Asianet Suvarna News Asianet Suvarna News

ಪಂಜಾಬ್ ನಲ್ಲಿ ಭ್ರಷ್ಟಾಚಾರ ನಿಗ್ರಹ ಹೆಲ್ಪ್ ಲೈನ್, "ಇದೇ ನನ್ನ ವೈಯಕ್ತಿಕ ನಂಬರ್" ಎಂದ Bhagwant Mann!

ಪಂಜಾಬ್ ನಲ್ಲಿ ಭ್ರಷ್ಟಾಚಾರ ವಿರೋಧಿ ಹೆಲ್ಪ್ ಲೈನ್ ಘೋಷಣೆ

ಭಗತ್ ಸಿಂಗ್ ಜನ್ಮಜಯಂತಿಯಾದ ಮಾರ್ಚ್ 23ಕ್ಕೆ ಆರಂಭ

ಪಂಜಾಬ್ ನ ನೂತನ ಮುಖ್ಯಮಂತ್ರಿ ಭಗವಂತ್ ಮಾನ್ ಘೋಷಣೆ

ani corruption helpline number will be my personal number says Punjab new Chief Minister and Aam Aadmi Party bhagwant mann san
Author
Bengaluru, First Published Mar 17, 2022, 5:17 PM IST

ಚಂಡೀಗಢ (ಮಾ. 17): ಪಂಜಾಬ್‌ನ (Punjab) ನೂತನ ಮುಖ್ಯಮಂತ್ರಿ (New Chief Minister), ಆಮ್ ಆದ್ಮಿ ಪಕ್ಷದ (Aam Aadmi Party) ಭಗವಂತ್ ಮಾನ್ (Bhagwant Mann) ಅವರು ಇಂದು ಭ್ರಷ್ಟಾಚಾರ ವಿರೋಧಿ ಸಹಾಯವಾಣಿಯನ್ನು (Anti-Corruption Helpline) ರಾಜ್ಯದಲ್ಲಿ ಪ್ರಾರಂಭಿಸುವುದಾಗಿ ಘೋಷಣೆ ಮಾಡಿದ್ದಾರೆ. ಬುಧವಾರ ಪಂಜಾಬ್ ರಾಜ್ಯದ ಮುಖ್ಯಪ್ರಮಾಣ ವಚನ ಸ್ವೀಕರಿಸಿದ ಮಾನ್ ಅವರು " ಮುಖ್ಯಮಂತ್ರಿ ಹುದ್ದೆಯಲ್ಲಿ ಒಂದು ದಿನವನ್ನು ವ್ಯರ್ಥ ಮಾಡುವುದಿಲ್ಲ" ಎಂದು ಭರವಸೆ ನೀಡಿದರು, ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಜನ್ಮದಿನವಾದ ಮಾರ್ಚ್ 23 ರಂದು ಸಹಾಯವಾಣಿ ಸಂಖ್ಯೆಯನ್ನು ಪ್ರಾರಂಭಿಸಲಾಗುವುದು ಎಂದು ಹೇಳಿದರು.

ಭ್ರಷ್ಟಾಚಾರ ನಿಗ್ರಹ ಸಹಾಯವಾಣಿ ಸಂಖ್ಯೆಯೇ ನನ್ನ ವೈಯಕ್ತಿಕ ನಂಬರ್ ಆಗಿರುತ್ತದೆ. ಯಾರಾದರೂ ಲಂಚ ಕೇಳಿದರೆ ಅದೇ ನಂಬರ್‌ಗೆ ಆಡಿಯೋ ಮತ್ತು ವಿಡಿಯೋ ಕಳುಹಿಸಿ, ವ್ಯಕ್ತಿ ಲಂಚ ಕೇಳಿದರೆ ನೇರಾನೇರ ಇಲ್ಲ ಎನ್ನಬೇಡಿ ಎಲ್ಲವನ್ನೂ ರೆಕಾರ್ಡ್ ಅಥವಾ ವಿಡಿಯೂ ಮಾಡಿ ಕಳುಹಿಸಿ ಎಂದು ಟ್ವೀಟ್ ಮಾಡಿದ್ದಾರೆ.

"ನಾನು ಯಾವುದೇ ಸರ್ಕಾರಿ ನೌಕರರಿಗೆ ಬೆದರಿಕೆ ಹಾಕುತ್ತಿಲ್ಲ. ಏಕೆಂದರೆ ಶೇಕಡಾ 99 ರಷ್ಟು ಸರ್ಕಾರಿ ನೌಕರರು ಪ್ರಾಮಾಣಿಕರಾಗಿದ್ದಾರೆ, ಇಂಥವರ ಮಧ್ಯ ಇರುವ ಉದ್ಯೋಗಿಗಳಲ್ಲಿ 1 ಪ್ರತಿಶತದಷ್ಟು ನೌಕರರು ಭ್ರಷ್ಟರಾಗಿದ್ದಾರೆ, ಅದು ವ್ಯವಸ್ಥೆಯನ್ನು ಕೊಳೆತು ನಾರುವಂತೆ ಮಾಡಿದೆ. ಎಎಪಿ ಮಾತ್ರ ಈ ಭ್ರಷ್ಟ ವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ಸಾಧ್ಯ" ಎಂದು ಅವರು ಟ್ವೀಟ್‌ನಲ್ಲಿ ಬರೆದಿದ್ದಾರೆ. ಜನರು ತಮ್ಮ ದಿನನಿತ್ಯದ ಕೆಲಸಕ್ಕಾಗಿ ಲಂಚವನ್ನು ಕೇಳುವ ಅಥವಾ ಇತರ ದುಷ್ಕೃತ್ಯಗಳಲ್ಲಿ ತೊಡಗಿರುವ ಭ್ರಷ್ಟ ಅಧಿಕಾರಿಗಳ ವೀಡಿಯೊಗಳನ್ನು ಅಪ್‌ಲೋಡ್ ಮಾಡಲು ಮಾತ್ರವೇ ಈ ಸಂಖ್ಯೆ ಇರುತ್ತದೆ. ನಂತರ ಮಾತನಾಡಿದ ಅವರು, ಅಂತಹ ಅಧಿಕಾರಿಗಳಿಗೆ ಮಾದರಿ ಶಿಕ್ಷೆ ವಿಧಿಸಲಾಗುವುದು ಎಂದಿದ್ದಾರೆ.


ಪಂಜಾಬ್‌ನಿಂದ ಭ್ರಷ್ಟಾಚಾರದ ನಿರ್ಮೂಲನೆ ಮಾಡುವುದು ಆಮ್ ಆದ್ಮಿ ಪಕ್ಷದ ಪ್ರಮುಖ ಭರವಸೆಗಳಲ್ಲಿ ಒಂದಾಗಿದೆ, ಇದು ಸ್ವಾತಂತ್ರ್ಯ ಹೋರಾಟಗಾರ ಮತ್ತು ಗಾಂಧಿವಾದಿ ಅಣ್ಣಾ ಹಜಾರೆ ಅವರ ಭ್ರಷ್ಟಾಚಾರ ವಿರೋಧಿ ಆಂದೋಲನದ ಮೂಲಕ ಪಕ್ಷದ ಜನ್ಮವನ್ನು ಸೂಚಿಸುತ್ತದೆ ಎಂದಿದ್ದಾರೆ. ಫೆಬ್ರವರಿ 5 ರಂದು ಪಕ್ಷದ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು "ಎಎಪಿ ಸರ್ಕಾರ ರಚನೆಯಾದರೆ ಸರ್ಕಾರಿ ಉದ್ಯೋಗಗಳಲ್ಲಿನ ಭ್ರಷ್ಟಾಚಾರವನ್ನು ಕೊನೆಗೊಳಿಸುವುದಾಗಿ" ಭರವಸೆ ನೀಡಿದ್ದರು.

ಭ್ರಷ್ಟಾಚಾರ, ನಿರುದ್ಯೋಗ ಮುಕ್ತ, ರೈತ ಸ್ನೇಹಿ ಸರ್ಕಾರ ನೀಡುತ್ತೇವೆ: ಪಂಜಾಬ್ ಸಿಎಂ ಮಾನ್ ಭರವಸೆ
ಇಂದು ಪೋಲೀಸ್ ಮತ್ತು ಆಡಳಿತ ಅಧಿಕಾರಿಗಳೊಂದಿಗಿನ ತನ್ನ ಮೊದಲ ಸಭೆಯಲ್ಲಿ, ಮಾನ್ ಭ್ರಷ್ಟಾಚಾರ ಮುಕ್ತ ಸರ್ಕಾರದ ಅಗತ್ಯವನ್ನು ಒತ್ತಿ ಹೇಳಿದರು. ಭ್ರಷ್ಟ ಅಧಿಕಾರಿಗಳಿಗೆ ನನ್ನ ಸರ್ಕಾರದಲ್ಲಿ ಸ್ಥಾನವಿಲ್ಲ, ಅಂತಹ ಯಾವುದೇ ದೂರುಗಳು ನನ್ನ ಗಮನಕ್ಕೆ ಬಂದರೆ ಅಂತಹ ಅಧಿಕಾರಿಗಳಿಗೆ ಯಾವುದೇ ರೀತಿಯ ಸಹಾನುಭೂತಿ ನಿರೀಕ್ಷಿಸಬೇಡಿ ಎಂದು ಮುಖ್ಯಮಂತ್ರಿ ಕಚೇರಿಯಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ನೇರವಾಗಿ ಹೇಳಿದ್ದಾರೆ.

ಪಂಜಾಬ್, ರಾಜಕೀಯಕ್ಕಾಗಿ ಹೆಂಡತಿಯನ್ನೇ ಬಿಟ್ಟಿದ್ದ ಮಾನ್, ಬಯಲಾಯ್ತು ಡೈವೋರ್ಡ್‌ ರಹಸ್ಯ!
ಮೊದಲ ಬಾರಿಗೆ ಮುಖ್ಯಮಂತ್ರಿಗಳು ಸಿವಿಲ್ ಮತ್ತು ಪೊಲೀಸ್ ಅಧಿಕಾರಿಗಳಿಗೆ ಬಹುಮಾನವನ್ನು ಘೋಷಿಸಿದರು. ಉಚಿತ ಮತ್ತು ನ್ಯಾಯೋಚಿತ ನ್ಯಾಯವನ್ನು ಖಾತ್ರಿಪಡಿಸುವುದರ ಜೊತೆಗೆ ತಳಮಟ್ಟದಲ್ಲಿ ಸಾಮಾನ್ಯ ಜನರ ಜೀವನದಲ್ಲಿ ಬದಲಾವಣೆಯನ್ನು ಉಂಟುಮಾಡುವುದಕ್ಕಾಗಿ "ಬೆಸ್ಟ್ ಪರ್ಫಾಮೆನ್ಸ್ ಅವಾರ್ಡ್" ಅನ್ನು ತ್ರೈಮಾಸಿಕವಾಗಿ ನೀಡಲಾಗುತ್ತದೆ ಎಂದಿದ್ದಾರೆ. 

ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಸಂಗ್ರೂರ್ ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ ಎಂಪಿಯಾಗಿರುವ ಭಗವಂತ್ ಸಿಂಗ್ ಮಾನ್  ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಪತ್ರವನ್ನು ಲೋಕಸಭಾ ಸ್ಪೀಕರ್ ಓಂ ಬಿರ್ಲಾಗೆ ಸಲ್ಲಿಸಿದ್ದಾರೆ. ಸಂಗ್ರೂರ್ ಜನ ನನ್ನ ಮೇಲಿಟ್ಟಿರುವ ಪ್ರೀತಿಗೆ ಆಭಾರಿಯಾಗಿದ್ದೇನೆ. ಇದೀಗ ಸಂಪೂರ್ಣ ಪಂಜಾಬ್ ಅಭಿವೃದ್ಧಿಯ ಜವಾಬ್ದಾರಿ ಹೊತ್ತುಕೊಳ್ಳುತ್ತಿದ್ದೇನೆ. ಸಂಗ್ರೂರ್ ಜನರ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲಿದ್ದೇನೆ ಎಂದು ಭಗವಂತ್ ಸಿಂಗ್ ಮಾನ್ ಹೇಳಿದ್ದಾರೆ.

 

Follow Us:
Download App:
  • android
  • ios