ಅಧಿಕಾರಕ್ಕೆ ಮರಳುವವರೆಗೂ ಸದನದಲ್ಲಿ ಕಾಲಿಡುವುದಿಲ್ಲ : ಚಂದ್ರಬಾಬು ನಾಯ್ಡು!

*ಸದನದ ಚರ್ಚೆಯ ವೇಳೆ ಆಡಳಿತ ಮತ್ತು ವಿಪಕ್ಷಗಳ ಮಾತಿನ ಚಕಾಮಕಿ
*ಅಧಿಕಾರಕ್ಕೆ ಮರಳುವವರೆಗೂ ಸದನದಲ್ಲಿ ಕಾಲಿಡುವುದಿಲ್ಲ ಎಂದ ಮಾಜಿ ಸಿಎಂ
*ಕಳೆದ ಎರಡೂವರೆ ವರ್ಷಗಳಿಂದ, ನಾನು ಅವಮಾನಗಳನ್ನು ಸಹಿಸಿಕೊಂಡಿದ್ದೇನೆ
*ಈಗ ಕಾಂಗ್ರೆಸ್‌ ಸದಸ್ಯರ ನಿರಂತರ ನಿಂದನೆ ನೋವು ತಂದಿದೆ : ಚಂದ್ರಬಾಬು ನಾಯ್ಡು!
 

AP TDP Leader Chandrababu Naidu Vows To Enter Assembly Only After Returning To Power mnj

ಅಮರಾವತಿ(ನ19): ಆಂಧ್ರಪ್ರದೇಶ (Andra Pradesh) ವಿಧಾನಸಭೆಯಲ್ಲಿ ಕೃಷಿ ಕ್ಷೇತ್ರದ ಕುರಿತು ನಡೆದ ಕಿರು ಚರ್ಚೆಯ ವೇಳೆ  ಉಭಯ ಪಕ್ಷಗಳ ನಡುವೆ ಮಾತಿನ ಚಕಮಕಿ ನಡೆದ ನಂತರ ಮಾಜಿ ಮುಖ್ಯಮಂತ್ರಿ ಹಾಗೂ ತೆಲುಗು ದೇಶಂ ಪಕ್ಷದ ಅಧ್ಯಕ್ಷ ಎನ್ ಚಂದ್ರಬಾಬು ನಾಯ್ಡು (N Chandrababu Naidu) ತಮ್ಮ ಅಸಮಾಧಾನ  ಹೊರಹಾಕಿದ್ದಾರೆ. ಜತಗೆ ಅವರು ಅಧಿಕಾರಕ್ಕೆ ಮರಳಿದ ನಂತರವೇ ಮತ್ತೆ ಆಂಧ್ರಪ್ರದೇಶ ವಿಧಾನಸಭೆಗೆ (Assembly) ಕಾಲಿಡುವುದಾಗಿ ಶುಕ್ರವಾರ ಪ್ರತಿಜ್ಞೆ  ಮಾಡಿದ್ದಾರೆ. ಆಡಳಿತಾರೂಢ ವೈಎಸ್‌ಆರ್‌ ಕಾಂಗ್ರೆಸ್‌ (YSR Congress) ಸದಸ್ಯರು ತಮ್ಮ ಮೇಲೆ ನಿರಂತರ ನಿಂದನೆ ಮಾಡುತ್ತಿರುವುದು ನೋವು ತಂದಿದೆ ಎಂದು ಪ್ರತಿಪಕ್ಷದ ನಾಯಕ ಚಂದ್ರಬಾಬು ನಾಯ್ಡು  ಭಾವುಕರಾಗಿ ಸದನದಲ್ಲಿ ಹೇಳಿದ್ದಾರೆ.

ಕಳೆದ ಎರಡೂವರೆ ವರ್ಷಗಳಿಂದ ಅವಮಾನಗಳನ್ನು ಸಹಿಸಿಕೊಂಡಿದ್ದೇನೆ!

"ಕಳೆದ ಎರಡೂವರೆ ವರ್ಷಗಳಿಂದ, ನಾನು ಅವಮಾನಗಳನ್ನು ಸಹಿಸಿಕೊಂಡಿದ್ದೇನೆ ಆದರೆ ಶಾಂತವಾಗಿದ್ದೇನೆ. ಇಂದು ಅವರು ನನ್ನ ಹೆಂಡತಿಯನ್ನೂ (wife) ಗುರಿಯಾಗಿಸಿದ್ದಾರೆ. ನಾನು ಯಾವಾಗಲೂ ಗೌರವದಿಂದ ಬದುಕಿದ್ದೇನೆ. ಆದರೆ ಇನ್ನು ಮುಂದೆ ಇದನ್ನು ಸಹಿಸಲು ಸಾಧ್ಯವಿಲ್ಲ" ಎಂದು ನಾಯ್ಡು ಹೇಳಿದ್ದಾರೆ. ಆಡಳಿತ ಪಕ್ಷದ (Ruling Party) ಸದಸ್ಯರು ನಾಯ್ಡು ಅವರ ಹೇಳಿಕೆಯನ್ನು ನಾಟಕ (Drama) ಎಂದು ಕರೆಯುತ್ತಿದ್ದಂತೆಯೇ ಸ್ಪೀಕರ್ ತಮ್ಮಿನೇನಿ ಸೀತಾರಾಮ್ (Tammineni Seetaram) ನಾಯ್ಡು ಮಾತನಾಡದಂತೆ ತಡೆ ಹಿಡಿದ್ದಾರೆ.

ಸಾವರ್ಕರ್‌ ಮಾದರಿಯಲ್ಲಿ ಕ್ಷಮೆ ಕೇಳಿದ್ದಾರೆ: ಕೃಷಿ ಕಾಯ್ದೆ ಹಿಂಪಡೆದಿದ್ದಕ್ಕೆ ಹೀಗಿತ್ತು ನೆಟ್ಟಿಗರ ರಿಯಾಕ್ಷನ್!

ಸ್ವಲ್ಪ ಸಮಯದ ನಂತರ ತಮ್ಮ ಚೇಂಬರ್‌ನಲ್ಲಿ ತಮ್ಮ ಪಕ್ಷದ ಶಾಸಕರೊಂದಿಗೆ (MLA) ಸಭೆ ನಡೆಸಿದ ಚಂದ್ರಬಾಬು ನಾಯ್ಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು ಅವರ ಮನಸ್ಸಿಗೆ ತಂಬಾ ನೋವಾಗಿರುವ ಬಗ್ಗೆ ಹೇಳಿಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದರಿಂದ ದಿಗ್ಭ್ರಮೆಗೊಂಡ ಟಿಡಿಪಿ (TDP) ಶಾಸಕರು ನಾಯ್ಡು ಅವರನ್ನು ಸಮಾಧಾನಪಡಿಸಿದ್ದಾರೆ.  ಇದಾದ ಬಳಿಕವೇ ಅವರೆಲ್ಲರೂ ಮತ್ತೆ ಸದನಕ್ಕೆ ಬಂದಿದ್ದಾರೆ. ನಂತರ ನಾಯ್ಡು ಅವರು ತಾವು ಅಧಿಕಾರಕ್ಕೆ (Power) ಮರಳುವವರೆಗೆ ಸದನದಿಂದ ದೂರ ಉಳಿಯುವ ನಿರ್ಧಾರವನ್ನು (Decession) ಪ್ರಕಟಿಸಿದ್ದಾರೆ.

ಸುದ್ದಿಗೋಷ್ಠಿಯ ವೇಳೆ ಕಣ್ಣೀರು !

ಸುದ್ದಿಗೋಷ್ಠಿಯ (Press Conference) ವೇಳೆ ಕಣ್ಣೀರು ಹಾಕಿದ ಮಾಜಿ ಸಿಎಂ ಆಡಳಿತ ಪಕ್ಷದ ವೈಯುಕ್ತಿಕ ಟೀಕೆಗಳು (Personal Comments) ತೀವ್ರ ಅಸಾಮಾಧಾನ ತಂದಿವೆ ಎಂದು ಹೇಳಿದ್ದಾರೆ. 2019ರಲ್ಲಿ ಆಂದ್ರಪ್ರದೇಶ ವಿಧಾನಸಭೆ ಚುನಾವಣೆ ನಡೆದಿದ್ದವು. ಚುನಾವಣೆಯಲ್ಲಿ (Election) ಭರ್ಜರಿ ಗೆಲುವು ಸಾಧಿಸಿ ವೈಎಸ್‌ಆರ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. 175 ಕ್ಷೇತ್ರಗಳ ಪೈಕಿ 151 ಕ್ಷೇತ್ರಗಳಲ್ಲಿ ವೈಎಸ್‌ಆರ್ ಕಾಂಗ್ರೆಸ್‌ ಗೆಲುವು ಸಾಧಿಸಿತ್ತು. ಆಂದ್ರಪ್ರದೇಶದ ಮುಖ್ಯಮಂತ್ರಿಯಾಗ ವೈ ಎಸ್‌ ಜಗನ್‌ಮೋಹನ್ ರೆಡ್ಡಿ (Y. S. Jaganmohan Reddy) ಅಧಿಕಾರ ಸ್ವೀಕರಿಸಿದ್ದರು.

ಟಿಡಿಪಿ ನಾಯಕ ಚಂದ್ರಬಾಬು ನಾಯ್ಡುಗೆ ಸಿಐಡಿ ಕಂಟಕ!

ಈ ವರ್ಷದ ಆರಂಭದಲ್ಲಿ ಆಂಧ್ರ ಪ್ರದೇಶದ ಮಾಜಿ ಸಿಎಂ ಹಾಗೂ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡುಗೆ ಅಮರಾವತಿ ಲ್ಯಾಂಡ್ ಸ್ಕ್ಯಾಮ್ ವಿಚಾರದಲ್ಲಿ ಸಿಐಡಿ ಕಂಟಕ ಎದುರಾಗಿತ್ತು. ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ವಿರುದ್ಧ ಅಮರಾವತಿ ಲ್ಯಾಂಡ್ ಸ್ಕ್ಯಾಮ್ (Amravati Land Scam) ನಡೆಸಿದ್ದಾರೆಂಬ ಆರೋಪ ಕೇಳಿ ಬಂದಿತ್ತು. ಅಲ್ಲದೇ ಇದು ಬರೋಬ್ಬರಿ 500 ಕೋಟಿ ಭೂ ಹಗರಣ ಎನ್ನಲಾಗಿತ್ತು. 2021ರ ಮಾರ್ಚ್‌ನಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಸಿಐಡಿ (CID) ಅಧಿಕಾರಿಗಳು ಮಾಜಿ ಸಿಎಂಗೆ ನೋಟಿಸ್ (Notice) ರವಾನಿಸಿದ್ದರು. 

Latest Videos
Follow Us:
Download App:
  • android
  • ios