದೆ.

ಈ ಕುರಿತು ಶನಿವಾರ ಇಲ್ಲಿ ಮಾಹಿತಿ ನೀಡಿರುವ ಐಎಂಡಿ ಮುಖ್ಯಸ್ಥ ಧನಂಜಯ್‌ ಮಹಾಪಾತ್ರ (Dhananjay Mahapatra), ‘2023ರ ಉಷ್ಣಾಂಶದ ಸಮಯದಲ್ಲಿ (ಏಪ್ರಿಲ್‌-ಜೂನ್‌) ವಾಯುವ್ಯ ಭಾರತದ ಕೆಲ ಭಾಗ, ದಕ್ಷಿಣ ಭಾರತ ಹೊರತುಪಡಿಸಿ ದೇಶದ ಉಳಿದ ಭಾಗಗಳಲ್ಲಿ ಉಷ್ಣಾಂಶ ಸಾಮಾನ್ಯಕ್ಕಿಂತ ಹೆಚ್ಚಿರಲಿವೆ. ಬಿಹಾರ (Bihar), ಜಾರ್ಖಂಡ್‌ (Jharkhand), ಉತ್ತರಪ್ರದೇಶ (Uttar Pradesh), ಒಡಿಶಾ, ಪಶ್ಚಿಮ ಬಂಗಾಳ (West Bengal), ಛತ್ತೀಸ್‌ಗಢ, ಮಹಾರಾಷ್ಟ್ರ (Maharashtra), ಗುಜರಾತ್‌, ಪಂಜಾಬ್‌ (Punjab)ಮತ್ತು ಹರ್ಯಾಣದ ಬಹುತೇಕ ಭಾಗಗಳಲ್ಲಿ ಹೆಚ್ಚಿನ ಪ್ರಮಾಣದ ಉಷ್ಣಗಾಳಿ ಬೀಸಲಿದೆ’ ಎಂದು ಹೇಳಿದ್ದಾರೆ.

ಸಿಕ್ಕಾಪಟ್ಟೆ ಬಿಸಿಲು ಅಂತ ಮನೆಗೆ ಕೂಲರ್ ಅಳವಡಿಸೋ ಮುನ್ನ ಈ ವಿಚಾರ ತಿಳ್ಕೊಂಡಿರಿ

ತಾಪಮಾನ ಎಷ್ಟಿರಬಹುದು?:

ಬಯಲು ಪ್ರದೇಶಗಳಲ್ಲಿ ಉಷ್ಣಾಂಶ 40 ಡಿ.ಸೆ. ದಾಟಿದರೆ, ಕರಾವಳಿ ಪ್ರದೇಶದಲ್ಲಿ (coastal area)37 ಡಿ.ಸೆ. ದಾಟಿದರೆ, ಗುಡ್ಡ ಪ್ರದೇಶಗಳಲ್ಲಿ 30 ಡಿ.ಸೆ.ದಾಟಿದರೆ ಮತ್ತು ಸಾಮಾನ್ಯಕ್ಕಿಂತ 4.5 ಡಿ.ಸೆ. ಹೆಚ್ಚು ಉಷ್ಣಾಂಶ ದಾಖಲಾದರೆ ಆಗ ಅದನ್ನು ಬಿಸಿಗಾಳಿ ಎನ್ನಲಾಗುತ್ತದೆ. ಕಳೆದ ಫೆಬ್ರುವರಿಯಲ್ಲೇ ದೇಶದಲ್ಲಿ ಉಷ್ಣಾಂಶ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿತ್ತು. ಈ ಮೂಲಕ 1901ರಲ್ಲಿ ಉಷ್ಣಾಂಶ ಪ್ರಮಾಣ ದಾಖಲು ಆರಂಭವಾದ ಬಳಿಕ ಅತ್ಯಂತ ಗರಿಷ್ಠ ಉಷ್ಣಾಂಶ ದಾಖಲಾದ ಫೆಬ್ರುವರಿ ತಿಂಗಳು ಎಂಬ ದಾಖಲೆಗೂ ಪಾತ್ರವಾಗಿತ್ತು. ಆದರೆ ಮಾರ್ಚ್‌ನಲ್ಲಿ ಸಾಮಾನ್ಯ ಮಳೆ ಪ್ರಮಾಣವಾದ 29.9 ಮಿ.ಮೀಗೆ ಬದಲಾಗಿ 37.6 ನಮಿ.ಮೀನಷ್ಟುಮಳೆ ಸುರಿದ ಕಾರಣ ಉಷ್ಣಾಂಶದಲ್ಲಿ ಇಳಿಕೆ ಕಂಡುಬಂದಿತ್ತು.

ಸಿಕ್ಕಾಪಟ್ಟೆ ಬಿಸಿಲು ಅಂತ ರಸ್ತೆ ಬದಿ ಕಬ್ಬಿನ ಹಾಲು ಕುಡಿಯೋ ಮುನ್ನ ಈ ವಿಷ್ಯ ಗೊತ್ತಿರಲಿ