* ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ ನಿವಾಸದ ಬಳಿ ಸ್ಫೋಟಕ ಹಾಗೂ ಮನಸುಖ್‌ ಹಿರೇನ್ ಕೊಲೆ ಕೇಸ್* ಮಾಜಿ ಎನ್ಕೌಂಟರ್ ಸ್ಪೆಷಲಿಸ್ಟ್ ಪ್ರದೀಪ್ ಶರ್ಮಾ ಅರೆಸ್ಟ್!* ಪ್ರಕರಣ ಸಂಬಂಧ ‘ಎನ್‌ಕೌಂಟರ್ ಸ್ಪೆಷಲಿಸ್ಟ್‌‘ ಪೊಲೀಸ್ ಅಧಿಕಾರಿ ಪ್ರದೀಪ್ ಶರ್ಮಾ ಮನೆ ಮೇಲೆ ದಾಳಿ ನಡೆಸಿದ್ದ NIA* ಅಂಧೇರಿ ಉಪನಗರದ ಪಶ್ಚಿಮ ಭಾಗದ ಜೆ.ಬಿ.ನಗರದಲ್ಲಿರುವ ಮನೆ ಮೇಲೆ ದಾಳಿ 

ಮುಂಬೈ(ಜೂ.17): ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ ನಿವಾಸದ ಸಮೀಪ ಬಾಂಬ್‌ ಪತ್ತೆ ಹಾಗೂ ಮನಸುಖ್‌ ಹಿರೇನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ಗುರುವಾರ ಎನ್‌ಕೌಂಟರ್ ಸ್ಪೆಷಲಿಸ್ಟ್‌ ಎಂದೇ ಪ್ರಖ್ಯಾತರಾಗಿದ್ದ ಪೊಲೀಸ್ ಅಧಿಕಾರಿ ಪ್ರದೀಪ್ ಶರ್ಮಾ ಅವರ ಮನೆ ಇಂದು ಬೆಳಗ್ಗೆ ದಾಳಿ ನಡೆಸಿದ್ದವು. ಈ ದಾಳಿ ಬೆನ್ನಲ್ಲೇ ಅಧಿಕಾರಿಗಳು ಶರ್ಮಾ ಅವರನ್ನು ಬಂಧಿಸಿದ್ದಾರೆ.

ಇಂದು ಗುರುವಾರ ಬೆಳಗ್ಗೆ ಸುಮಾರು ಆರು ಗಂಟೆಗೆ ಅಂಧೇರಿ ಉಪನಗರದ ಪಶ್ಚಿಮ ಭಾಗದ ಜೆ.ಬಿ.ನಗರದಲ್ಲಿರುವ ಶರ್ಮಾ ಅವರ ಮನೆ ಮೇಲೆ ಶಸ್ತ್ರ ಸಿಆರ್‌ಪಿಎಫ್‌ ತಂಡದೊಂದಿಗೆ ಎನ್‌ಐಎ ತಂಡ ದಾಳಿ ನಡೆಸಿದೆ. ಈ ವೇಳೆ ಮನ್‌ಸುಖ್ ಹಿರೇನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ಅಧಿಕಾರಿಗಳು ಶರ್ಮಾ ಅವರನ್ನು ಪ್ರಶ್ನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದೇಶ್‌ಮುಖ್‌ ವಿರುದ್ಧ ಇದೀಗ ವಾಝೆಯಿಂದ ಹಫ್ತಾ ಬಾಂಬ್‌!

ದಾಳಿ ವೇಳೆ ಶರ್ಮಾ ನಿವಾಸವನ್ನು ಸಂಪರ್ಕಿಸುವ ಎಲ್ಲ ರಸ್ತೆಗಳನ್ನು ಸಿಆರ್‌ಪಿಎಫ್‌ ಪಡೆಗಳು ಸುತ್ತುವರಿದಿದ್ದು, ಈ ಪ್ರದೇಶದಲ್ಲಿ ಸಾರ್ವಜನಿಕರ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ಈ ದಾಳಿಯ ಬಗ್ಗೆ ಮಾಹಿತಿ ಪಡೆದ ನಂತರ ಮುಂಬೈ ಪೊಲೀಸರು ತನ್ನ ಸಿಬ್ಬಂದಿಯನ್ನು ಸ್ಥಳದಲ್ಲಿಯೇ ನಿಯೋಜಿಸಿದ್ದಾರೆ. ಇದಕ್ಕೂ ಮುನ್ನ ಶರ್ಮಾ ಅವರನ್ನು ತನಿಖೆಯ ಭಾಗವಾಗಿ ಎನ್‌ಐಎ ದಕ್ಷಿಣ ಮುಂಬೈನ ತನ್ನ ಕಚೇರಿಯಲ್ಲಿ ಎರಡು ದಿನಗಳ ಕಾಲ ಪ್ರಶ್ನಿಸಿತ್ತು.

ಅಂಬಾನಿ ಮನೆ ಸ್ಫೋಟ ಸಂಚಲ್ಲಿ ಹಿರೇನ್‌ ಕೂಡಾ ಭಾಗಿದಾರ!

ಈ ಹಿಂದೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ತಂಡ ಪೊಲೀಸ್ ಅಧಿಕಾರಿಗಳಾದ ಸಚಿನ್ ವಾಜೆ, ರಿಯಾಝುದ್ದೀನ್ ಕಝಿ, ಸುನಿಲ್ ಮಾನೆ, ನಿವೃತ್ತ ಪೊಲೀಸ್ ಕಾನ್‌‌ಸ್ಟೆಬಲ್ ವಿನಾಯಕ್ ಶಿಂಧೆ ಮತ್ತು ಕ್ರಿಕೆಟ್ ಬುಕಿ ನರೇಶ್ ಗೌರ್ ಅವರನ್ನು ಬಂಧಿಸಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗಷ್ಟೇ ಸಂತೋಷ್ ಸೇಲರ್ ಮತ್ತು ಆನಂದ್ ಜಾಧವ್ ಎಂಬುವವರನ್ನು ಬಂಧಿಸಲಾಗಿತ್ತು.