ಸಿಕ್ಕಾಪಟ್ಟೆ ಬಿಸಿಲು ಅಂತ ರಸ್ತೆ ಬದಿ ಕಬ್ಬಿನ ಹಾಲು ಕುಡಿಯೋ ಮುನ್ನ ಈ ವಿಷ್ಯ ಗೊತ್ತಿರಲಿ
ಬೇಸಿಗೆ ಬಂತು. ಹೀಗಿರುವಾಗ ಸುಡುವ ಬಿಸಿಲಲ್ಲಿ ತಂಪಾಗಿರೋಕೆ ಹಣ್ಣಿನ ಜ್ಯೂಸ್ ಕುಡಿಯೋಣ ಅನಿಸ್ತಿರುತ್ತೆ. ಹಾಗೆ ಕಬ್ಬಿನ ಹಾಲು ನಿಮ್ಮ ಅಚ್ಚುಮೆಚ್ಚಿನ ಪಾನೀಯವೇ ? ಆದ್ರೆ ರಸ್ತೆ ಬದಿಯಲ್ಲಿ ಮಾಡಿ ಮಾರುವ ಜ್ಯೂಸ್ ಕುಡಿಯುವ ಮೊದಲು ಕೆಲವಷ್ಟು ಸಂಗತಿಗಳನ್ನು ತಿಳ್ಕೊಳ್ಳಿ..
ಬೇಸಿಗೆ (Summer) ಯಲ್ಲಿ ಪ್ರತಿಯೊಬ್ಬರಿಗೂ ಕಬ್ಬಿನ ಹಾಲು (Sugarcane Milk) ಇಷ್ಟವಾಗುತ್ತದೆ. ಅನೇಕರು ರುಚಿ (Taste) ಹಾಗೂ ಆರೋಗ್ಯ (Health) ಕ್ಕೆ ಒಳ್ಳೆಯದು ಎನ್ನುವ ಕಾರಣಕ್ಕೆ ಅದನ್ನು ಸೇವನೆ ಮಾಡ್ತಾರೆ. ಕಬ್ಬಿನ ಹಾಲಿನಲ್ಲಿ ಕೊಬ್ಬು (Fat), ಕೊಲೆಸ್ಟ್ರಾಲ್ (Cholesterol), ಫೈಬರ್ ಮತ್ತು ಪ್ರೋಟೀನ್ (Protein) ಇರೋದಿಲ್ಲ. ಆದರೆ ಸೋಡಿಯಂ, ಪೊಟ್ಯಾಸಿಯಮ್, ಕ್ಯಾಲ್ಸಿಯಂ (Calcium), ಮೆಗ್ನೀಸಿಯಮ್, ಕಬ್ಬಿಣ ಮತ್ತು ಕ್ಯಾಲೋರಿಗಳು ಇದರಲ್ಲಿ ಹೇರಳವಾಗಿ ಇರುತ್ತವೆ. ಬೇಸಿಗೆ ಕಾಲದಲ್ಲಿ ದೇಹ (Body) ವನ್ನು ನಿರ್ಜಲೀಕರಣಗೊಳಿಸಲು ಕಬ್ಬಿನ ರಸವು ತುಂಬಾ ಪರಿಣಾಮಕಾರಿಯಾಗಿದೆ.
ಸುಡುವ ಬಿಸಿಲ ಧಗೆಗೆ ಕಬ್ಬಿನ ಹಾಲನ್ನು ಕುಡಿಯಲು ಹಾಯೆನಿಸುತ್ತದೆ. ಹೀಗಾಗಿಯೇ ಬಹುತೇಕರು ಟ್ರಾವೆಲ್ ಮಾಡುವಾಗ ಫ್ರುಟ್ ಜ್ಯೂಸ್ ಕುಡಿಯೋ ಬದಲು ರಿಫ್ರೆಶ್ ಆಗ್ಲಿ ಅಂತ ಕಬ್ಬಿನ ಜ್ಯೂಸ್‌ನ್ನೇ ಕುಡೀತಾರೆ. ಹೈವೇಯಲ್ಲಿ ಹೋಗುವಾಗ ರಸ್ತೆಯಲ್ಲಿ ಅಲ್ಲಲ್ಲಿ ಕಬ್ಬಿನ ಹಾಲು ಮಾರುವುದನ್ನು ನೀವು ನೋಡಿರಬಹುದು. ಆದರೆ ಇಂಥಾ ಕಡೆ ಕಬ್ಬಿನ ಹಾಲು ಕುಡೀಯೋದು ಆರೋಗ್ಯಕ್ಕೆ ಎಷ್ಟು ಹಾನಿಕರ ಅನ್ನೋದು ನಿಮ್ಗೆ ಗೊತ್ತಿದ್ಯಾ?
ರಸ್ತೆ ಬದಿಯಲ್ಲಿ ಇರುವ ಕಬ್ಬಿನ ಅಂಗಡಿಯಲ್ಲಿ ಒಬ್ಬ ವ್ಯಕ್ತಿ ಮಾತ್ರ ಇರುತ್ತಾನೆ. ಅವನೇ ಯಂತ್ರಕ್ಕೆ ಕಬ್ಬು ಹಾಕಿ ಆನ್ ಮಾಡಿ, ಹಾಲನ್ನು ಲೋಟಕ್ಕೆ ಹಾಕಿ ಕೊಡುತ್ತಾನೆ. ಹೀಗೆ ಎಲ್ಲವನ್ನೂ ಮುಟ್ಟುವ ವ್ಯಕ್ತಿ ಕೈಗೆ ಗ್ಲೌಸ್ ಕೂಡಾ ಹಾಕಿರುವುದಿಲ್ಲ ಎಂಬುದನ್ನು ನೀವು ಗಮನಿಸಬೇಕು. ಕಬ್ಬಿನ ಹಾಲನ್ನು ಮಾಡುವ ಯಂತ್ರಗಳನ್ನು ಸ್ವಚ್ಛ ಮಾಡಿರುವುದಿಲ್ಲ. ಮಾತ್ರವಲ್ಲ ಕಬ್ಬಿನ ಜ್ಯೂಸ್‌ಗೆ ಬಳಸುವ ನಿಂಬೆಹಣ್ಣು, ಶುಂಠಿ ಅಥವಾ ಪುದೀನಾವನ್ನು ತೊಳೆಯದೆ ನೇರವಾಗಿ ಬಳಸುತ್ತಾರೆ.
ಕೆಂಪಾದ ಕಬ್ಬಿನಿಂದ ಮಾಡಿದ ಕಬ್ಬಿನ ರಸವನ್ನು ಯಾವುದೇ ಕಾರಣಕ್ಕೂ ಸೇವಿಸಬೇಡಿ. ಏಕೆಂದರೆ ಅದು ಹಾಳಾಗಿರುತ್ತದೆ. ಈ ರೀತಿಯ ಕಬ್ಬಿನ ಹಾಲನ್ನು ಸೇವನೆ ಮಾಡುವುದರಿಂದ ನಿಮಗೆ ಅತಿ ಸಾರ ಮತ್ತು ಹೊಟ್ಟೆಗೆ ಸಂಬಂದಿಸಿದ ಕಾಯಿಲೆಗಳು ಬರಬಹುದು. ಐಸ್ ಗುಣಮಟ್ಟವೂ ಆರೋಗ್ಯ ಕೆಡಲು ಕಾರಣವಾಗಬಹುದು.
ಗ್ಯಾಸ್ಟ್ರೋಎಂಟರಾಲಜಿಸ್ಟ್‌ಗಳು ಮತ್ತು ಇತರ ತಜ್ಞರು ರಸ್ತೆಬದಿಯ ಕಬ್ಬು ಮತ್ತು ಇತರ ಜ್ಯೂಸ್‌ಗಳನ್ನು ಕುಡಿಯದಂತೆ ಎಚ್ಚರಿಕೆ ನೀಡುತ್ತಾರೆ. ಇಂಥಾ ಅಶುಚಿಯಾದ ಆಹಾರ ಮತ್ತು ಪಾನೀಯಗಳಿಂದ ಹೆಪಟೈಟಿಸ್ A, E ಮತ್ತು ಇತರ ಜಠರಗರುಳಿನ ತೊಂದರೆಗಳನ್ನು ಉಂಟಾಗಬಹುದು ಎಂದು ಹೇಳುತ್ತಾರೆ. ಇದು ಬೇಸಿಗೆಯಲ್ಲಿ ಸಾಮಾನ್ಯವಾಗಿದೆ ಮತ್ತು ಮಾನ್ಸೂನ್ ಸಮಯದಲ್ಲಿ ಉಲ್ಬಣಗೊಳ್ಳುತ್ತದೆ.
ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ.ಸಮೀರ್ ಪಾಟೀಲ್ ಮಾತನಾಡಿ, ಹೆಪಟೈಟಿಸ್ ಎ, ಇ, ವೈರಲ್ ಭೇದಿ, ಟೈಫಾಯಿಡ್ ಮತ್ತು ಜ್ವರದಂತಹ ಕಾಯಿಲೆಗಳು ಮಲದ ಕಣಗಳಲ್ಲಿನ ರೋಗಕಾರಕಗಳು ಓರೊಫೆಕಲ್ ಮಾರ್ಗದ ಮೂಲಕ ಹರಡುತ್ತವೆ. ಕಲುಷಿತ ನೀರು ಅಥವಾ ಮಂಜುಗಡ್ಡೆಯಿಂದ ತಯಾರಿಸಿದ ಕಬ್ಬು ಮತ್ತು ಹಣ್ಣಿನ ರಸಗಳು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಹೇಳಿದರು. ಬೇಸಿಗೆ ಆರಂಭವಾಗುತ್ತಿದ್ದಂತೆ ಹಣ್ಣುಗಳನ್ನು ರಸವನ್ನು ಕುಡಿಯಬೇಕು ಅನಿಸುವುದು ಸಹಜ. ಆದರೆ ಅನೈರ್ಮಲ್ಯದಿಂದ ತಯಾರಾದ ಬೀದಿಬದಿಯ ಜ್ಯೂಸ್‌ಗಳನ್ನು ಸೇವಿಸುವುದು ಸೂಕ್ತವಲ್ಲ, ಎಂದು ಅವರು ತಿಳಿಸಿದರು.
ಇನ್ನೊಬ್ಬ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ.ರಚಿತ್ ಅಗರವಾಲ್ ಅವರು 'ಈ ವರ್ಷದ ಆರಂಭದಲ್ಲಿ ತೀವ್ರವಾದ ಹೆಪಟೈಟಿಸ್ ಎ ರೋಗಿಗೆ ಚಿಕಿತ್ಸೆ ನೀಡಿದ್ದೆ. ವೈರಲ್ ಹೆಪಟೈಟಿಸ್ ಅಪರೂಪದ ಸಂದರ್ಭಗಳಲ್ಲಿ ತೀವ್ರವಾದ ಪಿತ್ತಜನಕಾಂಗದ ವೈಫಲ್ಯಕ್ಕೆ ಕಾರಣವಾಗಬಹುದು .ಮತ್ತು ಜೀವಕ್ಕೆ ಅಪಾಯಕಾರಿಯೂ ಆಗಬಹುದು. ಹೆಪಟೈಟಿಸ್ ಎ ಅಥವಾ ಇ ಕೆಲವೊಮ್ಮೆ ಯಕೃತ್ತಿನ ಕಸಿ ಅಗತ್ಯವಿರುತ್ತದೆ' ಎಂದರು.
ನೀರು ಮತ್ತು ಆಹಾರದಿಂದ ಹರಡುವ ರೋಗಗಳ ಅಪಾಯಕ್ಕಿಂತ ಹೆಚ್ಚುವರಿ ಹಣವನ್ನು ಪಾವತಿಸುವುದು ಮತ್ತು ಆರೋಗ್ಯಕರ ಸ್ಥಳಗಳಲ್ಲಿ ತಿನ್ನುವುದು ಉತ್ತಮ ಎಂದು ಅಗರವಾಲ್ ಸೇರಿಸಲಾಗಿದೆ. ಬೇಸಿಗೆಯಲ್ಲಿ ಅಂತಹ ಆಹಾರದಿಂದ ತೀವ್ರವಾದ ಗ್ಯಾಸ್ಟ್ರೋಎಂಟರೈಟಿಸ್ ಅನ್ನು ಸಹ ಪಡೆಯಬಹುದು. ಇದು ಬ್ಯಾಕ್ಟೀರಿಯಾದ ಸೋಂಕಿನಿಂದ ಪ್ರಚೋದಿಸಲ್ಪಡುತ್ತದೆ, ಇದನ್ನು ಸಾಮಾನ್ಯವಾಗಿ ಅತಿಸಾರ ಅಥವಾ ಭೇದಿ ಎಂದು ಕರೆಯಲಾಗುತ್ತದೆ, ”ಎಂದು ಅವರು ಹೇಳಿದರು.