ಅರ್ನಬ್ ಮತ್ತು ಮುರುಸು ಚಂಡಮಾರುತಗಳ ನಂತರ ಇದೇ ತಿಂಗಳ 15ರ ವೇಳೆಗೆ ಬಂಗಾಳಕೊಲ್ಲಿಯಲ್ಲಿ ಮತ್ತೊಂದು ಚಂಡಮಾರುತ ಏರ್ಪಡುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದರಿಂದ ಆಂಧ್ರಪ್ರದೇಶ, ತಮಿಳುನಾಡು ಕರಾವಳಿ ಮತ್ತು ಕರ್ನಾಟಕದ ಕೆಲವು ಭಾಗಗಳಲ್ಲಿ ಮಳೆಯಾಗುವ ನಿರೀಕ್ಷೆಯಿದೆ.
ಅರ್ನಬ್ ಮತ್ತು ಮುರುಸು ಚಂಡಮಾರುತಗಳಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ರಾಜ್ಯಗಳಿಗೆ ಮತ್ತೊಂದು ಬಿಗ್ ಅಲರ್ಟ್ ನೀಡಲಾಗಿದೆ. ಇದೇ ತಿಂಗಳ 15ರ ವೇಳೆಗೆ ಬಂಗಾಳಕೊಲ್ಲಿಯಲ್ಲಿ ಮತ್ತೊಂದು ಚಂಡಮಾರುತ ಏರ್ಪಡುವ ಅವಕಾಶವಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇದರೊಂದಿಗೆ ಆಂಧ್ರ ಪ್ರದೇಶ ಮತ್ತು ತಮಿಳುನಾಡಿನ ಕರಾವಳಿ ಜಿಲ್ಲೆಯಗಳ ಮೇಲೆ ತೀವ್ರ ಪ್ರಭಾವ ಉಂಟಾಗಲಿದೆ ಮುನ್ಸೂಚನೆ ನೀಡಲಾಗಿದೆ.
ಬಂಗಾಳಕೊಲ್ಲಿಯಲ್ಲಿ ಮತ್ತೊಂದು ಚಂಡಮಾರುತದ ಭೀತಿ?
ಈಗಾಗಲೇ ಬ್ಯಾಕ್ ಟು ಬ್ಯಾಕ್ ಚಂಡಮಾರುತಗಳ ದಾಳಿಗೆ ತುತ್ತಾಗಿರುವ ರಾಜ್ಯಗಳು ಭಾರೀ ಮಳೆಯನ್ನು ಪಡೆದುಕೊಂಡಿದೆ. ಇದರ ನಡುವೆ ಮತ್ತೊಂದು ತುಫಾನ್ ಮುನ್ಸೂಚನೆ ಸಿಕ್ಕಿರುವುದು ಸ್ಥಳೀಯರಿಗೆ ಭಾರೀ ಆತಂಕ ಮೂಡಿಸಿದೆ. ಆದರೆ ಸದ್ಯ ನೀಡಿರುವ ಮಾಹಿತಿ ಕೇವಲ ಪ್ರಾಥಮಿಕ ಮಾಹಿತಿ ಮೇಲೆ ಆಧರಸಿದ್ದು, ಇದರ ಪ್ರಭಾವ ಎಷ್ಟಿರಲಿದೆ ಎಂದು ಇನ್ನಷ್ಟೇ ತಿಳಿದುಬರಬೇಕಿದೆ. ಪ್ರಾಥಮಿಕ ಮಾಹಿತಿಯ ಅನ್ವಯ, ಚಂಡಮಾರುತ ಪ್ರಭಾವ ಹೆಚ್ಚಾಗಿ ಆಂಧ್ರ ಪ್ರದೇಶ ನೆಲ್ಲೂರು, ತಿರುಪತಿ, ಚಿತ್ತೂರು, ಅನ್ನಮಯ್ಯ ಜಿಲ್ಲೆಗಳ ಮೇಲೆ ಇರಲಿದೆ. ತಮಿಳುನಾಡಿನ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಪ್ರಮಾಣದ ಮಳೆಯಾಗಲಿದೆ. ಕರ್ನಾಟಕ ಕೆಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಉಲ್ಲೇಖಿಸಲಾಗಿದೆ.
ಮುರುಸು ಚಂಡಮಾರುತದ ಅವಶೇಷವಾಗಿ ಕಡಿಮೆ ಒತ್ತಡ ಪ್ರದೇಶ ನಿರ್ಮಾಣ
ಸ್ಕೈಮೆಟ್ ವೆದರ್ ನವೆಂಬರ್ 05ರಂದು ಬಿಡುಗಡೆ ಮಾಡಿದ ವರದಿ ಅನ್ವಯ, ಮುರುಸು ಚಂಡಮಾರುತದ ಅವಶೇಷವಾಗಿ ಏರ್ಪಡಾಗಿರುವ ಈ ಚಂಡಮಾರುತ ಕ್ರಮವಾಗಿ ಶಕ್ತಿ ಕಳೆದುಕೊಳ್ಳಲಿದೆ. ನವೆಂಬರ್ 09ರಿಂದ 15ರ ವರೆಗೂ ಹವಾಮಾನ ಉತ್ತಮವಾಗುವ ನಿರೀಕ್ಷೆಇದೆ ಎಂದು ಸಂಸ್ಥೆ ಹೇಳಿದೆ. ಮುರುಸು ಚಂಡಮಾರುತದ ಅವಶೇಷವಾಗಿ ಉಂಟಾಗಿರುವ ಕಡಿಮೆ ಒತ್ತಡ ಪ್ರದೇಶದಿಂದ ಇನ್ನು ಹಲವು ಪ್ರದೇಶಗಳಲ್ಲಿ ಮಳೆ ಮುಂದುವರಿಯಲಿದೆ. ಈ ಹಿನ್ನೆಲೆಯಲ್ಲಿಯೇ ಮತ್ತೊಂದು ಚಂಡಮಾರುತ ರಚನೆಯಾಗುವ ಅವಕಾಶವಿದೆ ಎಂದು ಹೇಳಲಾಗಿದೆ.
ತಜ್ಞರು ಹೇಳಿದ್ದೇನು?
ಸದ್ಯ ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಕಡಿಮೆ ಒತ್ತಡ ಪ್ರದೇಶ ಚಂಡಮಾರುತವಾಗಿ ಬದಲಾವಣೆಯಾದರೆ ಇದಕ್ಕೆ 'ಅಕ್ವಾನ್' ಚಂಡಮಾರುತ ಎಂದು ಹೆಸರು ನೀಡುವ ಅವಕಾಶವಿದೆ. ಆದರೆ ಹೊಸ ಚಂಡಮಾರುತ ರಚನೆಯಾಗಿರುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ಹವಾಮಾನ ಇಲಾಖೆ ನೀಡಿಲ್ಲ. ಆದ್ದರಿಂದ ಈಗಲೇ ಹೊಸ ಚಂಡಮಾರುತ ರಚನೆಯಾಗಿದೆ ಎಂದು ಹೇಳಲು ಆಗೋದಿಲ್ಲ ಎಂದು ಹವಾಮಾನ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನವೆಂಬರ್ ಮತ್ತು ಡಿಸೆಂಬರ್ ತಿಂಗಳಿನಲ್ಲಿ ಬಂಗಾಳಕೊಲ್ಲಿಯಲ್ಲಿ ಚಂಡಮಾರುತಗಳು ನಿರ್ಮಾಣವಾಗುವ ಅವಕಾಶಗಳು ಹೆಚ್ಚಾಗಿರುತ್ತದೆ. ಆದರೆ ಈಗ ಉಂಟಾಗಿರುವ ಕಡಿಮೆ ಒತ್ತಡ ಪ್ರದೇಶ ಚಂಡಮಾರುತವಾಗಿ ಬದಲಾವಣೆ ಆಗುವ ಸಾಧ್ಯತೆ ಬಗ್ಗೆ ಈಗಲೇ ಏನು ಹೇಳಲು ಆಗೋದಿಲ್ಲ. ಸಮುದ್ರದ ಉಷ್ಣತೆ, ಗಾಳಿ ವೇಗ, ಹವಾಮಾನದಲ್ಲಿ ಉಂಟಾಗುವ ಪರಿಸ್ಥಿತಿಗಳ ಮೇಲೆ ಇದು ಅವಲಂಬಿತವಾಗಿದೆ. ಆದ್ದರಿಂದ ಮುಂಬರುವ ದಿನಗಳಲ್ಲಿ ಐಎಂಡಿ ನೀಡುವ ಮುನ್ಸೂಚನೆಗಳನ್ನು ಗಮನಿಸಲು ಅಧಿಕಾರಿಗಳು ಸಲಹೆ ನೀಡಿದ್ದಾರೆ. ಮೀನುಗಾರಿಕೆಗೆ ಸಮುದ್ರಕ್ಕೆ ಇಳಿಯುವ ಮುನ್ನ ಅಧಿಕಾರಿಗಳು ನೀಡುವ ಎಚ್ಚರಿಕೆಗಳನ್ನು ಪಾಲಿಸಬೇಕು, ರೈತರು ತಮ್ಮ ಬೆಳೆಗಳ ರಕ್ಷಣೆಗೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಸೂಚನೆ ನೀಡಿದ್ದಾರೆ.














