ಡೆಹ್ರಾಡೂನ್‌ (ಅ.22): ಇತ್ತೀಚೆಗೆ ಬಿಜೆಪಿ ಸೇರಿದ್ದ ತ್ರಿವಳಿ ತಲಾಖ್‌ ವಿರೋಧಿ ಹೋರಾಟಗಾರ್ತಿ ಶಾಯರಾ ಬಾನು ಅವರಿಗೆ ಉತ್ತರಾಖಂಡದ ಬಿಜೆಪಿ ಸರ್ಕಾರ ಸಚಿವ ದರ್ಜೆ ಸ್ಥಾನಮಾನ ನೀಡಿದೆ. 

ಬಾನು ಅವರನ್ನು ರಾಜ್ಯ ಮಹಿಳಾ ಆಯೋಗದ ಮೂವರು ಉಪಾಧ್ಯಕ್ಷರಲ್ಲಿ ಒಬ್ಬರನ್ನಾಗಿ ನೇಮಿಸಲಾಗಿದೆ. ಇದು ರಾಜ್ಯ ಸಚಿವ ಸ್ಥಾನಮಾನ ಹೊಂದಿದ ಹುದ್ದೆಯಾಗಿದೆ ಎಂದು ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್‌ ರಾವತ್‌ ಅವರ ಮಾಧ್ಯಮ ಸಲಹೆಗಾರ ದರ್ಶನ್‌ ಸಿಂಗ್‌ ರಾವತ್‌ ತಿಳಿಸಿದ್ದಾರೆ. 

ತ್ರಿವಳಿ ತಲಾಖ್‌, 370ನೇ ವಿಧಿ ರದ್ದಿಗೆ 1 ವರ್ಷ: ಕಾರ್ಯಕ್ರಮ ಆಯೋಜಿಸಲು ಸೂಚನೆ! ..

ಶಾಯರಾ ಬಾನು ಅವರು ಮುಸ್ಲಿಮರಲ್ಲಿ ಜಾರಿಯಲ್ಲಿದ್ದ ಆಕ್ಷೇಪಾರ್ಹ ಪದ್ಧತಿಯಾಗಿದ್ದ ತ್ರಿವಳಿ ತಲಾಖ್‌ ಅನ್ನು 2014ರಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ ಮೊದಲ ಮಹಿಳೆ. 

ಈ ಅರ್ಜಿಯನ್ನೇ ಆಧರಿಸಿ ಕೋರ್ಟು ತ್ರಿವಳಿ ತಲಾಖ್‌ ಅಮಾನ್ಯ ಮಾಡಿತ್ತು. ಕಳೆದ 10 ದಿನಗಳ ಹಿಂದೆಯಷ್ಟೇ ಅವರು ಬಿಜೆಪಿ ಸೇರಿದ್ದರು.