ಪ್ರೇಮಿಗಳ ದಿನಾಚರಣೆ ನಿಮ್ಮ ನಿಮ್ಮ ಪ್ರೀತಿ ಪಾತ್ರರ ಹಗ್ ಮಾಡಿ, ಗೋ ಅಪ್ಪುಗೆ ಪ್ರಸ್ತಾವನೆ ಕೈಬಿಟ್ಟ ಕೇಂದ್ರ!

ಪ್ರೇಮಿಗಳ ದಿನಾಚರಣೆಗೆ ಭಾರತ ಸಜ್ಜಾಗುತ್ತಿದೆ. ಇದರ ನಡುವೆ ಕೇಂದ್ರ ಪ್ರಾಣಿ ಕಲ್ಯಾಣ ಮಂಡಳಿ ಕವ್ ಹಗ್ ಡೇ(ಹಸು ಅಪ್ಪುಗೆ ದಿನ) ಪ್ರಸ್ತಾವನೆ ಮುಂದಿಟ್ಟಿತ್ತು. ಇದಕ್ಕೆ ಭಾರಿ ವಿರೋಧದ ಜೊತೆ ವ್ಯಂಗ್ಯ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಪ್ರಸ್ತಾವನೆ ಕೈಬಿಟ್ಟಿದೆ. 

Animal Welfare Board withdraw Cow hug day proposal on Valentines Day after Huge meme and Critics ckm

ನವದೆಹಲಿ(ಫೆ.10): ಫೆಬ್ರವರಿ ಬಂದರೆ ಸಾಕು ಪ್ರೇಮಿಗಳ ಉತ್ಸಾಹ ಇಮ್ಮಡಿಯಾಗುತ್ತದೆ. ಫೆಬ್ರವರಿ ಮೊದಲ ವಾರದಿಂದಲೇ ಪ್ರೇಮಿಗಳ ದಿನಾಚರಣೆ ಒಂದೊಂದೇ ಆಚರಣೆಗಳು ಆರಂಭಗೊಳ್ಳುತ್ತದೆ. ಇದರ ನಡುವೆ ಭಾರತದಲ್ಲಿ ಪ್ರೇಮಿಗಳ ದಿನಾಚರಣೆಗೆ ಪರ ವಿರೋಧಗಳು ಪ್ರತಿ ವರ್ಷ ವ್ಯಕ್ತವಾಗುತ್ತದೆ. ಈ ವರ್ಷ ವಿರೋಧದ ನಡುವೆ ಹೊಸ ಪ್ರಸ್ತಾವನೆ ಭಾರಿ ಚರ್ಚೆ ಹುಟ್ಟು ಹಾಕಿತ್ತು. ಕೇಂದ್ರ ಪ್ರಾಣಿ ಕಲ್ಯಾಣ ಮಂಡಳಿ ಪ್ರೇಮಿಗಳ ದಿನವನ್ನು ಹಸು ಅಪ್ಪುಗೆ ದಿನವನ್ನಾಗಿ ಆಚರಿಸಿ ಎಂಬ ಪ್ರಸ್ತಾವನೆ ಮುಂದಿಟ್ಟಿತ್ತು. ಇದು ವಿರೋಧಕ್ಕೂ ಕಾರಣಾಗಿತ್ತು. ಇದರ ಜೊತೆ ಹಲವು ವಿಡಿಯೋ, ಕಾರ್ಟೂನ್ ಸೇರಿದಂತೆ ವ್ಯಂಗ್ಯಗಳು ವ್ಯಕ್ತವಾಗಿತ್ತು. ಭಾರಿ ವಿರೋಧದ ಬೆನ್ನಲ್ಲೇ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ಗೋ ಅಪ್ಪುಗೆ ದಿನವನ್ನು ಕೈಬಿಟ್ಟಿದೆ. ಇದರಿಂದ ನಿಮ್ಮ ಪ್ರೀತಿ ಪಾತ್ರರ ಅಪ್ಪಿಕೊಳ್ಳಲು ಯಾವುದೇ ಅಡೇ ತಡೆ ಇಲ್ಲ.

ಗೋ ಅಪ್ಪುಗೆ ದಿನಕ್ಕೆ ಕರೆ ನೀಡಿದ್ದ ಪ್ರಸ್ತಾವನೆಯನ್ನು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ಹಿಂತೆಗೆದುಕೊಂಡಿದೆ. ಈ ಕುರಿತು ಮಂಡಳಿ ಕಾರ್ಯದರ್ಶಿ ಎಸ್‌ಕೆ ದತ್ತಾ ಪ್ರಕಟಣೆ ಹೊರಡಿಸಿದ್ದಾರೆ. ದೇಶದಲ್ಲಿ ಪ್ರೇಮಿಗಳ ದಿನಾಚರಣೆ ದಿನ ಗೋವಿಗೆ ಅಪ್ಪುಗೆ ನೀಡುವ ಪ್ರಸ್ತಾವನೆಯನ್ನು ನೀಡಲಾಗಿತ್ತು. ಆದರೆ ಈ ಪ್ರಸ್ತಾವನೆಯನ್ನು ಹಿಂತೆಗದುಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಫೆಬ್ರವರಿ 14 ವ್ಯಾಲೆಂಟೆನ್ಸ್ ಡೇ ಇಲ್ಲ; Cow Hug Day ಆಚರಣೆ!

ಫೆಬ್ರವರಿ 8 ರಂದು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ಗೋ ಅಪ್ಪುಗೆ ದಿನ ಕುರಿತು ಪ್ರಕಟಣೆ ಹೊರಡಿಸಿತ್ತು. ಪ್ರೇಮಿಗಳ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿ, ಗೋವನ್ನು ಅಪ್ಪಿಕೊಳ್ಳುವುದರಿಂದ ಭಾವನಾತ್ಮಕವಾಗಿ ಹಾಗೂ ಸಂತೋಷಭರಿತ ಜೀವನ ಆನಂದಿಸಿ ಎಂದಿತ್ತು. ಇದು ಟೀಕೆಗೆ ಕಾರಣವಾಗಿತ್ತು. ಹಸುಗಳ ಬಳಿ ಹೋದಾಗ ಒದೆಯುವ ಹಳೇ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಹರಿದಾಡತೊಡಿಗಿತು. ಇದು ಬಿಜೆಪಿಯ ಕವ್ ಹಗ್ ಡೇ ಎಂದು ವ್ಯಂಗ್ಯಗಳು ವ್ಯಕ್ತವಾಗಿತ್ತು. 

ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯೂ ಕೇಂದ್ರ ಪಶುಸಂಗೋಪನೆ ಸಚಿವಾಲಯ ಅಡಿಯಲ್ಲಿದೆ. ಕೇಂದ್ರ ಪಶುಸಂಗೋಪನೆ ಸಚಿವಾಲಯಕ್ಕೆ ಬಿಜೆಪಿಯ ಪುರುಷೊತ್ತ ರೂಪಾಲ ಸಚಿವರಾಗಿದ್ದಾರೆ. ಹೀಗಾಗಿ ಈ ಗೋ ಅಪ್ಪುಗೆ ದಿನ ಪ್ರಸ್ತಾವನೆ ಮತ್ತಷ್ಟು ಟೀಕೆಗೆ ಒಳಗಾಗಿತ್ತು. ಇದೀಗ ಈ ಎಲ್ಲಾ ಪ್ರಸ್ತಾವನೆ ಕೈಬಿಡಲಾಗಿದೆ.

ಫೆಬ್ರವರಿ 14ರಂದು ವಿಶ್ವದಲ್ಲಿ ವ್ಯಾಲೆಂಟೈನ್ಸ್ ಡೇ ಅಂದರೆ ಪ್ರೇಮಿಗಳ ದಿನ ಆಚರಣೆ ಮಾಡಲಾಗುತ್ತದೆ. ಫೆಬ್ರವರಿ ಮೊದಲ ವಾರದಿಂದ ಸ್ಮೈಲ್ ಡೇ, ಹಗ್ ಡೇ, ಕಿಸ್ ಡೇ ಅನ್ನೋ ಹಲವು ಆಚರಣೆಗಳು ಆರಂಭಗೊಳ್ಳುತ್ತದೆ. ಫೆಬ್ರವರಿ 14 ರಂದು ಪ್ರೇಮಿಗಳ ದಿನಾಚರಣೆಯೊಂದಿಗೆ ಪ್ರೀತಿಪಾತ್ರರ ಉತ್ಸವ ಕೊನೆಗೊಳ್ಳಲಿದೆ. ಭಾರತದಲ್ಲಿ ಈ ಆಚರಣೆಗೆ ಭಾರಿ ವಿರೋಧವೂ ಇದೆ. ಹಲವು ಸಂಘಟನೆಗಳು ಮೊದಲಿನಿಂದಲೂ ಪ್ರೇಮಿಗಳ ದಿನಾಚರಣೆಯನ್ನು ವಿರೋಧಿಸುತ್ತಲೇ ಬಂದಿದೆ.ಈಗಾಗಲೇ ಹಲವು ಸಂಘಟನೆಗಳ ವಿರುದ್ದ ಈ ಕುರಿತು ಪ್ರಕರಣಗಳು ದಾಖಲಾಗಿದೆ. ನೈತಿಕ ಪೊಲೀಸ್‌ಗಿರಿ ಸೇರಿದಂತೆ ಹಲವು ಘಟನೆಗಳು ನಡೆದಿದೆ. 

 

Cow Hug Day:ತಮಾಷೆಯಲ್ಲ ಗೋವನ್ನು ಅಪ್ಪಿಕೊಳ್ಳುವುದರಿಂದ ಇದೆ ಹಲವು ಪ್ರಯೋಜನ

ಪ್ರೇಮಿಗಳ ದಿನ ಪಾರ್ಕ್ ಅಥವಾ ಇತರ ಪ್ರದೇಶದಲ್ಲಿ ಜೋಡಿಯಾಗಿರುವವರಿಗೆ ಒತ್ತಾಯ ಪೂರ್ವಕ ಮದುವೆ ಮಾಡುವ, ನೈತಿಕ ಪೊಲೀಸ್‌ಗಿರಿ ಮೂಲಕ ಹಲ್ಲೆ ನಡೆಸುವ ಹಲವು ಘಟನೆಗಳು ನಡೆದಿದೆ. ಪ್ರೇಮಿಗಳ ದಿನ ಆಚರಿಸದಂತೆ ಎಚ್ಚರಿಕೆ ನೀಡಿದ ಘಟನೆಗಳೂ ನಡೆದಿದೆ. ಈ ಬಾರಿ ಪ್ರೇಮಿಗಳ ದಿನಾಚರಣೆ ಮುನ್ನವೇ ಗೋ ಅಪ್ಪುಗೆ ದಿನ ಭಾರಿ ಸದ್ದು ಮಾಡಿದೆ.

Latest Videos
Follow Us:
Download App:
  • android
  • ios