ಕಳೆದ ಅಕ್ಟೋಬರ್‌ನಲ್ಲಿ ಮೋಂಥಾ ಚಂಡಮಾರುತಕ್ಕೆ ಸಾಕ್ಷಿಯಾಗಿದ್ದ ಬಂಗಾಳ ಕೊಲ್ಲಿಯಲ್ಲಿ ಇದೀಗ ಮತ್ತೊಂದು ಚಂಡಮಾರುತದ ಭೀತಿ ಶುರುವಾಗಿದೆ. ಒಂದು ವೇಳೆ ಚಂಡಮಾರುತ ರೂಪುಗೊಂಡರೆ ಅದಕ್ಕೆ ಸನ್ಯಾರ್‌ (ಸಿಂಹ) ಎಂದು ಹೆಸರಿಡಲಾಗುವುದು.

ಚೆನ್ನೈ: ಕಳೆದ ಅಕ್ಟೋಬರ್‌ನಲ್ಲಿ ಮೋಂಥಾ ಚಂಡಮಾರುತಕ್ಕೆ ಸಾಕ್ಷಿಯಾಗಿದ್ದ ಬಂಗಾಳ ಕೊಲ್ಲಿಯಲ್ಲಿ ಇದೀಗ ಮತ್ತೊಂದು ಚಂಡಮಾರುತದ ಭೀತಿ ಶುರುವಾಗಿದೆ. ಒಂದು ವೇಳೆ ಚಂಡಮಾರುತ ರೂಪುಗೊಂಡರೆ ಅದಕ್ಕೆ ಸನ್ಯಾರ್‌ (ಸಿಂಹ) ಎಂದು ಹೆಸರಿಡಲಾಗುವುದು.

ಮಲಕ್ಕಾ ಜಲಸಂಧಿ ಬಳಿ ವಾಯುಭಾರ ಕುಸಿತ

ಪ್ರಸಕ್ತ ಅಂಡಮಾನ್‌ ದ್ವೀಪ ಸಮೂಹ ಸಮೀಪದ ಮಲಕ್ಕಾ ಜಲಸಂಧಿ ಬಳಿ ವಾಯುಭಾರ ಕುಸಿತ ಉಂಟಾಗಿದೆ. ಇದು ಮುಂದಿನ ವಾರದ ವೇಳೆಗೆ ತೀವ್ರ ಸ್ವರೂಪ ಪಡೆದುಕೊಂಡು ಚಂಡಮಾರುತವಾಗಿ ಬದಲಾಗಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ನ.27ರವರೆಗೆ ಭಾರೀ ಮಳೆ

ಅದು ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ನ.27ರವರೆಗೆ ಹಲವು ರಾಜ್ಯಗಳಲ್ಲಿ ಭಾರೀ ಮಳೆಗೆ ಕಾರಣವಾಗಲಿದೆ.